ಕರಾವಳಿ

ಸಂಪಾಜೆ: ಜೇನು ತೆಗೆಯುತ್ತಿದ್ದ ವೇಳೆ ಮರದಿಂದ ಬಿದ್ದು ಯುವಕ ಮೃತ್ಯು

ಸಮಗ್ರ ನ್ಯೂಸ್: ಜೇನು ತೆಗಿಯಲೆಂದು ಮರ ಹತ್ತಿದ್ದ ಯುವಕನೋರ್ವ ಮರದಿಂದ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಎ.18 ರ ಸಂಜೆ ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕರಿಕೆ ಮೂಲದ ವಿಜಯ್ ಮೃತ ಯುವಕ. ಕರಿಕೆಯಿಂದ ಮೂವರು ಜೇನು ತೆಗೆಯಲೆಂದು ಸಂಪಾಜೆಗೆ ಬಂದಿದದ್ದರು ಎಂದು ಹೇಳಲಾಗಿದ್ದು, ಈ ವೇಳೆ ವಿಜಯ್ ಜೇನು ತೆಗೆಯುತ್ತಿದ್ದ ಸಂದರ್ಭ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೆ ಜೊತೆಗಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಲು ತಯಾರಿಯಲ್ಲಿದ್ದಾಗಲೇ ಆತ ಮೃತಪ್ಪಟ್ಟಿದ್ದ ಎನ್ನಲಾಗಿದೆ. ಇದೀಗ ಮೃತದೇಹವನ್ನು ಸುಳ್ಯ

ಸಂಪಾಜೆ: ಜೇನು ತೆಗೆಯುತ್ತಿದ್ದ ವೇಳೆ ಮರದಿಂದ ಬಿದ್ದು ಯುವಕ ಮೃತ್ಯು Read More »

ಕಾಂಗ್ರೆಸ್ ನಿಂದ ಅಭ್ಯರ್ಥಿಗಳ 4ನೇ ಪಟ್ಟಿ ಪ್ರಕಟ| ಸಸ್ಪೆನ್ಸ್ ನಲ್ಲಿ ಮಂಗಳೂರು ಉತ್ತರ ಕ್ಷೇತ್ರ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ 4ನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 7 ಮಂದಿ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಸಿ.ಟಿ ರವಿ ಅವರ ಆಪ್ತ ಹೆಚ್.ಡಿ ತಮ್ಮಯ್ಯ ಅವರಿಗೆ ಕಾಂಗ್ರೆಸ್ರ ಟಿಕೆಟ್ ಘೋಷಿಸಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸರಾಜು ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಮೊಹಮ್ಮದ್ ಯೂಸುಫ್ ಸವಣೂರು ಅವರಿಗೆ ಟಿಕೆಟ್ ನೀಡಿದೆ. ಈವರೆಗೆ ಒಟ್ಟು 216 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು

ಕಾಂಗ್ರೆಸ್ ನಿಂದ ಅಭ್ಯರ್ಥಿಗಳ 4ನೇ ಪಟ್ಟಿ ಪ್ರಕಟ| ಸಸ್ಪೆನ್ಸ್ ನಲ್ಲಿ ಮಂಗಳೂರು ಉತ್ತರ ಕ್ಷೇತ್ರ Read More »

ಸುಳ್ಯ: ಬಿಜೆಪಿಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ ಕೃಷ್ಣಪ್ಪ, ಆಮ್ ಆದ್ಮಿ ಯಿಂದ ಸುಮನಾ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಕೆ

Samagra news: ವಿಧಾನಸಭೆ ಚುನಾವಣೆ ಹಿನ್ನಲೆ ಸುಳ್ಯ ತಾಲೂಕಿನ ಬಿಜೆಪಿ,ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಮಾ.18ರಂದು ತಮ್ಮ ನಾಮಪತ್ರವನ್ನು ಚುನಾವಣೆ ಅಧಿಕಾರಿಗೆ ಸಲ್ಲಿಸಿದರು. ಸುಳ್ಯ ವಿದಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ನೂರಾರು ಕಾರ್ಯಕರ್ತರೊಂದಿಗೆ ಸುಳ್ಯದ ಶ್ರೀ ರಾಮ ಪೇಟೆಯಿಂದ ಮೆರವಣಿಗೆ ಆರಂಭಗೊಂಡು, ಈ ವೇಳೆ ಮಾಜೀ ಮುಖ್ಯಮಂತ್ರಿ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಸುಳ್ಯ ತಾಲೂಕು ಕಚೇರಿಯಲ್ಲಿ ಸಚಿವ

