ಸಮಗ್ರ ಸಮಾಚಾರ

ದಿನಂಪ್ರತಿ ಉಗಿ ಸೇವನೆ: ವೈರಸ್ ರೋಗಗಳ ನಿವಾರಣೆ

ನಾವು ಸೇವಿಸುವ ಪ್ರಾಣವಾಯು ದಿನೇದಿನೇ ಹಾಳಾಗುತ್ತಿದೆ. ಇದಕ್ಕೆ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಮನುಷ್ಯನ ಅಪರಾಧಗಳ ಬಗ್ಗೆ ಈಗೀಗ ಅರಿವಾಗುತ್ತಿದೆ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಅಲ್ಲವೇ.ಜಗತ್ತಿನಲ್ಲಿ ಜನಸಮೂಹ ಇಂದು ನರಳುತ್ತಿರುವುದು ವೈರಸ್ ಗಳ ಹಾವಳಿಯಿಂದ. ಕೃತಕ ಮತ್ತು ನೈಸರ್ಗಿಕ ವೈರಸ್ ಗಳು ಮನುಷ್ಯನ ಇರುವನ್ನೇ ಪ್ರಶ್ನಿಸುವಂತಿವೆ. ಹಾಗಾದರೆ ಈ ವೈರಸ್ ಗಳ ನಿವಾರಣೆ ಹೇಗೆ? ಇದಕ್ಕೆ ಉಪಾಯ ಇಲ್ಲಿದೆ ನೋಡಿ. ವೈರಸ್ ಶ್ವಾಸಕೋಶ ಸೇರೋ ಮೊದಲು ಉಗಿ […]

ದಿನಂಪ್ರತಿ ಉಗಿ ಸೇವನೆ: ವೈರಸ್ ರೋಗಗಳ ನಿವಾರಣೆ Read More »

ದಾಸವಾಳ ಹೂವಿನ ಆರೋಗ್ಯಕರ ಪ್ರಯೋಜನಗಳು

ದಾಸವಾಳ ಹೂವು ಗಿಡದಲ್ಲಿ ನೋಡುವುದಕ್ಕೂ ಚಂದ, ದೇವರ ಪೂಜೆಗೂ ಚಂದ. ಇದರ ಜೊತೆಗೆ ಇದು ಔಷಚಧಿ ಸಸ್ಯವು ಹೌದು. ಯಾಕಂದರೆ ಅದರಲ್ಲಿ ಅನೇಕೆ ಬಗೆಯ ಆರೋಗ್ಯಕಾರಿ ಗುಣಗಳಿವೆ. ಅತಂಹ ದಾಸವಾಳ ಹೂವಿನ ಪ್ರಯೋಜನಗಳು ಯಾವುದೆಲ್ಲ ಎಂದು ಈ ತಿಳಿದುಕೊಳ್ಳೊಣ. ಶೀತ- ವೈರಸ್ ಬಾಧೆ ದೂರ:ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ-ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು. ದಾಸವಾಳದಲ್ಲಿ ಚಿಟಿಣi anti oxidants ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ

ದಾಸವಾಳ ಹೂವಿನ ಆರೋಗ್ಯಕರ ಪ್ರಯೋಜನಗಳು Read More »

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು

ಮುಗುಡು ಮೀನು ಇಂಗ್ಲೀಷಲ್ಲಿ ‘ಕ್ಯಾಟ್ ಫಿಷ್’ ಎಂದು ಕರೆಯಲ್ಪಡುವ ಮೀನು ಅತ್ಯಂತ ವಿಚಿತ್ರವಾದ ಮೀನಾಗಿದೆ. ಈ ಮೀನಿನಿಂದ ಕಲಿಯುವುದು ಬೇಕಾದಷ್ಟಿದೆ. ಮನುಷ್ಯರಾದ ನಾವು ಚಿಕ್ಕ ಕಷ್ಟ ಬಂದಾಗಲೂ ಆತ್ಮಹತ್ಯೆ ಮಾಡಲು ಬಯಸುವ ಈ ಸಂದರ್ಭದಲ್ಲಿ ಈ ಮೀನು ಬದುಕಲು ಸ್ಫ್ಪೂರ್ತಿ ನೀಡುತ್ತದೆ.ತುಳುನಾಡಿನಲ್ಲಿ ಇಂದಿಗೂ ಅನೇಕ ಮಂದಿ ಉಬರ್ ಹಿಡಿಯಲು ಹೋಗುತ್ತಾರೆ. ಉಬರ್ ಎಂದರೆ ತುಳುವಲ್ಲಿ ಮಳೆಗಾಲದ ಮೊದಲ ಜೋರು ಮಳೆಗೆ ಮೀನು, ಏಡಿಗಳನ್ನು ಬೇಟೆಯಾಡಲು ಹೋಗುವುದು. ಉಬರ್ ಎಂಬುದೇ ಒಂದು ರೋಚಕ ಅನುಭವ. ಅದನ್ನು ಬರೆಯುತ್ತಾ ಹೋದರೆ

