ಕರಾವಳಿ

ಮಂಗಳೂರು:ಹಿಂದೂ ಯುವತಿಯ ಜೊತೆ ಮಾತನಾಡಿದ್ದಕ್ಕೆ ಶೋರೂಂ ಸಿಬ್ಬಂದಿ ಮೇಲೆ ಹಲ್ಲೆ| ಯದ್ವಾತದ್ವ ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

ಸಮಗ್ರ ನ್ಯೂಸ್: ಸಂಘಪರಿವಾರ ಕಾರ್ಯಕರ್ತರು ಚಿನ್ನದ ಶೋರೂಮಿಗೆ ನುಗ್ಗಿ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕಂಕನಾಡಿಯಲ್ಲಿ ನಡೆದಿದೆ. ಮಂಗಳವಾರ ಸಂಘಪರಿವಾರ ಕಾರ್ಯಕರ್ತರ ತಂಡವೊಂದು ಕಂಕನಾಡಿ ಬಳಿ ಇರುವ ಚಿನ್ನದ ಶೋರೂಮ್ ಒಂದಕ್ಕೆ ಏಕಾಏಕಿ ನುಗ್ಗಿ ದಾಂಧಲೆ ನಡೆಸಿದೆ. ಈ ತಂಡ ರಜೆಯಲ್ಲಿದ್ದ ಸಿಬ್ಬಂದಿಯನ್ನು ಎಳೆದು ತಂದು ಶೋರೂಮ್ ಒಳಗೆ ಯದ್ವಾತದ್ವ ಥಳಿಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹಲ್ಲೆಗೀಡಾದ ಸಿಬ್ಬಂದಿ ಮುಸ್ಲಿಮನಾಗಿದ್ದು, ತನ್ನ ಸಹೋದ್ಯೋಗಿಯಾಗಿರುವ ಅನ್ಯಮತೀಯ ಯುವತಿಯ ಜೊತೆ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಈ ಹಲ್ಲೆ

ಮಂಗಳೂರು:ಹಿಂದೂ ಯುವತಿಯ ಜೊತೆ ಮಾತನಾಡಿದ್ದಕ್ಕೆ ಶೋರೂಂ ಸಿಬ್ಬಂದಿ ಮೇಲೆ ಹಲ್ಲೆ| ಯದ್ವಾತದ್ವ ಥಳಿಸಿದ ಸಂಘಪರಿವಾರದ ಕಾರ್ಯಕರ್ತರು Read More »

ಸುರತ್ಕಲ್ : ಆತಂಕಕ್ಕೆ ಕಾರಣವಾದ ಮಗು ಅಪಹರಣ ಯತ್ನ ಪ್ರಕರಣ!

ಸಮಗ್ರ ನ್ಯೂಸ್: ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಎಂಬಲ್ಲಿ ಮನೆಯ ಮುಂದೆ ನಿಂತಿದ್ದ ಮಗುವನ್ನು ಅಪಹರಿಸಲು ಯತ್ನಿಸಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ರಾತ್ರಿ ಪರಿಸರದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಈ ವೇಳೆ ಚೊಕ್ಕಬೆಟ್ಟು ಮಸೀದಿ ಪಕ್ಕದ ಮನೆಯ ಮುಂದೆ ಮಗು ಆಟವಾಡುತ್ತಿತ್ತು. ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಮಗುವಿನ ಕೈ ಹಿಡಿದು ಎಳೆದು ಅಪಹರಣಕ್ಕೆ ಯತ್ನಿಸಿದ್ದು ಮಗು ಆತನ‌ ಕೈಯಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ.ಸ್ಥಳಕ್ಕೆ ಸುರತ್ಕಲ್‌ ಪೊಲೀಸರು

ಸುರತ್ಕಲ್ : ಆತಂಕಕ್ಕೆ ಕಾರಣವಾದ ಮಗು ಅಪಹರಣ ಯತ್ನ ಪ್ರಕರಣ! Read More »

