ಕರಾವಳಿ

ಸುಳ್ಯ: ರಾಜ್ಯದ ಏಕೈಕ ಪ.ಜಾತಿ ಮೀಸಲು ಕ್ಷೇತ್ರ ಸುಳ್ಯದಲ್ಲಿ ಬದಲಾವಣೆಯ ಗಾಳಿ? ಸಚಿವ ಅಂಗಾರರ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಇದೆ ಅಸಮಾಧಾನದ ಹೊಗೆ! ಕ್ಷೇತ್ರಾಭಿವೃದ್ಧಿಗೆ ಯೋಜನೆ ಹಾಕದ ಹಾಲಿ ಶಾಸಕರಿಗೆ ಸಿಗುತ್ತಾ ಕೋಕ್? ಕಂಪ್ಲೀಟ್ ಸ್ಟೋರಿ ಓದಿ…

ಸಮಗ್ರ ನ್ಯೂಸ್: 1972ರಲ್ಲಿ ಪುತ್ತೂರು ದ್ವಿ ಸದಸ್ಯ ಕ್ಷೇತ್ರದಿಂದ ಪ್ರತ್ಯೇಕಗೊಂಡು ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಮೀಸಲಾಗಿರುವ ಏಕೈಕ ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರ. ಕ್ಷೇತ್ರ ವಿಂಗಡಣೆಯಾದ ಬಳಿಕ 1985, 89ರ ಚುನಾವಣೆಯಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತಾದರೂ 1994ರಲ್ಲಿ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂತು. ನಂತರದ ದಿನಗಳಲ್ಲಿ ಒಮ್ಮೆಯೂ ಇಲ್ಲಿ ಬಿಜೆಪಿ ಸೋತ ಇತಿಹಾಸವಿಲ್ಲ. 1994, 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಬಿಜೆಪಿಯ ಎಸ್ ಅಂಗಾರ (S

ಸುಳ್ಯ: ರಾಜ್ಯದ ಏಕೈಕ ಪ.ಜಾತಿ ಮೀಸಲು ಕ್ಷೇತ್ರ ಸುಳ್ಯದಲ್ಲಿ ಬದಲಾವಣೆಯ ಗಾಳಿ? ಸಚಿವ ಅಂಗಾರರ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಇದೆ ಅಸಮಾಧಾನದ ಹೊಗೆ! ಕ್ಷೇತ್ರಾಭಿವೃದ್ಧಿಗೆ ಯೋಜನೆ ಹಾಕದ ಹಾಲಿ ಶಾಸಕರಿಗೆ ಸಿಗುತ್ತಾ ಕೋಕ್? ಕಂಪ್ಲೀಟ್ ಸ್ಟೋರಿ ಓದಿ… Read More »

ಸುಳ್ಯ: ಜನಪ್ರಿಯ ವೈದ್ಯರಾಗಿದ್ದ ಡಾ.ಹಿಮಕರ ಕೆ.ಎಸ್. ಸೇವೆಯಿಂದ ಸ್ವಯಂ ನಿವೃತ್ತಿ

Samagra news : ಸುಳ್ಯದಲ್ಲಿ ಜನಪ್ರಿಯ ವೈದ್ಯರಾಗಿದ್ದ ಗುರುತಿಸಿಕೊಂಡಿದ್ದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞರಾದ ಡಾ.ಹಿಮಕರ ಕೆ.ಎಸ್.ಅವರು 30 ವರ್ಷಗಳ ಸರಕಾರಿ ಸೇವೆಯಿಂದ ಮಾ.31ರಂದು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇವರ 6 ವರ್ಷಗಳ ಸೇವಾ ಅವಧಿ ಉಳಿದಿರುವಂತೆಯೇ ಸ್ವಯಂ ನಿವೃತ್ತಿ‌ ಪಡೆದಿದ್ದಾರೆ. 1993ರಲ್ಲಿ ವೈದ್ಯರಾಗಿ ಸರಕಾರಿ ಸೇವೆಗೆ ಸೇರಿದ್ದ ಡಾ.ಹಿಮಕರ ಅವರು ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಬಳಿಕ ಕೆಎಂಸಿಯಲ್ಲಿ ವೈದ್ಯಕೀಯ ಪಿಜಿ ಪಡೆದರು. ಬಳಿಕ

