Editor

ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಪ್ರೀತಿ ಮಾಡಿದ ಹುಡುಗಿ ಬಿಟ್ಟು ಹೋಗಿದ್ದಕ್ಕೆ ನೊಂದ ಪ್ರಿಯಕರನೊಬ್ಬ ಚೂಪಾದ ಚಾಕುವಿನಿಂದ ಹೊಟ್ಟೆಗೆ ತಿವಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ನಂದಿನಿ ಲೇಔಟ್​ನಲ್ಲಿ ನಡೆದಿದೆ. ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿ. ಜನನಿ ಮತ್ತು ಚೇತನ್ ಇಬ್ಬರು ಕಾಲೇಜಿನಲ್ಲಿ ಓದುವ ವೇಳೆ ಪರಿಚಯವಾಗಿ ಲವ್ ಆಗಿತ್ತು. ಎರಡು ವರ್ಷದಿಂದ ಚೇತನ್​ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು. ಈ ಹಿನ್ನಲೆ ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ. ಇದಾದ

ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ Read More »

ಉಡುಪಿ: ಬಿಸಿಲ ಬೇಗೆ ತೀವ್ರತೆ, ಸೊರಗಿದ ಸ್ವರ್ಣ ನದಿ

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಉಡುಪಿ ಜಿಲ್ಲೆಯ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಜೀವನದಿ ಸ್ವರ್ಣೆಯೂ ಬಿಸಿಲಿನ ತಾಪಕ್ಕೆ ಬಸವಳಿದಿದ್ದು ನೀರಿನ ಹರಿವು ಕಡಿಮೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಪ್ರಮುಖ ಅಣೆಕಟ್ಟಾಗಿರುವ ಬಜೆ ಡ್ಯಾಂನಲ್ಲಿ ನೀರಿನ ಸಂಗ್ರಹಣಾ ಮಟ್ಟವೂ ತಗ್ಗುತ್ತಿದೆ. ಬಿಸಿಲ ಬೇಗೆಯು ತೀವ್ರವಾಗಿದ್ದು, ನಗರಸಭೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರ್ಚ್ ಆರಂಭದಲ್ಲಿಯೇ ನೀರಿನ ಬೇಡಿಕೆ ಹೆಚ್ಚಿರುವುದು ನಗರಸಭೆಯ ಗೊಂದಲಕ್ಕೆ ಕಾರಣವಾಗಿದೆ. ಉಡುಪಿ

ಉಡುಪಿ: ಬಿಸಿಲ ಬೇಗೆ ತೀವ್ರತೆ, ಸೊರಗಿದ ಸ್ವರ್ಣ ನದಿ Read More »

ಆಲಿ ವಿರುದ್ಧ ಮಾಡಿರುವ ಆರೋಪ ಸುಳ್ಳಾದರೆ ಕಾಂಗ್ರಸ್ ಪಕ್ಷದಿಂದ ನಿವೃತ್ತಿ: ಇಸಾಕ್ ಸಾಲ್ಮರ

ಸಮಗ್ರ ನ್ಯೂಸ್: ಬಡ ಜನರಿಗೆ ನೀಡಲಾಗುವ 5 ಮನೆ ನಿವೇಶನಗಳನ್ನು ಮಹಮ್ಮದ್ ಆಲಿಯವರು ದುರುಪಯೋಗ ಮಾಡಿದ್ದಾರೆಂದು ಆರೋಪಿಸಿ ಸಂಬAಧಿಸಿ ಇಲಾಖೆಗೆ ನೀಡಿದ ದೂರು ಮತ್ತು ಕೆಮ್ಮಿಂಜೆ ಗ್ರಾಮದ ಎರಡು ಹಕ್ಕುಪತ್ರದಲ್ಲಿ ಪುರಸಭೆಯಿಂದ ಪರವಾನಿಗೆ ಪಡೆಯದೇ ಪೌಂಢೇಶನ್ ಹಾಕುವ ಕೆಲಸ ಮಾಡಿರುವುದು ಸುಳ್ಳಾದರೆ ನಾನು ಕಾಂಗ್ರಸ್ ಪಕ್ಷದಿಂದ ಸಾಮಾಜಿಕ ಕ್ಷೇತ್ರದಿಂದ ನಿವೃತ್ತಿ ಹೊಂದಲಿದ್ದೇನೆ. ಈ ಕುರಿತು ನಾನು ನಂಬುವ ಮತ್ತು ಅವರು ನಂಬುವ ಸ್ಥಳಕ್ಕೆ ಬಂದು ಪ್ರಮಾಣ ಮಾಡಲು ಸಿದ್ಧ ಎಂದು ಇಸಾಕ್ ಸಾಲ್ಮರ ಅವರು ಪತ್ರಿಕಾಗೋಷ್ಟಿಯಲ್ಲಿ ಸವಾಲು

ಆಲಿ ವಿರುದ್ಧ ಮಾಡಿರುವ ಆರೋಪ ಸುಳ್ಳಾದರೆ ಕಾಂಗ್ರಸ್ ಪಕ್ಷದಿಂದ ನಿವೃತ್ತಿ: ಇಸಾಕ್ ಸಾಲ್ಮರ Read More »