ಸುಳ್ಯ: ಬಿಜೆಪಿಯಿಂದ ಭಾಗೀರಥಿ ಮುರುಳ್ಯ, ಕಾಂಗ್ರೆಸ್ ನಿಂದ ಕೃಷ್ಣಪ್ಪ, ಆಮ್ ಆದ್ಮಿ ಯಿಂದ ಸುಮನಾ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಕೆ Read More »

ಸುಳ್ಯ: ಹಣ ಸಾಗಾಟದ ಆರೋಪ| ಅಣ್ಣಾಮಲೈ ಬಂದ ಹೆಲಿಕಾಪ್ಟರ್ ಪರಿಶೀಲನೆ

ಸಮಗ್ರ ನ್ಯೂಸ್: ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಕೆ.ಅಣ್ಣಾಮಲೈ ಸುಳ್ಯಕ್ಕೆ ಭೇಟಿ ನೀಡಿ ವೇಳೆ ಹಣ ಸಾಗಾಟದ ಆರೋಪದಡಿ ಹೆಲಿಕಾಪ್ಟರ್ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ರಾಜ್ಯ ಚುನಾವಣೆ ಉಸ್ತುವಾರಿಯಾಗಿರುವ ಅಣ್ಣಾಮಲೈ ಕರಾವಳಿ ಪ್ರವಾಸದಲ್ಲಿದ್ದು, ಮಾ.18ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭಾಗಿರಥಿ ಮುರುಳ್ಯ ಅವರ ಪರ ನಾಮಪತ್ರ ಸಲ್ಲಿಸಲು ಸುಳ್ಯಕ್ಕೆ ಆಗಮಿಸಿದ್ದಾರೆ. ಈ ನಡುವೆ ಕಾಂಗ್ರೇಸ್ ಅಣ್ಣಾಮಲೈ ಹೆಲಿಕಾಪ್ಟರ್ ಮೂಲಕ ಹಣ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆ ಸುಳ್ಯಕ್ಕೆ ಆಗಮಿಸಿದ್ದ ಅಣ್ಣಾಮಲೈ ಹೆಲಿಕಾಪ್ಟರ್

ಸುಳ್ಯ: ಹಣ ಸಾಗಾಟದ ಆರೋಪ| ಅಣ್ಣಾಮಲೈ ಬಂದ ಹೆಲಿಕಾಪ್ಟರ್ ಪರಿಶೀಲನೆ Read More »

ಕುಕ್ಕೆ ಸುಬ್ರಹ್ಮಣ್ಯ ಬಳಿಯ ನೆಟ್ಟಣದಲ್ಲಿ ಭೀಕರ ಅಪಘಾತ| ನಾಲ್ವರು ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: ತೂಫಾನ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿವೆ. ಮೃತರು ಹಾಸನದ ಬೇಲೂರು ಕಡೆಯವರು ಎಂದು ತಿಳಿದು ಬಂದಿದೆ. ತೂಫನ್ ನಲ್ಲಿದ್ದವರು ಹಾಸನ ಕಡೆಯವರು ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಜಖಂಗೊಂಡಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ಸ್ಥಳೀಯ ಪೊಲೀಸರು

ಕುಕ್ಕೆ ಸುಬ್ರಹ್ಮಣ್ಯ ಬಳಿಯ ನೆಟ್ಟಣದಲ್ಲಿ ಭೀಕರ ಅಪಘಾತ| ನಾಲ್ವರು ಸ್ಥಳದಲ್ಲೇ ದುರ್ಮರಣ Read More »

