ಕರಾವಳಿ

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಗಾಯಕ ದಿ| ವಿಶ್ವದೀಪ್ ಕುಂದಲ್ಪಾಡಿ ಪ್ರಥಮ ಪುಣ್ಯಸ್ಮರಣೆಗೆ ಶೋಕಗಾನ ಕಾರ್ಯಕ್ರಮ

ಸಮಗ್ರ ನ್ಯೂಸ್: ಕಳೆದ ವರ್ಷ ಅಪಘಾತದಿಂದ ಸಾವನ್ನಪ್ಪಿದ್ದ ಪೆರಾಜೆಯ ಬಾಲಗಾಯಕ ಮತ್ತು ಪ್ರತಿಭಾನ್ವಿತ ದಿ| ವಿಶ್ವದೀಪ್ ಕುಂದಲ್ಪಾಡಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವಾಟ್ಸಾಪ್ ಆನ್ ಲೈನ್ ಲ್ಲಿ ಶೋಕಗಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಡ್ಮಿನ್ ಹಾಗೂ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿರೂಪಿಸಿದರು . ವಿಶ್ವದೀಪ್ ರವರ ತಂದೆಯಾದ ಲೋಕನಾಥ ಗೌಡ ಕುಂದಲ್ಪಾಡಿ ಮತ್ತು

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಗಾಯಕ ದಿ| ವಿಶ್ವದೀಪ್ ಕುಂದಲ್ಪಾಡಿ ಪ್ರಥಮ ಪುಣ್ಯಸ್ಮರಣೆಗೆ ಶೋಕಗಾನ ಕಾರ್ಯಕ್ರಮ Read More »

ಸುಳ್ಯ: ಅಪಘಾತದಲ್ಲಿ ಬಾಲಕಿ ಸಾವು ಪ್ರಕರಣ| ಬಸ್ ಚಾಲಕನಿಗೆ ಜೈಲು

ಸಮಗ್ರ ನ್ಯೂಸ್: ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ ಫೆ.12, 2018ರಂದು ಕೆವಿಜಿಯ ಐಪಿಎಸ್ ಶಾಲೆಯ ಒಂದನೆಯ ತರಗತಿ ವಿದ್ಯಾರ್ಥಿನಿ ಆಗ್ನೇಯ ಬಾಲು ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಶಾಲಾ ಬಸ್ ಚಾಲಕ ಧನಂಜಯ ಎಂಬುವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿ ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್ ಕುಮಾರ್ ಆರ್ ಪ್ರಕರಣ ದಾಖಲಿಸಿಕೊಂಡು ಬಸ್ಸು ಚಾಲಕ ಧನಂಜಯರ ಮೇಲೆ ಕಲಂ 279, 304(ಎ ) ಮತ್ತು

ಸುಳ್ಯ: ಅಪಘಾತದಲ್ಲಿ ಬಾಲಕಿ ಸಾವು ಪ್ರಕರಣ| ಬಸ್ ಚಾಲಕನಿಗೆ ಜೈಲು Read More »

ಸುಳ್ಯ: ಹೃದಯಾಘಾತಕ್ಕೆ ಯುವಕ‌ ಬಲಿ

ಸಮಗ್ರ ನ್ಯೂಸ್: ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದಿಂದ ವರದಿಯಾಗಿದೆ. ಪಂಬೆತ್ತಾಡಿ ಗ್ರಾಮದ ಎದುರುಮಜಲು ಮಹಾಲಿಂಗ ನಾಯ್ಕ ರವರ ಪುತ್ರ ಜಗದೀಶ್ (33) ಮೃತ ಪಟ್ಟ ದುರ್ದೈವಿ. ಮೂರು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾ.23ರಂದು ಕೊನೆಯುಸಿರೆಳೆದಿದ್ದಾರೆ.

ಸುಳ್ಯ: ಹೃದಯಾಘಾತಕ್ಕೆ ಯುವಕ‌ ಬಲಿ Read More »

ಸುಳ್ಯ: ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಅರಮನೆಗಯ ನಿವಾಸಿಗಳು| ಬ್ಯಾನರ್ ಹರಿದವರಿಗೆ ಕೊರಗಜ್ಜ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ| ಕೋಟಿ ಲೆಕ್ಕದ ಅನುದಾನ ಪೊಳ್ಳು ಭರವಸೆಯೇ?

