ಸಮಗ್ರ ಸಮಾಚಾರ

ಧರ್ಮಸ್ಥಳ ಪ್ರಕರಣ| ತಮಿಳುನಾಡಿನಲ್ಲಿ ಗುಂಪೊಂದು ಮುಸುಕುಧಾರಿಯನ್ನು ಸಂಪರ್ಕಿಸಿತ್ತೇ? ಎಸ್ಐಟಿ ಅಧಿಕಾರಿಗಳ ಸ್ಪಷ್ಟನೆ ಏನು?

ಸಮಗ್ರ ನ್ಯೂಸ್: ತಮಿಳುನಾಡಿನಲ್ಲಿದ್ದ ವೇಳೆ ಗುಂಪೊಂದು ತನ್ನನ್ನು ಸಂಪರ್ಕಿಸಿತ್ತು ಎಂದು ಸಾಕ್ಷಿ-ದೂರುದಾರ ಹೇಳಿಲ್ಲ ಎಂದು ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ‘ಸುವರ್ಣ ನ್ಯೂಸ್’ ನ ಅಂಗಸಂಸ್ಥೆ ‘ಕನ್ನಡಪ್ರಭ’ ವರದಿ ಮಾಡಿದೆ 2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ನನ್ನನ್ನು ಕೇಳಿತ್ತು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿರುವುದಾಗಿ ಹೇಳಿದ್ದೇ. ಆದರೆ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ […]

ಧರ್ಮಸ್ಥಳ ಪ್ರಕರಣ| ತಮಿಳುನಾಡಿನಲ್ಲಿ ಗುಂಪೊಂದು ಮುಸುಕುಧಾರಿಯನ್ನು ಸಂಪರ್ಕಿಸಿತ್ತೇ? ಎಸ್ಐಟಿ ಅಧಿಕಾರಿಗಳ ಸ್ಪಷ್ಟನೆ ಏನು? Read More »

ರಾಜ್ಯಾದ್ಯಂತ ಭಾರೀ ವರ್ಷಧಾರೆ| ಹಲವು ಜಿಲ್ಲೆಗಳ ಶಾಲೆಗಳಿಗೆ ಇಂದೂ(ಆ.19) ರಜೆ ಘೋಷಣೆ| ಇನ್ನೆರಡು ದಿನವೂ ಮುಂದುವರಿಯಲಿದೆ ಮಳೆ

ಸಮಗ್ರ ನ್ಯೂಸ್: ಕೊಡಗು, ಮಲೆನಾಡು, ಉತ್ತರ ಕರ್ನಾಟಕ, ಕರಾವಳಿ ಸೇರಿ ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ, ತುಂಗಾ, ತುಂಗಭದ್ರಾ, ಶರಾವತಿ, ನೇತ್ರಾವತಿ, ಕೃಷ್ಣಾ ಸೇರಿ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ರಾಜ್ಯದಲ್ಲಿ ಮಳೆಯ ಕಾರಣದಿಂದ ಸುಮಾರು 5 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದ್ದು, 150 ಮನೆ ಧರೆಗೆ ಉರುಳಿವೆ. ಹಂಪಿಯ ಸ್ಮಾರಕಗಳು, ಶೃಂಗೇರಿಯ ಕಪ್ಪೆ ಶಂಕರ ದೇಗುಲ, ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮ ಸೇರಿ ಹಲವು ಪ್ರವಾಸಿ ತಾಣಗಳು ಜಲಾವೃತಗೊಂಡಿವೆ. ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ

ರಾಜ್ಯಾದ್ಯಂತ ಭಾರೀ ವರ್ಷಧಾರೆ| ಹಲವು ಜಿಲ್ಲೆಗಳ ಶಾಲೆಗಳಿಗೆ ಇಂದೂ(ಆ.19) ರಜೆ ಘೋಷಣೆ| ಇನ್ನೆರಡು ದಿನವೂ ಮುಂದುವರಿಯಲಿದೆ ಮಳೆ Read More »

