ಕರಾವಳಿ

ಸುಳ್ಯ ಗಡಿಭಾಗದಲ್ಲೊಂದು ಸ.ಹಿ.ಪ್ರಾ ಶಾಲೆ ಕಾಸರಗೋಡು!!| ಕನ್ನಡವೇ ಗೊತ್ತಿಲ್ಲದ ಕನ್ನಡ ಟೀಚರ್ ವಿರುದ್ದ ತಿರುಗಿ ಬಿದ್ದ ವಿದ್ಯಾರ್ಥಿಗಳು|ಕೇರಳ ಸರ್ಕಾರದ ಭಾಷಾ ತಾರತಮ್ಯದ ಪರಮಾವಧಿ ಕಥೆ!

ಸಮಗ್ರ ನ್ಯೂಸ್: ಸೋಮವಾರವನ್ನು ಕನ್ನಡದಲ್ಲಿ ಭಾನುವಾರ ಎಂದು ಹೇಳುವ ಶಿಕ್ಷಕಿಯೋರ್ವರನ್ನು ಕನ್ನಡ ಮಾಧ್ಯಮ ಶಾಲೆಗೆ ನಿಯುಕ್ತಿಗೊಳಿಸಿದ ಘಟನೆಯೊಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಅಡೂರು ಸರಕಾರಿ ಶಾಲೆಯಲ್ಲಿ ನಡೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಇದರಲ್ಲಿ ಯಾವ ರೀತಿಯಲ್ಲಿ ಕನ್ನಡ ಶಾಲೆಯನ್ನು ಮುಚ್ಚಲು ಮಲಯಾಳವನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುವುದನ್ನು ತೋರಿಸಲಾಗಿತ್ತೋ,ಅಂಥಹುದೇ ಒಂದು ಘಟನೆ ಅಡೂರಿನ ಸರಕಾರಿ ಶಾಲೆಯಲ್ಲಿ ನಡೆಯುತ್ತಿದೆ. ಕನ್ನಡ ಮತ್ತು ಮಲಯಾಳಂ ಮಾದ್ಯಮದ ಪ್ರತ್ಯೇಕ ಶಾಲೆ

ಸುಳ್ಯ ಗಡಿಭಾಗದಲ್ಲೊಂದು ಸ.ಹಿ.ಪ್ರಾ ಶಾಲೆ ಕಾಸರಗೋಡು!!| ಕನ್ನಡವೇ ಗೊತ್ತಿಲ್ಲದ ಕನ್ನಡ ಟೀಚರ್ ವಿರುದ್ದ ತಿರುಗಿ ಬಿದ್ದ ವಿದ್ಯಾರ್ಥಿಗಳು|ಕೇರಳ ಸರ್ಕಾರದ ಭಾಷಾ ತಾರತಮ್ಯದ ಪರಮಾವಧಿ ಕಥೆ! Read More »

ಆರೋಗ್ಯಕರ ಜೀವನಶೈಲಿಗೆ ‘ಮಾನವೀಯತೆ’ ಧ್ಯೇಯದೊಂದಿಗೆ ನಿತ್ಯ ಯೋಗ ಮಾಡಿ

ಸಮಗ್ರ ನ್ಯೂಸ್:ಹಲವು ವರ್ಷಗಳಿಂದ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿರುವ ಯೋಗ. ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 21 ಅನ್ನು ಅನೇಕ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ಪ್ರಪಂಚದ ಜನರಿಗೆ ಅರಿವು ಮೂಡಿಸಲು ‘ಮಾನವೀಯತೆ’ ಎಂಬ ಧ್ಯೇಯದೊಂದಿಗೆ ‘ಅಂತರರಾಷ್ಟ್ರೀಯ ಯೋಗ ದಿನ’ವನ್ನು ಆಚರಿಸಲಾಗುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮತ್ತು ಯೋಗಾಸನಗಳು ಸಹಾಯ ಮಾಡುತ್ತವೆ. ಅಲ್ಲದೆ ದೇಹದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸಾವಿರಾರು ವರ್ಷದ ಇತಿಹಾಸವಿರುವ ಯೋಗಾಭ್ಯಾಸ ಇಂದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದೆ.