ಶಿವರಾತ್ರಿಯಂದೇ ಧರ್ಮಸ್ಥಳದ ಆನೆ ಲತಾ ಮೃತ್ಯು

ಸಮಗ್ರ ನ್ಯೂಸ್: ಶಿವರಾತ್ರಿ ದಿನದಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಮೃತಪಟ್ಟಿರುವ ಘಟನೆ ನಡೆದಿದೆ. ಆನೆ ಲತಾಗೆ 60 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನದ ವೇಳೆ ಲತಾ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು. ಲತಾ ಸುಮಾರು 50 ವರ್ಷಗಳಿಂದ ಧರ್ಮಸ್ಥಳ ಜಾತ್ರಾಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಭಕ್ತರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ಧರ್ಮಸ್ಥಳದಲ್ಲಿ ಪ್ರಸ್ತುತ ಲತಾ, ಲಕ್ಷ್ಮೀ ಹಾಗೂ ಶಿವಾನಿ ಎಂಬ ಹೆಸರಿನ ಆನೆಗಳಿದ್ದು, ಲತಾ

ಶಿವರಾತ್ರಿಯಂದೇ ಧರ್ಮಸ್ಥಳದ ಆನೆ ಲತಾ ಮೃತ್ಯು Read More »

ಗ್ಯಾರಂಟಿ ಯೋಜನೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ; ಪ್ರತಾಪ್‌ಸಿಂಹ ನಾಯಕ್

ಸಮಗ್ರ ನ್ಯೂಸ್: ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ರಹಿತ ದಿವಾಳಿಗೆ ತಲುಪಿದೆ. ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿರುವ ಪ್ರಮುಖ ಕಾಮಗಾರಿಗಳೆಲ್ಲ ಕೇಂದ್ರ ನೆರವಿನಿಂದ ನಡೆಯುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ರಾಜ್ಯ ಬಜೆಟ್ ಗ್ಯಾರಂಟಿ ಯೋಜನೆಗಳ ಸುತ್ತ ಗಿರಕಿ ಹೊಡೆದಿದೆ. ಆದರೆ ಸಂಪನ್ಮೂಲ ಕ್ರೋಢೀಕರಿಸಲು ನಿರ್ದಿಷ್ಟ ಯೋಜನೆ ಹಾಕಿಕೊಂಡಿಲ್ಲ. ಇದರಿಂದಾಗಿ ಅಭಿವೃದ್ಧಿಗೆ ಅನುದಾನ ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ.

ಗ್ಯಾರಂಟಿ ಯೋಜನೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ; ಪ್ರತಾಪ್‌ಸಿಂಹ ನಾಯಕ್ Read More »

ಸಂಕರ್ಷಣ ಶಾಲಗ್ರಾಮವು ಅಯೋಧ್ಯೆಯಿಂದ ಮಲ್ಪೆಯ ವಡಭಾಂಡೇಶ್ವರಕ್ಕೆ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠೆಯಾಗಿ ಕೆಲವೇ ದಿನಗಳಲ್ಲಿ ಉಡುಪಿಯ ಮಲ್ಪೆ ವಡಭಾಂಡೇಶ್ವರದ ಇತಿಹಾಸ ಪ್ರಸಿದ್ಧ ಬಲರಾಮನ ಸನ್ನಿಧಿಯೂ ನವೀಕರಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ಸನ್ನಿಧಿಗಳ ಬಾಂಧವ್ಯದ ದ್ಯೋತಕವಾಗಿ ಶ್ರೀ ಪೇಜಾವರ ಶ್ರೀಗಳು ಶುಕ್ರವಾರದಂದು ಅಯೋಧ್ಯೆಯ ರಾಮನ ಪಾದದಲ್ಲಿ ಸಂಕರ್ಷಣ ಶಾಲಗ್ರಾಮವೊಂದನ್ನಿಟ್ಟು ಪವಿತ್ರ ಕಲಶೋದಕದಿಂದ ಅಭಿಷೇಕ ಸಹಿತ ಪೂಜೆ ಮಾಡಿ ವಡಭಾಂಡೇಶ್ವರದ ಬಲರಾಮನ ದಿವ್ಯ ಸನ್ನಿಧಿಗೆ ಕಳುಹಿಸಿಕೊಟ್ಟರು.

ಸಂಕರ್ಷಣ ಶಾಲಗ್ರಾಮವು ಅಯೋಧ್ಯೆಯಿಂದ ಮಲ್ಪೆಯ ವಡಭಾಂಡೇಶ್ವರಕ್ಕೆ Read More »

