Ad Widget

ರಾಜಕೀಯ ಸಮಾಚಾರ : ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಕೂಗು| ಯಡಿಯೂರಪ್ಪ ಪದಚ್ಯುತಿಗೆ ತೀವ್ರಗೊಂಡ ಪ್ರಯತ್ನ..!

ಬೆಂಗಳೂರು. ಮೇ.26: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಕೂಗು ಜೋರಾಗಿದ್ದು, ಸಿಎಂ ಬದಲಾವಣೆಗೆ ಕೆಲವು ನಾಯಕರು ಟೊಂಕಕಟ್ಟಿ‌ ನಿಂತಿದ್ದಾರೆ. ದೆಹಲಿ ಮಟ್ಟದಲ್ಲೂ ಚಿತಾವಣೆ ನಡೆಸಿದ್ದು, ಹೈಕಮಾಂಡ್ ಈ ಬಾರಿ ನಾಯಕತ್ವ ಬದಲಾವಣೆ ಮಾಡುತ್ತಾ? ರಾಜ್ಯ ನಾಯಕರ ಒತ್ತಡಕ್ಕೆ ಮಣಿಯುತ್ತಾ? ಈ ಕುರಿತು ಮುಂದೆ ಓದಿ…

Ad Widget . Ad Widget . Ad Widget . Ad Widget . Ad Widget . Ad Widget

ಕಳೆದ ಆರೇಳು ತಿಂಗಳಿಂದಲೂ ಯಡಿಯೂರಪ್ಪನವರನ್ನ ಕೆಳಗಿಳಿಸೋ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಲೇ ಇವೆ.ಆದ್ರೆ ಕೋವಿಡ್ ನ ಕಾರಣದಿಂದ ಯಾವ ಪ್ರಯತ್ನಗಳೂ ಕೈಗೂಡುತ್ತಿಲ್ಲ. ಈ ಹಿಂದೆ ರಾಷ್ಟ್ರೀಯ ನಾಯಕರು ಸಿಎಂ ಬದಲಾವಣೆಗೆ ಮನಸ್ಸು ಮಾಡಿದ್ದರು. ರಾಜ್ಯ ನಾಯಕರನ್ನು ಎತ್ತಿಕಟ್ಟಿ ಇನ್ನಿಲ್ಲದ ಕಸರತ್ತು ಮಾಡಿದ್ದರು. ಆದರೆ ಕೊರೊನಾ ಬಂದ ನಂತರ ರಾಷ್ಟ್ರೀಯ ನಾಯಕರ ಪ್ರಯತ್ನಗಳೂ ವಿಫಲವಾದವು. ಆ ಮೂಲಕ ಯಡಿಯೂರಪ್ಪ ಸ್ವಲ್ಪ‌ ಮಟ್ಟಿಗೆ ಬಚಾವಾದರು. ರಾಜ್ಯ ನಾಯಕರು ಮಾಡಿದ ಚಿತಾವಣೆಗಳೂ ಫೇಲಾಗಿದ್ದು, ಕೊರೊನಾ ಸೋಂಕಿನಿಂದಾಗಿ ಯಡಿಯೂರಪ್ಪನವರನ್ನು ಕುರ್ಚಿಯಿಂದ ಕೆಳಗಿಳಿಯದಂತೆ ತಡೆಯುತ್ತಿದೆ. ಆದರೆ ಇದೀಗ ಮತ್ತೊಮ್ಮೆ ಅವರನ್ನ ಕೆಳಗಿಳಿಸಲು ಪ್ರಯತ್ನಗಳು ಸದ್ದಿಲ್ಲದೆ ನಡೆದಿವೆ. ಸಿ.ಪಿ.ಯೋಗೇಶ್ವರ್,ಅರವಿಂದ ಬೆಲ್ಲದ್ ಮತ್ತಿತ್ತರ ರಾಜ್ಯ ನಾಯಕರು ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಬಿಎಸ್ ವೈ ಮುಂದಿದ್ದುಕೊಂಡೇ ಬಿ.ಎಲ್.ಸಂತೋಷ್ ಕೂಡ ಯಡಿಯೂರಪ್ಪನವರನ್ನ ಕೆಳಗಿಳಿಸಲು ನಿರಂತರ ಪ್ರಯತ್ನ ನಡೆಸಿದ್ದಾರೆ. ಸಿಎಂ ಹುದ್ದೆಯ ಆಕಾಂಕ್ಷಿ ಪ್ರಹ್ಲಾದ್ ಜೋಶಿ ಕೂಡ ಒಳಗೊಳಗೆ ಈ ವೇದಿಕೆಗೆ ಬಲ ತುಂಬುತ್ತಿದ್ದಾರೆ.

