ಕರಾವಳಿ

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ. 24ರಂದು ಪುತ್ತೂರು ತಾಲೂಕಿನ ಬನ್ನೂರು ಸಮೀಪದ ಸನ್ನಿಧಿ ಲೇಔಟ್ ನಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ತೃತೀಯ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಕೀರ್ತಿಕಾ(19) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಕೆ.ಎಸ್.ಎಸ್. ಕಾಲೇಜಿನ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ನಿಪುಣ್ ಪರೀಕ್ಷೆಯಲ್ಲಿ ತೇರ್ಗಡೆ| ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ

ಸಮಗ್ರ ನ್ಯೂಸ್:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ನಡೆಸಿದ 2022-23 ನೇ ಸಾಲಿನ ನಿಪುಣ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸೆ. 24ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಪ್ರಮಾಣ ಪತ್ರ ಪ್ರಧಾನ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿಪುಣ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ರೋವರ್ಸ್ ವಿದ್ಯಾರ್ಥಿಗಳಾದ ಧನುಷ್ ಮುತ್ಲಾಜೆ, ಶಕೀಲ್ ಕೆ.ಎಲ್., ಪುನೀತ್ ಎ.ಕೆ., ಶರತ್ ಎಂ.ಆರ್. ಹಾಗೂ ರೇಂಜರ್ಸ್

ಕೆ.ಎಸ್.ಎಸ್. ಕಾಲೇಜಿನ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳು ನಿಪುಣ್ ಪರೀಕ್ಷೆಯಲ್ಲಿ ತೇರ್ಗಡೆ| ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ Read More »

ಬೆಳ್ತಂಗಡಿ: ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆ ದಾಳಿ| ಗಿಡಗಳು ಸಂಪೂರ್ಣ ನಾಶ

ಸಮಗ್ರ ನ್ಯೂಸ್: ಬೆಳ್ತಂಗಡಿಯ ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿ ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದ ಘಟನೆ ಕಂಡುಬಂದಿದೆ. ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಹಲಸು, ಬಿದಿರು, ಗಾಳಿ, ಹೆಬ್ಬಲಸು, ಬಲಿಂದ್ರ ಪಾಲೆ ಜಾತಿಯ ಸುಮಾರು 3,200ಕ್ಕಿಂತ ಅಧಿಕ ಗಿಡಗಳನ್ನು ಆನೆಗಳು ತುಳಿದು ಸಂಪೂರ್ಣ ಧ್ವಂಸಗೊಳಿಸಿವೆ. ಇನ್ನು ಒಂದು ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಮಾಡಿರುವ ಬಗ್ಗೆ ಶಂಕಿಸಲಾಗಿದೆ. ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನೇರ್ತನೆಯಲ್ಲಿ ಕಂಡುಬಂದಿದ್ದ

ಬೆಳ್ತಂಗಡಿ: ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆ ದಾಳಿ| ಗಿಡಗಳು ಸಂಪೂರ್ಣ ನಾಶ Read More »

ಬಂಟ್ವಾಳ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಬಾಲಕಿ ಸಾವು

ಸಮಗ್ರ ನ್ಯೂಸ್: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ಸೆ. 24ರಂದು ಮುಂಜಾನೆ ಮೃತಪಟ್ಟ ಘಟನೆ ನಡೆದಿದೆ. ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ಅವರ ಪುತ್ರಿ ಜಮೀಲಾ ಸನಿಕ (4) ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನಲ್ಲಿ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿದ್ದರು. ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ.

ಬಂಟ್ವಾಳ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಬಾಲಕಿ ಸಾವು Read More »

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿ ಸೆ.28 ರಂದು ಸುಳ್ಯದಲ್ಲಿ ಶುಭಾರಂಭ

ಸಮಗ್ರ ನ್ಯೂಸ್: ಭಾರತ ಸರಕಾರದ ಮಾನ್ಯತೆ ಪಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆಯಾಗಿರುವ, ಪುತ್ತೂರಿನಲ್ಲಿ ಹೆಸರುವಾಸಿಯಾಗಿರುವ “ವಿದ್ಯಾಮಾತಾ ಅಕಾಡೆಮಿ”ಯ ಶಾಖಾ ಕಛೇರಿ ಇದೇ ಬರುವ ದಿನಾಂಕ 28 ಸೆಪ್ಟೆಂಬರ್ 2023 ರಿಂದ ಸುಳ್ಯದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸೆ.23 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೆ.28 ಗುರುವಾರದಂದು ಬೆಳಿಗ್ಗೆ 10:00ಕ್ಕೆ ಸರಿಯಾಗಿ ಶುಭರಂಭಗೊಳ್ಳಲಿದ್ದು, ವಿದ್ಯಾಮಾತಾ ಅಕಾಡೆಮಿಯ ಮಾತೃ ಸಂಸ್ಥೆಯಾಗಿರುವ ವಿದ್ಯಾಮಾತಾ ಫೌಂಡೇಶನ್ ಈಗಾಗಲೇ

