ಸಮಗ್ರ ಸಮಾಚಾರ

ಉಡುಪಿ: ದನ ಕದ್ದು ಟಾಯ್ಲೆಟ್ ನಲ್ಲಿ ಕೊಂದಾತನ ಬಂಧನ | ಸಿಸಿಟಿವಿ ಸಹಾಯದಿಂದ ಕೃತ್ಯ ಬಯಲು

ಉಡುಪಿ: ವ್ಯಕ್ತಿಯೋರ್ವ ನೆರೆಮನೆಯ ಹಸುವನ್ನು ಕದ್ದು ತನ್ನ ಮನೆಯ ಟಾಯ್ಲೆಟ್ ನಲ್ಲಿ ಮಾಂಸ ಮಾಡಿ ಮಾರಾಟ ಮಾಡಿದ್ದಾನೆ ಎನ್ನಲಾದ ಘಟನೆ ಜಿಲ್ಲೆಯ ನೇಜಾರಿನಲ್ಲಿ ನಡೆದಿದೆ. ಆರೋಪಿ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನೇಜಾರು ನಿವಾಸಿ ಗಂಗಾಧರ್ ಎಂಬವರು ಪ್ರತಿದಿನದಂತೆ ಭಾನುವಾರ ಬೆಳಿಗ್ಗೆ ತನ್ನ ಮನೆಯ ಹಸುವನ್ನು ಮೇಯಲು ಬಿಟ್ಟಿದ್ದರು. ಸ್ವಲ್ಪ ಸಮಯದಲ್ಲಿ ಹತ್ತಿರದಲ್ಲೇ ಇದ್ದ ಹಸು ಕಾಣೆಯಾಗಿತ್ತು. ನಂತರ ಘಟನೆ ನಡೆದ ಪ್ರದೇಶದಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ, ನೆರೆಮನೆಯ ಇಬ್ರಾಹಿಂ ಎಂಬಾತ ಹಸುವನ್ನು ಎಳೆದೊಯ್ಯುವ ದೃಶ್ಯ ಸೆರೆಯಾಗಿರುವುದು […]

ಉಡುಪಿ: ದನ ಕದ್ದು ಟಾಯ್ಲೆಟ್ ನಲ್ಲಿ ಕೊಂದಾತನ ಬಂಧನ | ಸಿಸಿಟಿವಿ ಸಹಾಯದಿಂದ ಕೃತ್ಯ ಬಯಲು Read More »

ಧರ್ಮಸ್ಥಳ: 4 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ಆರೋಪಿ ಅರೆಸ್ಟ್

ಬೆಳ್ತಂಗಡಿ: ಯುವಕನೋರ್ವ ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಪೋಷಕರು ನೀಡಿದ ದೂರಿನನ್ವಯ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನೀಚ ಕೃತ್ಯವೆಸಗಿ ಪೊಲೀಸರ ಅತಿಥಿಯಾದವನು ವಿಘ್ನೇಶ್ ಭಂಡಾರಿ. ಈತ ತಾಲೂಕಿನ ಕಕ್ಕಿಂಜೆಯಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಹಿಂದೊಮ್ಮೆ ಲೈಂಗಿಕ ಕಿರುಕುಳ ಎಸಗಿದ್ದ. ಆ ಸಮಯದಲ್ಲಿ ಮಗುವಿನ ಪೋಷಕರು ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರು. ಆದರೆ ಆರೋಪಿ ನೀಚ ಕೃತ್ಯವನ್ನು ಮತ್ತೆ ಮುಂದುವರಿಸಿದ್ದು, ಮಗುವಿನ ಪೋಷಕರು ನೀಡಿದ ದೂರಿನನ್ವಯ ಆತನನ್ನು ಪೊಲೀಸರು

ಧರ್ಮಸ್ಥಳ: 4 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ಆರೋಪಿ ಅರೆಸ್ಟ್ Read More »

ನಾಮಪತ್ರ ಹಿಂಪಡೆಯಲು ಹಣದ ಆಮೀಷ ಆರೋಪ | ಕೆ.ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಲು ಕೋರ್ಟ್ ಅನುಮತಿ

