ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ – ಕಾಂಗ್ರೆಸ್ ನವರಿಗೆ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ? ಭಾರತಿ ಶೆಟ್ಟಿ ಪ್ರಶ್ನೆ
ಬೆಂಗಳೂರು: ಶಿವಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ ಕೊತ್ತಂಬರಿ ಸೊಪ್ಪು ತರಲು ಅಥವಾ ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾರ ಹತ್ಯೆ ಆದ್ರೂ ಕೂಡ ಎಲ್ಲಾ ಪಕ್ಷ ಹೇಳೋದು ಒಂದೇ ಮಾತು ಕಠಿಣ ಶಿಕ್ಷೆ ಆಗಬೇಕು ಅಂತ. ಹರ್ಷನ ಜೀವನ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಮೇಲೆ ಅನೇಕ ಕೇಸ್ ಇತ್ತು. ಹರ್ಷ ಮೇಲೆ ವೈಯಕ್ತಿಕ ಕೇಸ್ ಇಲ್ಲ. […]










