Editor

ತಂದೆಯ ವಿರುದ್ಧವೇ ಕೇಸ್ ದಾಖಲಿಸಿದ ಪುತ್ರ

ಸಮಗ್ರ ನ್ಯೂಸ್ : ತಂದೆಯ ವಿರುದ್ದ ಏಳು ವರ್ಷದ ಬಾಲಕ ಪೊಲೀಸರಿಗೆ ದೂರು ನೀಡಿದ್ದಾನೆ. ತನ್ನ ಮೇಲೆ ತಂದೆ ಹಲ್ಲೆ ಮಾಡಿರುವುದಾಗಿ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನ್ನ ತಂದೆ ಕೈಕಾಲುಗಳಿಗೆ ಹಲವು ಬಾರಿ ಹೊಡೆದಿದ್ದಾನೆ ಎಂದು ಆರೋಪಿಸಿ ಬಾಲಕ ತನ್ನ ತಾಯಿ ಜತೆ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾನೆ. ದ ಜುವೈನಲ್ ಜಸ್ಟೀಸ್ ಕಾಯ್ದೆ ಪ್ರಕಾರ ತಂದೆ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ.

ತಂದೆಯ ವಿರುದ್ಧವೇ ಕೇಸ್ ದಾಖಲಿಸಿದ ಪುತ್ರ Read More »

Health Tips|ಹಸಿರು ಬಟಾಣಿಯಿಂದ ಇಷ್ಟೇಲ್ಲಾ ಲಾಭಗಳು ಇದ್ಯಾ? ಇಲ್ಲಿದೆ ನೋಡಿ ಡೀಟೇಲ್ಸ್

ಹಸಿರು ಬಟಾಣಿಗಳನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ. ಆದರೆ ಇವು ವರ್ಷವಿಡೀ ಹೆಪ್ಪುಗಟ್ಟಿದ ಮತ್ತು ಒಣಗಿದ ರೂಪದಲ್ಲಿಸಿಗುತ್ತದೆ. ಹೀಗಿದ್ದರೂ ಒಣಗಿದ ಬಟಾಣಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.ಹಾಗಾಗಿ ತಾಜಾ ಹಸಿರು ಬಟಾಣಿಗಳನ್ನು ಮಾತ್ರ ತಿನ್ನುವಂತೆ ಸಲಹೆ ನೀಡಲಾಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ತಾಜಾ ಹಸಿರು ಬಟಾಣಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಸಿರು ಬಟಾಣಿ ಅತ್ಯುತ್ತಮ ಪ್ರೋಟೀನ್ ಹೊಂದಿರುತ್ತದೆ. ನಿಯಮಿತವಾಗಿ ಬಟಾಣಿ ಸೇವಿಸುವುದರಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಇದು ಸ್ನಾಯುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು

Health Tips|ಹಸಿರು ಬಟಾಣಿಯಿಂದ ಇಷ್ಟೇಲ್ಲಾ ಲಾಭಗಳು ಇದ್ಯಾ? ಇಲ್ಲಿದೆ ನೋಡಿ ಡೀಟೇಲ್ಸ್ Read More »

ಅಸಿಸ್ಟೆಂಟ್ ಪ್ರೊಫೆಸರ್ ಜಾಬ್ ಖಾಲಿ ಇದೆ, ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಖಾಲಿ ಇದ್ದು, ಆಸಕ್ತರು ಈಗಲೇ ಅಪ್ಲೈ ಮಾಡಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಿ. ವಿದ್ಯಾರ್ಹತೆ:ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಫಾರ್ಮ್ ಪವರ್ & ಮೆಷಿನರಿ/ ಬಯೋ ಎನರ್ಜಿಯಲ್ಲಿ ಸ್ನಾತಕೋತ್ತರ ಪದವಿ, ಎಂ.ಟೆಕ್,

ಅಸಿಸ್ಟೆಂಟ್ ಪ್ರೊಫೆಸರ್ ಜಾಬ್ ಖಾಲಿ ಇದೆ, ಈಗಲೇ ಅಪ್ಲೈ ಮಾಡಿ Read More »

