ಕರಾವಳಿ

ಇಂದು ದ್ವಿತೀಯ PUC ಪೂರಕ ಪರೀಕ್ಷೆ ಫಲಿತಾಂಶ| ರಿಸಲ್ಟ್ ನೋಡೋದು ಹೇಗೆ‌ ಗೊತ್ತಾ?

ಸಮಗ್ರ ನ್ಯೂಸ್: ಮೇ, ಜೂನ್ 2023ರಂದು ನಡೆಸಲಾದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಜೂ.20ರ ಮಂಗಳವಾರದಂದು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ದಿನಾಂಕ 23-05-2023 ರಿಂದ 03-06-2023ರಂದು ನಡೆಸಲಾಗಿತ್ತು. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವು ಮುಕ್ತಾಯವಾಗಿದ್ದು, ಈ ಹಿನ್ನಲೆಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ

ಇಂದು ದ್ವಿತೀಯ PUC ಪೂರಕ ಪರೀಕ್ಷೆ ಫಲಿತಾಂಶ| ರಿಸಲ್ಟ್ ನೋಡೋದು ಹೇಗೆ‌ ಗೊತ್ತಾ? Read More »

ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ ಎಂದು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಪುತ್ರಿಯರು

ಸಮಗ್ರ ನ್ಯೂಸ್: ಕಾಂಗ್ರೆಸ್​ನ ಶಕ್ತಿ ಯೋಜನೆ ಕೆಲವರಿಗೆ ಅನುಕೂಲವಾದ್ರೆ ಮತ್ತಷ್ಟು ಜನರಿಗೆ ಸಂಕಟ ತಂದಿದೆ. ಹೆಂಡತಿ ಮನೆಯಲ್ಲಿರುತ್ತಿಲ್ಲ, ಅಡುಗೆ ಮಾಡುತ್ತಿಲ್ಲ, ಬಸ್​ಗಳಲ್ಲಿ ನಮಗೆ ಸೀಟು ಸಿಗುತ್ತಿಲ್ಲ ಎಂದು ಕೆಲ ಪುರುಷರು ಬೇಸರ ಹೊರ ಹಾಕಿದ್ರೆ, ಮತ್ತೊಂದೆಡೆ ತನ್ನ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೋಷಕರೊಬ್ಬರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಅದೇರೀತಿ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಚಿತ ಬಸ್ ಸೇವೆ ಯೋಜನೆ ಪೋಷಕರಿಗೆ ಸಂಕಷ್ಟ ತಂದಿತ್ತು. ಅಕ್ಕ-ತಂಗಿಯರಿಬ್ಬರು ತಂದೆಗೆ ಚಾಕಲೇಟ್​ಗೆ ಹಣ ಕೊಡುವಂತೆ ಕೇಳಿದ್ದಾರೆ. ತಂದೆ ಹಣ

ಅಪ್ಪ ಚಾಕಲೇಟ್​ಗೆ ದುಡ್ಡು ಕೊಡಲಿಲ್ಲ ಎಂದು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಪುತ್ರಿಯರು Read More »

ಇಬ್ರಾಹಿಂ ಗೂನಡ್ಕರವರು ಕುಟುಂಬದೊಂದಿಗೆ ಯುರೋಪ್ ಪ್ರವಾಸ

ಸಮಗ್ರ ನ್ಯೂಸ್: ಜೂನ್ 19 ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪತ್ನಿ ಸಫಿಯಾ ಇಬ್ರಾಹಿಂ ಜೊತೆ ಪ್ರಯಾಣ ಆರಂಭಿಸಲಿರುವ ಇವರು ಲಂಡನ್ ನಲ್ಲಿ ಉದ್ಯೋಗದಲ್ಲಿರುವ ಪುತ್ರ ಶಾನ್ ಇಬ್ರಾಹಿಂ ರವರನ್ನು ಭೇಟಿಯಾಗಿ ಯುರೋಪ್ ಖಂಡದ 8 ದೇಶಗಳಾದ ಯುನೈಟಡ್ ಕಿಂಗ್ ಡಮ್, ಜರ್ಮನಿ, ನೆದರ್ ಲ್ಯಾಂಡ್, ಇಟಲಿ, ಫ್ರಾನ್ಸ್, ಬೆಲ್ಜಿಯಂ, ಆಸ್ಟ್ರಿಯಾ ಹಾಗೂ ಸ್ವಿಝರ್ ಲ್ಯಾಂಡ್ ದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಪುತ್ರಿ ಸನಾ ಇಬ್ರಾಹಿಂ ಪತಿಯೊಂದಿಗೆ ಅಮೇರಿಕಾದ ಕ್ಯಾಲಿಫೋರ್ನಿಯದಲ್ಲಿ ನೆಲೆಸಿದ್ದಾರೆ. ಶುಭ, ಸುರಕ್ಷಿತ ಪ್ರಯಾಣ