Ad Widget . Ad Widget .

ಈ ಭಾರಿ ನಾಯಕತ್ವ ಬದಲಾವಣೆಯಾಗೋದು ಪಕ್ಕಾನಾ..?

ಈ‌ ಬಾರಿ ಯಡಿಯೂರಪ್ಪನವರನ್ನ ಕೆಳಗಿಳಿಸಲೇಬೇಕೆಂದು ಬಿ.ಎಲ್.ಸಂತೋಷ್ ಬಯಸಿದ್ದಾರೆ. ಬಿ.ಎಲ್.ಸಂತೋಷ್ ಗೆ ಸಿಎಂ ಸ್ಥಾನದ ಆಕಾಂಕ್ಷಿ ಪ್ರಹ್ಲಾದ್ ಜೋಶಿ, ಯತ್ನಾಳ್, ರೇಣುಕಾಚಾರ್ಯ, ರಾಜೂಗೌಡ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ರಮೇಶ್ ಜಾರಕಿಹೊಳಿ, ಮುನಿರತ್ನಂ, ಹೆಚ್.ವಿಶ್ವನಾಥ್, ರಾಮದಾಸ್, ಸಿ.ಟಿ.ರವಿಯಂತವರು ಸಾಥ್ ನೀಡಿದ್ದಾರೆ. ಹೀಗಾಗಿಯೇ ಯತ್ನಾಳರನ್ನ ಪದೇ ಪದೇ ಸಿಎಂ ವಿರುದ್ಧ ಛೂ ಬಿಡ್ತಿದ್ದಾರೆ. ಮತ್ತೊಂದು ಕಡೆ ಸಚಿವ ಸಿ.ಪಿ ಯೋಗೇಶ್ವರ್ ದೆಹಲಿಗೆ ಕಳಿಸಿ ಹೈಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನ ನಡೆಸ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಿಎಂ ಸರಿಯಾಗಿ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಶಾಸಕರನ್ನ ಸರಿಯಾಗಿ ಗಮನಿಸುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯನ್ನ ಕರೆಯುತ್ತಿಲ್ಲ. ತಮ್ಮ ಆಪ್ತ ಶಾಸಕರ ಮಾತಿಗಷ್ಟೇ ಕುಣಿಯುತ್ತಿದ್ದಾರೆ. ಪುತ್ರನಿಂದಾಗಿ ರಾಜ್ಯದಲ್ಲಿ ಪಕ್ಷಕ್ಕೂ ಕೆಟ್ಟ ಹೆಸರು ಬರ್ತಿದೆ ಎಂಬ ಹಲವು ಕಾರಣಗಳನ್ನ ಮುಂದಿಟ್ಟು, ಬದಲಾವಣೆಗೆ ಒತ್ತಡ ತರುತ್ತಿದ್ದಾರೆನ್ನಲಾಗಿದೆ. ಹೀಗಾಗಿ ಈ‌ ಬಾರಿ ಸಿಎಂ ಕೆಳಗಿಳಿಸುವುದು ಪಕ್ಕಾ ಎನ್ನಲಾಗ್ತಿದೆ.

ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟವರ್ಯಾರು..?