ಆರೋಗ್ಯಕರ ಜೀವನಶೈಲಿಗೆ ‘ಮಾನವೀಯತೆ’ ಧ್ಯೇಯದೊಂದಿಗೆ ನಿತ್ಯ ಯೋಗ ಮಾಡಿ Read More »

ಪುತ್ತೂರು:ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತನಿಂದ ಮಾರಣಾಂತಿಕ ಹಲ್ಲೆ

ಸಮಗ್ರ ನ್ಯೂಸ್: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪುತ್ತೂರಿನಲ್ಲಿ ಮಂಗಳವಾರ ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ, ಪುರುಷಕಟ್ಟೆಯಲ್ಲಿ ನಡೆದಿದೆ. ಕುತ್ತಿಗೆ, ಹೊಟ್ಟೆ, ತುಟಿಗೆ ಕೈಯಿಂದ ಜಜ್ಜಿ ಗಂಭೀರ ಹಲ್ಲೆ ನಡೆಸಲಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ತಿಳಿದು ಬಂದಿದೆ. ರಾಜಕೀಯ ವೈಷಮ್ಯದಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು ಹಲ್ಲೆಗೊಳಗಾದ ವ್ಯಕ್ತಿ ಕಳೆದ ಕೆಲವು ತಿಂಗಳಿನ ಹಿಂದೆ

ಪುತ್ತೂರು:ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತನಿಂದ ಮಾರಣಾಂತಿಕ ಹಲ್ಲೆ Read More »

ದ.ಕ ಜಿಲ್ಲಾ ಎಸ್ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ

ಸಮಗ್ರ ನ್ಯೂಸ್:‌ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಯಾಗಿ(ಎಸ್‌ಪಿ) ಐಪಿಎಸ್ ಅಧಿಕಾರಿ ಸಿ ಬಿ ರಿಷ್ಯಂತ್ ರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಕ್ರಮ್ ಅಮತೆ ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿ ಬಿ ರಿಷ್ಯಂತ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು.2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ರಿಷ್ಯಂತ್ ಅವರು ಈ ಹಿಂದೆ ದಾವಣಗೆರೆಯ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವಿಧಾನಸಭೆ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ನಿಯೋಜನೆಗೊಂಡಿದ್ದರು. ಬೆಂಗಳೂರಿನವರಾದ ರಿಷ್ಯಂತ್

ದ.ಕ ಜಿಲ್ಲಾ ಎಸ್ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ Read More »

ಲಯನ್ಸ್ ಕ್ಲಬ್ ಪಂಜ: ಪದಗ್ರಹಣ ಸಮಾರಂಭದ ಆಮಂತ್ರಣ ಬಿಡುಗಡೆ

ಸಮಗ್ರನ್ಯೂಸ್; ಲಯನ್ಸ್ ಕ್ಲಬ್ ಪಂಜ ಇದರ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಲl ಎಂ ಜಿ ಎಫ್ ಮಾಧವ ಗೌಡ ಜಾಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪುರುಷೋತ್ತಮ ದಂಬೆಕೋಡಿ ಕಾರ್ಯದರ್ಶಿ ನಾಗೇಶ್ , ನಿಯೋಜಿತ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು.ವಾಸುದೇವ ಮೆಲ್ಪಾಡಿ, ಆನ0ದ ಗೌಡ ಹಾಗು ಎಲ್ಲಾ ಸದಸ್ಯರೂ, ಪೂರ್ವಾದ್ಯಕ್ಷರುಗಳು, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಪಂಜ: ಪದಗ್ರಹಣ ಸಮಾರಂಭದ ಆಮಂತ್ರಣ ಬಿಡುಗಡೆ Read More »