ಇಬ್ರಾಹಿಂ ಗೂನಡ್ಕರವರು ಕುಟುಂಬದೊಂದಿಗೆ ಯುರೋಪ್ ಪ್ರವಾಸ Read More »

ನೆಟ್ಟಾರು: ಒಕ್ಕೂಟದ ಪ್ರಥಮ ತ್ರೈಮಾಸಿಕ ಸಭೆ

ಸಮಗ್ರ ನ್ಯೂಸ್: ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಗೋಪಾಲಕೃಷ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿ ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಸದಸ್ಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ನೆಟ್ಟಾರು ಪೆರುವಾಜೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶ್ರೀಮತಿ ಹರಿಣಾಕ್ಷಿ, ಒಕ್ಕೂಟದ ಅಧ್ಯಕ್ಷರಾದ ಅನ್ನು, ಉಪಾಧ್ಯಕ್ಷರಾದ ಶ್ರೀಮತಿ ಪ್ರೇಮ, ಕಾರ್ಯದರ್ಶಿಯಾದ ಶ್ರೀಮತಿ ಶ್ವೇತ, ಜೊತೆ ಕಾರ್ಯದರ್ಶಿ ಅಶೋಕ್, ಕೋಶಾಧಿಕಾರಿ ಶ್ರೀಮತಿ ಹರಿಣಾಕ್ಷಿ ಹಾಗೂ ಎಲ್ಲಾ ತಂಡದ ಸದಸ್ಯರು ಉಪಸ್ಥಿತರಿದ್ದರು.

ನೆಟ್ಟಾರು: ಒಕ್ಕೂಟದ ಪ್ರಥಮ ತ್ರೈಮಾಸಿಕ ಸಭೆ Read More »

ಬಾನೆತ್ತರಕ್ಕೆ ಏರಿದ ಹಣ್ಣು ತರಕಾರಿಗಳ ಬೆಲೆ

ಸಮಗ್ರ ನ್ಯೂಸ್: ಈಗಾಗಲೇ ಪೆಟ್ರೋಲ್ – ಡೀಸೆಲ್ ದರ ಮುಗಿಲು ಮುಟ್ಟಿರುವುದರಿಂದ ಹಲವು ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದೀಗ ಮುಂಗಾರು ಮಳೆಯ ವಿಳಂಬದ ಕಾರಣಕ್ಕೆ ಹಣ್ಣು ತರಕಾರಿಗಳ ಬೆಲೆಯು ಸಹ ದಿಢೀರ್ ಏರಿಕೆಯಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ. ಕೇವಲ ಒಂದು ವಾರದ ಹಿಂದೆ ಕೆಲ ತರಕಾರಿಗಳ ಬೆಲೆ 10 ರೂಪಾಯಿಗಳಿಂದ 50 ರೂಪಾಯಿಗಳವರೆಗೆ ಏರಿಕೆಯಾಗಿದ್ದು, ಗ್ರಾಹಕರನ್ನು ಚಿಂತಾಜನಕ ಸ್ಥಿತಿಗೆ ಕೊಂಡೊಯ್ದಿತ್ತು. ಇದೀಗ ಹಣ್ಣುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ತಿನ್ನಲು

ಬಾನೆತ್ತರಕ್ಕೆ ಏರಿದ ಹಣ್ಣು ತರಕಾರಿಗಳ ಬೆಲೆ Read More »

ಪುತ್ತೂರು: ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯ| ಡಿವೈಎಸ್ಪಿ ವೀರಯ್ಯ ಹಿರೇಮಠ ಜಾಮೀನಿನ ಮೇಲೆ ಬಿಡುಗಡೆ

