Editor

ರಷ್ಯಾ ಸೇನಾ ವಿಮಾನ ಪತನ| ಸೆರೆಹಿಡಿದ ಉಕ್ರೇನ್ ಸೇವಾ ಸದಸ್ಯರು ಸೇರಿ ಎಲ್ಲರೂ ದುರ್ಮರಣ

ಸಮಗ್ರ ನ್ಯೂಸ್: ಸೆರೆಹಿಡಿದ 65 ಉಕ್ರೇನ್ ಸೇವಾ ಸದಸ್ಯರು, ಆರು ಸಿಬ್ಬಂದಿ ಮತ್ತು ಪಿಒಡಬ್ಲ್ಯೂಗಳೊಂದಿಗೆ ಮೂವರು ಜನರನ್ನ ಹೊತ್ತ ಐಎಲ್ -76 ಸರಕು ವಿಮಾನವು ಸ್ಥಳೀಯ ಸಮಯ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪೂರ್ವ ಯೋಜಿತ ಹಾರಾಟದ ಸಮಯದಲ್ಲಿ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ವಿನಿಮಯಕ್ಕಾಗಿ ಕೈದಿಗಳನ್ನು ಬೆಲ್ಗೊರೊಡ್ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು ಎಂದು ಸಚಿವಾಲಯ ತಿಳಿಸಿದೆ. ಉಕ್ರೇನ್ ಪಡೆಗಳು ಉಡಾಯಿಸಿದ ಕ್ಷಿಪಣಿಗಳಿಂದ ವಿಮಾನವನ್ನ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ಇಬ್ಬರು ಹಿರಿಯ ಸಂಸದರು ಪುರಾವೆಗಳನ್ನ ಒದಗಿಸದೆ

ರಷ್ಯಾ ಸೇನಾ ವಿಮಾನ ಪತನ| ಸೆರೆಹಿಡಿದ ಉಕ್ರೇನ್ ಸೇವಾ ಸದಸ್ಯರು ಸೇರಿ ಎಲ್ಲರೂ ದುರ್ಮರಣ Read More »

ಫೆ.8 ರಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ

ಸಮಗ್ರ ನ್ಯೂಸ್: ಫೆ.08 ರಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಿಎಂ ಅವರು ‘ವ್ಯವಸ್ಥಿತ, ಶಿಸ್ತುಬದ್ದ, ಪರಿಣಾಮಕಾರಿ ಜನಸ್ಪಂದನೆಗೆ ಸಕಲ ತಯಾರಿಯ ಜೊತೆಗೆ ಸ್ಥಳದಲ್ಲೇ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಗಮನ ಹರಿಸಿದ್ದಾರೆ. ಇನ್ನೂ ಮೆಜೆಸ್ಟಿಕ್‌ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಕ್ಕೆ ಉಚಿತ ಬಸ್‌ ವ್ಯವಸ್ಥೆ ಮಾಡಲು ಸೂಚಿಸಿದ್ದು, ವಿವಿಧ ಇಲಾಖೆಗಳ ಅರ್ಜಿ ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರುಗಳನ್ನು ಸ್ಥಾಪನೆ ಮಾಡಲಾಗುವುದು. ಜೊತೆಗೆ

ಫೆ.8 ರಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ Read More »

ಮಗುವಿಗೆ ವಿಷವಿಟ್ಟು ತಾಯಿಯು ಆತ್ಮಹತ್ಯೆ| ಚಿಕಿತ್ಸೆ ಫಲಕಾರಿ ಆಗದೇ 3 ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಮಗುವಿನ ಜೊತೆ ವಿಷ ಕುಡಿದು ತಾಯಿಯ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರ ಗ್ರಾಮದಲ್ಲಿ ನಡೆದಿದೆ. 3 ವರ್ಷದ ಮಗು ದೀಕ್ಷಿತ್ ಗೌಡ ಸಾವನ್ನಪ್ಪಿದರೆ, ಅಸ್ವಸ್ಥ ತಾಯಿ ಪೂರ್ಣಿಮಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಲಕ್ಷ್ಮಣ ರೇಖೆ ಎಂಬ ಹೆಸರಿನ ಜಿರಳೆಗಿಡುವ ವಿಷ ಇದಾಗಿದ್ದು, ತಾಯಿ ಪೂರ್ಣಿಮಾ ತಾನೂ ಕುಡಿದು, ಮಗುವಿಗೂ ವಿಷವುಣಿಸಿದ್ದಾರೆ. ಸತತ ವಾಂತಿ ಹಾಗೂ ಭೇದಿಯಿಂದ ಮಗು ಕೊನೆಯುಸಿರೆಳೆದಿದೆ. ಇದೀಗ ದಯಾನಂದ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ

