Editor

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಸುಳ್ಯದಿಂದ ಮಾನ್ಯ ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ

ಸಮಗ್ರ ನ್ಯೂಸ್: ಮಾನ್ಯ ರಾಜ್ಯಾಧ್ಯಕ್ಷರ ಮಾರ್ಗದರ್ಶನದಂತೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸುಳ್ಯ ಶಾಖೆಯ ವತಿಯಿಂದ ಮಾನ್ಯ ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ ಜ. 21ರಂದು ಸಲ್ಲಿಸಲಾಯಿತು. ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸುಳ್ಯ ಇದರ ಆಶ್ರಯದಲ್ಲಿ ಗುರು ಸ್ಪಂದನಾ ಕಾರ್ಯಕ್ರಮ ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ನಡೆಯಿತು. ಮನವಿಯಲ್ಲಿ ಸಲ್ಲಿಸಿದ ವಿಷಯಗಳು:1)ಏಳನೇ ವೇತನ ಆಯೋಗದಿಂದ ವರದಿ ಪಡೆದು ಪರಿಷ್ಕೃತ ವೇತನ ಭತ್ಯಗಳನ್ನು 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಸುಳ್ಯದಿಂದ ಮಾನ್ಯ ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ Read More »

ಸುಳ್ಯ: ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 3ನೇ ಶಾಖೆ ಶುಭಾರಂಭ

ಸಮಗ್ರ ನ್ಯೂಸ್: ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 3ನೇ ಶಾಖೆ ಸುಳ್ಯದ ಶ್ರೀರಾಮ್ ಪೇಟೆಯಲ್ಲಿರುವ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ಜ. 21ರಂದು ಶುಭಾರಂಭಗೊಂಡಿತು. ಸುಳ್ಯದ ಮಾಜಿ ಶಾಸಕ ಮತ್ತು ಮಾಜಿ ಸಚಿವರಾದ ಎಸ್. ಅಂಗಾರ ರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಹರಿ ಕಾಂಪ್ಲೆಕ್ಸ್ ನ ಮಾಲಕ ಕೃಷ್ಣ ಕಾಮತ್ ಅರಂಬೂರು, ಸುಳ್ಯ ಪ್ರೆಸ್

ಸುಳ್ಯ: ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 3ನೇ ಶಾಖೆ ಶುಭಾರಂಭ Read More »

ಸುಳ್ಯ:ಅಯ್ಯನಕಟ್ಟೆಯಲ್ಲಿ ನಮ್ಮ ಆರೋಗ್ಯಧಾಮ ಶುಭಾರಂಭ

ಸಮಗ್ರ ನ್ಯೂಸ್: ಸುಳ್ಯದ ಕಳಂಜ ಗ್ರಾಮದ ಅಯ್ಯನಕಟ್ಟೆಯಲ್ಲಿ ನೂತನವಾಗಿ ಗೋಕುಲ ಸಂಕೀರ್ಣದಲ್ಲಿ ನಿರ್ಮಿಸಿರುವ ಡಾ. ಕಿಶನ್ ರಾವ್ ಬಾಳಿಲ ಇವರ ನೇತೃತ್ವದಲ್ಲಿ ಡಾ. ಎನ್. ಗೋಪಾಲಕೃಷ್ಣಯ್ಯ (N.G.K.) ಸ್ಮಾರಕ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್‌ ಜ. 21ರಂದು ಉದ್ಘಾಟನೆಗೊಂಡಿತು. ಕುಟುಂಬ ವೈದ್ಯರ ಸಂಘ, ಮಂಗಳೂರು ಇದರ ಕಾರ್ಯದರ್ಶಿ ಡಾ| ಜಿ.ಕೆ. ಭಟ್ ಸಂಕಬಿತ್ತಿಲು ದೀಪ ಬೆಳಗಿಸಿ ಉದ್ಘಾಟಿಸಿದರು. ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ| ಮುರಲೀಮೋಹನ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು

ಸುಳ್ಯ:ಅಯ್ಯನಕಟ್ಟೆಯಲ್ಲಿ ನಮ್ಮ ಆರೋಗ್ಯಧಾಮ ಶುಭಾರಂಭ Read More »

ಪುತ್ತೂರು: ಭಜರಂಗದಳ‌ ಮುಖಂಡ ಮುರಳೀಕೃಷ್ಣ ಹಸಂತಡ್ಕರಿಗೆ ಪಿತೃವಿಯೋಗ

ಸಮಗ್ರ ನ್ಯೂಸ್: ಪುತ್ತೂರು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರ ತಂದೆ ಪಿಎಲ್.ಡಿ ಬ್ಯಾಂಕ್ ಮಾಜಿ‌ ಅಧ್ಯಕ್ಷ ಹಸಂತಡ್ಕ ರಾಮ ಭಟ್ ಅವರು ಜ.21 ರಂದು ತಡ ರಾತ್ರಿ ನಿಧನರಾದರು. ರಾಮ ಭಟ್ ಅವರು ಪುತ್ತೂರು ಭೂ ಅಭಿವೃದ್ದಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾಗಿದ್ದು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಸುಮತಿ, ಪುತ್ರ ಮುರಳಿಕೃಷ್ಣ ಹಸಂತಡ್ಕ, ಪುತ್ರಿರಾದ ನಯನಾ ಶಂಕರಿ ಮತ್ತು ನೈಜೀರಿಯದಲ್ಲಿರುವ ಅಶ್ವಿನಿ ಶಂಕರಿ, ಸೊಸೆ, ಅಳಿಯ, ಮೊಮ್ಮಕ್ಕಳನ್ನು