ಸಿಎಂ ಬದಲಾವಣೆ ಮಾಡಿ ಪ್ರಹ್ಲಾದ್ ಜೋಶಿಯವರನ್ನು ಆ ಸ್ಥಾನಕ್ಕೆ ಕೂರಿಸಬೇಕೆಂಬ ಪ್ಲಾನ್ ಬಿ.ಎಲ್‌. ಸಂತೋಷ್ ಮಾಡುತ್ತಿದ್ದಾರೆನ್ನಲಾಗಿದೆ. ಅವರ ಪರವಾಗಿ ರಮೇಶ್ ಜಾರಕಿಹೊಳಿ ಕೂಡ ನಿಂತಿದ್ದಾರೆ. ಯುವತಿ ಸಿಡಿ ಪ್ರಕರಣದಿಂದ ಸ್ವಲ್ಪ ಡ್ಯಾಮೇಜ್ ಆಗಿರೋ ಕಾರಣ ರಮೇಶ್ ಜಾರಕಿಹೊಳಿ ಪರಮಾಪ್ತ ಸಿ.ಪಿ.ಯೋಗೇಶ್ವರ್ ಅವರನ್ನೇ ಮುಂದೆ ಬಿಟ್ಟು ಯಡಿಯೂರಪ್ಪನವರನ್ನ ಕೆಳಗಿಳಿಸೋಕೆ ಪ್ಲಾನ್ ಮಾಡ್ತಿದ್ದಾರೆನ್ನಲಾಗ್ತಿದೆ. ಇದರ ನಡುವೆ ಆರ್ ಆರ್ ಎಸ್ ನಾಯಕರು ಅರವಿಂದ ಬೆಲ್ಲದ್ ಅವರನ್ನ ಕೂರಿಸಬೇಕೆಂಬ ಪ್ರಯತ್ನದಲ್ಲಿದ್ದಾರಂತೆ. ಇನ್ನು‌ ಯತ್ನಾಳ್ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನ ಕೂರಿಸೋಕೆ ರಾಷ್ಟ್ರೀಯ ಮಟ್ಟದಲ್ಲಿ ಕೆಲವು ನಾಯಕರು ಪ್ರಯತ್ನ ನಡೆಸಿದ್ದಾರೆ. ಇನ್ನೊಂದು ಕಡೆ ಬಸವರಾಜ ಬೊಮ್ಮಾಯಿ,ಮುರುಗೇಶ್ ನಿರಾಣಿ ಕೂಡ ಕಣ್ಣಿಟ್ಟು ಕುಳಿತಿದ್ದಾರೆ.

ಒಟ್ಟಾರೆ ನಾಯಕತ್ವ ಬದಲಾವಣೆಗೆ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಮೊದಲಿದ್ದಂತೆ ರಾಷ್ಟ್ರೀಯ ನಾಯಕರಿಗೆ ಈ ವಿಚಾರದಲ್ಲಿ ಉತ್ಸಾಹ ಕಂಡುಬರುತ್ತಿಲ್ಲ. ಈ‌ಸಂದರ್ಭದಲ್ಲಿ ಬದಲಾವಣೆ ಮಾಡಿ ಮತ್ತಷ್ಟು ಸಂಕಷ್ಡ ಮಾಡಿಕೊಳ್ಳುವುದು ಏಕೆ ಅಂತ ಹೈಕಮಾಂಡ್ ಕೂಡ ಚಿಂತಿಸುತ್ತಿದೆ. ಸದ್ಯಕ್ಕೆ ಯಡಿಯೂರಪ್ಪನವರ ಬದಲಾವಣೆಯೂ ಮತ್ತಷ್ಟು ಮುಂದಕ್ಕೆ ಹೋದರೂ ಕೊರೊನ ಮೂರನೇ ಅಲೆ ಒಕ್ಕರಿಸುವ ಮೊದಲು ಯಡಿಯೂರಪ್ಪ ಸಿಎಂ ಕುರ್ಚಿಯಿಂದ ಕೆಳಗಿಳಿದರೂ ಅಚ್ಚರಿಯೇನಲ್ಲ.

Leave a Comment

Your email address will not be published. Required fields are marked *