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು Read More »

ಭೂಮಿಗಾಗಿ ಒಂದಾಗೋಣ ಬನ್ನಿ:

ಕೊರೊನಾ ವೈರಾಣು ಮನುಕುಲಕ್ಕೆ ತಂದೊಡ್ಡಿರುವ ಆತಂಕದಿಂದ, ವಿಶ್ವದ ಚಟುವಟಿಕೆಗಳೇ ಸ್ತಬ್ಧವಾದಂತಿವೆ. ಆದರೆ, ಇದಕ್ಕಿಂತಲೂ ಅಪಾಯಕಾರಿಯಾದದ್ದು ಹವಾಮಾನ ಬದಲಾವಣೆ. ಈ ಬಗ್ಗೆ ಗಮನಹರಿಸಲೇಬೇಕಾದ ಜರೂರನ್ನು ‘ವಿಶ್ವ ಭೂ ದಿನ’ (ಏ. 22) ನಮಗೆ ನೆನಪಿಸುತ್ತಿದೆ. ಅಮೆರಿಕದ ಕೈಗಾರಿಕಾ ಕ್ರಾಂತಿಯು ಉಚ್ಛ್ರಾಯದ ಸ್ಥಿತಿಯಲ್ಲಿದ್ದ 60ರ ದಶಕದಲ್ಲಿ, ಬರಡಾಗುತ್ತಿದ್ದ ಭೂಮಿಗಾಗಿ ಮರುಗಿದ ದಿನವಿದು. ವಿಪರೀತವೆಂಬಂತೆ ಹೆಚ್ಚುತ್ತಿದ್ದ ಕಾರ್ಖಾನೆಗಳು, ಆಟೊಮೊಬೈಲ್ ಉದ್ದಿಮೆಯಿಂದ ಕಲುಷಿತಗೊಳ್ಳುತ್ತಿದ್ದ ಗಾಳಿ, ಮಲಿನವಾಗುತ್ತಿದ್ದ ನೀರು, ಇಂತಹ ಬೆಳವಣಿಗೆಯು ತಂದೊಡ್ಡುತ್ತಿದ್ದ ಅನಾರೋಗ್ಯದಿಂದ ಮನುಷ್ಯರನ್ನು ಪಾರು ಮಾಡುವ ಪ್ರಯತ್ನವಾಗಿ ಹುಟ್ಟಿಕೊಂಡಿತು. ಹೀಗೆ, 50

ಭೂಮಿಗಾಗಿ ಒಂದಾಗೋಣ ಬನ್ನಿ: Read More »

ಬಯಲುಸೀಮೆಯ ಮುಳುಗದ ಟೈಟಾನಿಕ್ ಶೆಟ್ಟಿಹಳ್ಳಿ ಚರ್ಚ್. ಹೇಮಾವತಿ ಹಿನ್ನೀರಿನಲ್ಲೊಂದು ಪಯಣ.

ಹಾಸನ ಜಿಲ್ಲೆ ಶಿಲ್ಪಕಲೆಗಳ ತವರೂರು. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹೀಗೆ ಹತ್ತು ಹಲವು ಪಾರಂಪರಿಕ ತಾಣಗಳನ್ನು ತನ್ನೊಡಲಲ್ಲಿ ಹೊತ್ತುಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುವ ಹಾಸನ ಪರಂಪರಾಗತ ಕೃಷಿ, ರಾಜಕೀಯ ವಿದ್ಯಮಾನ, ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಪ್ರಸಿದ್ದವಾಗಿದೆ. ವರ್ಷಕ್ಕೊಮ್ಮೆ ಭಕ್ತಾದಿಗಳ ದರುಶನಕ್ಕೆ ತೆರೆಯುವ ಹಾಸನಾಂಬ ದೇಗುಲವು ಹಾಸನದ ಮತ್ತೊಂದು ವಿಶೇಷ. ಇವೆಲ್ಲದರ ನಡುವೆ ಹೇಮಾವತಿ ನದಿಯ ಹಿನ್ನೀರಿನಲ್ಲಿ ನಿಂತಿರುವ ಶೆಟ್ಟಿಹಳ್ಳಿ ಚರ್ಚ್ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ಮುಳುಗದ ಟೈಟಾನಿಕ್ ಹಡಗು ಎಂದೇ ಹೆಸರು ಪಡೆದಿರುವ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್‌ನ್ನು

