ಸಮಗ್ರ ನ್ಯೂಸ್: ಮಂಗಳೂರಿನ ಕೂಳೂರಿನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಟರ್ಮಿನಲ್ ನಲ್ಲಿ ಟ್ಯಾಂಕರ್ ಚಾಲಕರು ವಿವಿಧ ಬೇಡೇರಿಕೆ ಈಡೇರಿಸುವಂತೆ ದಿಢೀರ್ ಪ್ರತಿಭಟನೆ ನಡೆಸಿದ್ದಾಗಿ ತಿಳಿದುಬಂದಿದೆ.
ಪೆಟ್ರೋಲಿಯಂ ಉತ್ಪನ್ನಗಳ ಲೋಡಿಂಗ್ ನಲ್ಲಿ ಆಗುತ್ತಿರುವ ಅಸಮರ್ಪಕ ನಿರ್ವಹಣೆ, ಅಧಿಕಾರಿಗಳ ವಿವಿಧ ನಿಯಮಗಳ ಕುರಿತು ಲೋಡಿಂಗ್ ಗೆ ಟ್ಯಾಂಕರ್ ಗಳನ್ನು ಕಳುಹಿಸದೇ ಚಾಲಕರು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಟರ್ಮಿನಲ್ ನ ಹಿರಿಯ ಅಧಿಕಾರಿಗಳು ಚಾಲಕರ ಬೇಡಿಕೆಗಳನ್ನು ಜೂ.26ರ ಒಳಗಾಗಿ ಸರಿಪಡಿಸುವ ಭರವಸೆ ನೀಡಿದ್ದಾಗಿ ತಿಳಿದುಬಂದಿದ್ದು, ಬಳಿಕ ಚಾಲಕರು ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.