ಸಮಗ್ರ ನ್ಯೂಸ್: ಪುತ್ತೂರುನಲ್ಲಿ ನಡೆದಿದ್ದ ಬ್ಯಾನರ್ ಪ್ರಕರಣದಲ್ಲಿ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಡಿವೈಎಸ್ಪಿ ಡಾ|ವೀರಯ್ಯ ಹಿರೇಮಠ ಅವರು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಪುತ್ತೂರಿನ ಬಸ್ ನಿಲ್ದಾಣದ ಬಳಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನೊಳಗೊಂಡ ಬ್ಯಾನರ್‌ಗೆ ಶ್ರದ್ಧಾಂಜಲಿ ಬರಹದೊಂದಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಯುವಕರನ್ನು ಪೊಲೀಸರು ಬಂಧಿಸಿ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದರು

ಪುತ್ತೂರು: ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯ| ಡಿವೈಎಸ್ಪಿ ವೀರಯ್ಯ ಹಿರೇಮಠ ಜಾಮೀನಿನ ಮೇಲೆ ಬಿಡುಗಡೆ Read More »

ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಒಂದು ರೂಪಾಯಿಯನ್ನೂ ಪಡೆಯದೇ ನಿರಪರಾದಿಗೆ ನ್ಯಾಯ ಕೊಡಿಸಿದ ಯುವ ವಕೀಲರು

ಸಮಗ್ರ ನ್ಯೂಸ್: ದೇಶವನ್ನೇ ಬೆಚ್ಚಿಬೀಳಿಸಿದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೊನೆಗೂ ನಿರಪರಾಧಿಗೆ ನ್ಯಾಯ ಸಿಕ್ಕಿದೆ. ಸಂತೋಷ್‌ ರಾವ್‌ ಸುಮಾರು 11 ವರ್ಷಗಳ ಕಾಲ ಅನುಭವಿಸಿದ್ದ ಜೈಲು ಶಿಕ್ಷೆಯಿಂದ ಕೊನೆಗೂ ಮುಕ್ತಿ ದೊರಕಿದೆ. 1 ರೂಪಾಯಿಯನ್ನೂ ತೆಗೆದುಕೊಳ್ಳದೇ ನಿರಪರಾಧಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದ ಪುತ್ತೂರು ಮೂಲದ ಮೋಹಿತ್ ಕುಮಾರ್ ಹಾಗೂ ನವೀನ್ ಕುಮಾರ್ ಪದ್ಯಾಣ ಅವರಿಗೆ ಎಲ್ಲೆಡೆಯಿಂದಲೂ ಪ್ರಶಂಸೆ, ಮೆಚ್ಚುಗೆ ವ್ಯಕ್ತವಾಗುತ್ತಿದೆ. 2012ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ವಿದ್ಯಾರ್ಥಿನಿ

ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ| ಒಂದು ರೂಪಾಯಿಯನ್ನೂ ಪಡೆಯದೇ ನಿರಪರಾದಿಗೆ ನ್ಯಾಯ ಕೊಡಿಸಿದ ಯುವ ವಕೀಲರು Read More »

ಸಾವಿನ ದಾರಿ ತೋರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ| ಸಮಯ ಉಳಿಸುವ ಜೊತೆಗೆ ಆಯುಷ್ಯವೂ ಕಡಿಮೆ!!

ಸಮಗ್ರ ನ್ಯೂಸ್: ದುಬಾರಿ ಟೋಲ್‌ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ವೇ ಈಗ ಸಾವಿನ ಹೆದ್ದಾರಿಯಾಗುತ್ತಿದೆ. ಬೆಂಗಳೂರು-ಮೈಸೂರು ನಗರಗಳನ್ನು ಬೆಸೆಯುವ ಈ ಹೆದ್ದಾರಿಯಲ್ಲಿ ಪ್ರಯಾಣಿಸಿದರೆ ಪ್ರಯಾಣ ಸಮಯ ಕಡಿಮೆಯಾಗುತ್ತದೆ ಎಂದು ಪ್ರಯಾಣಿಸುವ ಪ್ರಯಾಣಿಕರು ತಮ್ಮ ಆಯುಷ್ಯವನ್ನೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಜನವರಿಯಿಂದ ಇಲ್ಲಿಯವರೆಗೂ 105 ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 50, ಮಂಡ್ಯ ಜಿಲ್ಲೆಯಲ್ಲಿ 55 ಜನ ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆಯಲ್ಲಿಯೇ 243 ಅಪಘಾತಗಳು ಸಂಭವಿಸಿದ್ದು 190 ಜನರಿಗೆ ಗಾಯಗಳಾಗಿವೆ. ಸದಾ ಒಂದಿಲ್ಲೊಂದು

