ಸಮಗ್ರ ಸಮಾಚಾರ

ಗೃಹಲಕ್ಷ್ಮಿ ಹಣದಿಂದ ರೊಟ್ಟಿ ಉದ್ಯಮ ಆರಂಭಿಸಿದ ಮೂವರು ಮಹಿಳೆಯರು

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮಿ’ ಯೋಜನೆಯಡಿ ತಮಗೆ ಸಿಗುತ್ತಿದ್ದ ಮಾಸಿಕ 2,000 ರೂಪಾಯಿ ಹಣವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮೂವರು ಮಹಿಳೆಯರು ಸ್ವಾವಲಂಬಿ ಬದುಕಿಗೆ ಮಾದರಿಯಾಗಿದ್ದಾರೆ. ಈ ಮಹಿಳೆಯರು ಒಟ್ಟಾಗಿ ರೊಟ್ಟಿ ತಯಾರಿಕಾ ಕೇಂದ್ರವನ್ನು ಆರಂಭಿಸಿದ್ದು, ಅದಕ್ಕೆ ‘ಗೃಹಲಕ್ಷ್ಮಿ ರೊಟ್ಟಿ ಕೇಂದ್ರ’ ಎಂದು ಹೆಸರಿಟ್ಟಿದ್ದಾರೆ. ಕುಷ್ಟಗಿ ಪಟ್ಟಣದ ನಿವಾಸಿಗಳಾದ ಮಕ್ತುಂಬಿ ಕೊಪ್ಪದ, ಸಾಜನಬಿ ದಾದಿಬಾಯಿ ಮತ್ತು ಹುಸೇನಬಿ ಕಮ್ಮಾರ ಎಂಬ ಮೂವರು ಮಹಿಳೆಯರೇ ಈ ಸಾಹಸಕ್ಕೆ ಕೈಹಾಕಿದ ಗೆಳತಿಯರು. […]

ಗೃಹಲಕ್ಷ್ಮಿ ಹಣದಿಂದ ರೊಟ್ಟಿ ಉದ್ಯಮ ಆರಂಭಿಸಿದ ಮೂವರು ಮಹಿಳೆಯರು Read More »

ಅಮೇರಿಕಾ – ನೈಜೀರಿಯಾ ಜಂಟಿ ಕಾರ್ಯಾಚರಣೆ| ಐಸಿಸ್ ಉಗ್ರ ಕಮಾಂಡರ್ ಹತ

ಸಮಗ್ರ ನ್ಯೂಸ್: ಅಮೆರಿಕ ಮತ್ತು ನೈಜೀರಿಯಾದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಐಸಿಸ್‌ನ ಮೋಸ್ಟ್‌ ವಾಂಟೆಡ್‌ ಉಗ್ರ, ಜಾಗತಿಕ ಕಮಾಂಡರ್‌ಗಳಲ್ಲಿ ಅಗ್ರ 2ನೇ ಸ್ಥಾನದಲ್ಲಿದ್ದ ಅಬು-ಬಿಲಾಲ್ ಅಲ್-ಮಿನುಕಿಯನ್ನು ಹತ್ಯೆಗೈಯ್ಯಲಾಗಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರೇ ಮಾಹಿತಿ ನೀಡಿದ್ದಾರೆ. ನನ್ನ ನಿರ್ದೇಶನದ ಮೇರೆಗೆ ಅಮೆರಿಕದ ಧೈರ್ಯಶಾಲಿ ಸೇನಾ ಪಡೆಗಳು ಮತ್ತು ನೈಜೀರಿಯಾ ಸಶಸ್ತ್ರ ಪಡೆಗಳು ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿ ರೂಪಿಸಲಾದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಹೇಳಿದ್ದಾರೆ. ಅಬು-ಬಿಲಾಲ್ ಅಲ್-ಮಿನುಕಿ ಆಫ್ರಿಕಾದಲ್ಲಿ ಅಡಗಿ ಕುಳಿತಿದ್ದರೂ ನಾವು

