ಕರಾವಳಿ

ಮಂಗಳೂರು: ಅಪಘಾತಕ್ಕೆ ಬಾಲಕ ಬಲಿ

ಸಮಗ್ರ ನ್ಯೂಸ್: ವಾಹನ ಅಪಘಾತದಲ್ಲಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಗಳೂರು ವ್ಯಾಪ್ತಿಯ ಅಡ್ಯಾರ್ ಎಂಬಲ್ಲಿ ಇದೀಗ ಸಂಭವಿಸಿದೆ. ಮೃತಪಟ್ಟ ಬಾಲಕನನ್ನು ಅಡ್ಯಾರ್ ಪದವು ನಿವಾಸಿ ಶರಪುದ್ದಿನ್ (16) ಎಂದು ಗುರುತಿಸಲಾಗಿದೆ. ಸ್ನೇಹಿತನ ಜೊತೆ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದಾಗ ಅಡ್ಯಾರ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು ಹಿಂಬದಿಯಲ್ಲಿದ್ದ ಶರಪುದ್ದಿನ್ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಚಾಲಕನಿಗೂ ಕೂಡ ಅಪಘಾತದಲ್ಲಿ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಂಗಳೂರು: ಅಪಘಾತಕ್ಕೆ ಬಾಲಕ ಬಲಿ Read More »

ತಾಯಿಗೆ ಮಿಗಿಲಾದ ದೇವರಿಲ್ಲ| ಕೆಲಸದ ನಡುವೆ ಟಿಪ್ಪರ್‌ಗೆ ಬಟ್ಟೆ ಕಟ್ಟಿ ಜೋಗುಳ ತೂಗಿದ ತಾಯಿ

ಸಮಗ್ರ ನ್ಯೂಸ್: ತಾಯಿ ಪ್ರೀತಿಯನ್ನು ಜಗತ್ತಿನ ಯಾವುದೇ ಪ್ರೀತಿಗೂ ಹೋಲಿಸಲಾಗದು. ಎಷ್ಟೇ ಕಷ್ಟ ಎದುರಾದರೂ ಅದನ್ನೆಲ್ಲ ನುಂಗಿ ಮಕ್ಕಳ ಏಳಿಗೆಗಾಗಿ ಶ್ರಮಿಸುವವಳು ತಾಯಿ. ತನ್ನ ಕರುಳ ಕುಡಿಯನ್ನು ಕೆಲಸದ ಮಧ್ಯೆಯೂ ಪೋಷಿಸುವ ತಾಯಿಯ ವಿಡಿಯೋ ವೈರಲ್ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಸೆರೆಯಾದ ವೀಡಿಯೋ ಈಗ ವೈರಲ್ ಆಗುತ್ತಿದೆ. ಮಂಗಳೂರು – ಬೆಂಗಳೂರು ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಡಿವೈಡರ್ ನಲ್ಲಿ ಗಿಡ ನೆಡಲಾಗುತ್ತಿದೆ. ಸದ್ಯ ತಾಯಿಯ ಮಮತೆ ಸಾರುವ

ತಾಯಿಗೆ ಮಿಗಿಲಾದ ದೇವರಿಲ್ಲ| ಕೆಲಸದ ನಡುವೆ ಟಿಪ್ಪರ್‌ಗೆ ಬಟ್ಟೆ ಕಟ್ಟಿ ಜೋಗುಳ ತೂಗಿದ ತಾಯಿ Read More »