ಉಪರಾಷ್ಟ್ರಪತಿ ಸ್ಥಾನಕ್ಕೆ ಸಿ.ಪಿ ರಾಧಾಕೃಷ್ಣನ್ ಎನ್ ಡಿಎ ಅಭ್ಯರ್ಥಿ

ಸಮಗ್ರ ನ್ಯೂಸ್: ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿ ಆಯ್ಕೆ ಕುರಿತು ಸಭೆ ಸೇರಿದ್ದ ಬಿಜೆಪಿ ಸುದೀರ್ಘ ಚರ್ಚೆ ಬಳಿಕ ಅಭ್ಯರ್ಥಿ ಘೋಷಿಸಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಹೆಸರು ಘೋಷಿಸಲಾಗಿದೆ. ತಮಿಳುನಾಡು ಮೂಲದ ಸಿಪಿ ರಾಧಕೃಷ್ಣನ್ ಹೆಸರು ಘೋಷಣೆಗೆ ಎನ್‌ಡಿಎ ಮಿತ್ರಪಕ್ಷಗಳು ಬೆಂಬಲ ಸೂಚಿಸಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಗಮನಸೆಳೆದಿದ್ದ ಸಿಪಿ ರಾಧಾಕೃಷ್ಣನ್ ಬಳಿಕ ಕೊಯಂಬತ್ತೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಜಕೀಯ ಜೀವನದ ನಿಸ್ವಾರ್ಥ

ಉಪರಾಷ್ಟ್ರಪತಿ ಸ್ಥಾನಕ್ಕೆ ಸಿ.ಪಿ ರಾಧಾಕೃಷ್ಣನ್ ಎನ್ ಡಿಎ ಅಭ್ಯರ್ಥಿ Read More »

ಸಿಎಂ ಸಿದ್ದರಾಮಯ್ಯ ಮೇಲೆ‌ ಕೊಲೆ ಆರೋಪ| ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ಸೂಚನೆ

ಸಮಗ್ರ ನ್ಯೂಸ್: ಸೌಜನ್ಯ ಕೊಲೆ ಪ್ರಕರಣಕ್ಕೆ ಧ್ವನಿಯಾಗಿರುವ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಸಿಎಂ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದು, ಇದೀಗ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತಿಮರೋಡಿಯನ್ನು ಬಂಧಿಸುವಂತೆ ಸೂಚನೆ ನೀಡಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಮರೋಡಿಯವರ ವಿರುದ್ಧ ಒಂದೇ ದಿನದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದು, ಕೂಡಲೇ ಮಹೇಶ್ ಶೆಟ್ಟಿ ತಿಮ್ಮರೋಡಿಯ ಮೇಲೆ ಎಫ್‌ಐಆರ್ ದಾಖಲಿಸುವಂತೆ ಸದನದಲ್ಲಿಯೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ

ಸಿಎಂ ಸಿದ್ದರಾಮಯ್ಯ ಮೇಲೆ‌ ಕೊಲೆ ಆರೋಪ| ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ಸೂಚನೆ Read More »

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್, ಗುಟ್ಕಾ, ಸಿಗರೇಟ್ ಮಾರಾಟ ಸಂಪೂರ್ಣ ನಿಷೇಧ

ಸಮಗ್ರ ನ್ಯೂಸ್: ಪ್ಲಾಸ್ಟಿಕ್ ನಿಷೇಧದ ಕುರಿತು ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯಾಪ್ತಿಯ ಅಂಗಡಿ ಕಟ್ಟಡಗಳ ಬಾಡಿಗೆದಾರರು, ವ್ಯಾಪಾರಸ್ಥರಿಗೆ ಮಾಹಿತಿ ನೀಡುವ ಸಭೆ ನಡೆಯಿತು. ಬೀಡಿ, ಸಿಗರೇಟ್, ಗುಟ್ಕಾ ಮಾರಾಟವನ್ನು ನಿಷೇಧಿಸಿರುವ ಬಗ್ಗೆ ತಿಳಿಸಲಾಯಿತು. ಎಲ್ಲ ಅಂಗಡಿಗಳಿಗೆ ಪರಿಶೀಲನಾ ತಂಡ ಭೇಟಿ ನೀಡಿ, ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಇರುವ ಪ್ಲಾಸ್ಟಿಕ್ ಮುಗಿಯುವವರೆಗೆ ಮಾರಾಟಕ್ಕೆ ಅಭ್ಯಂತರವಿಲ್ಲ. ಆದರೆ ಇಲ್ಲಿ ಶಾಶ್ವತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವಂತಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್, ಗುಟ್ಕಾ, ಸಿಗರೇಟ್ ಮಾರಾಟ ಸಂಪೂರ್ಣ ನಿಷೇಧ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ಸೂರ್ಯನು ಸ್ವಸ್ಥಾನಕ್ಕೆ ಬರಲಿದ್ದಾನೆ. ಶುಕ್ರನೂ ಚಂದ್ರನ ರಾಶಿಯನ್ನು ಪ್ರವೇಶಿಸಿದ್ದಾನೆ. ದೇವಿಯ ಉಪಾಸಕರಿಗೆ ಶುಭಕಾಲ. ವಾರಾಂತ್ಯದಲ್ಲಿ ಪ್ರಮಾಣಗಳನ್ನು ಇಟ್ಟುಕೊಳ್ಳದೇ, ಯಾವುದೇ ಮಹತ್ಕಾರ್ಯವನ್ನು ಆರಂಭಿಸದೇ ದೈವಬಲವನ್ನು ತಂದುಕೊಳ್ಳಿ. ಆ.17ರಿಂದ 24ರವರೆಗಿನ ನಿಮ್ಮ ರಾಶಿಗಳ ಫಲಾಫಲ ಈ ಕೆಳಗಿನಂತಿವೆ ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಯಾರು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಗಳಿಸಿದ ಹಣವೂ ಗೊತ್ತಾಗದಂತೆ ಖಾಲಿಯಾಗಬಹುದು. ಯಾವ ಭಾವವೂ ಇಲ್ಲದೇ ಏನನ್ನೋ ಯೋಚಿಸುತ್ತಲೇ ಇರುವಿರಿ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಫೋಟೋ ಕಳುಹಿಸಲು ಇಂದು(ಆ17) ಕೊನೆ ದಿನ

