ಪುತ್ತೂರು – ಮಂಗಳೂರು ನಡುವೆ ನಾನ್ ಸ್ಟಾಪ್ ಬಸ್ ಸಂಚಾರಕ್ಕೆ ಕೆಎಸ್ಆರ್ ಟಿಸಿ ನಿರ್ಧಾರ| ಶೀಘ್ರದಲ್ಲೇ ಆರಂಭಿಸಲು ಚಿಂತನೆ
ಸಮಗ್ರ ನ್ಯೂಸ್: ಪುತ್ತೂರು ಮತ್ತು ಮಂಗಳೂರು ನಡುವೆ ನಾನ್ ಸ್ಟಾಪ್ ಕೆಎಸ್‌ಆರ್ ಟಿಸಿ ಬಸ್ ಸಂಚಾರ ಪ್ರಾರಂಭಿಸಿಲು ಕೆಎಸ್‌ಆರ್ ಟಿಸಿ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಶಾಸಕ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಪುತ್ತೂರಿನಿಂದ ನೇರವಾಗಿ ಮಂಗಳೂರಿಗೆ ತೆರಳುವ ಮತ್ತು ಮಂಗಳೂರಿನಿಂದ ನೇರವಾಗಿ ಪುತ್ತೂರಿಗೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಪುತ್ತೂರು – ಸ್ಟೇಟ್‌ಬ್ಯಾಂಕ್ ನಾನ್‌ಸ್ಟಾಪ್ ಬಸ್‌ಗಳನ್ನು ಶೀಘ್ರದಲ್ಲೇ ಓಡಿಸಲಾಗುತ್ತದೆ. ಆರಂಭದಲ್ಲಿ 6 ಬಸ್‌ಗಳು ಈ ಸೇವೆಗೆ ಇಳಿಯಲಿವೆ. ಇವು










