ಲಾಕ್ ಡೌನ್ “ಇಕ್ಕಟ್” ನಲ್ಲಿ “ಲವ್ ಇನ್ ದ ಟೈಮ್ ಆಫ್ ಕೋವಿಡ್” ಕಂಪ್ಯೂಟರ್ ಸ್ಕ್ರೀನ್ ಫಾರ್ಮೆಟ್ ನಲ್ಲಿ ರೆಡಿಯಾಗಿದೆ ಎರಡು ಕನ್ನಡ ಸಿನಿಮಾ
ಬೆಂಗಳೂರು: ಕೋವಿಡ್ ಬಂದ ನಂತರ ಹಲವು ವರ್ಗದ ಜನ ಕೆಲಸ ಕಲೆದುಕೊಂಡರೆ, ಇನ್ನೂ ಕೆಲವರು ಹೊಸ ತಾಂತ್ರಿಕತೆಯನ್ನು ಬಳಸಿಕೊಳ್ತಿದ್ದಾರೆ. ಲಾಕ್ ಡವನ್ ನಿಂದ ಸಿನಿಮಾ ಮಂದಿರಗಳು ಮುಚ್ಚಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯ ಹಲವರು ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಈ ನಡುವೆ ಹೊಸ ತಂತ್ರಜ್ಞಾನ ಬಳಸಿ 2 ಸಿನಿಮಾಗಳು ಕನ್ನಡದಲ್ಲಿ ತಯಾರಾಗಿದೆ. ದೊಡ್ಡ ದೊಡ್ಡ ಸೆಟ್, ನೂರಾರು ಕಲಾವಿದರು, ದೊಡ್ಡ ಕ್ಯಾಮೆರಾ ಇಟ್ಟುಕೊಂಡು ಚಿತ್ರೀಕರಣ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ. ಹಾಗಂತ ಪ್ರತಿಭೆ ಲಾಕ್ ಆಗುವುದಿಲ್ಲ. ಸ್ಯಾಂಡಲ್‌ವುಡ್‌ನ ಕೆಲ ನಿರ್ದೇಶಕರು ಮನೆಯೊಳಗೆ