ಸಮಗ್ರ ನ್ಯೂಸ್: ಸಮಗ್ರ ಮೀಡಿಯಾ ನೆಟ್ವರ್ಕ್ ಹಾಗೂ ಸಮಗ್ರ ಸಮಾಚಾರ.ಕಾಂ ಅರ್ಪಿಸುವ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಫೋಟೋ ಕಳುಹಿಸಲು ಇಂದು(ಆ.17) ಕೊನೆ ದಿನವಾಗಿದೆ. ನಿಮ್ಮ ಮೂರು ವರ್ಷದೊಳಗಿನ ಕಂದಮ್ಮಗಳ ಕೃಷ್ಣ ವೇಷದ ಫೋಟೋ ಹಾಗೂ ಜನನ ಪ್ರಮಾಣ ಪತ್ರ, ಸಂಪರ್ಕ ವಿಳಾಸವನ್ನು 91081 31193 ನಂಬರ್ ಗೆ ವಾಟ್ಸಾಪ್ ಮಾಡುವುದು. ಸ್ಪರ್ಧೆಗೆ ಪ್ರವೇಶ ಶುಲ್ಕ ₹100 ಆಗಿದ್ದು ಯುಪಿಐ ಮೂಲಕ ಪಾವತಿಸಬಹುದು. ಸ್ಪರ್ಧೆಯ ಫಲಿತಾಂಶ ಆ. 17ರಂದು ಪ್ರಕಟವಾಗಲಿದ್ದು, ಆಸಕ್ತರು ಈ ಕೂಡಲೇ ಸ್ಪರ್ಧೆಯಲ್ಲಿ ಭಾಗವಹಿಸುವರೇ

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಫೋಟೋ ಕಳುಹಿಸಲು ಇಂದು(ಆ17) ಕೊನೆ ದಿನ Read More »

ಭಾರೀ ಮಳೆಯಿಂದ ಘಾಟ್ ನಲ್ಲಿ ಭೂಕುಸಿತ| ಸುಬ್ರಹ್ಮಣ್ಯ ರೋಡ್ – ಹಾಸನ ಮಾರ್ಗದಲ್ಲಿ ರೈಲು ಸಂಚಾರ ಬಂದ್| ಹಲವು ರೈಲುಗಳ ಮಾರ್ಗ ಬದಲಾವಣೆ