ಮಂಗಳೂರು – ಮುಂಬೈ ಸಂಚರಿಸಲಿದೆ ವಿಶೇಷ ರೈಲು

ಸಮಗ್ರ ನ್ಯೂಸ್: ಮಂಗಳೂರಿನಿಂದ ಮುಂಬೈಗೆ ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ . ಮಂಗಳೂರು ಜಂಕ್ಷನ್‌ ಹಾಗೂ ಮುಂಬೈನ ಲೋಕಮಾನ್ಯ ತಿಲಕ್‌ ನಿಲ್ದಾಣದ ಮಧ್ಯೆ ನಂ. 01453 ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಮುಂಬೈಯಿಂದ ಡಿ. 9, 16, 23, 30 ಹಾಗೂ ಜನವರಿ 6 (ಶುಕ್ರವಾರ) ರಾತ್ರಿ 10.15ಕ್ಕೆ ಹೊರಟು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್‌ ತಲಪಲಿದೆ. ನಂ. 01454 ಮಂಗಳೂರು ಜಂಕ್ಷನ್‌ ಲೋಕಮಾನ್ಯ ತಿಲಕ್‌ ಮುಂಬಯಿ ಸಾಪ್ತಾಹಿಕ ರೈಲು ಮಂಗಳೂರು ಜಂಕ್ಷನ್‌ನಿಂದ

ಮಂಗಳೂರು – ಮುಂಬೈ ಸಂಚರಿಸಲಿದೆ ವಿಶೇಷ ರೈಲು Read More »

ಮಂಗಳೂರು: ಪಿಜಿ ನಿಯಮದಲ್ಲಿ ಬಿಗಿ ಕ್ರಮ ಸಾಧ್ಯತೆ

ಸಮಗ್ರ ನ್ಯೂಸ್: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಪಿಜಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲು ಪೊಲೀಸರು ಮುಂದಾಗಿದ್ದು, ಶೀಘ್ರದಲ್ಲಿ ಸಮಗ್ರ ನಿಯಮಾವಳಿ ರೂಪುಗೊಳ್ಳುವ ಸಾಧ್ಯತೆ ಇದೆ. ಪಿಜಿ ಆರಂಭಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಪರವಾನಿಗೆ ಹಾಗೂ ಪೊಲೀಸ್‌ ಆಯುಕ್ತರ ಕಚೇರಿಯಿಂದಲೂ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯುವುದು ಮತ್ತು ಪಿಜಿ ನಿವಾಸಿಗಳಿಗೆ ಪೊಲೀಸ್‌ ದೃಢೀಕರಣ ಪ್ರಮಾಣಪತ್ರ (ಪಿಸಿಸಿ)ವನ್ನು ಕಡ್ಡಾಯ ಮಾಡಲಾಗುತ್ತಿದೆ. ಜತೆಗೆ ಸ್ಥಳೀಯ ಆಗುಹೋಗುಗಳ ಮೇಲೆ ಸಾರ್ವಜನಿಕರು ನಿಗಾ ಇಡುವಂತಹ “ನೇಬರ್‌ಹುಡ್‌ ವಾಚ್‌’ ಪರಿಕಲ್ಪನೆಯನ್ನೂ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಮಂಗಳೂರಿನಲ್ಲಿ ನ.19ರಂದು

ಮಂಗಳೂರು: ಪಿಜಿ ನಿಯಮದಲ್ಲಿ ಬಿಗಿ ಕ್ರಮ ಸಾಧ್ಯತೆ Read More »

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ| ಓರ್ವ ಸಾವು, ಮತ್ತೋರ್ವ ಗಂಭೀರ

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾರ್ಮಿಕರ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಟ್ರ್ಯಾಕ್ಟರ್ ನಲ್ಲಿ ನೀರು ತುಂಬಿಸಿ ಹೋಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಟರ್ ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ಜಾರ್ಖಂಡ್ ಮೂಲದ ಕಾರ್ಮಿಕ ದಿಬೋ ಶಂಕರ್ ನಾಯಕ್ (22)ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಕಾರ್ಮಿಕನಿಗೆ ಗಂಬೀರ ಗಾಯಗೊಂಡಿದ್ದು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ| ಓರ್ವ ಸಾವು, ಮತ್ತೋರ್ವ ಗಂಭೀರ Read More »

ವಿಟ್ಲ: ಮರಾಟಿ ಯುವವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ|
ಅಧ್ಯಕ್ಷರಾಗಿ ಉಮೇಶ್ ಅನ್ನಮೂಲೆ|ಕಾರ್ಯದರ್ಶಿಯಾಗಿ ಹರ್ಷಿತ್ ಗಾಳಿಹಿತ್ಲು

