ಶಿವರಾತ್ರಿಯಂದೇ ಧರ್ಮಸ್ಥಳದ ಆನೆ ಲತಾ ಮೃತ್ಯು

ಸಮಗ್ರ ನ್ಯೂಸ್: ಶಿವರಾತ್ರಿ ದಿನದಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಲತಾ ಹೆಸರಿನ ಆನೆ ಮೃತಪಟ್ಟಿರುವ ಘಟನೆ ನಡೆದಿದೆ. ಆನೆ ಲತಾಗೆ 60 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನದ ವೇಳೆ ಲತಾ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಶ್ರೀಕ್ಷೇತ್ರ ಧರ್ಮಸ್ಥಳದ ಸೇವೆಯಲ್ಲಿ ನಿರತವಾಗಿತ್ತು.

. Ad Widget . Ad Widget . Ad Widget .

ಲತಾ ಸುಮಾರು 50 ವರ್ಷಗಳಿಂದ ಧರ್ಮಸ್ಥಳ ಜಾತ್ರಾಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಭಕ್ತರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ಧರ್ಮಸ್ಥಳದಲ್ಲಿ ಪ್ರಸ್ತುತ ಲತಾ, ಲಕ್ಷ್ಮೀ ಹಾಗೂ ಶಿವಾನಿ ಎಂಬ ಹೆಸರಿನ ಆನೆಗಳಿದ್ದು, ಲತಾ ಸಾವಿನಿಂದ ಲಕ್ಷ್ಮೀ ಹಾಗೂ ಶಿವಾನಿ ಆನೆಗಳು ಮಂಕಾಗಿವೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *