ಇಂದಿನಿಂದ ಮುಳಿಯ ಜ್ಯುವೆಲ್ಸ್ ನ ಕರಿಮಣಿ ಉತ್ಸವ| ಅತ್ಯಾಕರ್ಷಕ ಮಾದರಿಯ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ
ಸಮಗ್ರ ನ್ಯೂಸ್: ಪುತ್ತೂರಿನ ಕೋರ್ಟ್ರಸ್ತೆ ಬಳಿ ಇರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ನಲ್ಲಿ 15 ದಿನಗಳ ಕಾಲ ನಡೆಯಲಿರುವ `ಕರಿಮಣಿ ಉತ್ಸವ’ಕ್ಕೆ ದೀಪೋಜ್ವಲನ ಮಾಡುವ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲ ಅವರು ಫೆ.16ರಂದು ಚಾಲನೆ ನೀಡಿದರು. ಕರಿಮಣಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಮಾಂಗಲ್ಯದಲ್ಲಿ ಮಂಗಲ ಶಬ್ದವಿದೆ, ಮಂಗಲವನ್ನು ಕರುಣಿಸುವಂತ ದ್ರವ್ಯದಿಂದ ತಯಾರಿಸಲ್ಪಟ್ಟ ವಿಶೇಷ ಚಿನ್ನದಿಂದ ತಯಾರಿಸಿದ ಕರಿಮಣಿ ಧಾರಣೆ ಮಾಡಿದರೆ ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. […]