ಮೈಸೂರು: ಫ್ರೀ ಬಸ್ ನಲ್ಲಿ ಕೈಕೈ ಮಿಲಾಯಿಸಿದ ಮಹಿಳೆಯರು

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲೇ ಮಹಿಳೆಯರು ರಾಜ್ಯ ಸಾರಿಗೆ ಬಸ್ ಗಳಲ್ಲಿ ಹೆಚ್ಚಾಗಿ ಸಂಚಾರ ಮಾಡುತ್ತಿದ್ದಾರೆ. ಈಗಾಗಲೇ ನಾ ಮುಂದು ತಾ ಮುಂದು ಅಂತಾ ಬಸ್ ಗಳಲ್ಲಿ ನುಗ್ಗುತ್ತಿದ್ದಾರೆ. ಬಸ್ ನ ಕಿಟಿಕಿಗಳು,ಬಾಗಿಲುಗಳು ಸಹ ಪೀಸ್ ಪೀಸ್ ಆಗ್ತಿವೆ. ದೇವಸ್ಥಾನಗಳಂತೂ ಪುಲ್ ರೇಶ್ ಆಗುತ್ತಿದ್ದು, ಅವಾಂತರಗಳು ಮುಂದುವರಿದಿವೆ. ಇದೇ ರೀತಿ ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್‌ನಲ್ಲಿ ಮಹಿಳೆಯರ ಗಲಾಟೆ ಮಾಡಿ ಕೊಂಡಿರುವ ದೃಶ್ಯ ಕಂಡುಬಂದಿದೆ. ಮಹಿಳೆಯರು ಸೀಟಿಗಾಗಿ ಕೈಕೈ

ಮೈಸೂರು: ಫ್ರೀ ಬಸ್ ನಲ್ಲಿ ಕೈಕೈ ಮಿಲಾಯಿಸಿದ ಮಹಿಳೆಯರು Read More »

ಸುಳ್ಯ:ಯುವಕ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.20ರಂದು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾಗಪಟ್ಟಣದಲ್ಲಿ ನಡೆದಿದೆ. ನಾಗಪಟ್ಟಣದ ನಿವಾಸಿ ಮಣಿಕಂಠ (29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಜಾಲ್ಸೂರು ಗೇರು ಬೀಜ ಕಾರ್ಖಾನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಜಾಲ್ಸೂರಿನಿಂದ ನಿನ್ನೆ ತಡ ರಾತ್ರಿ ಮನೆಗೆ ಬಂದ ಯುವಕ ತಾಯಿಯ ಸೀರೆಯನ್ನು ಹಗ್ಗವನ್ನಾಗಿಸಿ ಮನೆ ಸಮೀಪದ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಆತನ ಬೈಕ್ ಮನೆ ಎದುರು ನಿಂತಿದ್ದು ಆತನಿಗಾಗಿ

ಸುಳ್ಯ:ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ಪುತ್ತೂರು: ಕಾರು-ದ್ವಿಚಕ್ರ‌ ವಾಹನ ನಡುವೆ ಅಪಘಾತ; ಸವಾರ ಸಾವು

ಸಮಗ್ರ ನ್ಯೂಸ್: ಕಾರು ಹಾಗೂ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಪುತ್ತೂರು ಹೊರವಲಯದ ಕಲ್ಲರ್ಪೆ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ನೈತಾಡಿಯ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ನೈತಾಡಿಯ ಇಸ್ಮಾಯಿಲ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಅವರು ದಾರಿಮಧ್ಯೆ ಕೊನೆಯುಸಿರೆಳೆದ್ದಾರೆ ಎಂದು ತಿಳಿದುಬಂದಿದೆ.