ಸುಳ್ಯ: ಜನಪ್ರಿಯ ವೈದ್ಯರಾಗಿದ್ದ ಡಾ.ಹಿಮಕರ ಕೆ.ಎಸ್. ಸೇವೆಯಿಂದ ಸ್ವಯಂ ನಿವೃತ್ತಿ Read More »

ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಗೆ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ಹಿಂಪಡೆದ ಸರ್ಕಾರ

ಸಮಗ್ರ ನ್ಯೂಸ್: ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಗೆ (Sathyajith Surathkal) ಸರ್ಕಾರ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ಸರ್ಕಾರ ಹಿಂಪಡೆದಿದೆ. 2000 ನೇ ಇಸವಿ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವಿರತವಾಗಿ ಕೋಮು ಗಲಾಬೆ ನಡೆಯುತಿದ್ದಾಗ ಹಿಂದೂ ಜಾಗರಣ ವೇದಿಕೆಯ ಮುಂಚೂಣಿ ಮುಖಂಡ ಸತ್ಯಜಿತ್ ಸುರತ್ಕಲ್ ಗೆ ಅಂದಿನ ಸರ್ಕಾರ ಗನ್ ಮ್ಯಾನ್ ಭದ್ರತೆಯನ್ನು ನೀಡಿತ್ತು. ಸತ್ಯಜಿತ್ ಗೆ ಗನ್ ಮ್ಯಾನ್ ನೀಡಿದ ಕೆಲವೇ ದಿನಗಳಲ್ಲಿ 2006ರ ಡಿ.1 ರಂದು ಬಿಜೆಪಿ ಮುಖಂಡ ಮುಲ್ಕಿ ಸುಖಾನಂದ

ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಗೆ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ಹಿಂಪಡೆದ ಸರ್ಕಾರ Read More »

ಕಡಬ: ವಾಟ್ಸಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಸಮಗ್ರ ನ್ಯೂಸ್: ವಾಟ್ಸಪ್ ನಲ್ಲಿ ಸಾಯುವ ಕುರಿತ ಸ್ಟೇಟಸ್ ಹಾಕಿ ಯುವಕನೊರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ರೆನೀಶ್ (27 ) ಎಂದು ಗುರುತಿಸಲಾಗಿದೆ. ಮೃತ ರೆನೀಶ್ ತಂದೆ ತಾಯಿ ಮರಣ ಹೊಂದಿದ್ದು, ತಮ್ಮ ಕಳೆದ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ನ ಕೆಲಸಕ್ಕೆ ಹೋಗುತ್ತಿದ್ದ. ನಿನ್ನೆಯೂ ಕೂಡ ಕೆಲಸಕ್ಕೆ ಹೋಗಿದ್ದ ಎನ್ನಲಾಗಿದೆ.

ಕಡಬ: ವಾಟ್ಸಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ Read More »

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ| ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ‘ಟ್ರೀ ಸ್ಕೂಟರ್’!| ವಾರಕ್ಕೆ ಉಳಿತಾಯವಾಗುತ್ತೆ ₹ 24 ಸಾವಿರ!!

ಸಮಗ್ರ ನ್ಯೂಸ್: ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಕ್ಕೆ ಕಾರ್ಮಿಕರು ಸಿಗುವುದಿಲ್ಲ ಎಂಬುದು ಎಲ್ಲ ರೈತರ ಅಳಲು. ಇದಕ್ಕೆ ಪರಿಹಾರ ಎನ್ನುವಂತೆ ಮಂಗಳೂರು ಮೂಲದ ನಿವಾಸಿಯೊಬ್ಬರು ವಿನೂತನವಾದ ‘ಟ್ರೀ ಸ್ಕೂಟರ್’ ಕಂಡುಹಿಡಿದಿದ್ದಾರೆ. ಕಾರ್ಮಿಕ ಶಕ್ತಿ ಮತ್ತು ಅಡಿಕೆ ಮರಗಳ ಅಕಾಲಿಕ ನಿರ್ವಹಣೆಯು ಕೃಷಿ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಂತರವನ್ನು ಮನಗಂಡ ಗಣಪತಿ ಭಟ್ ಅವರು ರೈತರಿಗೆ ಬಳಸಲು ಸುಲಭವಾದ ಟ್ರೀ ಸ್ಕೂಟರ್ ಅನ್ನು ಆವಿಷ್ಕರಿಸಿದ್ದಾರೆ, ಇದು ಕಾರ್ಮಿಕರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ| ಕೆಲವೇ ಸೆಕೆಂಡುಗಳಲ್ಲಿ ಅಡಿಕೆ ಮರ ಏರಲು ಬಂದಿದೆ ವಿನೂತನ ‘ಟ್ರೀ ಸ್ಕೂಟರ್’!| ವಾರಕ್ಕೆ ಉಳಿತಾಯವಾಗುತ್ತೆ ₹ 24 ಸಾವಿರ!! Read More »