ಬಯಲುಸೀಮೆಯ ಮುಳುಗದ ಟೈಟಾನಿಕ್ ಶೆಟ್ಟಿಹಳ್ಳಿ ಚರ್ಚ್. ಹೇಮಾವತಿ ಹಿನ್ನೀರಿನಲ್ಲೊಂದು ಪಯಣ. Read More »

ಅಸ್ಪರ್ಶ ಹುಡುಗ ಅಸಾಮಾನ್ಯನಾದ ಕಥೆ. ಈ‌ ಭೀಮ‌ ಸಂವಿಧಾನದ ಬಲಭೀಮ

ಬಾಬಾಸಾಹೇಬ್ ಅಂಬೇಡ್ಕರ್ ಎಂದೇ ಜನಪ್ರಿಯರಾಗಿರುವ ಡಾ. ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರಚಿಸಿ, ಭಾರತಕ್ಕೆ ಒಂದು ದೊಡ್ಡ ಕೊಡುಗೆಯನ್ನೇ ನೀಡಿದ ಪ್ರಸಿದ್ಧ ನಾಯಕರು.ಆದರೆ ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನ ಶಿಲ್ಪಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ನಿಲ್ಲುವಂತಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು ೧೮೯೧ರ ಏಪ್ರಿಲ್ ೧೪ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್‌ಜೀ ಸಕ್ಬಾಲ್, ತಾಯಿ ಶ್ರೀಮತಿ ಭೀಮಾಬಾಯಿರವರ ಪುತ್ರರಾಗಿ ಜನಿಸಿದರು. ಅವರು ದಲಿತರ ಮತ್ತು

ಅಸ್ಪರ್ಶ ಹುಡುಗ ಅಸಾಮಾನ್ಯನಾದ ಕಥೆ. ಈ‌ ಭೀಮ‌ ಸಂವಿಧಾನದ ಬಲಭೀಮ Read More »

ನೀವು ಬೀಚ್ ಟ್ರಕ್ಕಿಂಗ್ ಮಾಡಿದೀರಾ? ಇಲ್ಲಿದೆ ಸಮುದ್ರಚಾರಣ ಎಂಬ ಹೊಸ ಕಾನ್ಸೆಪ್ಟ್ ನ ಮಾಹಿತಿ

ಟ್ರಕ್ಕಿಂಗ್ ಅಥವಾ ಚಾರಣವೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋ ವಿಷಯ. ಹಲವರು ಚಾರಣದ ಬಗ್ಗೆ ಕೇಳಿರಬಹುದು, ಬಹಳಷ್ಟು ಮಂದಿ‌ ಅದರ ಅನುಭವ ಪಡೆದಿರಬಹುದು. ಬೆಟ್ಟ ಗುಡ್ಡಗಳ ನಡುವೆ ಕಲ್ಲು ಬಂಡೆಗಳ ಮಧ್ಯೆ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುವ ಪಾದಯಾತ್ರೆ ಸುಂದರ ಅನುಭವವನ್ನೇ ಕೊಡುತ್ತದೆ. ಸದಾ ಬ್ಯುಸಿಯಾಗಿರುವ ಪೇಟೆ ಮಂದಿ ಚಾರಣವನ್ನು ವರ್ಷಕ್ಕೊಮ್ಮೆಯಾದರೂ ಮಾಡಲೇಬೇಕು. ಹಳ್ಳಿ ಜನಕ್ಕೆ ದಿನವೂ ಚಾರಣವೇ ಬಿಡಿ…. ಆದರೆ ಇಲ್ಲೊಂದು ಹೊಸ ಕಾನ್ಸೆಪ್ಟ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ತಲೆಎತ್ತುತ್ತಿದೆ. ಅದೇ ಬೀಚ್ ಟ್ರಕ್ಕಿಂಗ್ ಅಥವಾ ಸಮುದ್ರ

ನೀವು ಬೀಚ್ ಟ್ರಕ್ಕಿಂಗ್ ಮಾಡಿದೀರಾ? ಇಲ್ಲಿದೆ ಸಮುದ್ರಚಾರಣ ಎಂಬ ಹೊಸ ಕಾನ್ಸೆಪ್ಟ್ ನ ಮಾಹಿತಿ Read More »

ಪರಶುರಾಮ ರಾಮನ ಸೃಷ್ಟಿಯ ಪಡುವಣ ಕಡಲ ಸೌಂದರ್ಯ ಸವಿಯೋಣ….. ಸುಂದರ‌ ಬೀಚ್ ಗಳಲ್ಲಿನ ರಸ ಸಂಜೆ….