ಮಗುವಿಗೆ ವಿಷವಿಟ್ಟು ತಾಯಿಯು ಆತ್ಮಹತ್ಯೆ| ಚಿಕಿತ್ಸೆ ಫಲಕಾರಿ ಆಗದೇ 3 ವರ್ಷದ ಮಗು ಸಾವು Read More »

ಗಣರಾಜ್ಯೋತ್ಸವ ಹಿನ್ನಲೆ| ಮುಜರಾಯಿ ದೇಗುಲಗಳಲ್ಲಿ ದೀಪಾಲಂಕಾರಕ್ಕೆ ಸುತ್ತೋಲೆ

ಸಮಗ್ರ ನ್ಯೂಸ್: 75ನೇ ಗಣರಾಜ್ಯೋತ್ಸವದ ಹಿನ್ನೆಲೆ ಜನವರಿ 25 ಹಾಗೂ 26 ರಂದು ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆಸಂಬಂಧಿಸಿದ ಎಲ್ಲಾ ಸಂಸ್ಥೆಗಳು ಹಾಗೂ ದೇವಾಲಯಗಳಲ್ಲಿ ವಿಶೇಷ ವಿದ್ಯುತ್‌ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಲಾಗಿದೆ. ಜನವರಿ 26 ರಂದು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ತಿಳಿಸಿದೆ. ಕರ್ನಾಟಕ ಸರ್ಕಾರ ಪ್ರತಿ ವರ್ಷ ಗಣರಾಜ್ಯೋತ್ಸವ ವೇಳೆಗೆ ಅನುದಾನ ಬಿಡುಗಡೆ ಮಾಡುತ್ತದೆ. ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ 50 ಲಕ್ಷ

ಗಣರಾಜ್ಯೋತ್ಸವ ಹಿನ್ನಲೆ| ಮುಜರಾಯಿ ದೇಗುಲಗಳಲ್ಲಿ ದೀಪಾಲಂಕಾರಕ್ಕೆ ಸುತ್ತೋಲೆ Read More »

ಸುಳ್ಯ: ಕುಂಕುಂ ವಸ್ತ್ರ ಮಳಿಗೆಯಲ್ಲಿ ಬಂಪ‌ರ್ ಬಹುಮಾನವಾದ ಸ್ಕೂಟಿ ಡ್ರಾ

ಸಮಗ್ರ ನ್ಯೂಸ್: ಸುಳ್ಯದ ಹೆಸರಾಂತ ವಸ್ತ್ರಮಳಿಗೆ ಕುಂ..ಕುಂ.. ಪ್ಯಾಷನ್ ನಲ್ಲಿ ದೀಪಾವಳಿ, ಹೊಸ ವರುಷ ಹಾಗೂ ಸುಳ್ಯ ಜಾತ್ರೋತ್ಸವ ಹಬ್ಬಗಳ ಪ್ರಯುಕ್ತ 151 ದಿನಗಳ ಬಿಗ್ ಸೇಲ್ ನಲ್ಲಿ ಹಲವು ಬಹುಮಾನಗಳನ್ನು ಆಯೋಜಿಸಿದ್ದು ಬಂಪ‌ರ್ ಬಹುಮಾನವಾದ ಸ್ಕೂಟಿಯನ್ನು ಶಿವಲಿಂಗ ಮತ್ತು ದೀಪಾ ಅವರಿಗೆ ದೊರಕಿದೆ. ವಿಜೇತರಿಗೆ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿಗಳು ಬಹುಮಾನ ಹಸ್ತಾಂತರಿಸಿ ಸಂಭ್ರಮಿಸಿದರು.

ಸುಳ್ಯ: ಕುಂಕುಂ ವಸ್ತ್ರ ಮಳಿಗೆಯಲ್ಲಿ ಬಂಪ‌ರ್ ಬಹುಮಾನವಾದ ಸ್ಕೂಟಿ ಡ್ರಾ Read More »

Redmi ಫೋನ್ ಮೇಲೆ ಭಾರೀ ಡಿಸ್ಕೌಂಟ್, 9 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗ್ತಾ ಇದೆ!