ಕಾಸರಗೋಡು: ಕೇರಳ ವಿಧಾನಸಭೆಗೆ ಕಳೆದ ಏಪ್ರಿಲ್ ನಲ್ಲಿ ಚುನಾವಣೆ ನಡೆದು ಮೇ ತಿಂಗಳಲ್ಲಿ ಫಲಿತಾಂಶ ಹೊರಬಂದಿತ್ತು. ವಿಧಾನಸಭಾ ಚುನಾವಣೆ ವೇಳೆ ಹಣ ಹಾಗೂ ಆಮಿಷ ನೀಡಿ ನಾಮಪತ್ರ ಹಿಂತೆಗೆಯಲು ಅನ್ಯ ಪಕ್ಷದ ಅಭ್ಯರ್ಥಿ ಓರ್ವರಿಗೆ ಒತ್ತಡ ಹೇರಿದ ಆರೋಪದ ಮೇಲೆ ಸುರೇಂದ್ರನ್ ಅವರ ಮೇಲೆ ಕೇಸು ದಾಖಲಿಸಿ ಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರರವರ ಹೇಳಿಕೆ ಹಿನ್ನಲೆಯಲ್ಲಿ, ಎಲ್ ಡಿ ಎಫ್ ಅಭ್ಯರ್ಥಿಯಾಗಿದ್ದ ರಮೇಶನ್ ನೀಡಿದ ದೂರಿನನ್ವಯ ಇದೀಗ

ನಾಮಪತ್ರ ಹಿಂಪಡೆಯಲು ಹಣದ ಆಮೀಷ ಆರೋಪ | ಕೆ.ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಲು ಕೋರ್ಟ್ ಅನುಮತಿ Read More »

ಪುತ್ತೂರು: ನೇಣು ಬಿಗಿದು ಯುವತಿ ಆತ್ಮಹತ್ಯೆ

ಪುತ್ತೂರು: ವಿವಾಹ ನಿಶ್ಚಿತಾರ್ಥ ವಾಗಿದ್ದ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಕುಳದಪಾರೆಯಲ್ಲಿ ನಡೆದಿದೆ. ನಿದಿಯಡ್ಕ ನಿವಾಸಿ ಸುಬ್ಬಣ್ಣ ನಾಯ್ಕ ಅವರ ಪುತ್ರಿ ಪ್ರಿಯಾ (25) ಮೃತ ಯುವತಿ. ಈಶ್ವರಮಂಗಲದ ಜೆರಾಕ್ಸ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದ ಪ್ರಿಯ, ತನ್ನ ಮನೆಯಲ್ಲಿ ನಿನ್ನೆ ಯಾರು ಇಲ್ಲದ ಸಂಧರ್ಭ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಈ ಹಿಂದೆ ಪುತ್ತೂರು ತಾಲ್ಲೂಕಿನ ಬಡಗನ್ನೂರು ಸರ್ಕಾರಿ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಅದೂರು ಪೊಲೀಸ್

ಪುತ್ತೂರು: ನೇಣು ಬಿಗಿದು ಯುವತಿ ಆತ್ಮಹತ್ಯೆ Read More »

ಮರಕ್ಕೆ ಢಿಕ್ಕಿ ಹೊಡೆದ ಆಂಬುಲೆನ್ಸ್ : ಮೂವರು ಸಾವು

ಕೇರಳ : ಆಂಬುಲೆನ್ಸ್ ಒಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಕಣ್ಣೂರಿನಲ್ಲಿ ಸೋಮವಾರ ನಡೆದಿದೆ. ಮೃತರನ್ನು ಪಯ್ಯನ್ನೂರು ನಿವಾಸಿಗಳಾದ ಬೀಜೋ (45), ಆತನ ಸಹೋದರಿ ರಜಿನಾ (37), ಮತ್ತು ಆಂಬುಲೆನ್ಸ್ ಚಾಲಕ ನಿತಿನ್ ರಾಜ್ (40) ಎಂದು ಗುರುತಿಸಲಾಗಿದೆ. ಜೊತೆಯಲ್ಲಿ ಇದ್ದ ಬೆಣ್ಣಿ ಎಂಬವರು ಗಂಭೀರ ಗಾಯಗೊಂಡಿದ್ದು ಕಣ್ಣೂರಿನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದ್ದು, ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದುದರಿಂದ ನಿಯಂತ್ರಣ

ಮರಕ್ಕೆ ಢಿಕ್ಕಿ ಹೊಡೆದ ಆಂಬುಲೆನ್ಸ್ : ಮೂವರು ಸಾವು Read More »