ಅಮೇರಿಕಾ – ನೈಜೀರಿಯಾ ಜಂಟಿ ಕಾರ್ಯಾಚರಣೆ| ಐಸಿಸ್ ಉಗ್ರ ಕಮಾಂಡರ್ ಹತ Read More »

ಅಸಮಾಧಾನ ಬೆನ್ನಲ್ಲೇ ಸಂಸದ ಚೌಟರಿಂದ ಕೇಂದ್ರ ಸಚಿವ ಗಡ್ಕರಿಗೆ ಮನವಿ| ರಸ್ತೆ ಕಾಮಗಾರಿಗೆ ಅನುದಾನ ನೀಡಲು ಪತ್ರ

ಸಮಗ್ರ ನ್ಯೂಸ್: ಮೂಡುಬಿದಿರೆಯ ಸಾಣೂರು- ಬಿಕಾರ್ನಕಟ್ಟೆ ಯೋಜನೆಯಡಿ ಬರುವ ಎನ್‌ಎಚ್-169ರ ಬನ್ನಡ್ಕ ಪ್ರದೇಶದಲ್ಲಿ ಅಪೂರ್ಣವಾಗಿರುವ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಸಂಸದ ಬ್ರಿಜೇಶ್ ಚೌಟ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಬನ್ನಡ್ಕ ಭಾಗದಲ್ಲಿ ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿದೆ. ಹಿನ್ನೆಲೆಯಲ್ಲಿ ಸಂಸದರು ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರೊಂದಿಗೆ ಸಭೆ ನಡೆಸಿದಾಗ, ಈ ಭಾಗದಲ್ಲಿ ಸುಮಾರು 650 ರಿಂದ 700

ಅಸಮಾಧಾನ ಬೆನ್ನಲ್ಲೇ ಸಂಸದ ಚೌಟರಿಂದ ಕೇಂದ್ರ ಸಚಿವ ಗಡ್ಕರಿಗೆ ಮನವಿ| ರಸ್ತೆ ಕಾಮಗಾರಿಗೆ ಅನುದಾನ ನೀಡಲು ಪತ್ರ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಮೇ 17ರಿಂದ ಮೇ 23ರವರೆಗೆ ರಾಶಿಚಕ್ರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಕಂಡುಬರುತ್ತಿವೆ. ಹಲವು ಆದಾಯ ಮೂಲಕ್ಕೆ ಹಿನ್ನಡೆ ಸಾಧ್ಯತೆ. ಕೆಲವರಿಗೆ ನಿರ್ವಹಣೆ ಕಷ್ಟ. ಈ ವಾರ ಯಾವ ರಾಶಿಗೆ ಲಾಭ? ಯಾರಿಗೆ ಶುಭ ನೋಡೋಣ… ​ಮೇಷ ರಾಶಿ :​ರಾಶಿಯಲ್ಲಿ ಕುಜ ಹಾಗೂ ಪಂಚಮದಲ್ಲಿ ಚಂದ್ರ – ಕೇತು ಇದ್ದಾರೆ. ದ್ವಿತೀಯದ ರವಿ-ಬುಧರಿಂದ ಆರ್ಥಿಕ ಲಾಭವಿದ್ದರೂ, ಮಾತಿನಲ್ಲಿ ತಾಳ್ಮೆ ಇರಲಿ. ಮಕ್ಕಳ ವಿಷಯದಲ್ಲಿ ಸಣ್ಣ ಆತಂಕ ಎದುರಾಗಬಹುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.​ವೃಷಭ ರಾಶಿ :​ನಿಮ್ಮ ರಾಶಿಯಲ್ಲಿ ರವಿ,

ದ್ವಾದಶ ರಾಶಿಗಳ ವಾರಭವಿಷ್ಯ Read More »

ದ.ಕ ಸಂಸದ ಬ್ರಿಜೇಶ್ ಚೌಟ ವಿರುದ್ದ ಭುಗಿಲೆದ್ದ ಸ್ವಪಕ್ಷೀಯರ ಅಸಮಾಧಾನ| ರಸ್ತೆ ಸಮಸ್ಯೆಗೆ ಪರಿಹಾರ ಕೇಳ ಹೋದವರಿಗೆ ಸಂಸದರಿಂದ ಅವಮಾನ!?