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅರಮನೆಗಯ ಎಂಬಲ್ಲಿ ಸುಮಾರು 30 ವರ್ಷಗಳಿಂದ ಬೇಡಿಕೆಯ ಸೇತುವೆಯನ್ನು ನಿರ್ಮಿಸದ ಹಿನ್ನಲೆ ಆ ಭಾಗದ ಜನರು ಇದೀಗ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಅರಮನೆಗಯ ಎಂಬ ಊರು ಹಳ್ಳಿ ಪ್ರದೇಶವಾಗಿದ್ದು ಮರ್ಕಂಜ ಹಾಗೂ ಅಂರತೋಡು ಗ್ರಾಮಕ್ಕೆ ಸೇರಿಕೊಂಡಿರುವ ಊರಾಗಿದೆ. ಈ ಭಾಗದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಈ ಊರಿನ ಮಧ್ಯದಲ್ಲಿ ನದಿಯಿದ್ದು, ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ಆ ಸಮಯದಲ್ಲಿ ಅಲ್ಲಿಯ ಜನರು ಸೇರಿದಂತೆ ಶಾಲಾ ಮಕ್ಕಳ

ಸುಳ್ಯ: ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಅರಮನೆಗಯ ನಿವಾಸಿಗಳು| ಬ್ಯಾನರ್ ಹರಿದವರಿಗೆ ಕೊರಗಜ್ಜ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ| ಕೋಟಿ ಲೆಕ್ಕದ ಅನುದಾನ ಪೊಳ್ಳು ಭರವಸೆಯೇ? Read More »

ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಆರಂಭ| ನಾಗರಿಕ ‌ಹಿತರಕ್ಷಣಾ ವೇದಿಕೆಯ ಹೋರಾಟಕ್ಕೆ ಮಣಿದ ಜನಪ್ರತಿನಿಧಿಗಳು

ಸಮಗ್ರ ನ್ಯೂಸ್: ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಆರಂಭವಾಗದಿದ್ದರೆ ಅಡ್ತಲೆ ವಾರ್ಡ್ ವ್ಯಾಪ್ತಿಯಲ್ಲಿ ಮಾ.23ರಿಂದ ನೋಟ ಅಭಿಯಾನದ ಜಾಗೃತಿಯ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಆರಂಭಗೊಂಡಿದೆ. ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಡ್ತಲೆಯ ನಾಗರಿಕ ‌ಹಿತರಕ್ಷಣಾ ವೇದಿಕೆ ಹೋರಾಟ ನಡೆಸುತ್ತಾ ಬಂದಿದ್ದು ಅದರ ಪರಿಣಾಮ ಆರಂಭದಲ್ಲಿ ರೂ.1 ಕೋಟಿ ಅನುದಾನ ಬಿಡುಗಡೆ ಗೊಂಡು‌ ಅರಂತೋಡಿನಿಂದ ಅಡ್ತಲೆ ರಸ್ತೆಯ 1357 ಮೀಟರ್ ಕಾಮಗಾರಿ ನಡೆದಿದೆ. ಆದಾದ ಬಳಿಕ ಕಾಮಗಾರಿ ನಿಲ್ಲಿಸಲಾಗಿತ್ತು. ಆದರೆ ಮುಂದಿನ

ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಆರಂಭ| ನಾಗರಿಕ ‌ಹಿತರಕ್ಷಣಾ ವೇದಿಕೆಯ ಹೋರಾಟಕ್ಕೆ ಮಣಿದ ಜನಪ್ರತಿನಿಧಿಗಳು Read More »

ಸುಳ್ಯ ಮೂಲದ ಯುವಕ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಯುವಕನೋರ್ವ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.22ರಂದು ವರದಿಯಾಗಿದೆ. ಕಲ್ಮಕಾರು ಗ್ರಾಮದ ಮೆಂಟೆಕಜೆ ತೇಜಕುಮಾರ್ ಅವರ ಪುತ್ರ ಲೋಕೇಶ(25) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಚಿಕ್ಕಮಗಳೂರಿನಲ್ಲಿ ಜಿಯೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ತನ್ನ ರೂಮಿನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಲೋಕೇಶ್ ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