ಮಂಗಳೂರು: ಲಾಡ್ಜ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

ಸಮಗ್ರ ನ್ಯೂಸ್: ಮಂಗಳೂರು ನಗರದ ಕರುಣಾ ಲಾಡ್ಜ್ ನಲ್ಲಿ ರೂಮ್ ಪಡೆದಿದ್ದ ಮೈಸೂರು ವಿಜಯನಗರ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರು ವಿಜಯನಗರದ ದೇವೇಂದ್ರ (46), ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರರು ದೌಡಾಯಿಸಿದ್ದು, ಹಣಕಾಸಿನ ಸಮಸ್ಯೆಯಿಂದಾಗಿ ತಾವು ಈ ಕೃತ್ಯವೆಸಗಿದ್ದಾಗ ಪತ್ರ ಸಿಕ್ಕಿದೆ. ತನಿಖೆ ಮುಂದುವರೆದಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

ಮಂಗಳೂರು: ಲಾಡ್ಜ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ! Read More »

Student committed to suicide| ಕಡಬ: ಪರೀಕ್ಷೆಗೆ ಹೆದರಿ‌ ಆತ್ಮಹತ್ಯೆಗೆ ಶರಣಾದನಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ? ಕಾಣೆಯಾದವನ ಶವ ಕುಮಾರಧಾರ ನದಿಯಲ್ಲಿ ಪತ್ತೆ!!

ಸಮಗ್ರ ನ್ಯೂಸ್: ಟ್ಯೂಷನ್ ಗೆಂದು ತೆರಳಿ ನಾಪತ್ತೆಯಾಗಿದ್ದ ಹತ್ತನೇ ತರಗತಿಯ ಬಾಲಕನ ಮೃತದೇಹವು ಕಡಬ ತಾಲೂಕಿನ ಪುಳಿಕುಕ್ಕು ಸಮೀಪದ ಕುಮಾರಧಾರಾ ನದಿಯ ನಾಕೂರು ಗಯ ಎಂಬಲ್ಲಿ ಗುರುವಾರ(ಮಾ.30) ಪತ್ತೆಯಾಗಿದೆ. ಕಡಬದ ಖಾಸಗಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಅದ್ವೈತ್ ಎಂಬಾತ ಬುಧವಾರ ಟ್ಯೂಷನ್ ಗೆಂದು ತೆರಳಿ ಆ ಬಳಿಕ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದಾನೆ. ಮನೆಯವರು ಹಾಗೂ ಸ್ಥಳೀಯರು ಹುಡುಕಾಡಿದಾಗ ಬಾಲಕನ ಬ್ಯಾಗ್ ಹಾಗೂ ಐಡಿ ಕಾರ್ಡ್ ಕುಮಾರಧಾರ ನದಿಯ ನಾಕೂರು ಗಯ ಎಂಬಲ್ಲಿ ಕಂಡುಬಂದಿದ್ದು, ವಿಷಯ ತಿಳಿದು

Student committed to suicide| ಕಡಬ: ಪರೀಕ್ಷೆಗೆ ಹೆದರಿ‌ ಆತ್ಮಹತ್ಯೆಗೆ ಶರಣಾದನಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ? ಕಾಣೆಯಾದವನ ಶವ ಕುಮಾರಧಾರ ನದಿಯಲ್ಲಿ ಪತ್ತೆ!! Read More »