ಸಾವಿನ ದಾರಿ ತೋರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ| ಸಮಯ ಉಳಿಸುವ ಜೊತೆಗೆ ಆಯುಷ್ಯವೂ ಕಡಿಮೆ!! Read More »

ಬೆಳ್ಳಾರೆ ಪೊಲೀಸರ ಕಾರ್ಯಾಚರಣೆ: ಅಕ್ರಮ ಗೋಸಾಗಾಟ ಪತ್ತೆ ಇಬ್ಬರ ಬಂಧನ

ಸಮಗ್ರ ನ್ಯೂಸ್: ಅಕ್ರಮ ಗೋಸಾಗಾಟ ಅರೋಪದಲ್ಲಿ ಬೆಳ್ಳಾರೆ ಪೊಲೀಸರು ಇಬ್ಬರನ್ನು ಬಂಧಿಸಿದ ಹಾಗೂ ಇಬ್ಬರು ಪರಾರಿಯಾಗಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ಮೂರು ಗಂಡು ಕರುಗಳು, ಆಕ್ಟಿವಾ ಸ್ಕೂಟರ್, ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂ.18ರಂದು ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮುವಪ್ಪೆ ಎಂಬಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ಪಿಎಸ್ಐ ಸುಹಾಸ್ ಆರ್ ಹಾಗೂ ಸಿಬ್ಬಂದಿಗಳು ಕರ್ತವ್ಯ ದಲ್ಲಿದ್ದ ವೇಳೆ ಯಾವುದೇ ಪರವಾನಿಗೆ ಹೊಂದದ ಪಿಕಪ್ ವಾಹನ ನಂಬ್ರ ಕೆಎ21ಬಿ4460 ವಾಹನದಲ್ಲಿ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ

ಬೆಳ್ಳಾರೆ ಪೊಲೀಸರ ಕಾರ್ಯಾಚರಣೆ: ಅಕ್ರಮ ಗೋಸಾಗಾಟ ಪತ್ತೆ ಇಬ್ಬರ ಬಂಧನ Read More »

ಉಜಿರೆ: ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಗೂಂಡಾಗಿರಿ| ಬಸ್ ಅಡ್ಡ ಹಾಕಿ ದಾಂಧಲೆ; ಮೂವರು ಅರೆಸ್ಟ್

ದ.ಕ ಜಿಲ್ಲೆ ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಗೂಂಡಾಗಿರಿ ನಡೆಸಿದ್ದು, ಪೊಲೀಸರ ಎದುರೇ ವ್ಯಕ್ತಿಯೋರ್ವನಿಗೆ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ಗೂಂಡಾಗಿರಿ ನಡೆಸುತ್ತಿದ್ದರೂ ಮೂಕಪ್ರೇಕ್ಷಕರಂತೆ ವರ್ತಿಸಿದರು ಎಂಬ ಆರೋಪ ಕೇಳಿಬಂದಿದೆ. ಉಜಿರೆಯಿಂದ ಚಾರ್ಮಾಡಿಗೆ ಬಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಚಾರ್ಮಾಡಿ ಬಳಿ ಬಸ್ ನಿಲ್ಲಿಸಲು ವಿದ್ಯಾರ್ಥಿಗಳು ಸೂಚಿಸಿದ್ದರು. ಆದರೆ ವೇಗದೂತ ಬಸ್ ಆಗಿರುವ ಕಾರಣ ಸಿಕ್ಕಸಿಕ್ಕಲ್ಲಿ ಬಸ್ ನಿಲ್ಲಿಸಲು ಸಾಧ್ಯವಿಲ್ಲ ಎಂದು ಬಸ್ ಕಂಡೆಕ್ಟರ್ ಹೇಳಿದ್ದ ಎನ್ನಲಾಗಿದೆ. ಈ ವೇಳೆ ವಿದ್ಯಾರ್ಥಿಗಳು ಮತ್ತು ಕಂಡೆಕ್ಟರ್

ಉಜಿರೆ: ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಗೂಂಡಾಗಿರಿ| ಬಸ್ ಅಡ್ಡ ಹಾಕಿ ದಾಂಧಲೆ; ಮೂವರು ಅರೆಸ್ಟ್ Read More »