ಉಡುಪಿ: ಭಕ್ತರನ್ನು ಸೆಳೆಯುತ್ತಿದೆ ಶಿವನ ಮರಳುಶಿಲ್ಪ

ಸಮಗ್ರ ನ್ಯೂಸ್: ಮಹಾ ಶಿವರಾತ್ರಿಯ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮುರ್ಡೇಶ್ವರ ಸನ್ನಿದಾನದಲ್ಲಿ ವಿಶೇಷ ಸ್ಯಾಂಡ್ ಆರ್ಟ್ ರಚಿಸಲಾಗಿದೆ. ಶಿವರಾತ್ರಿಯ ಪ್ರಯುಕ್ತ ನಡೆಯುತ್ತಿರುವ ವಿಶೇಷ ಪ್ರದರ್ಶನ ಪ್ರದರ್ಶನ ದಲ್ಲಿ “ಓಂ ನಮಃ ಶಿವಾಯ” ಎಂಬ ಮಂತ್ರ ಧೈಯದೊಂದಿಗೆ ಕಲಾಕೃತಿಯೊಂದನ್ನು ರಚಿಸಲಾಗಿದ್ದು, ಉಡುಪಿಯ ‘ಸ್ಯಾಂಡ್ ಥೀಮ್’ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್. ಅವರಿಂದ ರಚಿತಗೊಂಡ ಮರಳು ಶಿಲ್ಪಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಉಡುಪಿ: ಭಕ್ತರನ್ನು ಸೆಳೆಯುತ್ತಿದೆ ಶಿವನ ಮರಳುಶಿಲ್ಪ Read More »

ಉಪ್ಪಿನಂಗಡಿ: ಶಾಲೆಗೆ ನುಗ್ಗಿದ ಕಳ್ಳರು| 1500 ರೂ.ಯೊಂದಿಗೆ ಪರಾರಿ

ಸಮಗ್ರ ನ್ಯೂಸ್: ಶಾಲೆಯ ಬೀಗ ಒಡೆದು ಕಳ್ಳರು ನುಗ್ಗಿದ ಘಟನೆ ನಿನ್ನೆ ರಾತ್ರಿ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲೆಯ ಕಪಾಟಿನಲ್ಲಿದ್ದ 1500 ರೂಪಾಯಿಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಇಂದು ಶಾಲೆಗೆ ಬಂದ ಮುಖ್ಯೋಪಾಧ್ಯಾಯಿನಿ ಶಾಲೆಯ ಬೀಗ ಒಡೆದಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಸ್ಥಳೀಯ ಪುಡಿ ಕಳ್ಳರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ

ಉಪ್ಪಿನಂಗಡಿ: ಶಾಲೆಗೆ ನುಗ್ಗಿದ ಕಳ್ಳರು| 1500 ರೂ.ಯೊಂದಿಗೆ ಪರಾರಿ Read More »

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಪೊಲೀಸರ ವಶ

ಸಮಗ್ರ ನ್ಯೂಸ್ : ಜಮೀನಿನ ನಕ್ಷೆ ನೀಡಲು ಸರ್ವೆಯರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆರೋಪಿ ಸರ್ವೆಯರ್ ಶೀತಲ್‌ರಾಜ್ (38) ಎಂದು ಗುರುತಿಸಲಾಗಿದೆ. ನೀರುಮಾರ್ಗದ ವ್ಯಕ್ತಿಯೊಬ್ಬರು ಸಂಬಂಧಿ ಲಿಲ್ಲಿ ಪೀಟರ್ ವಾಸ್ ಇವರ ಪರವಾಗಿ ಸ್ಟೆಲ್ಲಾ ಜಾನೆಟ್ ವಾಸ್ ಇವರ ಹೆಸರಿಗೆ ತತ್ಕಾಲ್ ಪೋಡಿ ಮಾಡಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಪಹಣಿ ವಿಭಾಗದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿದ್ದು, ಈ ಸಮಯ ಸರಕಾರಿ ಶುಲ್ಕ 1500

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಪೊಲೀಸರ ವಶ Read More »

ಉಡುಪಿ: ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್| ಯುವಕ ಮೃತ್ಯು

ಸಮಗ್ರ ನ್ಯೂಸ್: ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಸವಾರ ಸಾವನ್ನಪ್ಪಿದ ಘಟನೆ ಉಡುಪಿಯ ನಿಟ್ಟೂರು ಬಳಿ ನಿನ್ನೆ ತಡರಾತ್ರಿ ನಡೆದಿದೆ. ಭೀಕರ ಅಪಘಾತದಲ್ಲಿ 21 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮೃತನನ್ನು ಸ್ವಸ್ತಿಕ್ ಎಂದು ಗುರುತಿಸಲಾಗಿದ್ದು, ಇಲ್ಲಿನ ನಿಟ್ಟೂರಿನ ಕಾಂಚನಾ ಹುಂಡೈ ಕಾರ್ ಶೋ ರೂಂ ಬಳಿ ಅಪಘಾತ ಸಂಭವಿಸಿದೆ. ಮಾರ್ಚ್ 08 ರ ನಸುಕಿನ ವೇಳೆ ಸ್ವಸ್ತಿಕ್ ತನ್ನ ಮೋಟಾರು ಬೈಕನ್ನು ಚಲಾಯಿಸಿಕೊಂಡು ಉಡುಪಿ ಕಡೆಗೆ ಬರುವ ಸಂಧರ್ಭದಲ್ಲಿ, ನಿಟ್ಟೂರಿನ ಹುಂಡೈ ಶೋರೂಮ್ ಬಳಿ

ಉಡುಪಿ: ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್| ಯುವಕ ಮೃತ್ಯು Read More »