ವಿಧಾನಸಭಾ ಚುನಾವಣೆ| ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಬಿಜೆಪಿ ಭದ್ರಕೋಟೆಯನ್ನು ಬೇಧಿಸಲಿದ್ಯಾ ಕೈ ಪಡೆ?
ಸಮಗ್ರ ನ್ಯೂಸ್: ಕರಾವಳಿ ಭಾಗ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಕೇಸರಿಯ ಭದ್ರ ಕೋಟೆ ಅಂತಾನೆ ಕರೆಸಿಕೊಂಡಿರುವ ಜಿಲ್ಲೆ. ಯಾಕೆಂದರೆ ಚುನಾವಣಾ ವಿಷಯ ಬಂದಾಗ ಇಲ್ಲಿ ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷವು ಗೆಲುವು ಸಾಧಿಸುವುದು ಅಷ್ಟೇನು ಸುಲಭದ ಕೆಲಸವಲ್ಲ ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿದೆ. ಅದರಲ್ಲೂ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸತತ 36 ವರ್ಷಗಳಿಂದ ಬಿಜೆಪಿ ಗೆಲುವು ಸಾಧಿಸಿದ ಹೆಮ್ಮೆ ರಾಜ್ಯ ರಾಜಕೀಯಕ್ಕೆ ಸಲ್ಲುತ್ತದೆ. ಬರೋಬ್ಬರಿ 6 ಬಾರಿ ಸ್ಪರ್ಧಿಸಿ ವಿಜಯದ ಪತಾಕೆ ಹಾರಿಸಿದ










