ಅಮೇರಿಕಾದ ಸುಂಕಬಾಧೆ ತಡೆಯಲು 40 ದೇಶಗಳತ್ತ ಮಾರುಕಟ್ಟೆ ಹುಡುಕಲು ಹೊರಟ ಭಾರತ|

ಸಮಗ್ರ ನ್ಯೂಸ್: ಅಮೆರಿಕದ ಟ್ಯಾರಿಫ್​ಗಳಿಂದ ಅತಿಹೆಚ್ಚು ಬಾಧಿತವಾಗುವ ಸೆಕ್ಟರ್​ಗಳಲ್ಲಿ ಜವಳಿ ಉದ್ಯಮವೂ ಒಂದು. ಭಾರತದ ಜವಳಿ ಉದ್ಯಮಕ್ಕೆ ಅತಿದೊಡ್ಡ ಮಾರುಕಟ್ಟೆ ಅಮೆರಿಕವೇ ಆಗಿದೆ. ಶೇ. 60ಕ್ಕಿಂತಲೂ ಹೆಚ್ಚು ಟ್ಯಾರಿಫ್
ಹೆಚ್ಚಳ ಆಗುತ್ತಿರುವುದರಿಂದ ಬಾಂಗ್ಲಾದೇಶ, ವಿಯೆಟ್ನಾಂ ಇತ್ಯಾದಿ ದೇಶಗಳ ಸರಕುಗಳೊಂದಿಗೆ ಭಾರತದ ಉದ್ಯಮಗಳು ಪೈಪೋಟಿ ನೀಡಲು ಆಗುವುದಿಲ್ಲ.

. Ad Widget . Ad Widget . Ad Widget .

ಹೀಗಾಗಿ ಹಲವು ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ಕಳೆದುಕೊಳ್ಳುವ ಭೀತಿಯಲ್ಲಿ ಭಾರತದ ಜವಳಿ ಉದ್ಯಮ ಇದೆ. ಇದನ್ನು ತಪ್ಪಿಸಲು ಭಾರತ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಮೆರಿಕಕ್ಕೆ ಪರ್ಯಾಯವಾದ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ಭಾರತ ಯತ್ನಿಸುತ್ತಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ವರದಿಗಳ ಪ್ರಕಾರ ಭಾರತವು ಜವಳಿ ಉತ್ಪನ್ನಗಳ ರಫ್ತಿಗಾಗಿ 40 ದೇಶಗಳ ಮೇಲೆ ಗಮನ ಹರಿಸಿದೆ. ಬ್ರಿಟನ್, ಜಪಾನ್, ಸೌತ್ ಕೊರಿಯಾ, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ನೆದರ್​ಲ್ಯಾಂಡ್ಸ್, ಪೋಲ್ಯಾಂಡ್, ಕೆನಡಾ, ಮೆಕ್ಸಿಕೋ, ರಷ್ಯಾ, ಬೆಲ್ಜಿಯಂ, ಟರ್ಕಿ, ಯುಎಇ, ಆಸ್ಟ್ರೇಲಿಯಾ ಇತ್ಯಾದಿ ಮಾರುಕಟ್ಟೆಗಳಿಗೆ ರಫ್ತು ಹೆಚ್ಚಿಸುವ ಸಾಧ್ಯಾಸಾಧ್ಯತೆಯನ್ನು ಭಾರತ ಅವಲೋಕಿಸುತ್ತಿದೆ.

ಭಾರತದ ಜವಳಿ ಉತ್ಪನ್ನಗಳು ವಿಶ್ವದ ಬಹುತೇಕ ಎಲ್ಲಾ ದೇಶಗಳಿಗೂ ರಫ್ತಾಗುತ್ತಿವೆ. ಆದರೆ, ಸುಮಾರು 40-50 ದೇಶಗಳು ಅತಿಹೆಚ್ಚು ಉಡುಪುಗಳನ್ನು ಆಮದು ಮಾಡಿಕೊಳ್ಳುತ್ತವೆ. ಈ ಪೈಕಿ ಭಾರತವು ಅಮೆರಿಕಕ್ಕೆ ಪರ್ಯಾಯವಾಗಿ 40 ದೇಶಗಳ ಮಾರುಕಟ್ಟೆಯನ್ನು ಆಯ್ದುಕೊಂಡಿದೆ. ಈ 40 ದೇಶಗಳು ಒಂದು ವರ್ಷದಲ್ಲಿ ಆಮದು ಮಾಡಿಕೊಳ್ಳುವ ಜವಳಿ ಉತ್ಪನ್ನಗಳ ಮೌಲ್ಯ 590 ಬಿಲಿಯನ್ ಡಾಲರ್. ಇದರಲ್ಲಿ ಭಾರತದ ಪಾಲು ಶೇ. 5-6 ಮಾತ್ರವೇ ಎನ್ನಲಾಗಿದೆ. ಹೀಗಾಗಿ, ಈ ಮಾರುಕಟ್ಟೆಗಳಿಗೆ ಭಾರತ ಮತ್ತಷ್ಟು ರಫ್ತು ಮಾಡಲು ಹೆಚ್ಚು ಅವಕಾಶ ಇದೆ.

2024-24ರಲ್ಲಿ ಭಾರತದ ಒಟ್ಟಾರೆ ಜವಳಿ ಉದ್ಯಮದ ಗಾತ್ರ 179 ಬಿಲಿಯನ್ ಡಾಲರ್​ನಷ್ಟು ಇದೆ. ಇದರಲ್ಲಿ ಅತಿಹೆಚ್ಚು ಬ್ಯುಸಿನೆಸ್ ಆಗುತ್ತಿರುವುದು ದೇಶೀಯ ಮಾರುಕಟ್ಟೆಯಲ್ಲೇ. ರಫ್ತಾಗುತ್ತಿರುವುದು 37 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳು ಮಾತ್ರವೇ. ಜಾಗತಿಕವಾಗಿ ವಿವಿಧ ದೇಶಗಳು ಆಮದು ಮಾಡಿಕೊಳ್ಳುತ್ತಿರುವುದು 800.77 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಉತ್ಪನ್ನಗಳನ್ನು. ಈ ಜಾಗತಿಕ ಜವಳಿ ರಫ್ತಿನಲ್ಲಿ ಭಾರತದ ಪಾಲು ಶೇ. 4.1 ಇದೆ.

Leave a Comment

Your email address will not be published. Required fields are marked *