ಇಂದಿನಿಂದ ಪೇಟಿಎಂ ಸೇವೆ ಸಂಪೂರ್ಣ ಬಂದ್| UPI ಸೇವೆಗಳು ಮುಂದುವರಿಕೆ

ಸಮಗ್ರ ನ್ಯೂಸ್: ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾರ್ಚ್ 15 ರಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಮತ್ತು ಫಾಸ್ಟ್ ಟ್ಯಾಗ್ ಸೇರಿದಂತೆ ವಿವಿಧ ವ್ಯಾಲೆಟ್ ಗಳಲ್ಲಿ ಹಣವಿದ್ದರೆ ಅದು ಖಾಲಿಯಾಗುವವರೆಗೆ ಬಳಸಬಹುದು. ಆದರೆ, ಅವುಗಳಿಗೆ ಮತ್ತೆ ರಿಚಾರ್ಜ್ ಮಾಡಲು ಅವಕಾಶ ಇರುವುದಿಲ್ಲ. ಫೆಬ್ರವರಿ 29ರಂದೇ ತನ್ನ ಎಲ್ಲಾ ಸೇವೆ ನಿಲ್ಲಿಸುವಂತೆ ಆರ್‌ಬಿಐ ಆದೇಶ ನೀಡಿ ನಂತರ ಮಾರ್ಚ್ 14ರವರೆಗೂ

ಇಂದಿನಿಂದ ಪೇಟಿಎಂ ಸೇವೆ ಸಂಪೂರ್ಣ ಬಂದ್| UPI ಸೇವೆಗಳು ಮುಂದುವರಿಕೆ Read More »

ಶಾಸಕ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಔರಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಎದೆ ಬಡಿತದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮುಂಬೈನ ಬಾಂದ್ರಾದ ಹೋಲಿ ಫ್ಯಾಮಿಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಎಸ್ ಲೋಖಂಡವಾಲಾ ನೇತೃತ್ವದಲ್ಲಿ ಪ್ರಭು ಚೌಹಾಣ್ ಗೆ ಕಿರು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಪ್ರಭು ಚೌಹಾಣ್ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು

ಶಾಸಕ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು Read More »

ಅಕ್ರಮ ನೀರು ಬಳಕೆ -ಮಂಗಳೂರು ಮೇಯರ್ ಎಚ್ಚರಿಕೆ

ಸಮಗ್ರ ನ್ಯೂಸ್ : ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಪೈಪ್‌ಲೈನ್‌ನಿಂದ ತುಂಬೆ ಮಾರ್ಗವಾಗಿ ಅಕ್ರಮವಾಗಿ ನೀರನ್ನು ತೆಗೆದುಕೊಂಡು ನೀರಾವರಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ವ್ಯಕ್ತಿಗಳ ವಿರುದ್ಧ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಹಲವಾರು ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಎಂಸಿಸಿ ಕುಡಿಯುವ ನೀರು ಪೂರೈಕೆಗೆ ಪಡಿತರವನ್ನು ಆಯ್ಕೆ ಮಾಡುವುದಿಲ್ಲ ಎಂದು ಮೇಯರ್ ಶೆಟ್ಟಿ ಸುದ್ದಿಗಾರರಿಗೆ ಭರವಸೆ ನೀಡಿದರು. ಈ ಬೇಸಿಗೆಯಲ್ಲಿ ನಗರವು ನೀರಿನ ಕೊರತೆಯನ್ನು ಎದುರಿಸುವುದಿಲ್ಲ ಎಂಬ ವಿಶ್ವಾಸ ನಮಗಿದೆ.

ಅಕ್ರಮ ನೀರು ಬಳಕೆ -ಮಂಗಳೂರು ಮೇಯರ್ ಎಚ್ಚರಿಕೆ Read More »