Redmi 13C, 6GB RAM, 128GB ಸ್ಟೋರೇಜ್ ರೂಪಾಂತರವು Amazon ನಲ್ಲಿ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಈ ರೂಪಾಂತರದ MRP ಬೆಲೆ ರೂ.13,999 ಆಗಿದ್ದರೆ, ಇದನ್ನು ಅಮೆಜಾನ್‌ನಲ್ಲಿ ರೂ.9,999 ಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಶೇ.29 ರಷ್ಟು ರಿಯಾಯಿತಿಯನ್ನು ಇಲ್ಲಿನ ಗ್ರಾಹಕರಿಗೆ ನೀಡಲಾಗುತ್ತಿದೆ. ಈ ರಿಯಾಯಿತಿಯ ಜೊತೆಗೆ, ಎಲ್ಲಾ ಬ್ಯಾಂಕ್ ಕಾರ್ಡ್ ವಹಿವಾಟಿನ ಮೇಲೆ ರೂ. 1,000 ಫ್ಲಾಟ್ ರಿಯಾಯಿತಿಯನ್ನು ಸಹ ನೀಡಲಾಗುವುದು. ಇದರಿಂದ ಗ್ರಾಹಕರಿಗೆ ರೂ. 8,999 ರ ಪರಿಣಾಮಕಾರಿ ಬೆಲೆಯಲ್ಲಿ ಫೋನ್ ಅನ್ನು ಖರೀದಿಸಬಹುದು.

Redmi ಫೋನ್ ಮೇಲೆ ಭಾರೀ ಡಿಸ್ಕೌಂಟ್, 9 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗ್ತಾ ಇದೆ! Read More »

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಪರದಾಟ

ಸಮಗ್ರ ನ್ಯೂಸ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಯದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಮಂಗಳವಾರ ರಾತ್ರಿ ಅಪಘಾತದಲ್ಲಿ ಗಾಯಗೊಂಡು ಓರ್ವ ವ್ಯಕ್ತಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಗಾಯಾಳು ಬಂದ ಸಮಯದಲ್ಲಿ ಶಿಪ್ಟ್ ಬದಲಾವಣೆಯಾಗಿದ್ದು, ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರಲಿಲ್ಲ. ಗಂಟೆ ಗಟ್ಟಲೆ ಕಾದರು ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಲು ಬರಲಿಲ್ಲ. ಇದರಿಂದ ಗಾಯಳು ನೋವಿನಿಂದ ನರಳುವಂತಾಯಿತು. ಕಡೆಗೆ ಕೆಲ ಸಮಯದ ನಂತರ ಓರ್ವ ವೈದ್ಯ ಬಂದು ಚಿಕಿತ್ಸೆ

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಪರದಾಟ Read More »

ಟ್ಯೂಷನ್ ಮುಗಿಸಿ ಹಿಂತಿರುಗುವಾಗ ಬಾಲಕ ನಾಪತ್ತೆ ಕೇಸ್… ಹೈದರಾಬಾದ್​​ನ ನಾಂಪಲ್ಲಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್​ನನ್ನು ಪೊಲೀಸರು ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಪತ್ತೆ ಹಚ್ಚಿದ್ದಾರೆ. ಜನವರಿ 21ರ ಭಾನುವಾರದಂದು ವೈಟ್‌ಫೀಲ್ಡ್‌ನಲ್ಲಿ ಟ್ಯೂಷನ್ ತರಗತಿ ಮುಗಿಸಿ ಹಿಂತಿರುಗುತ್ತಿದ್ದಾಗ ಪರಿಣವ್ ನಾಪತ್ತೆಯಾಗಿದ್ದ. ತಂದೆ ಟ್ಯೂಷನ್ ತರಗತಿ ನಡೆಯತ್ತಿದ್ದಲ್ಲಿಗೆ ಬಂದಿದ್ದಾಗ ಬಾಲಕ ಅಲ್ಲಿಂದ ತೆರಳಿರುವುದು ಗೊತ್ತಾಗಿತ್ತು. ಅಂದಿನಿಂದ ಆತ ನಾಪತ್ತೆಯಾಗಿದ್ದ. ಮಾರತ್ತಹಳ್ಳಿ, ಯಮಲೂರು ಮತ್ತು ಮೆಜೆಸ್ಟಿಕ್‌ನಲ್ಲಿರುವ ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಾಲಕನ ಚಲನವಲನಗಳು ಪತ್ತೆಯಾಗಿದ್ದವು. ಪರಿಣವ್ ಬಳಿ ಸೀಮಿತ ನಗದು ಇದ್ದದುರಿಂದ