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸ್ವಪಕ್ಷದ ಸಂಸದನ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಸಂಸದ ಕ್ಯಾ‌.ಬ್ರಿಜೇಶ್ ಚೌಟ ವಿರುದ್ಧ ಬಿಜೆಪಿ ಮಂಡಲ ಉಪಾಧ್ಯಕ್ಷನಿಂದಲೇ ಅಸಮಾಧಾನ ವ್ಯಕ್ತವಾಗಿದ್ದು, ರಸ್ತೆ ಸಮಸ್ಯೆಗೆ ಪರಿಹಾರ ಕೇಳಲು ಹೋದವರಿಗೆ ಅವಮಾನ ಆರೋಪ ಕೇಳಿಬಂದಿದೆ. ಸಂಸದರು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ ಎಂದೂ ದೂರಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಹಾಕಿ ಮೂಲ್ಕಿ-ಮೂಡಬಿದ್ರೆ ಬಿಜೆಪಿ ಉಪಾಧ್ಯಕ್ಷ ಸೂರಜ್ ಜೈನ್ ಕಿಡಿ ಕಾರಿದ್ದಾರೆ. ಮೂಡಬಿದಿರೆಯ ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು

ದ.ಕ ಸಂಸದ ಬ್ರಿಜೇಶ್ ಚೌಟ ವಿರುದ್ದ ಭುಗಿಲೆದ್ದ ಸ್ವಪಕ್ಷೀಯರ ಅಸಮಾಧಾನ| ರಸ್ತೆ ಸಮಸ್ಯೆಗೆ ಪರಿಹಾರ ಕೇಳ ಹೋದವರಿಗೆ ಸಂಸದರಿಂದ ಅವಮಾನ!? Read More »

ಹವಾಮಾನ ವರದಿ| ಈ ಬಾರಿ ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ| ಮೇ.26ಕ್ಕೆ ಕೇರಳ ಪ್ರವೇಶ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದ ಅನ್ನದಾತರಿಗೆ ಹವಾಮಾನ ಇಲಾಖೆಯು ಅತ್ಯಂತ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಪ್ರತಿ ವರ್ಷ ಜೂನ್ ತಿಂಗಳ ಆರಂಭದಲ್ಲಿ ಬರುವ ಮುಂಗಾರು ಮಳೆ, ಈ ಬಾರಿ ವಾಡಿಕೆಗಿಂತ ಒಂದು ವಾರ ಮುಂಚಿತವಾಗಿಯೇ ಅಪ್ಪಳಿಸಲಿದೆ. ಮೇ 26ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್ ಮೊದಲ ವಾರದಲ್ಲೇ ಕರ್ನಾಟಕದ ಮಣ್ಣನ್ನು ತಣಿಸಲಿದೆ. ಹವಾಮಾನ ಇಲಾಖೆಯ ಈ ಮುನ್ಸೂಚನೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ, ಮುಂದಿನ 3 ದಿನಗಳ ಕಾಲ ಇಡೀ ರಾಜ್ಯಾದ್ಯಂತ

ಹವಾಮಾನ ವರದಿ| ಈ ಬಾರಿ ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ| ಮೇ.26ಕ್ಕೆ ಕೇರಳ ಪ್ರವೇಶ ಸಾಧ್ಯತೆ Read More »