ಪಡುವಣ ಕಡಲಿನ ತೀರದಲ್ಲಿ ಹತ್ತಾರು ಸುಂದರ ಬೀಚ್‌ಗಳಿವೆ. ಕೇರಳದ ಕಾಸರಗೋಡಿನಿಂದ ಗೋವಾದವರೆಗೆ ಅರಬ್ಬಿ ಸಮುದ್ರದ ತೀರದಲ್ಲಿ ಹಲವು ಸುಂದರ ತಾಣಗಳು ಮೈಚಾಚಿ ಮಲಗಿವೆ. ಇಂಥ ಬೀಚ್‌ಗಳ ಪೈಕಿ ಉಡುಪಿ ಜಿಲ್ಲೆಯಲ್ಲಿರುವ ಕಾಪು ಕೂಡಾ ಒಂದು.ಮಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಧ್ಯೆ ಸಿಗುವ ಕಾಪು ಪೇಟೆಯಿಂದ ಪಶ್ಚಿಮಕ್ಕೆ ನಡೆದು ಹೋದರೆ ವಿಶಾಲ ಸಮುದ್ರ ಕಾಣಸಿಗುತ್ತದೆ. ಅದೇ ನೀವು ನೋಡಬಹುದಾದ ಕಾಪು ಬೀಚ್ ಮತ್ತು ದೀಪಸ್ತಂಭ(ಲೈಟ್ ಹೌಸ್). ಮಂಗಳೂರಿನಿಂದ ಸುಮಾರು 45 ಕಿ.ಮೀ ಹಾಗೇ ಉಡುಪಿಯಿಂದ ಸುಮಾರು 15 ಕಿ.ಮೀ

ಪರಶುರಾಮ ರಾಮನ ಸೃಷ್ಟಿಯ ಪಡುವಣ ಕಡಲ ಸೌಂದರ್ಯ ಸವಿಯೋಣ….. ಸುಂದರ‌ ಬೀಚ್ ಗಳಲ್ಲಿನ ರಸ ಸಂಜೆ…. Read More »

ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಹಾಗೂ ಎರಡನೇ ದೊಡ್ಡ ಪಟ್ಟಣ ಪುತ್ತೂರು. ಮುತ್ತು ಬೆಳೆಯುವ ಕೆರೆ ಎಂದು ಐತಿಹ್ಯ ಹೊಂದಿರುವ ಪುತ್ತೂರು ಎಂದೊಡನೆ ತಟ್ಟನೆ ನೆನಪಾಗುವುದು ಮಹಾಲಿಂಗೇಶ್ವರ ದೇವಸ್ಥಾನ. ಊರಿನ ಹೆಸರಿಗೂ ಇಲ್ಲಿ ವಿರಾಜಮಾನನಾಗಿ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹತೋಭಾರ ಮಹಾಲಿಂಗೇಶ್ವರನಿಗೂ ಒಂದು ಐತಿಹಾಸಿಕ ನಂಟಿದೆ! ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 11-12ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಅಂದ ಹಾಗೆ ಇಲ್ಲಿ ನೆಲೆಸಿರುವ ಮಹಾಲಿಂಗೇಶ್ವರನಿಗೂ ಗಜರಾಜನಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಇದಕ್ಕೆ ಕಾರಣವೂ

ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ Read More »

ವಿಶ್ವ ಜಲ ದಿನ: ಹನಿ ನೀರೂ ಅಮೂಲ್ಯ

ನೀರು ಮಾನವ ಕುಲದ ಅಸ್ತಿತ್ವ ಹಾಗೂ ಪುನಶ್ಚೇತನಕ್ಕೆ ಜೀವನಾಧಾರ ದ್ರವವಾಗಿದ್ದು, ಜೀವಜಲ ಎಂದೇ ಭಾವಿಸಲಾಗಿದೆ. ಮನುಷ್ಯನಿಗೆ ಗಾಳಿಯಂತೆಯೇ ನೀರು ಅತಿ ಅಮೂಲ್ಯ. ಹಾಗಾಗಿ ನೀರಿನ ಬಳಕೆ ,ಉಳಿಕೆ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ಪ್ರತಿವರ್ಷ ಮಾರ್ಚ್‌ 22ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರಾರಂಭವಾದದ್ದು 1993ರಿಂದ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಸುಧೀರ್ಘ ಚರ್ಚೆಯ ನಂತರ ತೀರ್ಮಾನ ಕೈಕೊಂಡು ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ

ವಿಶ್ವ ಜಲ ದಿನ: ಹನಿ ನೀರೂ ಅಮೂಲ್ಯ Read More »