ಟ್ಯೂಷನ್ ಮುಗಿಸಿ ಹಿಂತಿರುಗುವಾಗ ಬಾಲಕ ನಾಪತ್ತೆ ಕೇಸ್… ಹೈದರಾಬಾದ್​​ನ ನಾಂಪಲ್ಲಿಯಲ್ಲಿ ಪತ್ತೆ Read More »

ಇಂದು ಬೆಂಗಳೂರಿಗೆ ಅರುಣ್ ಯೋಗಿರಾಜ್ ಆಗಮನ… ಭವ್ಯ ಸ್ವಾಗತಕ್ಕೆ ತಯಾರಿ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಆಗಿ ಎರಡು ದಿನದ ಈ ಸಂಭ್ರಮದಲ್ಲಿ ಜನರೂ ಅಯೋಧ್ಯೆಯತ್ತ ರಾಮಲಲ್ಲಾನ ನೋಡಲು ಮುಗಿಬಿದ್ದಿದ್ದಾರೆ.ಅದೇ ಬಾಲರಾಮನ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಇಷ್ಟು ದಿನ ಅಯೋಧ್ಯೆಯಲ್ಲಿದ್ದು ಇಂದು ಕರುನಾಡಿಗೆ ವಾಪಸ್ಸಾಗುತ್ತಿದ್ದಾರೆ. ಇಂದು ಬೆಂಗಳೂರಿಗೆ ಅರುಣ್ ಯೋಗಿರಾಜ್ ಆಗಮನವಾಗಲಿದೆ. ಸಂಜೆ 5.30ಕ್ಕೆ ಕೆಂಪೇಗೌಡ ಏರ್‌ಪೋರ್ಟ್ಗೆ ಅರುಣ್ ಆಗಮಿಸಲಿದ್ದು ಭವ್ಯ ಸ್ವಾಗತ ಕೋರಲು ಹಿಂದೂ ಸಮಾಜದ ಮುಖಂಡರು ತಯಾರಾಗಿದ್ದಾರೆ. ಅಯೋಧ್ಯೆಯಲ್ಲಿ ಮಾತನಾಡಿದ ಶಿಲ್ಪಿ ಅರುಣ್ ಯೋಗಿರಾಜ್ ರಾಮಲಲ್ಲಾ ಮೂರ್ತಿ ಕೆತ್ತುವ ಕೆಲಸ ಕೊಟ್ಟಿದ್ದಕ್ಕೆ ಧನ್ಯವಾದ,

ಇಂದು ಬೆಂಗಳೂರಿಗೆ ಅರುಣ್ ಯೋಗಿರಾಜ್ ಆಗಮನ… ಭವ್ಯ ಸ್ವಾಗತಕ್ಕೆ ತಯಾರಿ Read More »

ವಾಟ್ಸ್​​ಆ್ಯಪ್ ಪಿಂಕ್ ನಿಂದ ಎಚ್ಚರಿಕೆ… ವಾಟ್ಸ್​ಆ್ಯಪ್ ಪಿಂಕ್ ಅನ್ನು ಇನ್​ಸ್ಟಾಲ್ ಮಾಡದಂತೆ ಪೊಲೀಸರ ಮನವಿ

ಸಮಗ್ರ ನ್ಯೂಸ್: ಕರ್ನಾಟಕ ಪೊಲೀಸರು ಸೈಬರ್ ವಂಚನೆಯ ಇನ್ನೊಂದು ಮುಖವನ್ನು ಪತ್ತೆಹಚ್ಚಿದ್ದು ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್​​ಆ್ಯಪ್ ಅಥವಾ ವಾಟ್ಸ್​ಆ್ಯಪ್ ಪಿಂಕ್ ಅನ್ನು ಇನ್​ಸ್ಟಾಲ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿರುವ ಕರ್ನಾಟಕ ಪೊಲೀಸ್, ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ

ವಾಟ್ಸ್​​ಆ್ಯಪ್ ಪಿಂಕ್ ನಿಂದ ಎಚ್ಚರಿಕೆ… ವಾಟ್ಸ್​ಆ್ಯಪ್ ಪಿಂಕ್ ಅನ್ನು ಇನ್​ಸ್ಟಾಲ್ ಮಾಡದಂತೆ ಪೊಲೀಸರ ಮನವಿ Read More »