ಕುಂಬ್ರ: ರಸ್ತೆ ತಡೆ ಬೇಲಿಗೆ ಡಿಕ್ಕಿ ಹೊಡೆದ ಕಾರು

ಸಮಗ್ರ ನ್ಯೂಸ್: ರಸ್ತೆ ತಡೆ ಬೇಲಿಗೆ ಕಾರೊಂದು ಡಿಕ್ಕಿ ಹೊಡೆದ ಪಲ್ಟಿಯಾದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಪುತ್ತೂರು ತಾಲೂಕಿನ ಕುಂಬ್ರದಲ್ಲಿ ಮಾ.18ರಂದು ಸಂಭವಿಸಿದೆ. ಸರಿ ಸುಮಾರು ರಾತ್ರಿ 1 ಗಂಟೆ ಸಮಯಕ್ಕೆ ಪುತ್ತೂರಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದ್ದು, ರಸ್ತೆ ಬದಿಗಿದ್ದ ಕಬ್ಬಿಣದ ತಡೆ ಬೇಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಕಾರು ನಜ್ಜುಗುಜ್ಜಾಗಿದೆ. ಅ ದೃಷ್ಣವಶಾತ್ ಗಾಡಿಯೊಳಗಿದ್ದ ಎರಡು ಜನ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಕುಂಬ್ರ: ರಸ್ತೆ ತಡೆ ಬೇಲಿಗೆ ಡಿಕ್ಕಿ ಹೊಡೆದ ಕಾರು Read More »

ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲೇಟು| ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ

ಸಮಗ್ರ ನ್ಯೂಸ್: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ನಾಮಪತ್ರ ಸಲ್ಲಿಸಿ ತೆರಳುತ್ತಿದ್ದ ವೇಳೆ ಕಾರ್ಯಕರ್ತರ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು‌ ಬೆಳ್ತಂಗಡಿ ‌ಉದ್ವಿಗ್ನವಾಗಿದೆ. ಹರೀಶ್ ಪೂಂಜಾ ನಾಮಪತ್ರ ಸಲ್ಲಿಸಿ ಮರಳುತ್ತಿದ್ದ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದರು.‌ ಉಭಯ ತಂಡದಲ್ಲಿಯೂ ಸಾವಿರಾರು ಕಾರ್ಯಕರ್ತರು ಇದ್ದರು. ಈ ವೇಳೆ ಕಾಂಗ್ರೆಸ್ ಪುಂಡನೊಬ್ಬ ಬಿಜೆಪಿ ಕಾರ್ಯಕರ್ತನ ಕಾರಿಗೆ ಬಾಟಲ್ ಮತ್ತು ಕಲ್ಲು ಎಸೆದಿದ್ದು ಇದರ ಪರಿಣಾಮ ಕಾರಿನ ಗ್ಲಾಸ್ ಪುದಿಪುಡಿಯಾಗಿದೆ. ಸ್ಥಳದಲ್ಲಿ ಉಧ್ವಿಗ್ನ ವಾತಾವರಣ

ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲೇಟು| ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ Read More »

ಸುಳ್ಯ: ಹರಿವು ನಿಲ್ಲಿಸಿದ ಪಯಸ್ವಿನಿ| ಏಳು ವರ್ಷಗಳ ಬಳಿಕ ಮತ್ತೆ ಬರಗಾಲದ ಕರಿಛಾಯೆ

ಸಮಗ್ರ ನ್ಯೂಸ್: ವಿಪರೀತ ಬಿಸಿಲು ಹಾಗ ಸುರಿಯದ ಬೇಸಿಗೆ ಮಳೆಯಿಂದಾಗಿ ಸುಳ್ಯದ ಜೀವನದಿ ಪಯಸ್ವಿನಿ ಹರಿವು ನಿಲ್ಲಿಸಿದೆ. ಏಳು ವರ್ಷಗಳ ಬಳಿಕ ಮತ್ತೆ ತಾಲೂಕಿನ ಹಲವೆಡೆ ನೀರಿಗೆ ತತ್ವಾರ ಎದುರಾಗಿದ್ದು, ಮಳೆ ಸುರಿಯದಿದ್ದರೆ‌ ಜಲಮೂಲಗಳು ಸಂಪೂರ್ಣ ಬರಿದಾಗಲಿವೆ. ಭೂಮಿ ಬೆಂದು ಬರಡಾಗಿ ಬಸವಳಿಯುತ್ತಿದ್ದಂತೆ ಜಲಮೂಲಗಳು ಆವಿಯಾಗಿ ಬತ್ತಿ ಬರಡಾಗುತಿವೆ. ಬರಗಾಲದ ಮತ್ತು ನೀರಿಗೆ ಹಾಹಾಕಾರದ ಮುನ್ಸೂಚನೆ ನೀಡಿ ಸುಳ್ಯದ ಜೀವ ನದಿ ಪಯಸ್ವಿನಿ ಬತ್ತಿ ಹೋಗಿದೆ. ವಿಶಾಲ ನದಿ ಒಡಲಲ್ಲಿ‌ ಅಲ್ಲಲ್ಲಿ ಹೊಂಡಗಳಲ್ಲಿ ಮಾತ್ರ ಅಲ್ಪ ಸ್ವಲ್ಪ