ಪುತ್ತೂರು: ಭಜರಂಗದಳ‌ ಮುಖಂಡ ಮುರಳೀಕೃಷ್ಣ ಹಸಂತಡ್ಕರಿಗೆ ಪಿತೃವಿಯೋಗ Read More »

ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ ರಾಮ ಮಂದಿರ

ಸಮಗ್ರ ನ್ಯೂಸ್: ಇಂದು ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಇದರಲ್ಲಿ ಕರ್ನಾಟಕದ ಪಾಲು ಬಹು ಮಟ್ಟಿಗಿದೆ. ಅದರಲ್ಲೂ ಕರ್ನಾಟಕದಲ್ಲಿ ರಾಮ ಭಕ್ತರ ಕಲಾವಿದರು ರಾಮ ಮಂದಿರದ ಸ್ಥಬ್ದಚಿತ್ರಗಳನ್ನು ರಚಿಸುತ್ತಿದ್ದಾರೆ. ಇತ್ತೀಚೆಗೆ ಪೆನ್ಸಿಲ್ ಲೆಡ್​ನಲ್ಲಿ ರಾಮನ ಕೆತ್ತನೆ, ಕೇಕ್​ನಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಚಾಕು ಪೀಸ್ ನಲ್ಲಿ ಶ್ರೀರಾಮ, ಎಲೆಯಲ್ಲಿ ಶ್ರೀರಾಮ, ಜೈ ಶ್ರೀರಾಮ್ ಹೆಸರುಗಳಲ್ಲೇ ರಾಮನ ಚಿತ್ರ ಬಿಡಿಸಿರುವುದು ಸೇರಿದಂತೆ ಅನೇಕ ರೀತಿಯ ಚಿತ್ರಗಳನ್ನು ಬಿಡಿಸಲಾಗಿತ್ತು. ಆದರೆ ಇದೀಗ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ

ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ ರಾಮ ಮಂದಿರ Read More »

ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಸಾವು

ಸಮಗ್ರ ನ್ಯೂಸ್: ಚಿತ್ರದುರ್ಗದಲ್ಲಿ ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಹೊಳಲ್ಕೆರೆ ತಾಲೂಕಿನ ಹೊಸಹಳ್ಳಿಯಲ್ಲಿ ಈ ಅವಘಡ ಸಂಭವಿಸಿದ್ದು, ಲಕ್ಷ್ಮಮ್ಮ (38) ಮೃತ ದುರ್ದೈವಿ. ರೇಣುಕಮ್ಮ ಮತ್ತು ರಚನಾ ಎಂಬುವರಿಗೆ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಮೇಶ್ ಎಂಬುವರ ಬೀದಿ ಬದಿ ಹೋಟೆಲ್​​ಗೆ ಬೆಂಕಿ ಬಿದ್ದಿತ್ತು. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿದ್ದ ಮಹಿಳಾ ಕಾರ್ಮಿಕರು ಬೀದಿ ಬದಿ ಹೋಟೆಲ್​​ನತ್ತ ಧಾವಿಸಿದ್ದಾರೆ. ಈ ವೇಳೆ ಹೋಟೆಲ್​​ನಲ್ಲಿದ್ದ ಸಿಲಿಂಡರ್​ ಸ್ಪೋಟಗೊಂಡಿದೆ ಸಿಲಿಂಡರ್​

ಎಲ್​​ಪಿಜಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮಹಿಳೆ ಸಾವು Read More »

ಅಯೋಧ್ಯೆಯಲ್ಲಿಂದು ರಾಮಮಂದಿರ ಉದ್ಘಾಟನೆ| ಶ್ರೀರಾಮನ ಪ್ರಾಣಪ್ರತಿಷ್ಟೆಗೆ ದೇಶಾದ್ಯಂತ ಕಾತುರ, ಸಂಭ್ರಮ