ಸುಳ್ಯ ಮೂಲದ ಯುವಕ ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ Read More »

ಚಂದ್ರ ದರ್ಶನ ಹಿನ್ನಲೆ| ಕರಾವಳಿಯಲ್ಲಿ ನಾಳೆಯಿಂದ (ಮಾ.23) ಪವಿತ್ರ ರಂಝಾನ್ ಉಪವಾಸ ಆರಂಭ

ಸಮಗ್ರ ನ್ಯೂಸ್: ರಂಜಾನ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭವಾಗಲಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝೀ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ. ಚಂದ್ರ ದರ್ಶನವಾಗಿರುವುದರಿಂದ ಕರಾವಳಿಯಲ್ಲಿ ರಂಜಾನ್ ಮಾಸದ ಉಪವಾಸ ವ್ರತ ನಾಳೆಯಿಂದ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಪವಿತ್ರ ಮಾಸ ರಂಜಾನ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಸಮಯದಲ್ಲಿ 30 ದಿನಗಳ ಕಾಲ ಪ್ರತಿದಿನ

ಚಂದ್ರ ದರ್ಶನ ಹಿನ್ನಲೆ| ಕರಾವಳಿಯಲ್ಲಿ ನಾಳೆಯಿಂದ (ಮಾ.23) ಪವಿತ್ರ ರಂಝಾನ್ ಉಪವಾಸ ಆರಂಭ Read More »

ಕಾರ್ಕಳ: ಬೆಂಕಿ ಬಿದ್ದಿದೆ ಅಂದರೆ ನಮ್ಮಲ್ಲಿ ಗಾಡಿ ಇಲ್ಲ ಎಂದ ಅಗ್ನಿಶಾಮಕದಳ!

ಸಮಗ್ರ ನ್ಯೂಸ್: ಕಾರ್ಕಳದ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಕುದ್ರೊಟ್ಟುವಿನ ಪಾಲ್ದಡಿ ಎಂಬಲ್ಲಿ ಮಾ.22ರಂದು ಆಕಸ್ಮಿಕವಾಗಿ ಕೃಷಿ ತೋಟಕ್ಕೆ ಬೆಂಕಿ ಬಿದ್ದು ಅಪಾರ ಹಾನಿಯಾಗಿದೆ. ಬೈಹುಲ್ಲಿನ ಬೃಹತ್ ರಾಶಿಯೊಂದು ಬೆಂಕಿಯಲ್ಲಿ, ಕೃಷಿ ತೋಟಕ್ಕೆ ಬಳಸುತ್ತಿದ್ದ ಪಂಪ್‌ಶೆಡ್,ಅಲ್ಲದೇ ತೆಂಗು, ಹಲಸು, ಮಾವಿನ ಮರಗಳು ಕೂಡಾ ಬೆಂಕಿಗೆ ಆಹುತಿಯಾಗಿದೆ. ಮೇಯಲು ಕಟ್ಟಿದ್ದ ಹಲವು ಜಾನುವಾರುಗಳನ್ನು ಕೂಡಲೇ ಸ್ಥಳೀಯರು ರಕ್ಷಿಸಿದ್ದಾರೆ. ಕೃಷಿ ತೋಟಕ್ಕೆ ಬೆಂಕಿ ಬಿದ್ದು ಉರಿಯುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಕಾರ್ಕಳದ ಅಗ್ನಿಶಾಮಕದಳದವರನ್ನು ಫೋನ್ ಮಾಡಿ ಸಂಪರ್ಕಿಸಿದಾಗ ಸರಿಯಾದ ಸ್ಪಂದನೆ ಸಿಕ್ಕಿಲ್ಲವೆಂದು ಆರೋಪಿಸಿದ್ದಾರೆ.

