ಕರಾವಳಿ

ಸೌಜನ್ಯ ಪ್ರಕರಣ| ಬಿಜೆಪಿ ನೇತೃತ್ವದ ಪ್ರತಿಭಟನೆಗೆ ಸೌಜನ್ಯ ತಾಯಿಗೆ ಆಹ್ವಾನ ‌ನೀಡಿದ ಹರೀಶ್ ಪೂಂಜ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯಲ್ಲಿ ನಡೆಯುವ ಭಾರತೀಯ ಜನತಾ ಪಾರ್ಟಿ ಪ್ರತಿಭಟನಾ ಹೋರಾಟದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭಾಗಿಯಾಗುವಂತೆ ಶಾಸಕ‌ ಹರೀಶ್ ಪೂಂಜ ಹಾಗೂ ತಂಡ ಆ.24 ರಂದು ಅವರ ಮನೆಗೆ ಭೇಟಿ ನೀಡಿ ಆಹ್ವಾನಿಸಿದೆ. ನೈಜ ಆರೋಪಿಗಳ ಪತ್ತೆಗಾಗಿ ಆಗಸ್ಟ್‌ 27 ರಂದು ಬೆಳ್ತಂಗಡಿಯಲ್ಲಿ ನಡೆಯುವ ಭಾರತೀಯ ಜನತಾ ಪಾರ್ಟಿ ಪ್ರತಿಭಟನಾ ಹೋರಾಟದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭಾಗಿಯಾಗುವಂತೆ ಶಾಸಕ‌ ಹರೀಶ್ ಪೂಂಜ ಹಾಗೂ ಅವರ ಸೌಜನ್ಯಳ ಮನೆಗೆ ತೆರಳಿ

ಸೌಜನ್ಯ ಪ್ರಕರಣ| ಬಿಜೆಪಿ ನೇತೃತ್ವದ ಪ್ರತಿಭಟನೆಗೆ ಸೌಜನ್ಯ ತಾಯಿಗೆ ಆಹ್ವಾನ ‌ನೀಡಿದ ಹರೀಶ್ ಪೂಂಜ Read More »

ಪುತ್ತೂರು: ಚೂರಿ ಇರಿತ ಪ್ರಕರಣ|ಯುವತಿ ಸಾವು|ಯುವಕ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿ ಚೂರಿ ಇರಿತಕ್ಕೊಳಗಾದ ಯುವತಿ ಸಾವನಪ್ಪಿದ್ದು. ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜೀವನ್ಮರಣ ಸ್ಥಿತಿಯಲ್ಲಿರುವ ಯುವತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೆರದೊಯ್ಯುವಾಗ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಇರಿತಕ್ಕೆ ಒಳಗಾಗಿರುವ ಯುವತಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಭಾಗದ ಅಳಿಕೆ ನಿವಾಸಿ ಗೌರಿ(18) ಎಂದು ಗುರುತಿಸಲಾಗಿದೆ. ಯುವಕನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಮಣಿನಾಲ್ಕೂರು ಗ್ರಾಮದ ನೈಬೇಳು ನಿವಾಸಿ

ಪುತ್ತೂರು: ಚೂರಿ ಇರಿತ ಪ್ರಕರಣ|ಯುವತಿ ಸಾವು|ಯುವಕ ಪೊಲೀಸ್ ವಶಕ್ಕೆ Read More »

ಪುತ್ತೂರು: ಯುವತಿಗೆ ಚೂರಿ ಇರಿತ ಯುವಕ ಪರಾರಿ| ಆರೋಪಿ ಪೊಲೀಸ್ ವಶಕ್ಕೆ..?

ಸಮಗ್ರ ನ್ಯೂಸ್: ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿ ಯುವತಿಯೊಬ್ಬಳಿಗೆ ಚೂರಿ ಇರಿದು ಪರಾರಿಯಾದ ಘಟನೆ ಆ.24 ರಂದು ನಡೆದಿದೆ. ಗಾಯಗೊಂಡ ಯುವತಿಯನ್ನು ವಿಟ್ಲದ ಕುದ್ದುಪದವು ಮೂಲದವಳು ಎಂದು ಗುರುತಿಸಲಾಗಿದೆ. ಈಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಹಿಂಬದಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಬಳಿ ನಿಂತಿದ್ದ ವೇಳೆ ಬೈಕಿನಲ್ಲಿ ಬಂದ ಆರೋಪಿ ಪದ್ಮರಾಜ್ ಚೂರಿ ಇರಿದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಬಳಿಕ ಪೋಲೀಸರು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಮೇಲ್ನೋಟಕ್ಕೆ ಯುವಕ ಕೊಲೆಯತ್ನ ನಡೆಸಿರುವುದು ಕಂಡುಬರುತ್ತಿದ್ದು