ಸುಳ್ಯ: ಹರಿವು ನಿಲ್ಲಿಸಿದ ಪಯಸ್ವಿನಿ| ಏಳು ವರ್ಷಗಳ ಬಳಿಕ ಮತ್ತೆ ಬರಗಾಲದ ಕರಿಛಾಯೆ Read More »

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಕಿರಣ್ ಕೆ ವಿ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಆಯೋಜಿಸಿದ್ದ ಕರೋಕೆ ಸಂಗೀತ ಕಾರ್ಯಕ್ರಮವು ಇತ್ತೀಚಿಗೆ ನೆರವೇರಿತು . ಗಾಯಕರು ಹಾಗೂ ಪೊಲೀಸ್ ಅಧಿಕಾರಿಯಾದ ಕೃಷ್ಣ ಸೀತಂಗೋಳಿ ಅವರ ಸುಪುತ್ರ ದಿವಂಗತ ಕಿರಣ್ ಕೆ ವಿ ಅವರ 3 ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಕರೋಕೆ ಗಾಯನ ಕಾರ್ಯಕ್ರಮವು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ ಅವರ ಅದ್ಯಕ್ಷತೆಯಲ್ಲಿ ಮೂಡಿಬಂತು . ಸಂಗೀತ ಗಾಯನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಚಲನಚಿತ್ರದ ಶೋಕಗೀತೆಗಳನ್ನೇ

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಕಿರಣ್ ಕೆ ವಿ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ Read More »

ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಈ ಬಾರಿಯೂ ಕುಕ್ಕೆ ನಂ.1| ಸುಬ್ರಹ್ಮಣ್ಯನ ಆದಾಯ ಕೇಳಿದ್ರೆ ಬೆರಗಾಗ್ತೀರಾ..!

ಸಮಗ್ರ ನ್ಯೂಸ್: ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಖ್ಯಾತಿಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಉಳಿಸಿಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಈ ಬಾರಿಯೂ 123 ಕೋಟಿ ರೂ. ಆದಾಯ ಗಳಿಸುವ ಮೂಲಕ ರಾಜ್ಯದಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ. 2022ರ ಏಪ್ರಿಲ್‌ನಿಂದ 2023ರ ಮಾ.31ರವರೆಗಿನ ಆರ್ಥಿಕ ವರ್ಷದಲ್ಲಿ 123,64,49,480 ರೂ. ಆದಾಯ ಗಳಿಸಿದೆ. ದೇವಾಲಯಕ್ಕೆ ಹರಕೆ ಸೇವೆ, ಕಾಣಿಕೆ ಮಾತ್ರವಲ್ಲದೇ ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಕೃಷಿ ತೋಟದಿಂದಲೂ ಆದಾಯ ಬರುತ್ತದೆ. ಕೊರೊನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಭಕ್ತರ ಪ್ರವೇಶಕ್ಕೆ

ಶ್ರೀಮಂತ ದೇಗುಲಗಳ ಪಟ್ಟಿಯಲ್ಲಿ ಈ ಬಾರಿಯೂ ಕುಕ್ಕೆ ನಂ.1| ಸುಬ್ರಹ್ಮಣ್ಯನ ಆದಾಯ ಕೇಳಿದ್ರೆ ಬೆರಗಾಗ್ತೀರಾ..! Read More »