ಸಮಗ್ರ ನ್ಯೂಸ್: ವಿಟ್ಲ ಇಲ್ಲಿನ ಮರಾಟಿ ಯುವವೇದಿಕೆ ರಿ. ವಿಟ್ಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಡಿ.4 ರಂದು ನಡೆಯಿತು. ಅಧ್ಯಕ್ಷರಾಗಿ ಉಮೇಶ್ ಅನ್ನಮೂಲೆ, ಉಪಾಧ್ಯಕ್ಷರಾಗಿ ದಿನೇಶ್ ಗೋಳ್ತಮಜಲು, ಕಾರ್ಯದರ್ಶಿಯಾಗಿ ಹರ್ಷಿತ್ ಗಾಳಿಹಿತ್ಲು, ಜೊತೆ ಕಾರ್ಯದರ್ಶಿಯಾಗಿ ಚಿತ್ರಾಕ್ಷ ನೆಕ್ಕರೆಕಾಡು, ಕ್ರೀಡಾ ಕಾರ್ಯದರ್ಶಿಯಾಗಿ ರಾಮಚಂದ್ರ ನೆಕ್ಕರೆಕಾಡು, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ, ಸಿ ಎಚ್ ಸಾಮಾಜಿಕ ಜಾಲತಾಣದ ನಿರ್ವಹಕರಾಗಿ ವಿವೇಕ್ ಅನ್ನಮೂಲೆ, ಗೌರವಾಧ್ಯಕ್ಷರಾಗಿ ರವಿ ಕಲ್ಲಜರಿ ರವರು ಆಯ್ಕೆಯಾಗಿದ್ದಾರೆ.

ವಿಟ್ಲ: ಮರಾಟಿ ಯುವವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ|
ಅಧ್ಯಕ್ಷರಾಗಿ ಉಮೇಶ್ ಅನ್ನಮೂಲೆ|ಕಾರ್ಯದರ್ಶಿಯಾಗಿ ಹರ್ಷಿತ್ ಗಾಳಿಹಿತ್ಲು
Read More »

ಕಟೀಲು ದುರ್ಗೆಯ ದರ್ಶನ ಪಡೆದ ನಟ ಸುದೀಪ್ ದಂಪತಿ

ಸಮಗ್ರ ನ್ಯೂಸ್: ಪ್ರಸಿದ್ಧ ದೇವಿಕ್ಷೇತ್ರ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪತ್ನಿ ಪ್ರಿಯಾ ಜೊತೆ ನಟ ಕಿಚ್ಚ ಸುದೀಪ್ ಭಾನುವಾರ ಭೇಟಿ ನೀಡಿದರು. ಕಟೀಲು ಮತ್ತು ಮುಲ್ಕಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿರುವ ನಟ ಸುದೀಪ್ ಕಟೀಲು ಶ್ರೀದೇವಿಗೆ ವಿಶೇಷ ಪೂಜೆ ನೆರವೇರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇಗುಲದ ವತಿಯಿಂದ ಸುದೀಪ್ ರನ್ನು ಗೌರವಿಸಲಾಯಿತು.

ಕಟೀಲು ದುರ್ಗೆಯ ದರ್ಶನ ಪಡೆದ ನಟ ಸುದೀಪ್ ದಂಪತಿ Read More »

ಕಟೀಲು ಯಕ್ಷಗಾನ ಮೇಳಗಳ ಧ್ವನಿವರ್ಧಕ ಬಳಕೆ ನಿರ್ಬಂಧ ಸಡಿಲಿಸಿ ಡಿಸಿ ಆದೇಶ

ಸಮಗ್ರ ನ್ಯೂಸ್: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮೇಳಗಳಿಗೆ ರಾತ್ರಿ 12 ರವರೆಗೆ ಧ್ವನಿವರ್ಧಕಗಳ ಬಳಕೆಗೆ ಹೇರಲಾಗಿದ್ದ ನಿರ್ಬಂಧ ಸಡಿಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ತಿಳಿಸಿದ್ದಾರೆ. ರಾತ್ರಿ 10ರ ನಂತರ ಧ್ವನಿವರ್ಧಕಗಳ ಬಳಕೆ ಸುಪ್ರೀಂ ಕೋರ್ಟ್‌ನಿಂದ ನಿಷೇಧ ಹೇರಲಾಗಿತ್ತು.ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಭಕ್ತರು ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಗೆ ಸಡಿಲಿಕೆ ಕೋರಿ ಮನವಿ ಪತ್ರ ಸಲ್ಲಿಸಿದ್ದರು. ಕಟೀಲು ದೇವಸ್ಥಾನದ ಅಧಿಕಾರಿಗಳು ಮತ್ತು ಭಕ್ತರೊಂದಿಗೆ ಚರ್ಚಿಸಿದ ನಂತರ ಈ

