Editor

ಸಹಾಯ ಕೇಳಲು ಹೋದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ| ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಎಫ್ಐಆರ್

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಕಳೆದ ಫೆಬ್ರವರಿಯಲ್ಲಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಸದಾಶಿವನಗರ ಠಾಣಾ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಹಾಗೂ 354 (A) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೆಬ್ರವರಿ 2 ರಂದು ಸಹಾಯ ಕೇಳಲು ಹೋಗಿದ್ದಾಗ ತನಗೆ ಲೈಂಗಿಕ ಕಿರುಕುಳ

ಸಹಾಯ ಕೇಳಲು ಹೋದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ| ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಎಫ್ಐಆರ್ Read More »

ಬೆಳ್ಳಾರೆ: ಮಹಮ್ಮದ್ ಇಂಜಿನಿಯರ್ ನಿಧನ|ಸುಳ್ಯ ಎಸ್‌ಡಿಪಿಐ ಸಂತಾಪ

ಸಮಗ್ರ ನ್ಯೂಸ್:ಮಾ 13;ಬೆಳ್ಳಾರೆ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಬೆಳ್ಳಾರೆ ನಿವಾಸಿ ಇಂಜಿನಿಯರ್ ಆರಿಫ್ ರವರ ತಂದೆ ಹಿರಿಯರಾದ ಮಹಮ್ಮದ್ ಇಂಜಿನಿಯರ್ ರವರು ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಹಲವಾರು ದೀನಿ ಸಂಘ ಸಂಸ್ಥೆಗಳಲ್ಲಿ ನೇತೃತ್ವ ವಹಿಸಿದ್ದ ಸಾಮಾಜಿಕ ಹಾಗೂ ಉಲಾಮ ನೇತಾರರು ಕೊಡುಗೈ ದಾನಿಯೂ ಆಗಿದ್ದ ಇವರ ಅಗಲಿಕೆಯು ಸಮುದಾಯಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.ಇವರ ಬಂದು ಬಳಗಕ್ಕೆ

ಬೆಳ್ಳಾರೆ: ಮಹಮ್ಮದ್ ಇಂಜಿನಿಯರ್ ನಿಧನ|ಸುಳ್ಯ ಎಸ್‌ಡಿಪಿಐ ಸಂತಾಪ Read More »

ಪಡುಬಿದ್ರಿ: 30 ವರ್ಷಗಳಿಂದ “ತಲೆಮರೆಸಿಕೊಂಡಿದ್ದ” ಆರೋಪಿ ಸಾವು

ಸಮಗ್ರ ನ್ಯೂಸ್ : ಸರಕಾರಿ ಜಾಗದಿಂದ ಮರ ಕಡಿದು ಲಾರಿಯಲ್ಲಿ ಸಾಗಿಸುತ್ತಿದ್ದಾಗ ನಂದಿಕೂರು ಪೇಟೆಯಲ್ಲಿ 1981ರಲ್ಲಿ ಲಾರಿ ಸಮೇತ ಸಿಕ್ಕಿಬಿದ್ದ ಆರೋಪಿಗಳಲ್ಲಿ ಓರ್ವನಾದ ಮಂಜರಪಲ್ಕೆಯ ಸುಧಾಕರ ಶೆಟ್ಟಿ 1994ರಲ್ಲಿ ಯಾವುದೋ ಕಾಯಿಲೆಯಿಂದ ಸಾವನ್ನಪ್ಪಿರುವುದನ್ನು ಪಡುಬಿದ್ರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಹಳಷ್ಟು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ಇದ್ದ ಕಾರಣದಿಂದ ಸುಧಾಕರ ಶೆಟ್ಟಿ ವಿರುದ್ಧ ವಾರಂಟ್ ಜಾರಿಯಾಗಿತ್ತು. ಪಡುಬಿದ್ರಿ ಎಎಸ್‌ಐ ರಾಜೇಶ್ ಪಿ. ಅವರು ಆರೋಪಿ ಮೃತಪಟ್ಟಿರುವ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಯಿಂದ ದಾಖಲೆಗಳನ್ನು ಪಡೆದು, ಕಾರ್ಕಳ ಪುರಸಭೆಯಿಂದ ಮರಣ

ಪಡುಬಿದ್ರಿ: 30 ವರ್ಷಗಳಿಂದ “ತಲೆಮರೆಸಿಕೊಂಡಿದ್ದ” ಆರೋಪಿ ಸಾವು Read More »