ಬಂಟ್ವಾಳ: ಬೈಕ್-ಸ್ಕೂಟರ್ ಢಿಕ್ಕಿ|ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್ : ಶಂಭೂರು ಶ್ರೀ ಷಣ್ಮುಖ ದೇವಸ್ಥಾನದ ದ್ವಾರದ ಬಳಿಯಲ್ಲಿ ಬೈಕ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದುಕೊಂಡ ಪರಿಣಾಮ ಎರಡೂ ವಾಹನಗಳ ನಾಲ್ವರು ಸವಾರರು ಗಾಯಗೊಂಡಿರುವ ಘಟನೆ ನಡೆದಿದೆ. ಸ್ಕೂಟರ್ ಸವಾರ ಮಂಗಳೂರು ಅಳಪೆ ನಿವಾಸಿ ಉದಯಕುಮಾರ್ ಅವರು ಸಂಬAಧಿ ಸುಂದರ ಬಂಗೇರ ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಅಶ್ವತ್ಥ್ ಅವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಯಲ್ಲಿ ಎರಡು ಬೈಕ್‌ಗಳಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಸುಂದರ ಬಂಗೇರ ಅವರನ್ನು ಒಳರೋಗಿಯಾಗಿ

ಬಂಟ್ವಾಳ: ಬೈಕ್-ಸ್ಕೂಟರ್ ಢಿಕ್ಕಿ|ನಾಲ್ವರಿಗೆ ಗಾಯ Read More »

ಬಂಟ್ವಾಳ: ಕಾರು-ಬೈಕ್ ಢಿಕ್ಕಿ

ಸಮಗ್ರ ನ್ಯೂಸ್ : ಕೊಯಿಲ ಗ್ರಾಮದ ಅಣ್ಣಳಿಕೆಯಲ್ಲಿ ಕಾರು ಹಾಗೂ ಬೈಕ್ ಢಿಕ್ಕಿ ಹೊಡೆದು ಸವಾರ, ಪಿಲಿಮೊಗರು ಗ್ರಾಮ ನಿವಾಸಿ ಸುರೇಶ್ ಅವರು ಗಾಯಗೊಂಡ ಘಟನೆ ಮಾ. 14ರಂದು ಸಂಭವಿಸಿದೆ. ಗಾಯಾಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಸ್ನೇಹಿತ ಪುಷ್ಪೇಂದ್ರ ಸಿಂಗ್ ಅವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಚಾಲಕ ಉಮೇಶ್ ತನ್ನ ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ಕಾರು-ಬೈಕ್ ಢಿಕ್ಕಿ Read More »

ಬಜಪೆ: ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

ಸಮಗ್ರ ನ್ಯೂಸ್ : ಎಲ್ಲಿಂದಲೋ ಕದ್ದು ವಾಹನದಲ್ಲಿ ಮರಳು ಮತ್ತು ಕೆಂಪು ಕಲ್ಲು ಸಾಗಿಸುತ್ತಿದ್ದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ 2014ರ ಜು.12ರಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸುಲ್ತಾಡಿ ಮನೆಯ ನಿತಿನ್ (37) ನನ್ನು ಬಂಧಿಸಲಾಗಿದೆ. ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆತನನ್ನು ಬಜಪೆ ಪೊಲೀಸ್ ನಿರೀಕ್ಷಕರ ನಂದೇಶ್ ಬಿ. ಕುಂಬಾರ್ ನೇತೃತ್ವದ ತಂಡ ಗುರುವಾರ ಕಡಬದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಜಪೆ: ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ Read More »

ಉಡುಪಿ: ರಬ್ಬರ್ ಸ್ಟಾಂಪ್ ಅಂಗಡಿಯ ಮಾಲಕ ಕುಸಿದು ಬಿದ್ದು ಮೃತ್ಯು

ಸಮಗ್ರ ನ್ಯೂಸ್ : ರಬ್ಬರ್ ಸ್ಟಾಂಪ್ ಅಂಗಡಿಯ ಮಾಲಕ, ದೊಡ್ಡಣಗುಡ್ಡೆಯ ಕೇಶವ ಶೇರಿಗಾರ (68) ಅವರು ಕೆಲಸ ನಿರ್ವಹಿಸುತ್ತಿದ್ದಾಗಲೇ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಬಡಗುಪೇಟೆಯಲ್ಲಿ ಸಂಭವಿಸಿದೆ. ಮೃತರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಾದರು. ಮೃತರನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದು, ವಾರಸುದಾರರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಬಹುದು.

ಉಡುಪಿ: ರಬ್ಬರ್ ಸ್ಟಾಂಪ್ ಅಂಗಡಿಯ ಮಾಲಕ ಕುಸಿದು ಬಿದ್ದು ಮೃತ್ಯು Read More »