ಸುಳ್ಯ:ಹಾಡುಹಗಲೇ ಹಣದ ಬೇಡಿಕೆ ಇಟ್ಟ ಅಪರಿಚಿತ ವ್ಯಕ್ತಿ

ಸಮಗ್ರ ನ್ಯೂಸ್: ಸುಳ್ಯದ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವ್ಯಕ್ತಿ ಬ್ಯಾಂಕಿಂದ ಹಣ ತೆಗೆದುಕೊಡುದಾಗಿ ಹೇಳಿ ವಂಚಿಸಲು ಯತ್ನಿಸಿರುವ ಬಗ್ಗೆ ಆ. 26 ರಂದು ನಡೆದಿದೆ. ಟೈಲರ್ ವೃತ್ತಿ ನಡೆಸುತ್ತಿದ್ದ ಅಪ್ಪಯ್ಯ ನೀರಬಿದಿರೆ ಎಂಬವರಿಗೆ ಇಂದು(ಆ. 26) ಬೆಳಗ್ಗೆ ಮಲೆಯಾಳಂ ಮಾತನಾಡುವ ಅಪರಿಚಿತರೊಬ್ಬರು ಬಂದು ನನಗೆ ನಿಮ್ಮ ಪರಿಚಯವಿದೆ. ನಾನು ನಿಮ್ಮ ಬಳಿ ಹಿಂದೆಯೂ ಬಂದು ಮಾತನಾಡಿಸಿದ್ದೇನೆ. ನಿಮ್ಮ ಮಗಳನ್ನು ಮದುವೆ ಮಾಡಿಕೊಟ್ಟ ಕಡೆಯವರು ನನಗೆ ಸಂಬಧಿಕರು ಎಂದು ಹೇಳಿ, ಇವತ್ತು

ಸುಳ್ಯ:ಹಾಡುಹಗಲೇ ಹಣದ ಬೇಡಿಕೆ ಇಟ್ಟ ಅಪರಿಚಿತ ವ್ಯಕ್ತಿ Read More »

ಸಾಹಿತಿ ಮತ್ತು ಜ್ಯೋತಿಷಿ ಹೆಚ್. ಭೀಮರಾವ್ ವಾಷ್ಠರ್ ಅವರಿಗೆ ಕಲಾ ರತ್ನ ಪ್ರಶಸ್ತಿ

ಸಮಗ್ರ ನ್ಯೂಸ್: ಸುಳ್ಯದ ಖ್ಯಾತ ಜ್ಯೋತಿಷಿ, ಸಾಹಿತಿ ಗಾಯಕ ಸಂಘಟಕ ಹಾಗೂ ಚಿತ್ರ ನಿರ್ದೇಶಕರಾದ ಎಚ್.ಭೀಮರಾವ್ ವಾಷ್ಠರ್ ಅವರಿಗೆ ಕಲಾ ರತ್ನ ಪ್ರಶಸ್ತಿ. ಮಂಗಳೂರಿನ ಆಕ್ಸಿಸ್ ಬ್ಯಾಂಕ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಂಪನಿ ವತಿಯಿಂದ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸುಳ್ಯದ ಖ್ಯಾತ ಜ್ಯೋತಿಷಿ, ಸಾಹಿತಿ ಗಾಯಕ ಸಂಘಟಕ ಹಾಗೂ ಚಿತ್ರ ನಿರ್ದೇಶಕರಾದ ಎಚ್.ಭೀಮರಾವ್ ವಾಷ್ಠರ್ ರಿಗೆ ಅವರು ಹಲವಾರು ವರ್ಷಗಳಿಂದ ಮಾಡಿದಂತಹ ವಿವಿಧ ಸಾಧನೆಗಳನ್ನು ಪರಿಗಣಿಸಿ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಆಕ್ಸಿಸ್ ಬ್ಯಾಂಕ್

ಸಾಹಿತಿ ಮತ್ತು ಜ್ಯೋತಿಷಿ ಹೆಚ್. ಭೀಮರಾವ್ ವಾಷ್ಠರ್ ಅವರಿಗೆ ಕಲಾ ರತ್ನ ಪ್ರಶಸ್ತಿ Read More »

ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯದ ನಿರೀಕ್ಷೆ – ತಿಮರೋಡಿನನ್ನ ಮಗಳಿಗೆ ನ್ಯಾಯ ಕೊಡಿ ಎಂದು ಸೆರಗೊಡ್ಡಿ ಬೇಡಿದ ಕುಸುಮಾವತಿ| ಕುಂದಾಪುರದಲ್ಲಿ ಏನೇನು ನಡೀತು?

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಒಂದು ತಾರ್ಕಿಕ ಅಂತ್ಯ ಕೊಡುತ್ತದೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಈ ಬಗ್ಗೆ ಯಾರ ವೈಯಕ್ತಿಕ ಅಭಿಪ್ರಾಯಗಳಿಗೂ ಪ್ರತಿಕ್ರಿಯೆ ನೀಡಲ್ಲ ಎಂದು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ. ಕುಂದಾಪುರದಲ್ಲಿ ನಡೆದ ಜನಾಗ್ರಹ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರಕಾರ ಮಾಡಿರುವ ತಪ್ಪನ್ನು ಈಗಿನ ಸರ್ಕಾರ ಮಾಡಲ್ಲ ಎನ್ನುವ ಭರವಸೆ ಇದೆ. ಅಧಿಕಾರಿಗಳು ಹಾಗೂ ಕಾನೂನು ಹಂತದಲ್ಲಿ ಆಗಿರುವ ತಪ್ಪುಗಳಿಗೆ ಕಾರಣರು ಯಾರು?

ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯದ ನಿರೀಕ್ಷೆ – ತಿಮರೋಡಿನನ್ನ ಮಗಳಿಗೆ ನ್ಯಾಯ ಕೊಡಿ ಎಂದು ಸೆರಗೊಡ್ಡಿ ಬೇಡಿದ ಕುಸುಮಾವತಿ| ಕುಂದಾಪುರದಲ್ಲಿ ಏನೇನು ನಡೀತು? Read More »

ಲವ್ ಮೈನಸ್ 18 ಟೆಲಿಫಿಲಂ ಆ. 26ಕ್ಕೆ ನಿಮ್ಮ ಮುಂದೆ

ಸಮಗ್ರ ನ್ಯೂಸ್: ಸುಳ್ಯದ ಶ್ರೀ ಟೆಕ್ನಾಲಜಿ ನಿರ್ಮಾಣದಲ್ಲಿ ಮೂಡಿಬಂದಿರುವ ಲವ್ ಮೈನಸ್ 18 ಟೆಲಿಫಿಲಂ ಪ್ರೀಮಿಯರ್ ಶೋ ಆ. 26ರಂದು ಏಪಿಎಂಸಿ ಸಭಾ ಭವನದಲ್ಲಿ ನಡೆಯಲಿದೆ. ಶ್ರೀ ಟೆಕ್ನಾಲಜಿ ಸುಳ್ಯ ನಿರ್ಮಾಣದ ಚಿದಾನಂದ್ ಪರಪ್ಪರವರ ಕಥೆ ನಿರ್ದೇಶನದ ಯಶ್ ಫೋಟೋಗ್ರಫಿ ಅವರ ಸಿನಿಮಾಟೋಗ್ರಫಿಯಲ್ಲಿ ಜೀವನ್ ಕೆರೆಮೂಲೆ, ಪ್ರಸಾದ್ ಕಾಟೂರು, ಭವ್ಯ ಬೆಳ್ಳಾರೆ, ಸುಶ್ಮಿತಾ ಮೋಹನ್, ಪುಷ್ಪರಾಜ್ ಏನೆಕಲ್ ಮತ್ತು ಡಿಂಪಲ್ ಡಿಸೋಜ ಇವರ ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ಟೆಲಿಫಿಲಂ ಲವ್ ಮೈನಸ್ 18, ಪ್ರೀಮಿಯರ್ ಶೋ ಮತ್ತು

ಲವ್ ಮೈನಸ್ 18 ಟೆಲಿಫಿಲಂ ಆ. 26ಕ್ಕೆ ನಿಮ್ಮ ಮುಂದೆ Read More »

ಸುಳ್ಯ: ವೆಂಕಟರಮಣ ಕ್ರೆ.ಕೋ.ಆಪರೇಟಿವ್ ಸೊಸೈಟಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಸುಳ್ಯದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಂಘದ ಸದಸ್ಯ ಗ್ರಾಹಕರ ಮಕ್ಕಳಿಗೆ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ವಿದ್ಯಾರ್ಥಿ ವೇತನ ನೀಡಲಿದ್ದು ಈ ವಿದ್ಯಾರ್ಥಿಗಳು ದಿನಾಂಕ ಸೆ.09ರ ಮೊದಲು ಸಂಘಕ್ಕೆ ಅರ್ಜಿ ಸಲ್ಲಿಸತಕ್ಕದ್ದು, ಹೆಚ್ಚಿನ ವಿವರಗಳಿಗೆ ಹತ್ತಿರದ ಶಾಖೆಯನ್ನು ಸಂಪರ್ಕಿಸಬೇಕಾಗಿ ಸಂಘದ

ಸುಳ್ಯ: ವೆಂಕಟರಮಣ ಕ್ರೆ.ಕೋ.ಆಪರೇಟಿವ್ ಸೊಸೈಟಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ Read More »