ಕಟೀಲು ಯಕ್ಷಗಾನ ಮೇಳಗಳ ಧ್ವನಿವರ್ಧಕ ಬಳಕೆ ನಿರ್ಬಂಧ ಸಡಿಲಿಸಿ ಡಿಸಿ ಆದೇಶ Read More »

ಸುರತ್ಕಲ್ ಟೋಲ್ ಎತ್ತಂಗಡಿ!
ಟೋಲ್ ಕಾರ್ಮಿಕರಿಗೆ ಉದ್ಯೋಗ ನೀಡಿದ ಪ್ರತಿಭಾ ಕುಳಾಯಿ!

ಸಮಗ್ರ ನ್ಯೂಸ್: ಇಲ್ಲಿನ ಟೋಲ್ ಗೇಟ್ ನಲ್ಲಿ ಉದ್ಯೋಗದಲ್ಲಿದ್ದು ಟೋಲ್ ತೆರವು ಹಿನ್ನೆಲೆಯಲ್ಲಿ ಉದ್ಯೋಗ ಕಳೆದುಕೊಂಡಿರುವ 35 ಮಂದಿಗೆ ಕೆಲಸ ನೀಡುವುದಾಗಿ ಹೇಳಿದ್ದ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಅವರು ತಮ್ಮನ್ನು ಸಂಪರ್ಕಿಸಿದ 19 ಮಂದಿಯಲ್ಲಿ ಹೆಚ್ಚಿನ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಪ್ರತಿಭಾ ಕುಳಾಯಿ ಅವರು, “ಸುರತ್ಕಲ್ ಟೋಲ್ ಗೇಟ್ ನಲ್ಲಿ ಉದ್ಯೋಗ ಕಳೆದುಕೊಂಡ 35 ಮಂದಿಯನ್ನು ನಾನು ಭೇಟಿಯಾಗಿ ಅವರಿಗೆ ಅವರ

ಸುರತ್ಕಲ್ ಟೋಲ್ ಎತ್ತಂಗಡಿ!
ಟೋಲ್ ಕಾರ್ಮಿಕರಿಗೆ ಉದ್ಯೋಗ ನೀಡಿದ ಪ್ರತಿಭಾ ಕುಳಾಯಿ!
Read More »

ಸುಬ್ರಹ್ಮಣ್ಯ: ಲಂಚಕ್ಕೆ ಬೇಡಿಕೆ ಇರಿಸಿ‌ ಅಂಗಡಿ ಮಾಲೀಕನಿಗೆ ಥಳಿಸಿದ ಪೊಲೀಸ್ ಸಿಬ್ಬಂದಿ..? | ಕುಕ್ಕೆ ಜಾತ್ರೆಯಲ್ಲೊಂದು ಪೊಲೀಸ್ ದೌರ್ಜನ್ಯದ ಆರೋಪ

ಸಮಗ್ರ ನ್ಯೂಸ್ : ಸುಬ್ರಹ್ಮಣ್ಯ ಜಾತ್ರೋತ್ಸವ ಸಮಯದಲ್ಲಿ ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನೋರ್ವನಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಯುವಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟ್ರುಪಾಡಿ ಗ್ರಾಮದ ಬೀಮಗುಂಡಿ ನಿವಾಸಿ ಶಶಿಕಿರಣ್ ಎಂಬವರು ಪೋಲಿಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾದವರು. ಈ ಬಗ್ಗೆ ಹೇಳಿಕೆ ನೀಡಿರುವ ಶಶಿಕಿರಣ್ ಅವರು ಚಂಪಾಷಷ್ಠಿಯಂದು ನಾನು ಜ್ಯೂಸ್ ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದು, ಪಂಚಮಿಯ ರಾತ್ರಿ 12 ಗಂಟೆ ಸುಮಾರಿಗೆ

ಸುಬ್ರಹ್ಮಣ್ಯ: ಲಂಚಕ್ಕೆ ಬೇಡಿಕೆ ಇರಿಸಿ‌ ಅಂಗಡಿ ಮಾಲೀಕನಿಗೆ ಥಳಿಸಿದ ಪೊಲೀಸ್ ಸಿಬ್ಬಂದಿ..? | ಕುಕ್ಕೆ ಜಾತ್ರೆಯಲ್ಲೊಂದು ಪೊಲೀಸ್ ದೌರ್ಜನ್ಯದ ಆರೋಪ Read More »