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿ ಸೆ.28 ರಂದು ಸುಳ್ಯದಲ್ಲಿ ಶುಭಾರಂಭ Read More »

ಸಮಾಜಕ್ಕೆ ಸಾಮರಸ್ಯವನ್ನು ಸಾರಿದ ಹೊಸಮಠ ಶ್ರೀ ಗಣೇಶೋತ್ಸವ

ಸಮಗ್ರ ನ್ಯೂಸ್:‌ ಹೊಸಮಠದಲ್ಲಿ ದ್ವಿತೀಯ ವರುಷದ ಶ್ರೀ ಗಣೇಶೋತ್ಸವವು ಸತೀಶ್ಚಂದ್ರ ಶೆಟ್ಟಿ ಬೀರುಕ್ಕು ಅವರ ಅಧ್ಯಕ್ಷತೆಯಲ್ಲಿ ಸರ್ವಧರ್ಮದ ಪಾಲ್ಗೊಳ್ಳುವಿಕೆಯೊಂದಿಗೆ ಬಹಳ ವಿಜ್ರಂಭನೆಯಿಂದ ಜರುಗಿತು. ಎರಡು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನ ಧಾರ್ಮಿಕ ಸಭೆ ಹಾಗೂ ರವಿ ರಾಮಕುಂಜ ಸಾರಾಥ್ಯಲ್ಲಿ ಕಾಮಿಡಿ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸರ್ವಧರ್ಮದ ಮುಖಂಡರು ಭಾಗವಹಿಸಿ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದರು. ಧಾರ್ಮಿಕ ಪ್ರವಚನವನ್ನು ಲಕ್ಷ್ಮೀಶ ಗಬಲಡ್ಕ ಹಾಗೂ ಸಭಿಕರನ್ನು ನೋಡುವಾಗ ನೈಜ ಭಾರತದ ಅನಾವರಣವಾಗಿದೆ ಎಂದು ಸಂದೇಶ ಸಾರಿದರು. ಶ್ರೀ

ಸಮಾಜಕ್ಕೆ ಸಾಮರಸ್ಯವನ್ನು ಸಾರಿದ ಹೊಸಮಠ ಶ್ರೀ ಗಣೇಶೋತ್ಸವ Read More »

ಯೆನಪೋಯಾ ಕಾಲೇಜಿನಿಂದ ಫಾರ್ಮಾಕೊವಿಜಿಲೆನ್ಸ್ ನಲ್ಲಿ ಪ್ರಜಾ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯಕ್ರಮ|

ಸಮಗ್ರ ನ್ಯೂಸ್: ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನ ಕೇಂದ್ರ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೆ.22 ರಂದು ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರ ಉಳ್ಳಾಲ್ ಮಂಗಳೂರು ಇಲ್ಲಿ “ಫಾರ್ಮಾಕೊವಿಜಿಲೆನ್ಸ್ ನಲ್ಲಿ ಪ್ರಜಾ ವಿಶ್ವಾಸವನ್ನು ಹೆಚ್ಚಿಸುವುದು” ಎಂಬ ಕಾರ್ಯಕ್ರಮವನ್ನು ನಡೆಸಿದರು. ರಾಷ್ಟ್ರೀಯ ಫಾರ್ಮಾಕೊವಿಜಿಲೆನ್ಸ್ ವಾರದ ಸಂದರ್ಭದಲ್ಲಿ, ನಗರದ ಜನರ ವಿಶ್ವಾಸವನ್ನು ಹೆಚ್ಚಿಸಲು ಸಿದ್ಧತೆ ನಡೆಸಿದರು. ಈ ಕಾರ್ಯಕ್ರಮದ ಹೆಚ್ಚಿನ ಭಾಗವನ್ನು “ಫಾರ್ಮಾಕೊವಿಜಿಲೆನ್ಸ್ ನಲ್ಲಿ ಪ್ರಜಾ ವಿಶ್ವಾಸವನ್ನು ಹೆಚ್ಚಿಸುವುದು” ಎಂಬ ವಿಷಯದ ಸುತ್ತಲೂ ಹೇಗೆ ಪ್ರಯತ್ನಿಸಬೇಕು