ಸಮಗ್ರ ನ್ಯೂಸ್: ಭಾರಿ ಮಳೆಯಿಂದ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ರೈಲು ನಿಲ್ದಾಣದ ನಡುವಿನ ಘಾಟ್ ಪ್ರದೇಶದ ರೈಲು ಮಾರ್ಗದ ಮೂರು ಕಡೆ ಶನಿವಾರ ಭೂ ಕುಸಿತ ಉಂಟಾದ ಪರಿಣಾಮ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಸಂಜೆ 4.40ರ ವೇಳೆಗೆ ಸಿರಿಬಾಗಿಲು-ಎಡಕುಮೇರಿ, ಎಡಕುಮೇರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ಡೋಣಿಗಲ್ ನಡುವಿನ ಕೆಲವೆಡೆ ಮಣ್ಣು ಮತ್ತು ಬಂಡೆಗಳು ಹಳಿಗಳ ಮೇಲೆ ಬಿದ್ದಿದೆ. ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 07378) ಶನಿವಾರ ಪ್ರಯಾಣವನ್ನು ತೋಕೂರು, ಕಾರವಾರ, ಮಡಗಾಂವ್, ಲೋಂಡಾ

ಭಾರೀ ಮಳೆಯಿಂದ ಘಾಟ್ ನಲ್ಲಿ ಭೂಕುಸಿತ| ಸುಬ್ರಹ್ಮಣ್ಯ ರೋಡ್ – ಹಾಸನ ಮಾರ್ಗದಲ್ಲಿ ರೈಲು ಸಂಚಾರ ಬಂದ್| ಹಲವು ರೈಲುಗಳ ಮಾರ್ಗ ಬದಲಾವಣೆ Read More »

ಧರ್ಮಸ್ಥಳ: ಅನಿಯಂತ್ರಿತ ಅಗೆಯುವಿಕೆಯಿಂದ ಸಾಕ್ಷ್ಯ ನಾಶ| ಎಸ್ಐಟಿ ಗೆ ಹಿರಿಯ ವಿಜ್ಞಾನಿಯೊಬ್ಬರ ಸಲಹೆ

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ಕಾರ್ಯಾಚರಣೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಮಣ್ಣಿನ ವಿಜ್ಞಾನಿಗಳು, ಅನಿಯಂತ್ರಿತ ಅಗೆಯುವಿಕೆಯಿಂದ ಸಾಮೂಹಿಕ ಅಂತ್ಯಕ್ರಿಯೆಯ ಸಾಕ್ಷ್ಯ ನಾಶವಾಗಬಹುದು ಎಂದು ಎಸ್‌ಐಟಿಗೆ ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಭೌಗೋಳಿಕ ರಚನೆಯಿಂದಾಗಿ ಧರ್ಮಸ್ಥಳದಲ್ಲಿನ ಮಣ್ಣು ಮತ್ತು ನೆಲದಲ್ಲಿ ಹುದುಗಿದ ಮೂಳೆಗಳು ವರ್ಷಗಳು ಕಳೆದಂತೆ ಕರಗಿ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಬಯಸದ ಮಣ್ಣಿನ ವಿಜ್ಞಾನಿಯೊಬ್ಬರು ಧರ್ಮಸ್ಥಳದಲ್ಲಿ ಹುಡುಕಬೇಕಿರುವುದು ಮೂಳೆಗಳನ್ನಲ್ಲ. ಕಳೆಬರವೂ ಅಲ್ಲ. ಬದಲಾಗಿ ಮೂಳೆಯ

ಧರ್ಮಸ್ಥಳ: ಅನಿಯಂತ್ರಿತ ಅಗೆಯುವಿಕೆಯಿಂದ ಸಾಕ್ಷ್ಯ ನಾಶ| ಎಸ್ಐಟಿ ಗೆ ಹಿರಿಯ ವಿಜ್ಞಾನಿಯೊಬ್ಬರ ಸಲಹೆ Read More »

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ನೆಹರು ಮೈದಾನದಲ್ಲಿ ಧ್ವಜಾರೋಹಣ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಂಗಳೂರು ನೆಹರು ಮೈದಾನಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಧ್ವಜಾರೋಹಣ ನಡೆಸಿದರು. ಗೌರವ ವಂದನೆ ಸ್ವೀಕರಿಸಿದ ಬಳಿಕ ವಿವಿಧ ಪರೇಡ್ ತಂಡಗಳ ಪಥಸಂಚಲನ ವೀಕ್ಷಿಸಿದರು. ಬಳಿಕ‌ ಮಾತನಾಡಿದ ಅವರು, ಹಲವು ಸವಾಲುಗಳ ಮಧ್ಯೆ ದೇಶದ ಪ್ರಥಮ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಈ ದೇಶದ ವಿಕಾಸಕ್ಕೆ ಮಹತ್ತರ ಮುನ್ನುಡಿ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ನೆಹರು ಮೈದಾನದಲ್ಲಿ ಧ್ವಜಾರೋಹಣ Read More »