ಮಂಗಳೂರು: ಅಧಿಕ ಲಾಭ ನೀಡುವುದಾಗಿ ವಂಚನೆ| NITK ವಿದ್ಯಾರ್ಥಿ ಮೇಲೆ ದೂರು ದಾಖಲು

ಸಮಗ್ರ ನ್ಯೂಸ್: ಅಧಿಕ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿರುವ ಬಗ್ಗೆ ಸುರತ್ಕಲ್ ಎನ್‌ಐಟಿಕೆ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಯಶ್‌ವರ್ಧನ್‌ ಜೈನ್ ಆರೋಪಿ. 2022ರ ಮಾರ್ಚ್‌ನಿಂದ ವಾಟ್ಸಪ್ ಗ್ರೂಪ್‌ನಲ್ಲಿ ಎನ್‌ಐಟಿಕೆ ವಿದ್ಯಾರ್ಥಿಗಳಿಗೆ ಒಂದು ವಾರದಲ್ಲಿ ಶೇ.10ರಷ್ಟು ಅಧಿಕ ಲಾಭ ನೀಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದ. ಅಕ್ಟೋಬರ್ ತಿಂಗಳಿನಲ್ಲಿ ‘ವೈವಿಜೆ ಇನ್‌ವೆಸ್‌ಟ್‌ಮೆಂಟ್ ಎಂಟರ್‌ಪ್ರೈಸಸ್ ಎಂಬ ಹೆಸರಿನ ಟೆಲಿಗ್ರಾಂ ಗ್ರೂಪ್ ಮಾಡಿದ್ದ. ಆ ಗ್ರೂಪ್ ಪ್ರಸ್ತುತ 981 ಮಂದಿ ಸದಸ್ಯರನ್ನು ಹೊಂದಿದೆ. ಅದರಲ್ಲಿ ಹೆಚ್ಚಾಗಿ ಎನ್‌ಐಟಿಕೆ

ಮಂಗಳೂರು: ಅಧಿಕ ಲಾಭ ನೀಡುವುದಾಗಿ ವಂಚನೆ| NITK ವಿದ್ಯಾರ್ಥಿ ಮೇಲೆ ದೂರು ದಾಖಲು Read More »

ಕಡಬ: ದೈವ ನರ್ತನ ವೇಳೆಯಲ್ಲಿಯೇ ಕುಸಿದು ಬಿದ್ದು ದೈವಾಧೀನನಾದ ನರ್ತಕ|

ಸಮಗ್ರ ನ್ಯೂಸ್: ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಸಾವನ್ನಪ್ಪಿದ ಘಟನೆ ಮಾ.30 ರಂದು ಕಡಬ ಸಮೀಪದ ಎಡಮಂಗಲ ಗ್ರಾಮದಿಂದ ವರದಿಯಾಗಿದೆ. ಗ್ರಾಮದಲ್ಲಿ ದೈವ ನರ್ತಕರಾಗಿ ಹೆಸರುವಾಸಿಯಾಗಿದ್ದ ಕಾಂತು ಅಜಿಲ ಮೂಲಂಗೀರಿ ಸಾವನ್ನಪ್ಪಿದ ದುರ್ದೈವಿ. ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ.30 ರಂದು ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ನೇಮೊತ್ಸವ ನಡೆಯುತ್ತಿತ್ತು. ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ

ಕಡಬ: ದೈವ ನರ್ತನ ವೇಳೆಯಲ್ಲಿಯೇ ಕುಸಿದು ಬಿದ್ದು ದೈವಾಧೀನನಾದ ನರ್ತಕ| Read More »

ಮಂಗಳೂರು: ಅಪಾರ್ಟ್’ಮೆಂಟ್ ನಿಂದ ಬಿದ್ದು ಎಸಿ ಟೆಕ್ನೀಶಿಯನ್ ಮೃತ್ಯು

ಸಮಗ್ರ ನ್ಯೂಸ್: ಕೆಲಸ ನಿರ್ವಹಿಸುತ್ತಿದ್ದ ವೇಳೆ ಎಸಿ ಟೆಕ್ನೀಶಿಯನ್’ವೋರ್ವರು ಆಯ ತಪ್ಪಿ ಅಪಾರ್ಟ್ ಮೆಂಟ್ ನಿಂದ ಬಿದ್ದು ಮೃತಪಟ್ಟ ಘಟನೆ ಮಂಗಳೂರು ನಗರದಿಂದ ವರದಿಯಾಗಿದೆ. ವಿನಯ್ ಜೋಯೆಲ್ ತಾವ್ರೋ (22) ಮೃತಪಟ್ಟ ಎಸಿ ಟೆಕ್ನೀಶಿಯನ್. ಇವರು ಬುಧವಾರ ಸಂಜೆ ಸುಮಾರು 5.58ರ ವೇಳೆಗೆ ನಂತೂರು ಬಳಿಯಿರುವ ಮೌಂಟ್ ಟಿಯರಾ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಲ್ಲಿ ಎಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಮಂಗಳೂರು: ಅಪಾರ್ಟ್’ಮೆಂಟ್ ನಿಂದ ಬಿದ್ದು ಎಸಿ ಟೆಕ್ನೀಶಿಯನ್ ಮೃತ್ಯು Read More »