ಸಮಗ್ರ ನ್ಯೂಸ್: ಶತಮಾನಗಳ ಬಳಿಕ ನಿರ್ಮಾಣವಾದ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದು, ರಾಮಲಲ್ಲಾ ಪಟ್ಟಾಭಿಷೇಕಕ್ಕೆ ಇಡೀ ಹಿಂದೂ ಹೃದಯಗಳು‌ ಕಾತುರದಿಂದ‌ ಕಾಯುತ್ತಿವೆ. ವಿಶ್ವದಾದ್ಯಂತ ಸಂಭ್ರಮ ಮನೆ‌ ಮಾಡಿದ್ದು,‌ ಮತ್ತೊಂದು ದೀಪಾವಳಿಗೆ ಭಾರತ‌ ಸಜ್ಜಾಗಿದೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಒಂದು ಐತಿಹಾಸಿಕ ಘಟನೆಯಾಗಿದ್ದು, ಇದು ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪಂಥಗಳ ಪ್ರತಿನಿಧಿಗಳು ಮತ್ತು ವಿವಿಧ ಹಿನ್ನೆಲೆಯ ಜನರ ಸೆಳೆದಿದೆ. ಇಡೀ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುವುದು. ವಿಶೇಷ ಪೂಜೆ, ಭಜನೆ, ಮಂತ್ರ ಪಠಣ,

ಅಯೋಧ್ಯೆಯಲ್ಲಿಂದು ರಾಮಮಂದಿರ ಉದ್ಘಾಟನೆ| ಶ್ರೀರಾಮನ ಪ್ರಾಣಪ್ರತಿಷ್ಟೆಗೆ ದೇಶಾದ್ಯಂತ ಕಾತುರ, ಸಂಭ್ರಮ Read More »

ಸುಳ್ಯ ತಾಲೂಕು ವ್ಯಾಪ್ತಿ; ನಿಷೇದಾಜ್ಞೆ ಹಿಂತೆಗೆತ !

ಸಮಗ್ರ ವಾರ್ತೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುಳ್ಯ ತಾಲೂಕಿನಾದ್ಯಂದ ಜ.22 ರಂದು ನಿಷೇಧಾಜ್ಞೆ ಜಾರಿ ಮಾಡಿ ಸುಳ್ಯ ತಹಶೀಲ್ದಾರ್ ಮಾಡಿದ್ದ ಆದೇಶವನ್ನು ಇದೀಗ ಹಿಂದಕ್ಕೆ ಪಡೆಯಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಮತ್ತು ಕಾನೂನು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಮನವಿಯ ಮೇರೆಗೆ 22.01.2024 ರ ಬೆಳಗ್ಗೆ 6.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ. ಸಿ ಆರ್ ಪಿ ಸಿ

ಸುಳ್ಯ ತಾಲೂಕು ವ್ಯಾಪ್ತಿ; ನಿಷೇದಾಜ್ಞೆ ಹಿಂತೆಗೆತ ! Read More »

ನಾಳೆ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಆದೇಶಿಸಿದ ತಹಶಿಲ್ದಾರ್

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಿ.ಆರ್.ಪಿ.ಸಿ. 1973 ಕಲಂ 144ರಂತೆ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಜ.22ರಂದು ನಿಷೇದಾಜ್ಞೆ ಜಾರಿಗೊಳಿಸಿ ಸುಳ್ಯ ತಹಶಿಲ್ದಾರ್ ಆದೇಶಿಸಿದ್ದಾರೆ. ಜ. 22ರ ಬೆಳಗ್ಗೆ 6.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರನ್ವಯ ನಿಷೇಧಾಜ್ಞೆ ಜ್ಯಾರಿಗೊಳಿಸಿ ಸುಳ್ಯ ತಹಶಿಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಜಿ.ಮಂಜುನಾಥ್ ಆದೇಶಿಸಿದ್ದಾರೆ. ನಿಷೇದಾಜ್ಞೆ ಅವಧಿಯಲ್ಲಿ 05

ನಾಳೆ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಆದೇಶಿಸಿದ ತಹಶಿಲ್ದಾರ್ Read More »

ರಾಮಮಂದಿರ ಉದ್ಘಾಟನೆ ಹಿನ್ನಲೆ| ನಾಳೆ ರಾಜ್ಯದಲ್ಲಿ ಸರ್ಕಾರಿ‌ ರಜೆ ಇಲ್ಲ – ಸಿಎಂ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ನಾಳೆ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡುವಂತೆ ಬಿಜೆಪಿ ನಾಯಕರು, ಹಿಂದೂ ಸಂಘಟನೆ ಮುಖಂಡರು ಒತ್ತಾಯಿಸಿದ್ದರು. ಇದೀಗ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಳೆ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡುವುದಿಲ್ಲ. ಆದರೆ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ನಾಳೆ ವಿಶೇಷ ಪೂಜೆ ಇರಲಿದೆ ಎಂದು ತಿಳಿಸಿದರು. ನಾಳೆ

ರಾಮಮಂದಿರ ಉದ್ಘಾಟನೆ ಹಿನ್ನಲೆ| ನಾಳೆ ರಾಜ್ಯದಲ್ಲಿ ಸರ್ಕಾರಿ‌ ರಜೆ ಇಲ್ಲ – ಸಿಎಂ Read More »