Editor

ಸುಳ್ಯದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನ| ರಾಮರಾಜ್ಯದ ಕಲ್ಪನೆಯೊಂದಿಗೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ – ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್: ನಿನ್ನೆ ಶ್ರೀರಾಮ ಕ್ಷೇತ್ರದ ಉದ್ಘಾಟನೆ ಆಗಿದೆ. ರಾಮರಾಜ್ಯದ ಕಲ್ಪನೆಯೊಂದಿಗೆ ರಾಜ್ಯ ಸರಕಾರ ಕೆಲಸ ಮಾಡುತಿದೆ. ಎಲ್ಲರ ರಕ್ಚಣೆ, ಪ್ರೀತಿ, ವಿಶ್ವಾಸ, ನ್ಯಾಯ ನೀಡುವುದು ರಾಮರಾಜ್ಯದ ಕಲ್ಪನೆ, ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಸುಳ್ಯ ಕೆವಿಜಿ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘ಸರಕಾರದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ‌‌ ಮಾಡಲು ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ಧವಾಗಿದೆ. ಆಡಳಿತ

ಸುಳ್ಯದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನ| ರಾಮರಾಜ್ಯದ ಕಲ್ಪನೆಯೊಂದಿಗೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ – ದಿನೇಶ್ ಗುಂಡೂರಾವ್ Read More »

ಲೋಕಸಭಾ ಚುನಾವಣೆ ತಾತ್ಕಾಲಿಕ ದಿನಾಂಕ‌ ಪ್ರಕಟಿಸಿದ ಚು. ಆಯೋಗ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ತಾತ್ಕಾಲಿಕ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಲೋಕಸಭೆ 2024 ರ ಚುನಾವಣೆಯನ್ನು ಏಪ್ರಿಲ್ 16 ರಂದು ತಾತ್ಕಾಲಿಕವಾಗಿ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿದೆ. ಚುನಾವಣಾ ಯೋಜಕರ ಪ್ರಾರಂಭ ಮತ್ತು ಅಂತಿಮ ದಿನಾಂಕಗಳನ್ನು ಲೆಕ್ಕಾಚಾರ ಮಾಡಲು ಚುನಾವಣಾ ಆಯೋಗ ಅಧಿಕಾರಿಗಳಿಗೆ ಅನುವು ಮಾಡಿಕೊಡಲು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ತಾತ್ಕಾಲಿಕ ದಿನಾಂಕವನ್ನು ಘೋಷಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

ಲೋಕಸಭಾ ಚುನಾವಣೆ ತಾತ್ಕಾಲಿಕ ದಿನಾಂಕ‌ ಪ್ರಕಟಿಸಿದ ಚು. ಆಯೋಗ Read More »

ಕೊಡಗು: ಜ.26 ರಿಂದ 28ರವರೆಗೆ ಫಲಪುಷ್ಪ ಪ್ರದರ್ಶನ

ಸಮಗ್ರ ನ್ಯೂಸ್:ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜ. 26 ರಿಂದ 28ರವರೆಗೆ ನಗರದ ರಾಜಸೀಟ್ ಉದ್ಯಾನವನ ಹಾಗೂ ಗಾಂಧಿ ಮೈದಾನದಲ್ಲಿ ‘ಫಲಪುಷ್ಪ ಪ್ರದರ್ಶನ’ ನಡೆಯಲಿದೆ. ಫಲಪುಷ್ಪ ಪ್ರದರ್ಶನದ ಉದ್ಘಾಟನೆಯು ಜ. 26ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ||

ಕೊಡಗು: ಜ.26 ರಿಂದ 28ರವರೆಗೆ ಫಲಪುಷ್ಪ ಪ್ರದರ್ಶನ Read More »

ಆನೇಕಲ್ ನಲ್ಲಿ ಹೆಚ್ಚಾಯ್ತು ಸರಗಳ್ಳರ ಹಾವಳಿ… ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಮಗ್ರ ನ್ಯೂಸ್: ಆನೇಕಲ್​ನಲ್ಲಿ ಕಳೆದೊಂದು ತಿಂಗಳಿನಿಂದ ಸರಗಳ್ಳರ ಹಾವಳಿ ಮಿತಿಮೀರಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಸಿಕ್ಕ ಸಿಕ್ಕಲ್ಲಿ ಸರಗಳ್ಳತನ ನಡೆಯುತ್ತಿದೆ. ಅತ್ತಿಬೆಲೆ, ಸೂರ್ಯನಗರ, ಜಿಗಣಿ, ಆನೇಕಲ್ ನಲ್ಲಿ ಸರಣಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಸರಣಿ ಚೈನ್ ಸ್ನ್ಯಾಚಿಂಗ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಆನೇಕಲ್ ನಲ್ಲಿ ಪಲ್ಸರ್ ಎನ್ ಎಸ್ ಬೈಕ್​ನಲ್ಲಿ ಬರುವ ಖದೀಮರು ಮಹಿಳೆಯರ ಬಳಿ ಚಿನ್ನದ ಸರ ದೋಚಿ ಪರಾರಿಯಾಗುತ್ತಿದ್ದಾರೆ. ರಾಜಾರೋಷವಾಗಿ ಕತ್ತಿಗೆ ಕೈ ಹಾಕಿ ಸರ ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಜನರು

ಆನೇಕಲ್ ನಲ್ಲಿ ಹೆಚ್ಚಾಯ್ತು ಸರಗಳ್ಳರ ಹಾವಳಿ… ಸಿಸಿಟಿವಿಯಲ್ಲಿ ದೃಶ್ಯ ಸೆರೆ Read More »

ಅರ್ಚಕರ ವೇತನ ವಾಪಸ್ಸು ಕೇಳಿದ ಸರ್ಕಾರ.‌‌‌…ಹಿರೇಮಗಳೂರು ಕಣ್ಣಣ್ ಅವರಿಗೆ ನೋಟಿಸ್

ಸಮಗ್ರ ನ್ಯೂಸ್: ಮುಜರಾಯಿ ಇಲಾಖೆಯಡಿ ಬರುವ ದೇವಾಲಯದ ಆದಾಯಕ್ಕಿಂತ ಹೆಚ್ಚು ಸಂಬಳ ನೀಡಲಾಗಿದೆ ಎಂಬ ಆರೋಪದಡಿ ಹಿರಿಯ ಅರ್ಚಕ, ಸಾಹಿತಿ ಹಿರೇಮಗಳೂರು ಕಣ್ಣಣ್ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಹಿರೇಮಗಳೂರು ಕಣ್ಣನ್ ಅವರು ಹಿರೇಮಗಳೂರು ಗ್ರಾಮದಲ್ಲಿರುವ ಕೊಂದಡ ರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾಗಿದ್ದಾರೆ. ಕಣ್ಣನ್ ಅವರು ಅರ್ಚಕರಾಗಿರುವ ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ

ಅರ್ಚಕರ ವೇತನ ವಾಪಸ್ಸು ಕೇಳಿದ ಸರ್ಕಾರ.‌‌‌…ಹಿರೇಮಗಳೂರು ಕಣ್ಣಣ್ ಅವರಿಗೆ ನೋಟಿಸ್ Read More »

ಡಿಪ್ಲೊಮಾ, ಪಿಯು ಪಾಸ್ ಆಗಿದ್ಯಾ? ಈ ಜಾಬ್ ಗೆ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 32 ಪ್ರಾಜೆಕ್ಟ್​ ಟೆಕ್ನಿಕಲ್ ಸಪೋರ್ಟ್​ II ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 24, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ವಿದ್ಯಾರ್ಹತೆ:ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ಯೂಬರ್‌ಕ್ಯುಲೋಸಿಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ, ರೇಡಿಯಾಲಜಿ/ ರೇಡಿಯೋಗ್ರಫಿ/

ಡಿಪ್ಲೊಮಾ, ಪಿಯು ಪಾಸ್ ಆಗಿದ್ಯಾ? ಈ ಜಾಬ್ ಗೆ ಅಪ್ಲೈ ಮಾಡಿ Read More »