ಪುತ್ತೂರು: ಕಾರು-ದ್ವಿಚಕ್ರ‌ ವಾಹನ ನಡುವೆ ಅಪಘಾತ; ಸವಾರ ಸಾವು Read More »

‘ಬಸ್ ಗಳಲ್ಲಿ ನೂಕುನುಗ್ಗಲಿನಿಂದ ಅನಾಹುತವಾದ್ರೆ ಆರ್. ಅಶೋಕ್ ಹೊಣೆ’ – ಕಾಂಗ್ರೆಸ್ ಟ್ವೀಟ್

ಸಮಗ್ರ ನ್ಯೂಸ್: ‘ಉಚಿತ ಪ್ರಯಾಣ ಅವಕಾಶ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಟೂರ್ ಹೋಗಬೇಕೋ ಬೇಗ ಹೋಗಿ ಬನ್ನಿ’ ಎಂದು ಬಿಜೆಪಿ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆ ನೀಡುವ ಮೂಲಕ ಆಡಳಿತಾರೂಢ ಕಾಂಗ್ರೆಸ್​ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ‘ಶಕ್ತಿ ಯೋಜನೆ ಹೆಚ್ಚು ದಿನ ಇರುವುದಿಲ್ಲ, ಈಗಲೇ ಎಲ್ಲಾ ಕಡೆಯೂ ತಿರುಗಾಡಿ’ ಎಂದು ಕರೆ ಕೊಟ್ಟಿರುವ ಆರ್​​.ಅಶೋಕ್ ಸಮಾಜಘಾತುಕ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ‘ಬಸ್​ಗಳಲ್ಲಿ ನೂಕುನುಗ್ಗಲಾಗಿ ಅನಾಹುತ ಸಂಭವಿಸಿದರೆ

‘ಬಸ್ ಗಳಲ್ಲಿ ನೂಕುನುಗ್ಗಲಿನಿಂದ ಅನಾಹುತವಾದ್ರೆ ಆರ್. ಅಶೋಕ್ ಹೊಣೆ’ – ಕಾಂಗ್ರೆಸ್ ಟ್ವೀಟ್ Read More »

ಜೂ.22ರ ಕರ್ನಾಟಕ ಬಂದ್ ಗೆ ನಾವು ಕರೆ ಕೊಟ್ಟಿಲ್ಲ| ಕೆಸಿಸಿಐ ಅಧ್ಯಕ್ಷ ಗೋಪಾಲ ರೆಡ್ಡಿ ಹೇಳಿಕೆ

ಸಮಗ್ರ ನ್ಯೂಸ್: ವಿದ್ಯುತ್ ದರ ಹೆಚ್ಚಳ ಖಂಡಿಸಿ ನಾವು ಯಾವುದೇ ಪ್ರತಿಭಟನೆಗೆ ಕರೆ ಕೊಟ್ಟಿಲ್ಲ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಗೋಪಾಲ್ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಎಫ್​ಕೆಸಿಸಿಐ ಕೇಂದ್ರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಇಆರ್‌ಸಿ ದರ ಪರಿಷ್ಕರಣೆ ಹಾಗು ಉದ್ಯಮಗಳಿಗೆ ಅದರಿಂದಾದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ನಮ್ಮ ವ್ಯಾಪ್ತಿಯಲ್ಲಿ 150 ಸಂಸ್ಥೆಗಳು ಬರುತ್ತವೆ. ನಾವು ಪ್ರತಿಭಟನೆಗೆ ಬೆಂಬಲ ನೀಡಿಲ್ಲ. ನಮ್ಮ ಎಲ್ಲ ಸಂಘಟನೆಗಳ ಜೊತೆ ಮಾತುಕತೆ ನಡೆಸಿ, ಜೂನ್ 22ರಂದು ಕಾರ್ಯನಿರ್ವಹಿಸುವಂತೆ

ಜೂ.22ರ ಕರ್ನಾಟಕ ಬಂದ್ ಗೆ ನಾವು ಕರೆ ಕೊಟ್ಟಿಲ್ಲ| ಕೆಸಿಸಿಐ ಅಧ್ಯಕ್ಷ ಗೋಪಾಲ ರೆಡ್ಡಿ ಹೇಳಿಕೆ Read More »