ಹವಾಮಾನ ವರದಿ| ದುರ್ಬಲಗೊಂಡ ಮುಂಗಾರು; ಕರಾವಳಿಯಲ್ಲಿ ಚದುರಿದಂತೆ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಬಿಸಿಲ ಝಳ ಹೆಚ್ಚಾಗಿದೆ, ಆದರೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಹಾಸನ,ಮಂಡ್ಯ, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ನೈಋತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು. ಬೆಂಗಳೂರಿನಲ್ಲಿ ಬೆಳಗ್ಗೆ ಸೂರ್ಯ ಕಾಣಿಸಿಕೊಳ್ಳಲಿದ್ದು,

ಹವಾಮಾನ ವರದಿ| ದುರ್ಬಲಗೊಂಡ ಮುಂಗಾರು; ಕರಾವಳಿಯಲ್ಲಿ ಚದುರಿದಂತೆ ಮಳೆ ಸಾಧ್ಯತೆ Read More »

ಮಾನಸಿಕ ಒತ್ತಡ ನಿರ್ವಹಣೆ ಅತ್ಯಗತ್ಯ -ಡಾ ಆನಂದ್|ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ

ಸಮಗ್ರ ನ್ಯೂಸ್:ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ದ.ಕ ಜಿಲ್ಲಾ ಪೌರರಕ್ಷಣಾ ಪಡೆ ಇದರ ವತಿಯಿಂದ ದ.ಕ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಇದರ ಸಹಕಾರದೊಂದಿಗೆ, ನೇತ್ರಾವತಿ ಸಭಾಂಗಣ, ಜಿಲ್ಲಾ ಪಂಚಾಯತ್ ಕೊಟ್ಟಾರ, ಮಂಗಳೂರು ಇಲ್ಲಿ ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ ಹಾಗೂ ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ, ಇಸಿಜಿ, ಕಣ್ಣಿನ ತಪಾಸಣೆಯನ್ನು ಆ.24ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ

ಮಾನಸಿಕ ಒತ್ತಡ ನಿರ್ವಹಣೆ ಅತ್ಯಗತ್ಯ -ಡಾ ಆನಂದ್|ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ Read More »

ಚಂದ್ರಯಾನ 3 ಟೀಂನಲ್ಲಿ ಭಾಗಿಯಾದ ಮಾನಸ ಅವರಿಗೆ ಸಮಗ್ರ ಸಮಾಚಾರ ವತಿಯಿಂದ ಸನ್ಮಾನ

ಸಮಗ್ರ ನ್ಯೂಸ್: ಚಂದ್ರಯಾನ- 3 ತಂಡದಲ್ಲಿ ಭಾಗಿಯಾದ ಸುಳ್ಯದ ಮಾನಸ ಎಂ. ಜೆ. ಅವರು ಸಮಗ್ರ ಸಮಾಚಾರ ಕಛೇರಿಗೆ ಬೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ಚಂದ್ರಯಾನದ ತಯಾರಿ ಮತ್ತು ಯಶಸ್ವಿಯ ಬಗ್ಗೆ  ಸಂದರ್ಶನ ನಡೆಸಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಮಾನಸ ಅವರ ಪತಿ ಜಯಕುಮಾರ್ ಬಿ.ಎಸ್., ತಾಯಿ ಕುಸುಮಾವತಿ, ಅಕ್ಕ ಜ್ಯೋತಿ ಮತ್ತು ಮಗಳು ಸನ್ನಿಧಿ, ಸುಬ್ರಹ್ಮಣ್ಯ ಐವರ್ನಾಡು ಹಾಗೂ ಸಮಗ್ರ ಸಮಾಚಾರ ಮುಖ್ಯಸ್ಥ ಜಯದೀಪ್ ಕುದ್ಕುಳಿ, ಸಿಬ್ಬಂದಿಯಾದ ಕೀರ್ತನ್ ಕುಕ್ಕುಡೆಲು, ಅನನ್ಯ ಕಾಟೂರು, ಧನ್ಯಶ್ರೀ

ಚಂದ್ರಯಾನ 3 ಟೀಂನಲ್ಲಿ ಭಾಗಿಯಾದ ಮಾನಸ ಅವರಿಗೆ ಸಮಗ್ರ ಸಮಾಚಾರ ವತಿಯಿಂದ ಸನ್ಮಾನ Read More »