ಯೆನಪೋಯಾ ಕಾಲೇಜಿನಿಂದ ಫಾರ್ಮಾಕೊವಿಜಿಲೆನ್ಸ್ ನಲ್ಲಿ ಪ್ರಜಾ ವಿಶ್ವಾಸವನ್ನು ಹೆಚ್ಚಿಸುವ ಕಾರ್ಯಕ್ರಮ| Read More »

ಬಂಟ್ವಾಳ: ಕಾರು- ರಿಕ್ಷಾ ಡಿಕ್ಕಿ| ರಿಕ್ಷಾ ಚಾಲಕ ಮೃತ್ಯು

ಸಮಗ್ರ ನ್ಯೂಸ್: ಕಾರು ಡಿಕ್ಕಿಯಾಗಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಗ್ಗ ಸಮೀಪದ ಕಾಡಬೆಟ್ಟು ಕ್ರಾಸ್ ನಲ್ಲಿ ಸೆ. 23ರಂದು ನಡೆದಿದೆ. ಕೆಂಪು ಗುಡ್ಡೆ ನಿವಾಸಿ ವಿನಾಯಕ ಪೈ ಅವರು ಮನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಉಪಹಾರ ತರಲೆಂದು ವಗ್ಗದ ಹೊಟೇಲ್ ಒಂದಕ್ಕೆ ಹೋಗುವ ವೇಳೆ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ವ್ಯಾಗನಾರ್ ಕಾರು ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ವಿನಾಯಕ ಪೈ ಅವರನ್ನು ಕೂಡಲೇ ಆಸ್ಪತ್ರೆಗೆ

ಬಂಟ್ವಾಳ: ಕಾರು- ರಿಕ್ಷಾ ಡಿಕ್ಕಿ| ರಿಕ್ಷಾ ಚಾಲಕ ಮೃತ್ಯು Read More »

ಸುಳ್ಯ: ಔಷಧ ತರಲು ತೆರಳಿದ ಯುವಕ ಹೃದಯಾಘಾತಕ್ಕೆ ಬಲಿ

ಸಮಗ್ರ ನ್ಯೂಸ್: ಔಷಧ ತರಲುತೆರಳಿದ್ದ ಯುವಕ ದಾರಿ ಮಧ್ಯೆ ಹೃದಯಾಘಾತಕ್ಕೆ ಬಲಿಯಾದ ಘಟನೆ ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ಸಂಭವಿಸಿದೆ. ಮಡಿಕೇರಿಯ ಚೆಂಬು ಗ್ರಾಮದ ಆನ್ಯಾಳ ನಿವಾಸಿಯಾಗಿರುವ ಚಂದ್ರಶೇಖ‌ (35)ಮೃತ ಯುವಕ. ಇವರು ಅನಾರೋಗ್ಯ ನಿಮಿತ್ತ ಔಷಧ ಪಡೆಯಲು ನಿಂತಿಕಲ್ಲಿಗೆ ಹೋಗಿದ್ದರು. ಔಷಧಿ ಪಡೆದು ಆಟೋದಲ್ಲಿ ವಾಪಸ್ ಮನೆಗೆ ಹಿಂದುರುಗುತ್ತಿದ್ದಾಗ ದಾರಿ ಮಧ್ಯೆ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲು ಯತ್ನಿಸಿದರೂ ಅದಾಗಲೇ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.

ಸುಳ್ಯ: ಔಷಧ ತರಲು ತೆರಳಿದ ಯುವಕ ಹೃದಯಾಘಾತಕ್ಕೆ ಬಲಿ Read More »

ಸುಳ್ಯ: ಬೈಕ್ – ಕಾರು ಅಫಘಾತ: ಓರ್ವ ಗಂಭೀರ

ಸಮಗ್ರ ನ್ಯೂಸ್: ಬೈಕ್ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಸುಳ್ಯ ತಾಲುಕಿನ ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಸೆ.23ರಂದು ಸಂಭವಿಸಿದೆ. ಸುಳ್ಯದ ಜಿ.ಎಲ್. ಆಚಾರ್ಯ ಉದ್ಯೋಗಿರುವ ಪ್ರಶಾಂತ್ ಮತ್ತು ಅವರ ಪತ್ನಿ ಗಾಯಗೊಂಡವರು. ಇವರು ಬೈಕ್ ನಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗಬಾಂಜಿಕೋಡಿ ತಿರುವಿನಲ್ಲಿ ಎದುರಿನಿಂದ ಬಂದ ಕಾರು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಪರಿಣಾಮ ಪ್ರಶಾಂತ್ ಮತ್ತು ಅವರ ಪತ್ನಿ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಶಾಂತ್ ರವರಿಗೆ

ಸುಳ್ಯ: ಬೈಕ್ – ಕಾರು ಅಫಘಾತ: ಓರ್ವ ಗಂಭೀರ Read More »