ಕಾಂಗ್ರೇಸನಿಂದ ಹಿಂದೂಗಳ ಮೇಲೆ ದಾಳಿ; ನಯನ ತಳವಾರ

ಸಮಗ್ರ ನ್ಯೂಸ್: ಕನ್ನಡದ ಪುಜಾರಿ, ಕಣ್ಮಣಿ, ದೇಶ ಕಂಡ ಧೀಮಂತ ಚಿಂತಕ ಹಿರೇಮಗಳೂರು ಕಣ್ಣನ್ ಸೇರಿದಂತೆ ಅರ್ಚಕರಿಗೆ ಸರ್ಕಾರ ಕೊಟ್ಟ ಸಂಬಳವನ್ನು ವಾಪಸ್ ನೀಡಿ ಎಂದು ನೋಟಿಸ್ ನೀಡಿರುವುದು ಹಿಂದೂ ಶ್ರದ್ಧಾ ಕೇಂದ್ರ ದೇವಸ್ಥಾನಗಳನ್ನು ಮುಚ್ಚುವ ಕಾಂಗ್ರೇಸ್ ಸರ್ಕಾರದ ಹುನ್ನಾರ ಎಂದು ಬಿಜೆಪಿ ವಕ್ತಾರ ನಯನ ತಳವಾರ ಅರೋಸಿದ್ದಾರೆ. ಶ್ರೀರಾಮ ದೇವಸ್ಥಾನ ನಿರ್ಮಾಣ ವಿರೋದಿಸಿ ಪ್ರಾಣ ಪ್ರತಿಷ್ಠಾಪನೆ ಒಂದು ದಿನದ ರಜೆಯನ್ನು ನೀಡದೆ ಮಕ್ಕಳು, ಪೋಷಕರು ಮತ್ತು ಹಿಂದೂಗಳಿಂದ ಶಾಪ ಹಾಕಿಸಿಕೊಳ್ಳುತ್ತಿರುವ ಸಮಯದಲ್ಲೇ ಕನ್ನಡದಲ್ಲೇ ಮಂತ್ರ ಉಚ್ಚಾರಗಳನ್ನು

ಕಾಂಗ್ರೇಸನಿಂದ ಹಿಂದೂಗಳ ಮೇಲೆ ದಾಳಿ; ನಯನ ತಳವಾರ Read More »

ಜ.25ರಂದು ಕೊಡಗಿಗೆ ಸಿಎಂ ಭೇಟಿ| ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ಪೊಲೀಸ್ ವರಿಷ್ಟ ಅಧಿಕಾರಗಳ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಭೂಮಿ ಪೂಜೆಯನ್ನು ನೆರವೇರಿಸಲು ಜ. 25ರಂದು ರಾಜ್ಯದ ಮುಖ್ಯಮಂತ್ರಿಗಳು ಕೊಡಗಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ವಿರಾಜಪೇಟೆ ಹಾಗೂ ಮಡಿಕೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ವಿರಾಜಪೇಟೆಯ ಸೆಂಟೆನ್ಸ್ ಮೈದಾನದಲ್ಲಿ ವಿರಾಜ್ ಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ನಡೆಯಲಿದ್ದು, ನಂತರ ಮಡಿಕೇರಿಯಲ್ಲಿ ಆಯೋಜಿಸಲಾಗಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ

ಜ.25ರಂದು ಕೊಡಗಿಗೆ ಸಿಎಂ ಭೇಟಿ| ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ Read More »

ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕೆ ಆಹ್ವಾನ! ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ರೈಲ್ವೆ ನೇಮಕಾತಿ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5696 ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 19, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ರೈಲ್ವೆ ಇಲಾಖೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಬೆಂಗಳೂರಿನಲ್ಲಿ 473 ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ಅರ್ಹತೆ:ರೈಲ್ವೆ ನೇಮಕಾತಿ ಮಂಡಳಿ ನೇಮಕಾತಿ

ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕೆ ಆಹ್ವಾನ! ಬೇಗ ಅರ್ಜಿ ಸಲ್ಲಿಸಿ Read More »

ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಅತಿಥಿ ಶಿಕ್ಷಕಿ ಶವ ಪತ್ತೆ

ಸಮಗ್ರ ನ್ಯೂಸ್: ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಅತಿಥಿ ಶಿಕ್ಷಕಿ ಶವ ಪತ್ತೆಯಾಗಿದೆ. ಜನವರಿ 20 ಕಾಣೆಯಾಗಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ಮಾಣಿಕ್ಯಹಳ್ಳಿಯ ಶಿಕ್ಷಕಿಯೊಬ್ಬರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ. 28-ವರ್ಷ ವಯಸ್ಸಿನ ದೀಪಿಕಾ ಅವರ ಮೃತ ದೇಹ ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ಬೆಟ್ಟದ ಬಳಿ ಹೂತಿಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ವಿವಾಹಿತೆಯಾಗಿದ್ದ ದೀಪಿಕಾಗೆ 8-ವರ್ಷ ವಯಸ್ಸಿನ ಮಗ ಇದ್ದಾನೆ. ಕುಟುಂಬದ ಮೂಲಗಳ ಪ್ರಕಾರ ಮೃತ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಶನಿವಾರದಂದು ಶಾಲೆಗೆ ಹೋಗಿದ್ದ

ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಅತಿಥಿ ಶಿಕ್ಷಕಿ ಶವ ಪತ್ತೆ Read More »