ಕಾರ್ಕಳ: ಬೆಂಕಿ ಬಿದ್ದಿದೆ ಅಂದರೆ ನಮ್ಮಲ್ಲಿ ಗಾಡಿ ಇಲ್ಲ ಎಂದ ಅಗ್ನಿಶಾಮಕದಳ! Read More »

ಸುಳ್ಯ: ಅರಂತೋಡು ಅರಮನೆಗಯದಲ್ಲಿ ಮತ ಬಹಿಷ್ಕಾರ ಬ್ಯಾನರ್| ಸೇತುವೆ ನಿರ್ಮಿಸಿಕೊಡಲು ಸುಂದರ ಪಾಟಾಜೆ ಮನವಿ

ಸಮಗ್ರ ನ್ಯೂಸ್ : ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅರಮನೆಗಾಯ ಎಂಬಲ್ಲಿ 40 ವರ್ಷಗಳಿಂದ ಸೇತುವೆ ನಿರ್ಮಿಸಲು ಸಚಿವರಾದ ಎಸ್ ಅಂಗಾರವರಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರಮನೆ ಗಾಯದ 40 ದಲಿತ ಕುಟುಂಬದವರು ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ದಿನಾಂಕ ಮಾ.14 ರಂದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಇಲ್ಲಿ ಸುಮಾರು 40 ದಲಿತ ಕುಟುಂಬಗಳು ವಾಸವಾಗಿದ್ದಾರೆ, 40

ಸುಳ್ಯ: ಅರಂತೋಡು ಅರಮನೆಗಯದಲ್ಲಿ ಮತ ಬಹಿಷ್ಕಾರ ಬ್ಯಾನರ್| ಸೇತುವೆ ನಿರ್ಮಿಸಿಕೊಡಲು ಸುಂದರ ಪಾಟಾಜೆ ಮನವಿ Read More »

ಮಂಗಳೂರು ಬಂದರು ತಲುಪಿದ ಸಿಲ್ವರ್ ಸ್ಪಿರಿಟ್| ಏನಿದರ ವೈಶಿಷ್ಟ್ಯತೆ ಗೊತ್ತಾ?

ಸಮಗ್ರ ನ್ಯೂಸ್: “ಸಿಲ್ವರ್ ಸ್ಪಿರಿಟ್” ಹೆಸರಿನ ಪ್ರವಾಸಿ ಹಡಗು ಎನ್‌ಎಂಪಿಎಗೆ ಇಂದು ಬೆಳಗ್ಗೆ ಬಂದಿಳಿದಿದೆ. ಹಡಗಿನಲ್ಲಿ 497 ಪ್ರಯಾಣಿಕರು ಮತ್ತು 411 ಸಿಬ್ಬಂದಿ ಇದ್ದರು. ಹಡಗಿನ ಒಟ್ಟಾರೆ ಉದ್ದವು 210.70 ಮೀಟರ್ ಆಗಿದ್ದು, 39,444 ಗ್ರಾಸ್ ಟನ್ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು 6.60 ಮೀಟರ್ ಡ್ರಾಫ್ಟ್ ಹೊಂದಿದೆ. ಹಡಗು ಕೊಚ್ಚಿನ್ ಬಂದರಿನಿಂದ ಬಂದಿದ್ದು ಮಂಗಳೂರಿನಿಂದ ಮೊರ್ಮುಗಾವೊ ಬಂದರಿಗೆ ಪ್ರಯಾಣಿಸಲಿದೆ. ಪ್ರಯಾಣಿಕರಿಗೆ ಸಾಂಪ್ರದಾಯಿಕ ಡ್ರಮ್ (ಚೆಂಡೆ) ನುಡಿಸುವ ಮೂಲಕ ಆತ್ಮೀಯ ಸ್ವಾಗತ ನೀಡಲಾಯಿತು. ಕ್ರೂಸ್ ಪ್ರಯಾಣಿಕರ ಆಹ್ಲಾದಕರ

ಮಂಗಳೂರು ಬಂದರು ತಲುಪಿದ ಸಿಲ್ವರ್ ಸ್ಪಿರಿಟ್| ಏನಿದರ ವೈಶಿಷ್ಟ್ಯತೆ ಗೊತ್ತಾ? Read More »