ಕಡಬ: ನೆಲ್ಯಾಡಿಯ ಹಾರ್ಡ್ ವೇರ್ ಮಳಿಗೆಯಲ್ಲಿ ದರೋಡೆ| ನಗದು, ಸ್ಟಾಕ್ ದೋಚಿದ ಕಳ್ಳರು

ಸಮಗ್ರ ನ್ಯೂಸ್: ಕಡಬ ತಾಲೂಕಿನ ನೆಲ್ಯಾಡಿಯ ಕೆಜೆಕೆ ಟವರ್ಸ್ ನಲ್ಲಿರುವ ಜಗದಾಂಬಾ ಏಜೆನ್ಸಿಸ್ ಎಲೆಕ್ಟಿಕಲ್ ಅಂಡ್ ಪ್ಲಂಬಿಂಗ್ ಹಾರ್ಡವೇರ್ ಮಳಿಗೆಯಲ್ಲಿ ಆ. 17ರಂದು ರಾತ್ರಿ ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿದ ಘಟನೆ ವರದಿಯಾಗಿದೆ.

. Ad Widget . Ad Widget

ಮನೋಹರ್ ಸಿಂಗ್ ಎಂಬವರ ಅಂಗಡಿಯಲ್ಲಿ ಸುಮಾರು 2ಲಕ್ಷ ಮೌಲ್ಯದ ಹಣ ಹಾಗೂ ಅಂದಾಜು 15 ಲಕ್ಷದ ವಸ್ತುಗಳು ಕಳವಾಗಿರುವ ಬಗ್ಗೆ ಶಂಕಿಸಲಾಗಿದೆ. ಅಂಗಡಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದ ಡಿವಿಯರ್ ಬಾಕ್ಸ್ ಅನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಎಂಬ ಬಗ್ಗೆ ತಿಳಿದು ಬಂದಿದೆ.

. Ad Widget . . Ad Widget . Ad Widget

ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ರುಕ್ಮಯ ನಾಯ್ಕ್, ನೆಲ್ಯಾಡಿ ಹೊರಠಾಣೆಯ ಕುಶಾಲಪ್ಪ ನಾಯ್ಕ, ಪ್ರತಾಪ್, ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳೂರಿನಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

Leave a Comment

Your email address will not be published. Required fields are marked *