ಸಲಿಂಗ ವಿವಾಹ ನಿರಾಕರಿಸುವುದು ಅಸಂವಿಧಾನಿಕ/ ಜಪಾನ್ ಹೈಕೋರ್ಟ್ ಅಭಿಪ್ರಾಯ

ಸಮಗ್ರ ನ್ಯೂಸ್: ಸರ್ಕಾರ, ಸಲಿಂಗ ವಿವಾಹಕ್ಕೆ ಅವಕಾಶ ನೀಡಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಜಪಾನ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಲಿಂಗ ವಿವಾಹ ನಿರಾಕರಿಸುವುದು ಅಸಂವಿಧಾನಿಕ. ಪ್ರಸ್ತುತ ವಿವಾಹ ಕಾನೂನನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಕಾನೂನನ್ನು ಪರಿಷ್ಕರಿಸದ ಹೊರತು ಎಲ್‍ಜಿಬಿಟಿಕ್ಯು + ದಂಪತಿಗಳು ಅಥವಾ ಇತರ ರೀತಿಯ ವಿವಾಹಗಳಿಗೆ ಅನುಮತಿಸುವ ಹೊಸ ಕಾನೂನನ್ನು ಜಾರಿಗೊಳಿಸದ ಹೊರತು ಸರ್ಕಾರಿ ಕಚೇರಿಗಳು ಸಲಿಂಗ ದಂಪತಿಗಳಿಗೆ ವಿವಾಹ ಮಾನ್ಯತೆ ನಿರಾಕರಿಸುವುದನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದೆ. ಸಲಿಂಗಿ

ಸಲಿಂಗ ವಿವಾಹ ನಿರಾಕರಿಸುವುದು ಅಸಂವಿಧಾನಿಕ/ ಜಪಾನ್ ಹೈಕೋರ್ಟ್ ಅಭಿಪ್ರಾಯ Read More »

ಉಡುಪಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

ಸಮಗ್ರ ನ್ಯೂಸ್ : ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ವಸೂಲು ಮಾಡಿದ ಬಗ್ಗೆ ದೂರು ದಾಖಲಾಗಿದೆ. ಪಡುಅಲೆವೂರಿನ ವೀರೇಶ್ ಅವರಿಗೆ ಆರೋಪಿ ಅಭಿಷೇಕ್ ಎನ್. ಎಂಬಾತ ಬೆಂಗಳೂರಿನಲ್ಲಿ ಪರಿಚಯವಾಗಿದ್ದ. ತಾನು ಸಾರಿಗೆ ಇಲಾಖೆಯಲ್ಲಿ ಬ್ರೇಕ್ ಇನ್‌ಸ್ಪೆಕ್ಟರ್ ಆಗಿರುವುದಾಗಿ ತಿಳಿಸಿದ್ದ. ವೀರೇಶ್ ಮತ್ತು ಆತನ ಸ್ನೇಹಿತ ರವೀಂದ್ರ ಅವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವೀರೇಶ್ ಅವರಿಂದ 18 ಲ.ರೂ. ಹಾಗೂ ರವೀಂದ್ರ ಅವರಿಂದ 10 ಲ.ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ 2021ರಿಂದ 2023ರ ನಡುವೆ ವರ್ಗಾಯಿಸಿಕೊಂಡಿದ್ದ.

ಉಡುಪಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ Read More »

ಪುತ್ತೂರು : ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ

ಸಮಗ್ರ ನ್ಯೂಸ್ : ಇನ್ನೋವಾ ಮತ್ತು ಫೋರ್ಡ್ ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾದ ಘಟನೆ ಪುತ್ತೂರಿನ ಸಂಟ್ಯಾರಿನಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನೋವಾ ಕಾರು ಚಾಲಕ, ಉಪ್ಪಿನಂಗಡಿ ಮೂಲದ ವ್ಯಕ್ತಿ ಸಹಿತ ಹಲವರಿಗೆ ಗಾಯವಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ರಸ್ತೆ ಮಧ್ಯದಲ್ಲಿ ಈ ಅಪಘಾತ ಸಂಭವಿಸಿದ ಕಾರಣ ಕಿಲೋಮೀಟರ್ ಗಟ್ಟಲೆ ರಸ್ತೆ ಬ್ಲಾಕ್ ಆಗಿದ್ದು, ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿ, ಟ್ರಾಫಿಕ್ ಜಾಮ್ ಸಂಭವಿಸಿದೆ.

