ಪ್ರೇಯಸಿ ಮೋಸ ಮಾಡಿದಳೆಂದು ಕತ್ತು ಸೀಳಿ ಶವದೊಂದಿಗೆ ವಿಡಿಯೋ ಪೋಸ್ಟ್ ಮಾಡಿದ ವಿಕೃತ ಪ್ರೇಮಿ| ಶ್ರದ್ಧಾ ಕೊಲೆ ಮಾಸುವ ಮುನ್ನವೇ ನಡೆಯಿತು ಮತ್ತೊಂದು ಘೋರ ಕೃತ್ಯ
ಸಮಗ್ರ ನ್ಯೂಸ್: ದೆಹಲಿಯಲ್ಲಿ ಶ್ರಧ್ದಾಳನ್ನು ಅಫ್ತಾಬ್ ಬರ್ಬರವಾಗಿ ಹತ್ಯೆ ನಡೆದಿರುವ ಘಟನೆ ಮಾಸುವ ಮುನ್ನವೇ ಮಧ್ಯಪ್ರದೇಶದ ಜಬಲ್ಪುರದ ಮೂಲದ ಎಂದು ಹೇಳಲಾದ ವ್ಯಕ್ತಿಯೊಬ್ಬ ಮಹಿಳೆ ತನಗೆ ಮೋಸ ಮಾಡಿದಳು ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಕತ್ತು ಸೀಳಿ ಕೊಂದಿದ್ದಾನೆ. ಹತ್ಯೆ ನಡೆದು ಹಲವು ದಿನಗಳು ಕಳೆದಿವೆ ಎಂದು ಹೇಳಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಬಲ್‌ಪುರ ಮೂಲದ ಮೇಖ್ಲಾ ರೆಸಾರ್ಟ್‌ನಲ್ಲಿ 25 ವರ್ಷದ ಶಿಲ್ಪಾ ಝಾರಿಯಾಳನ್ನು ಕೊಂದು, ಆಕೆ ಸಾಯುವ ಮುನ್ನವೇ ರಕ್ತಸಿಕ್ತ ದೇಹದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ










