Editor

ವರದಕ್ಷಿಣೆಗಾಗಿ ಮಡದಿಯೊಂದಿಗೆ ಸಿನಿಮಾ ಡೈರೆಕ್ಟರ್ ಕಿರಿಕ್

ಸಮಗ್ರ ನ್ಯೂಸ್: (ಜ.28), ಚಿತ್ರ ನಿರ್ದೇಶಕ ಮಂಜುನಾಥ್‌ ಎಂಬುವರು ತಮ್ಮ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂಬ ಆರೋಪವೊಂದು ಕೇಳಿ ಬಂದಿದೆ. ಸಿನಿಮಾ ಡೈರೆಕ್ಟರ್ ಮಂಜುನಾಥ್‌ ವಿರುದ್ಧ ಪತ್ನಿ ಅಖಿಲಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಂಜುನಾಥ್‌ ಮತ್ತು ಅಖಿಲಾ ದಂಪತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2021ರಲ್ಲಿ ಎರಡೂ ಕುಟುಂಬದವರನ್ನು ಒಪ್ಪಿಸಿ ಮಂಜುನಾಥ್‌ ಮತ್ತು ಅಖಿಲಾ ಮದುವೆಯಾಗಿದ್ದರು. ಮದುವೆ ಸಂದರ್ಭ ಮಂಜುನಾಥ್‌ಗೆ ಸುಮಾರು 1.5kg ಬೆಳ್ಳಿ ಹಾಗು ಚಿನ್ನಾಭರಣ ನೀಡಲಾಗಿತ್ತು. ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ದಂಪತಿಗಳ

ವರದಕ್ಷಿಣೆಗಾಗಿ ಮಡದಿಯೊಂದಿಗೆ ಸಿನಿಮಾ ಡೈರೆಕ್ಟರ್ ಕಿರಿಕ್ Read More »

ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ರೆಕ್ಕೆಯ ಮೇಲೆ ನಡೆದ ಪ್ರಯಾಣಿಕ…!

ಸಮಗ್ರ ನ್ಯೂಸ್: ವಿಮಾನದಲ್ಲಿದ್ದ ಪ್ರತಿಯೊಬ್ಬರ ಯೋಗಕ್ಷೇಮವನ್ನು ಕಾಪಾಡಲು ಅಗತ್ಯವಾದ ಕ್ರಮವೆಂದು ಪ್ರಯಾಣಿಕರು ವ್ಯಕ್ತಿಯ ಕ್ರಮಗಳನ್ನು ಸಮರ್ಥಿಸಿಕೊಂಡರು. ಮೆಕ್ಸಿಕೋ ಸಿಟಿ ಗ್ವಾಟೆಮಾಲಾ ಸಿಟಿಗೆ ಹೊರಟಿದ್ದ ಏರೋಮೆಕ್ಸಿಕೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನವನ್ನು ತೆರೆದು, ವಿಮಾನದಲ್ಲಿದ್ದವರ ಆರೋಗ್ಯ ಮತ್ತು ಸುರಕ್ಷತೆಯನ್ನು ಉಲ್ಲೇಖಿಸಿ ವಿಮಾನದ ರೆಕ್ಕೆಯ ಮೇಲೂ ಕೆಲ ಕಾಲ ಹೆಜ್ಜೆ ಹಾಕಿದರು. ಮೆಕ್ಸಿಕೋ ಸಿಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯು ಪ್ರಯಾಣಿಕರ ಹಕ್ಕುಗಳು ಮತ್ತು ವಿಮಾನಯಾನ ಜವಾಬ್ದಾರಿಗಳ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ವಿಮಾನದ ಸುದೀರ್ಘ ವಿಳಂಬದ

ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದು ರೆಕ್ಕೆಯ ಮೇಲೆ ನಡೆದ ಪ್ರಯಾಣಿಕ…! Read More »