ಪುಣೆ: ಕಾರ್ಖಾನೆಯಲ್ಲಿ ಅಗ್ನಿ ಅವಘಡ | 17 ಜನ ಮೃತ್ಯು

ಪುಣೆ: ಇಲ್ಲಿಯ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಸಂಜೆ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆ ಸಿಲುಕಿ 17 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮುಲ್ಶಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಎಸ್‌ಯುಎಸ್‌ ಅಕ್ವಾ ಟೆಕ್ನಾಲಜೀಸ್’ ರಾಸಾಯನಿಕ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದ್ದು, 15 ಮಹಿಳೆಯರು ಸೇರಿದಂತೆ 17 ಮಂದಿ ಮೃತಪಟ್ಟಿದ್ದಾರೆ ಹಾಗೂ ಸಣ್ಣಪುಟ್ಟ ಗಾಯಗೊಂಡ 20 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪುಣೆ ಜಿಲ್ಲಾಡಳಿತ ತಿಳಿಸಿದೆ.ಬೆಂಕಿ ನಂದಿಸಿ ಅವಶೇಷಗಳ ತೆರವು ಕಾರ್ಯಾಚರಣೆ ಮತ್ತು ಮೃತ ವ್ಯಕ್ತಿಗಳ ಗುರುತು ಪತ್ತೆ

ಪುಣೆ: ಕಾರ್ಖಾನೆಯಲ್ಲಿ ಅಗ್ನಿ ಅವಘಡ | 17 ಜನ ಮೃತ್ಯು Read More »

ಪ್ರಧಾನಿಗೆ ಆಗಾಗ ಸುದ್ದಿಯಲ್ಲಿರುವ ಶೋಕಿ: ಕರ್ನಾಟಕ ಕಾಂಗ್ರೆಸ್

ಬೆಂಗಳೂರು: ಮೋದಿ ಅವರಿಗೆ ಆಗಾಗ ಸುದ್ದಿಯಲ್ಲಿರುವುದು ಶೋಕಿ ಎಂದು ಟ್ವೀಟ್ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಿದೆ. ಕೋವಿಡ್ ನಿಗ್ರಹಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ನರೇಂದ್ರಮೋದಿ ಅವರಿಗೆ ಆಗಾಗ ಸುದ್ದಿಯಲ್ಲಿರುವ ಶೋಕಿ, ಖಾಲಿ ಡಬ್ಬದಂತೆ ಟೆಲಿಪ್ರಾಂಪ್ಟರ್ ಎದುರು ಕುಳಿತು ಸದ್ದು ಮಾಡುವುದೇ ಅವರ ಖಯಾಲಿ. ಲಸಿಕೆ ನೀಡುವಲ್ಲಿ ವಿಫಲವಾಗಿ, ಹುರುಳಿಲ್ಲದ ಮಾತುಗಳನ್ನು ಹೆಡ್ ಲೈನ್ ಗಳನ್ನಾಗಿ ಸುವುದೇ ಮೋದಿ ತಂತ್ರ. ಧೈರ್ಯವಿದ್ದರೆ ಪತ್ರಿಕಾಗೋಷ್ಠಿ ನಡೆಸಿ ದೇಶದ

ಪ್ರಧಾನಿಗೆ ಆಗಾಗ ಸುದ್ದಿಯಲ್ಲಿರುವ ಶೋಕಿ: ಕರ್ನಾಟಕ ಕಾಂಗ್ರೆಸ್ Read More »

ಕೋವಿಡ್ 3ನೇ ಅಲೆ ಎದುರಿಸಲು ರಾಜ್ಯವನ್ನು ಸನ್ನದ್ಧವಾಗಿಸುವ ಗುರಿ | ₹1500 ಕೋ. ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ: ಡಾ. ಅಶ್ವಥ್ ನಾರಾಯಣ್

ಬೆಂಗಳೂರು: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕೋವಿಡ್ ಎರಡನೇ ಅಲೆಯನ್ನು ಸಮರ್ಪಕ ರೀತಿಯಲ್ಲಿ ಎದುರಿಸುತ್ತಿದೆ. ಇನ್ನು ಮೂರನೇ ಅಲೆಯ ಮುನ್ಸೂಚನೆ ಇದ್ದು ಅದನ್ನು ಎದುರಿಸಲು ರಾಜ್ಯವನ್ನು ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿರಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ಇಂದು ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯ ಬಳಿಕ ಮಾತನಾಡಿದ ಅಶ್ವತ್ ನಾರಾಯಣ್, ರಾಜ್ಯದಲ್ಲಿ ಕೊರೋನ ಮೂರನೇ ಎದುರಿಸುವ ದೃಷ್ಟಿಯಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ₹1500 ಕೋಟಿ ವೆಚ್ಚ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕೋವಿಡ್ 3ನೇ ಅಲೆ ಎದುರಿಸಲು ರಾಜ್ಯವನ್ನು ಸನ್ನದ್ಧವಾಗಿಸುವ ಗುರಿ | ₹1500 ಕೋ. ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ: ಡಾ. ಅಶ್ವಥ್ ನಾರಾಯಣ್ Read More »

ಲಸಿಕಾ ನೀತಿಯಲ್ಲಿ ಮತ್ತೆ ಯೂ ಟರ್ನ್ ಹೊಡೆದ ಕೇಂದ್ರ, ರಾಜ್ಯಗಳಿಗಿಲ್ಲ ಹೊಣೆಗಾರಿಕೆ

ನವದೆಹಲಿ: ಲಸಿಕೆ ಹಂಚಿಕೆಯಲ್ಲಿ ರಾಜ್ಯಗಳಿಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ‌ ಮತ್ತೆ ಲಸಿಕಾ ನೀತಿಯಲ್ಲಿ ಯೂ ಟರ್ನ್ ಹೊಡೆದಿದೆ.ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಇದೇ 21ರಿಂದ ಕೇಂದ್ರ ಸರ್ಕಾರವೇ ಹದಿನೆಂಟು ವರ್ಷ ಮೀರಿದ ಎಲ್ಲರಿಗೂ ಉಚಿತ ಲಸಿಕೆ‌ ನೀಡುವುದಾಗಿ ಪ್ರಕಟಿಸಿದ್ದು, ರಾಜ್ಯಗಳಿಗೆ ಲಸಿಕೆ ಹಂಚುವ ಜವಾಬ್ದಾರಿಯನ್ನು ಕೇಂದ್ರವೇ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.ಕೊರೊನ ಎರಡನೇ ಅಲೆಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಶಕ್ತಿಮೀರಿ ಪ್ರಯತ್ನ ‌ನಡೆಸಿದೆ. ಅದಾಗ್ಯೂ ಹಲವು ಮಂದಿ ತಮ್ಮವರನ್ನು

ಲಸಿಕಾ ನೀತಿಯಲ್ಲಿ ಮತ್ತೆ ಯೂ ಟರ್ನ್ ಹೊಡೆದ ಕೇಂದ್ರ, ರಾಜ್ಯಗಳಿಗಿಲ್ಲ ಹೊಣೆಗಾರಿಕೆ Read More »

ಮುಖ್ಯಮಂತ್ರಿ ಆಮೇಲೆ ಆಗುವಿರಂತೆ, ಮೊದಲು ಕೋವಿಡ್ ನಿಯಂತ್ರಣದ ಕೆಲಸ ಮಾಡಿ: ಶಾಸಕರ ಕಿವಿಹಿಂಡಿದ ಯಡ್ಡಿ

ಬೆಂಗಳೂರು: ನಾಯಕತ್ವ ಬದಲಾವಣೆ, ಸಹಿ ಸಂಗ್ರಹಣೆ, ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನಿಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೆಲಸ ಮಾಡಿ ಎಂದು ತಮ್ಮ ಶಾಸಕರಿಗೆ ಬಿಎಸ್ ಯಡಿಯೂರಪ್ಪ ಬುದ್ದಿವಾದ ಹೇಳಿದ್ದಾರೆ. ಯಡಿಯೂರಪ್ಪ ಅವರ ಪರವಾಗಿ ಸಹಿ ಸಂಗ್ರಹಿಸಿ ಹೈಕಮಾಂಡ್ ಗೆ ನೀಡುತ್ತೇವೆ ಎಂದು ಮಾಜಿ ಸಚಿವ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿಯೊಳಗಡೆ ಅಧಿಕಾರ ಕಿತ್ತಾಟದ ಮಧ್ಯೆ ಈ ಹೇಳಿಕೆ ಬಂದಿತ್ತು. ಇದಕ್ಕೆ ಪ್ರತಿಪಕ್ಷಗಳು ಕೂಡ ಭಾರೀ ಟೀಕೆಯನ್ನು ಮಾಡಿದ್ದರು. ಇದರಿಂದ

ಮುಖ್ಯಮಂತ್ರಿ ಆಮೇಲೆ ಆಗುವಿರಂತೆ, ಮೊದಲು ಕೋವಿಡ್ ನಿಯಂತ್ರಣದ ಕೆಲಸ ಮಾಡಿ: ಶಾಸಕರ ಕಿವಿಹಿಂಡಿದ ಯಡ್ಡಿ Read More »