ಪುತ್ತೂರು : ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ Read More »

ಬೆಳ್ತಂಗಡಿ : ಅಪರಿಚಿತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ ಲಕ್ಷಾಂತರ ರೂ. ವಂಚನೆ

ಸಮಗ್ರ ನ್ಯೂಸ್ : ಎಟಿಎಂ ಕಾರ್ಡ್ ಬಳಸಲು ತಿಳಿಯದೆ ಇದ್ದ ವ್ಯಕ್ತಿಗೆ ಅಪರಿಚಿತ ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಘಟನೆ ಬೆಳ್ತಂಗಡಿ ಕಸಬಾ ಗ್ರಾಮದಲ್ಲಿ ನಡೆದಿದೆ. ಮೆಲಂತಬೆಟ್ಟು ನಿವಾಸಿ ಶರೀಫ್ (53) ಎಂಬವರು ಬೆಳ್ತಂಗಡಿ ಕಸಬಾ ಗ್ರಾಮದ ಎಸ್.ಬಿ.ಐ ಎಟಿಎಂ ಯಂತ್ರದಿAದ ಹಣ ಪಡೆಯಲು ಬಂದಿದ್ದು, ಈ ವೇಳೆ ತನಗೆ ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ, ಅಲ್ಲೇ ಪಕ್ಕದಲ್ಲಿದ್ದ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಎಟಿಎಂ ಕಾರ್ಡ್ ನೀಡಿ ಆತನಿಗೆ ಎ.ಟಿ.ಎಂ ಪಿನ್ ಸಂಖ್ಯೆಯೂ ತಿಳಿಸಿ

ಬೆಳ್ತಂಗಡಿ : ಅಪರಿಚಿತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ ಲಕ್ಷಾಂತರ ರೂ. ವಂಚನೆ Read More »

ಬಿಜೆಪಿ ವಿರುದ್ಧ ಬಂಡಾಯವೆದ್ದು ಥಂಡಾ ಹೊಡೆದ ಪುತ್ತಿಲ ಮರಳಿ ಬಿಜೆಪಿಗೆ ಸೇರ್ಪಡೆ

ಸಮಗ್ರ ನ್ಯೂಸ್: ಬಿಜೆಪಿ ವಿರುದ್ಧ ಬಂಡಾಯ ಸಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಪುತ್ತೂರಿನ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಗುರುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.‌ ಈ ಮೂಲಕ ಮತ್ತೆ ಮರಳಿ ಗೂಡಿಗೆ ವಾಪಾಸ್ಸಾಗಿದ್ದಾರೆ. ಮಾ.14ರ ರಾತ್ರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ವೇಳೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಸುನಿಲ್ ಕುಮಾರ್ ಕಾರ್ಕಳ ಅವರು ಉಪಸ್ಥಿತರಿದ್ದರು. ಪಕ್ಷದ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅರುಣ್ ಕುಮಾರ್ ಪುತ್ತಿಲ

ಬಿಜೆಪಿ ವಿರುದ್ಧ ಬಂಡಾಯವೆದ್ದು ಥಂಡಾ ಹೊಡೆದ ಪುತ್ತಿಲ ಮರಳಿ ಬಿಜೆಪಿಗೆ ಸೇರ್ಪಡೆ Read More »

ವಿಟ್ಲ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

ಸಮಗ್ರ ನ್ಯೂಸ್ : ಕಸಬಾ ಗ್ರಾಮದ ದೇವಸ್ಯ ನಿರ್ಜನ ಪ್ರದೇಶದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ಸುಮಾರು ನಾಲ್ಕೈದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದ್ದು, ಮೃತ ದೇಹದ ಮುಖ ಗುರುತು ಹಿಡಿಯಲಾರದಷ್ಟು ಕೊಳೆತು ಹೋಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಹಾಗೂ ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ ತಂಡ ಆಗಮಿಸಿದೆ.

ವಿಟ್ಲ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ Read More »

ನಾನು ಮಾಜಿಯಾದರು ಕೆಲಸಕ್ಕಾಗಿ ಕರೆ ಮಾಡಿ/ ಕಾರ್ಯಕರ್ತರಿಗೆ ಪ್ರತಾಪ್ ಸಿಂಹ ಸಂದೇಶ

ಸಮಗ್ರ ನ್ಯೂಸ್: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹರಿಗೆ ಈ ಬಾರಿ ಟಿಕೆಟ್ ಕೈತಪ್ಪಿ ಹೋಗಿದ್ದು, ಈ ಬಾರಿ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇದಾದ ಬಳಿಕ ಪ್ರತಾಪ್ ಸಿಂಹ ಕಾರ್ಯಕರ್ತರಿಗೆ, ನಾನು ಮಾಜಿಯಾದರು ಕೆಲಸಕ್ಕಾಗಿ ಕರೆ ಮಾಡಿ ಎಂದು ಸಂದೇಶ ರವಾನಿಸಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನ್ನ ಪ್ರೀತಿಯ ಕಾರ್ಯಕರ್ತರೇ ಮತ್ತು ಕೊಡಗು-ಮೈಸೂರಿನ ಬಂಧುಗಳೇ, ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ ಕರೆ

ನಾನು ಮಾಜಿಯಾದರು ಕೆಲಸಕ್ಕಾಗಿ ಕರೆ ಮಾಡಿ/ ಕಾರ್ಯಕರ್ತರಿಗೆ ಪ್ರತಾಪ್ ಸಿಂಹ ಸಂದೇಶ Read More »