ಉಜಿರೆ: ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ

ಸಮಗ್ರ ನ್ಯೂಸ್: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ತಾಯಿ ಅಮಣಿ ಶೆಟ್ಟಿ ನಿಧನರಾಗಿದ್ದಾರೆ. 85 ವರ್ಷ ಪ್ರಾಯದ ಅಮಣಿ ಶೆಟ್ಟಿಯವರು ವಯೋಸಹಜ ಖಾಯಿಲೆಯಿಂದ ಬಳಲುತಿದ್ದರು. ಮೃತರು ಪುತ್ರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಐವರು ಪುತ್ರರು ಇಬ್ಬರು ಪುತ್ರಿಯವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ತಿಮರೋಡಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಉಜಿರೆ: ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ Read More »

ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ, ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: Commission of Railway Safety ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಕಮಿಷನರ್ ಆಫ್​ ರೈಲ್ವೆ ಸೇಫ್ಟಿ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 29, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಬೇಗ ರೆಸ್ಯೂಮ್ ಕಳುಹಿಸಿ. ರೈಲ್ವೆ ಇಲಾಖೆಯಲ್ಲಿ & ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ವಯೋಮಿತಿ:ಕಮಿಷನ್ ಆಫ್ ರೈಲ್ವೆ ಸೇಫ್ಟಿ ನೇಮಕಾತಿ

ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ, ಬೇಗ ಅಪ್ಲೈ ಮಾಡಿ Read More »

ಬೆಳ್ತಂಗಡಿ; ಸುಡುಮದ್ದು ತಯಾರಿಕೆ ಘಟಕದಲ್ಲಿ ಸ್ಫೋಟ| ಇಬ್ಬರು ಮೃತ್ಯು; ಹಲವು ಮಂದಿಗೆ ಗಾಯ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ‌ಕುಕ್ಕೇಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಡುಮದ್ದು ತಯಾರಿಸುವ ಘಟಕದಲ್ಲಿ ಸ್ಫೋಟಗೊಂಡು ಕನಿಷ್ಠ ಇಬ್ಬರು ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ. ಸ್ಫೋಟದ ತೀವ್ರತೆಗೆ ದೇಹಗಳು ಚಿದ್ರಗೊಂಡಿರುವುದಾಗಿ ತಿಳಿದು ಬಂದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರು ಸಾವನ್ನಪ್ಪಿರುವುದಾಗಿ ಪ್ರಾಥಮಿಕ ಮಾಹಿತಿಗಳು ಲಭ್ಯವಾಗುತ್ತಿದೆ.

ಬೆಳ್ತಂಗಡಿ; ಸುಡುಮದ್ದು ತಯಾರಿಕೆ ಘಟಕದಲ್ಲಿ ಸ್ಫೋಟ| ಇಬ್ಬರು ಮೃತ್ಯು; ಹಲವು ಮಂದಿಗೆ ಗಾಯ Read More »

ಕಸಕಡ್ಡಿಗೆ ಹಾಕಿದ ಬೆಂಕಿಗೆ ಸಿಲುಕಿ ದಂಪತಿ ಸಾವು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ದಂಪತಿ ಸಜೀವ ದಹನವಾದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಅಮ್ಟಾಡಿಯಲ್ಲಿ ಕಸ ಕಡ್ಡಿಗೆ ಹಾಕಿದ ಬೆಂಕಿಗೆ ಸಿಲುಕಿ ವೃದ್ಧ ದಂಪತಿ ಸಾವಿಗೀಡಾಗಿದ್ದಾರೆ. ಗಿಲ್ಬರ್ಟ್ ಕಾರ್ಲೋ(78) ಕ್ರಿಸ್ಟಿನಾ ಕಾರ್ಲೊ (70) ಮೃತ ಪಟ್ಟವರು. ತಮ್ಮ ಮನೆಯ ಪಕ್ಕದ ಕಸಕಡ್ಡಿಗೆ ಬೆಂಕಿ ಹಾಕಿದ ದಂಪತಿ, ಇದು ಮನೆಯ ಪಕ್ಕದ ಕಾಡಿಗೂ ಈ ಬೆಂಕಿ ತಗುಲಿದೆ. ಅದನ್ನು ನಂದಿಸಲು ಮುಂದಾದ ದಂಪತಿ ಬೆಂಕಿಯ ಕೆನ್ನಾಲೆಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ.

ಕಸಕಡ್ಡಿಗೆ ಹಾಕಿದ ಬೆಂಕಿಗೆ ಸಿಲುಕಿ ದಂಪತಿ ಸಾವು Read More »

ಜನವರಿ 29,ಭಾರತೀಯ ವೃತ್ತಪತ್ರಿಕೆ ದಿನ

ಸಮಗ್ರ ನ್ಯೂಸ್: ಕೆಲವರ ದಿನ ಆರಂಭವಾಗುವುದೇ ದಿನ ಪತ್ರಿಕೆಯನ್ನು ಓದುವ ಮೂಲಕ. ಕೈಯಲ್ಲಿ ಒಂದು ಕಪ್ ಕಾಫಿ ಅಥವಾ ಟೀ ಜೊತೆಗೆ ದಿನಪತ್ರಿಕೆಯಿದ್ದರೆ ಸುದ್ದಿಯನ್ನು ಓದುತ್ತಾ ಓದುಗರು ತಮ್ಮ ದಿನವನ್ನು ಆರಂಭಿಸುತ್ತಾರೆ. ರಾಜ್ಯ, ದೇಶ, ವಿದೇಶಗಳಲ್ಲಿ ನಡೆಯುವ ಸುದ್ದಿಗಳನ್ನು ಜನರಿಗೆ ತಲುಪಿಸುವ ದಿನ ಪತ್ರಿಕೆಗಳು ಇವತ್ತಿಗೂ ನಂಬಿಕೆಗೆ ಅರ್ಹವಾಗಿದೆ. ಹೀಗಾಗಿ ಪ್ರತಿ ವರ್ಷ ಜ. 29ರಂದು ಭಾರತೀಯ ವೃತ್ತಪತ್ರಿಕೆ ದಿನವನ್ನು ಆಚರಿಸಲಾಗುತ್ತದೆ. ಡಿಜಿಟಲ್‌ ಯುಗದಲ್ಲಿರುವ ನಾವಿಂದು ಕೈಯಲ್ಲಿರುವ ಮೊಬೈಲ್, ಕಂಪ್ಯೂಟರ್ ಗಳಿಂದ ಸುದ್ದಿಯನ್ನು ಓದಬಹುದು. ಆದರೆ ಕೆಲವರು

ಜನವರಿ 29,ಭಾರತೀಯ ವೃತ್ತಪತ್ರಿಕೆ ದಿನ Read More »

ಮಂಡ್ಯದ ಕೆರಗೋಡಿನಲ್ಲಿ ಉದ್ವಿಗ್ನ ಸ್ಥಿತಿ|ಬ್ಯಾರಿಕೇಡ್ ಕಿತ್ತಾಕಿ ಪ್ರತಿಭಟನಾಕಾರರ ಆಕ್ರೋಶ

ಸಮಗ್ರ ನ್ಯೂಸ್: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿರುವ ಹನುಮ ಧ್ವಜವನ್ನು ತೆರವುಗೊಳಿಸಲು ಬಂದಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು ಆಗಮಿಸಿ ಧ್ವಜವನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, 144 ಸೆಕ್ಷನ್​ ಜಾರಿಯಾಗಿದೆ. ಆದರೂ ಕೂಡ ಪ್ರತಿಭಟನೆ ಮುಂದುವರೆಸಿದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್

ಮಂಡ್ಯದ ಕೆರಗೋಡಿನಲ್ಲಿ ಉದ್ವಿಗ್ನ ಸ್ಥಿತಿ|ಬ್ಯಾರಿಕೇಡ್ ಕಿತ್ತಾಕಿ ಪ್ರತಿಭಟನಾಕಾರರ ಆಕ್ರೋಶ Read More »

ಓಡಿ ಹೋಗಿ ಮದುವೆಯಾಗಿ ಬಂದ ದಂಪತಿಗೆ ವಧುವಿನ ಪೋಷಕರಿಂದ ಜೀವ ಬೆದರಿಕೆ

ಸಮಗ್ರ ನ್ಯೂಸ್: ಪ್ರೀತಿಸಿ ಮದುವೆಯಾಗಿದಕ್ಕೆ ನವ ಜೋಡಿಗಳಿಗೆ ವಧುವಿನ ಪೋಷಕರು ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ಪೋಷಕರು ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನವ ಜೋಡಿ ರಕ್ಷಣೆ ಕೋರಿ ಬಳ್ಳಾರಿ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಗೋನಾಳ ಗ್ರಾಮದ ನಾರಾಯಣ ಮತ್ತು ಸಿರಗುಪ್ಪ ತಾಲೂಕಿನ ಊಳೂರು ಗ್ರಾಮದ ಶಿಲ್ಪಾ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದಾರೆ. ಶಿಲ್ಪಾ ಬಳ್ಳಾರಿಯಲ್ಲಿ ದೊಡ್ಡಮ್ಮನ ಮನೆಯಲ್ಲಿದ್ದು ಹೈಸ್ಕೂಲ್ ಓದುವ ವೇಳೆ ನಾರಾಯಣನನ್ನು ಪ್ರೀತಿ ಮಾಡಲು ಆರಂಭಿಸಿದ್ದಾರೆ. 9ನೇ

ಓಡಿ ಹೋಗಿ ಮದುವೆಯಾಗಿ ಬಂದ ದಂಪತಿಗೆ ವಧುವಿನ ಪೋಷಕರಿಂದ ಜೀವ ಬೆದರಿಕೆ Read More »

ಆಹ್ವಾನವಿಲ್ಲದ ಶುಭ ಸಮಾರಂಭದಲ್ಲಿ ಊಟ ಮಾಡಿದ್ರೆ ಎರಡರಿಂದ ಏಳು ವರ್ಷಗಳವರೆಗೆ ಜೈಲು…!

ಸಮಗ್ರ ನ್ಯೂಸ್: ಮದುವೆ ಸಮಾರಂಭ ಹೆಚ್ಚಾಗುತ್ತಿರುವಂತೆ ಆಹ್ವಾನವಿಲ್ಲದೆ ಮದುವೆಗಳಿಗೆ ಹೋಗಿ ಪುಕ್ಸಟ್ಟೆ ಆಹಾರ ತಿನ್ನೋರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೆ ಆಹ್ವಾನವಿಲ್ಲದ ಮದುವೆಯಲ್ಲಿ ಊಟ ಮಾಡೋದ್ರಿಂದ ಜೈಲು ಶಿಕ್ಷೆಯಾಗುತ್ತಂತೆ ಹೌದಾ? ಇಲ್ಲಿವರೆಗೆ ಮದ್ವೆಗೆ ಸೂಕ್ತ ಮುಹೂರ್ತವಿರಲಿಲ್ಲ. ಈ ಮಾಸದಲ್ಲಿ ಮದುವೆ ಸಮಾರಂಭಗಳು ನಡೆಯುತ್ತಿರಲಿಲ್ಲ. ಇದೀಗ ಶುಭ ಕಾರ್ಯಗಳು ಪ್ರಾರಂಭವಾಗಿವೆ. ಮದುವೆಗೆ ಬಾಕಿ ಇರುವ ತಯಾರಿಗಳೆಲ್ಲವೂ ನಡೆಯುತ್ತಿದೆ. ಗೃಹ ಪ್ರವೇಶದಿಂದ ಹಿಡಿದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಈಗ ಆರಂಭವಾಗಿದೆ. ನೀವು ಮದುವೆ ಅಥವಾ ಇತರ ಶುಭಾ ಸಮಾರಂಭಗಳಿಗೆ

ಆಹ್ವಾನವಿಲ್ಲದ ಶುಭ ಸಮಾರಂಭದಲ್ಲಿ ಊಟ ಮಾಡಿದ್ರೆ ಎರಡರಿಂದ ಏಳು ವರ್ಷಗಳವರೆಗೆ ಜೈಲು…! Read More »