ರಾಜ್ಯದಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ| ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಬರೆ ಬಿದ್ದಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಇಂಧನ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ, ರಾಜ್ಯದ ಖಾಸಗಿ ಬಸ್ ಮಾಲೀಕರು ಇಂದಿನಿಂದಲೇ ಜಾರಿಗೆ ಬರುವಂತೆ ಟಿಕೆಟ್ ದರವನ್ನು ಶೇಕಡಾ 20 ರಿಂದ 30 ರಷ್ಟು ಹೆಚ್ಚಿಸಿದ್ದಾರೆ. ಡೀಸೆಲ್ ಬೆಲೆಯಲ್ಲಿ 3 ರೂಪಾಯಿ ಏರಿಕೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರಮುಖ ನಗರಗಳಿಗೆ ಸಂಚರಿಸುವ ಪ್ರಯಾಣಿಕರ ಜೇಬಿಗೆ ಈಗ ನೇರ ಹೊರೆ ಬೀಳಲಿದೆ. ಹೌದು, ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕಚ್ಚಾ

ರಾಜ್ಯದಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆ| ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ Read More »

ರಾಜ್ಯದಲ್ಲಿ ಅಬ್ಬರಿಸಿದ ಬೇಸಿಗೆ ಮಳೆ| ಸಿಡಿಲಿನ ರೌದ್ರಾವತಾರಕ್ಕೆ ಇಬ್ಬರು ಸಾವು

ಸಮಗ್ರ ನ್ಯೂಸ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಮಳೆಯ ರೌದ್ರಾವತಾರ ಮುಂದುವರಿದಿದ್ದು, ಸಿಡಿಲು ಬಡಿದು ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ದಕ್ಷಿಣಕನ್ನಡ, ಉಡುಪಿ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದಾವಣಗೆರೆ ಜಿಲ್ಲೆಯ ಮುದಹದಡಿ ಗ್ರಾಮದಲ್ಲಿ ಕುರಿಗಾಹಿ ಅಜಯ್ ದುಂಡಪ್ಪ ಬಿ.ಗವನಾಳ್ (19) ಎಂಬ ಯುವಕ ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ದುರಸ್ತಿ ಕೆಲಸ

ರಾಜ್ಯದಲ್ಲಿ ಅಬ್ಬರಿಸಿದ ಬೇಸಿಗೆ ಮಳೆ| ಸಿಡಿಲಿನ ರೌದ್ರಾವತಾರಕ್ಕೆ ಇಬ್ಬರು ಸಾವು Read More »

ರಾಜ್ಯಾದ್ಯಂತ ಭಾರೀ ಮಳೆ ಎಚ್ಚರಿಕೆ| ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಬಿಸಿಲಿನ ತಾಪದಿಂದ ಕೊನೆಗೂ ಮುಕ್ತಿ ಸಿಗುವ ಕಾಲ ಹತ್ತಿರದಲ್ಲಿದೆ. ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿರುವ ಇಂದಿನ ‘ಕರ್ನಾಟಕ ಹವಾಮಾನ ವರದಿ’ (ಮೇ 15 ) ಪ್ರಕಾರ, ರಾಜ್ಯದಾದ್ಯಂತ ಭಾರಿ ಮಳೆಯಾಗುವ ಇದ್ದು, ಹವಾಮಾನ ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ರಾಜ್ಯಾದ್ಯಂತ ಭಾರೀ ಮಳೆ ಎಚ್ಚರಿಕೆ| ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ Read More »

ಗ್ರಾಹಕರಿಗೆ ಬಿಗ್ ಶಾಕ್| ಪೆಟ್ರೋಲ್, ಡೀಸೆಲ್‌ ಬೆಲೆಯಲ್ಲಿ ತಲಾ ₹3 ಹೆಚ್ಚಳ

ಸಮಗ್ರ ನ್ಯೂಸ್: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತಲಾ 3 ರೂಪಾಯಿ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರ 100 ರೂಪಾಯಿಗಳ ಗಡಿಯಲ್ಲಿದ್ದರೆ, ಡೀಸೆಲ್ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿರುವುದು ಈ ಬದಲಾವಣೆಗೆ ಪ್ರಮುಖ

ಗ್ರಾಹಕರಿಗೆ ಬಿಗ್ ಶಾಕ್| ಪೆಟ್ರೋಲ್, ಡೀಸೆಲ್‌ ಬೆಲೆಯಲ್ಲಿ ತಲಾ ₹3 ಹೆಚ್ಚಳ Read More »