ಪುತ್ತೂರು: ಯುವತಿಗೆ ಚೂರಿ ಇರಿತ ಯುವಕ ಪರಾರಿ| ಆರೋಪಿ ಪೊಲೀಸ್ ವಶಕ್ಕೆ..? Read More »

ಬೆಳ್ತಂಗಡಿ: ಕಡವೆ ಬೇಟೆಯಾಡಿದ ಮೂರು ಮಂದಿ ಬಂಧನ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯದ ಒಳಭಾಗದ ಬಟ್ಟಾಡಿ ಬಳಿ ಕಪಿಲಾ ನದಿ ತೀರದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿದ ಮೂವರನ್ನು ಬಂದೂಕು ಸಹಿತ ಉಪ್ಪಿನಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಉಪ್ಪಿನಂಗಡಿ ಅರಣ್ಯ ಇಲಾಖೆ ವ್ಯಾಪ್ತಿಯ ದಡಂತಮಲೆ ಬಟ್ಟಾಡಿ ಕಪಿಲ ನದಿ‌ ಪಕ್ಕದಲ್ಲಿ ನಾಲ್ಕು ವರ್ಷ ಪ್ರಾಯದ ಕಡವೆಯನ್ನು ಆರೋಪಿಗಳು ಮಂಗಳವಾರ ರಾತ್ರಿ ಬೇಟೆಯಾಡಿದ್ದರು. ಅರಣ್ಯ ಇಲಾಖೆಯ ಸಿಬಂದಿ ರಾತ್ರಿ ಗಸ್ತು ತಿರುಗುವಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ

ಬೆಳ್ತಂಗಡಿ: ಕಡವೆ ಬೇಟೆಯಾಡಿದ ಮೂರು ಮಂದಿ ಬಂಧನ Read More »

ಚಂದ್ರಯಾನ 3 ಟೀಂನಲ್ಲಿ ಸುಳ್ಯದ ಕುವರಿ

ಸಮಗ್ರ ನ್ಯೂಸ್: ಜಗತ್ತೇ ಹೆಮ್ಮೆ ಪಡುವ ಯಶಸ್ವಿಯ ಚಂದ್ರಯಾನ- 3ರಲ್ಲಿ ಸುಳ್ಯದ ವಿಜ್ಞಾನಿ ಮತ್ತು ವಿದ್ಯಾರ್ಥಿನಿಯೋರ್ವಳು ಭಾಗಿಯಾಗಿದ್ದಾರೆ. ಇಸ್ರೋ ವಿಜ್ಞಾನಿಯಾಗಿರುವ ಶಾಂಬಯ್ಯ ಅವರು ಮೂಲತಃ ಸುಳ್ಯದ ಕೊಡಪಾಲ ದವರು ಮತ್ತು ಮತ್ತೊಬ್ಬರು ಮಂಡೆಕೋಲು ಗ್ರಾಮದ ಮಾನಸ ಎಂಬವರು ಚಂದ್ರಯಾನ -3 ತಂಡದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಚಂದ್ರಯಾನ 3 ಟೀಂನಲ್ಲಿ ಸುಳ್ಯದ ಕುವರಿ Read More »

ಸುಳ್ಯದಲ್ಲಿ ನೂತನವಾಗಿ ಭಾರತ್ ಲಾಂಡ್ರಿ ಶುಭಾರಂಭ

ಸಮಗ್ರ ನ್ಯೂಸ್: ಭಾರತ್ ಲಾಂಡ್ರಿ ನೂತನವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಸೆಂಟರ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಆ. 20ರಂದು ನೂತನವಾಗಿ ಶುಭಾರಂಭಗೊಂಡಿದೆ. ಇಲ್ಲಿ ಐರನ್, ಸ್ಟೀಮ್ ಐರನ್, ಲಾಂಡ್ರಿ ಹಾಗೂ ಡ್ರೈ ವಾಶ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ಪ್ರಮೋದ್ ಐವರ್ನಾಡು ತಿಳಿಸಿದ್ದಾರೆ.

ಸುಳ್ಯದಲ್ಲಿ ನೂತನವಾಗಿ ಭಾರತ್ ಲಾಂಡ್ರಿ ಶುಭಾರಂಭ Read More »

ಸುಳ್ಯ: ಪೆರುವಾಜೆ ಬಿಜೆಪಿ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆ

ಸಮಗ್ರ ನ್ಯೂಸ್: ಸುಳ್ಯದ ಪೆರುವಾಜೆ ಬಿಜೆಪಿ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆಯನ್ನು ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಾಚರಿಸಿದರು. ಯುವ ಮುಖಂಡ ಶಿವಪ್ರಸಾದ್ ಪೆರುವಾಜೆ ಯವರು ಇಸ್ರೋ ಸಂಸ್ಥೆಗೆ ಹಾಗೂ ಬೆಂಬಲಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಮಾತುಗಳನ್ನಾಡಿದರು. ಈ ಸಂಭ್ರಮಾಚರಣೆಯಲ್ಲಿ ಭಾರತೀಯ ಜನತಾ ಪಕ್ಷದ ವಿವಿಧ ಪಧಾಧಿಕಾರಿಗಳು ಮತ್ತು ಕಾರ್ಯಕರ್ತ ಮಿತ್ರರೂ ಉಪಸ್ಥಿತರಿದ್ದರು. ನವೀನ್ ಆಚಾರ್ಯ ಪೆರುವಾಜೆಯವರು ಎಲ್ಲರಿಗೂ ಸಿಹಿ ತಿಂಡಿಯನ್ನು ನೀಡಿದರು.

ಸುಳ್ಯ: ಪೆರುವಾಜೆ ಬಿಜೆಪಿ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆ Read More »

ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ

ಸಮಗ್ರ ನ್ಯೂಸ್:ಸುಳ್ಯ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳ ಕಾರ್ಯಕ್ಷೇತ್ರದ ಪ್ರಗತಿ ಪರಿಶೀಲನೆ ಕಾರ್ಯಕ್ರಮವು ಆ. 23ರಂದು ಸುಳ್ಯ ಯೋಜನಾ ಕಚೇರಿ ಸಭಾ ಭವನ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ತಾಲೂಕಿನ ಪ್ರತಿ ಗ್ರಾಮಕ್ಕೆ ಯೋಜನೆಯಿಂದ ಸಿಗುವ ಸೌಲಭ್ಯಗಳ ವಿತರಣೆ ಮಾಡುವ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಯೋಜನಾಧಿಕಾರಿಯಾದ ನಾಗೇಶ್ ರವರು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ವಲಯದ ಮೇಲ್ವಿಚಾರಕರು ಹಾಗೂ ಕಾರ್ಯಕ್ಷೇತ್ರ ಸೇವಾಪ್ರತಿನಿಧಿಗಳು

ಸುಳ್ಯ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ Read More »

ಪುತ್ತೂರು: ಲೈವ್ ವೀಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಯತ್ನ

ಸಮಗ್ರನ್ಯೂಸ್: ಲೈವ್ ವೀಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಬ್ಯಾರಿ‌ ಭಾಷೆಯಲ್ಲಿ ಲೈವ್ ವೀಡಿಯೋ ಮಾಡಿ ನೇಣಿಗೆ ಶರಣಾಗುತ್ತೇನೆ ಎಂದಿದ್ದ ನಾಸಿರ್ ಬಳಿಕ ನೇಣಿಗೆ ಶರಣಾಗದೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಲೈವ್ ವೀಡಿಯೋ ಮಾಡಿ ಕೃತ್ಯಕ್ಕೆ ಕಾರಣ ಹೇಳಿರುವ ನಾಸಿರ್ ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ, ಅಲ್ಲಿನ ಕುಟುಂಬದ ಹುಡುಗಿಯೊಂದಿಗೆ ಸಂಬಂಧ ಇದೆಯೆಂದು

ಪುತ್ತೂರು: ಲೈವ್ ವೀಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಯತ್ನ Read More »

ಮಂಗಳೂರು:ಇ-ಸಿಗರೇಟ್ ಮಾರಾಟ|ಸುಳ್ಯದ ಯುವತಿ ಸೇರಿ ನಾಲ್ವರ ಬಂಧನ

ಸಮಗ್ರ ನ್ಯೂಸ್: ಮಂಗಳೂರು ನಗರದ ಲಾಲ್‌ಬಾಗ್‌ನನಲ್ಲಿ ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ನಾಲ್ವರರನ್ನು ಬರ್ಕೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತರನ್ನು ಮೂಲತಃ ಸುಳ್ಯದ ಸ್ವಾತಿ, ಮಣ್ಣಗುಡ್ಡೆಯ ಶಿವಕುಮಾರ್, ಕುತ್ತಾರ್ ಸಮೀಪದ ಹಸನ್ ಶರೀಫ್ ಮತ್ತು ರಹಮತುಲ್ಲಾ ಎಂಬವರ ವಿರುದ್ಧ ಇ-ಸಿಗರೇಟ್ ನಿರ್ಬಂಧ ಹಾಗೂ ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರ ಪೈಕಿ ಇಬ್ಬರಿಗೆ ಠಾಣೆಯಲ್ಲೇ ಜಾಮೀನು ಲಭಿಸಿದ್ದರೆ, ಇನ್ನಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ. ಲಾಲ್‌ಬಾಗ್‌ನ ಸಾಯಿಬಿನ್

ಮಂಗಳೂರು:ಇ-ಸಿಗರೇಟ್ ಮಾರಾಟ|ಸುಳ್ಯದ ಯುವತಿ ಸೇರಿ ನಾಲ್ವರ ಬಂಧನ Read More »