Editor

ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್/ ಡಿಸ್ನಿ+ಹಾಟ್‍ಸ್ಟಾರ್‍ನಲ್ಲಿ ಐಪಿಎಲ್ ಲಭ್ಯವಿಲ್ಲ

ಇಂಡಿಯನ್ ಪ್ರೀಮಿಯರ್ ಲೀಗ್‍ನ 17 ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೀಗ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನ 2024 ರ ಸೀಸನ್‍ನ ಲೈವ್ ಸ್ಟ್ರೀಮಿಂಗ್ ಡಿಸ್ನಿ+ ಹಾಟ್‍ಸ್ವಾರ್‍ನಲ್ಲಿ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನ 2024 ರ ಸೀಸನ್‍ನ ಲೈವ್ ಸ್ಟ್ರೀಮಿಂಗ್ ಭಾರತದಲ್ಲಿನ ವೀಕ್ಷಕರಿಗೆ ಝೀ ಸಿನಿಮಾ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್‍ನಲ್ಲಿ ಉಚಿತವಾಗಿ ವೀಕ್ಷಿಸಲು ಲಭ್ಯವಿರುತ್ತದೆ. ಡಿಸ್ನಿ+ ಹಾಟ್‍ಸ್ವಾರ್‍ನಲ್ಲಿ ಲಭ್ಯವಿರುವುದಿಲ್ಲ. ಬದಲಿಗೆ ಸ್ಟಾರ್ ಸ್ಪೋಟ್ರ್ಸ್ ನೆಟ್ವರ್ಕ್‍ನಲ್ಲಿ

ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್/ ಡಿಸ್ನಿ+ಹಾಟ್‍ಸ್ಟಾರ್‍ನಲ್ಲಿ ಐಪಿಎಲ್ ಲಭ್ಯವಿಲ್ಲ Read More »

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್| ರಾಜ್ಯದಲ್ಲಿ ಕೋಳಿ ದರದಲ್ಲಿ ಭಾರೀ ಏರಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಬರ, ಬಿರು ಬಿಸಿಲ ಕಾರಣದಿಂದ ಕುಕ್ಕುಟೋದ್ಯಮ ತತ್ತರಿಸಿ ಹೋಗಿದೆ. ಮಳೆ ಇಲ್ಲದ ಪರಿಣಾಮ ಕೋಳಿಯ ಆಹಾರಗಳಿಗೆ ಬಳಸುವ ಸೋಯಾ ಮೊದಲಾದ ಬೆಳೆಗಳ ಪ್ರಮಾಣ ಕಡಿಮೆಯಾಗಿ ಕೋಳಿ ಮಾಂಸದ ದರ ದಿನೇ ದಿನೇ ಏರಿಕೆ ಕಾಣತೊಡಗಿದೆ. ಒಂದು ಕೆಜಿ ಕೋಳಿ ಮಾಂಸದ ದರ ರಾಜ್ಯದ ವಿವಿಧಡೆ 300 ರೂ. ತಲುಪಿದೆ. ರಾಜ್ಯದಲ್ಲಿ ಸುಮಾರು 40 ಸಾವಿರ ಕೋಳಿ ಸಾಕಾಣೆದಾರರಿದ್ದು, ಪ್ರತಿವಾರ 80 ಲಕ್ಷ ಕೋಳಿ ಉತ್ಪಾದನೆ ಮಾಡಲಾಗುತ್ತದೆ. ಸುಮಾರು 1.7 ಕೋಟಿ ಕೆಜಿ ಕೋಳಿ

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್| ರಾಜ್ಯದಲ್ಲಿ ಕೋಳಿ ದರದಲ್ಲಿ ಭಾರೀ ಏರಿಕೆ Read More »

25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ : ಹವಮಾನ ಇಲಾಖೆ ಮುನ್ಸೂಚನೆ

ಸಮಗ್ರ ನ್ಯೂಸ್‌ : ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮಾರ್ಚ್‌ 25ರವರೆಗೆ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. 25 ಜಿಲ್ಲೆ ಗಳಾದ ಬೆಂಗಳೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ,ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ,

25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ : ಹವಮಾನ ಇಲಾಖೆ ಮುನ್ಸೂಚನೆ Read More »

ಮಂಗಳೂರು: ಕೃಷಿಕರ ನೀರಿಗೆ ಕನ್ನ ಹಾಕಿದ ಕಿಡಿಗೇಡಿಗಳು

ಸಮಗ್ರ ನ್ಯೂಸ್‌ : ಕೃಷಿಕರ ನೀರಿಗೆ ಕನ್ನ ಹಾಕಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಾಂತಿಮುಗೇರು ಎಂಬಲ್ಲಿ ನಡೆದಿದೆ. ಶಾಂತಿಮೊಗರಿನಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಕೃಷಿ ತೋಟಕ್ಕೆ ಭರಪೂರ ನೀರು ತುಂಬಿದ್ದ ಕಾರಣ ಸ್ಥಳೀಯ ಅಕ್ರಮ ಮರಳುಗಾರಿಕೆ ನಡೆಸುವ ವ್ಯಕ್ತಿಗಳಿಗೆ ತೊಂದರೆಯಾದ ಹಿನ್ನಲೆಯಲ್ಲಿ ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಅಣೆಕಟ್ಟಿನ ಹಲಗೆಯನ್ನು ಸರಿಸಿ ನೀರು ಖಾಲಿ ಮಾಡಿದ್ದಾರೆ. ಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರು ಶಾಂತಿಮೊಗರು ಹಾಗು ಇತರ ಎಂಟು ಗ್ರಾಮಗಳ ಕೃಷಿ ತೋಟಗಳಿಗೆ ನೀರಿನ ಪೂರೈಕೆಯನ್ನೂ ಮಾಡುತ್ತಿತ್ತು. ಆದರೆ ಮರಳುಗಾರಿಕೆ

ಮಂಗಳೂರು: ಕೃಷಿಕರ ನೀರಿಗೆ ಕನ್ನ ಹಾಕಿದ ಕಿಡಿಗೇಡಿಗಳು Read More »

ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸೊಸೈಟಿಯಲ್ಲಿ ಕಳ್ಳತನ

ಸಮಗ್ರ ನ್ಯೂಸ್‌ : ಪೆರಿಯಡ್ಕದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನುಗ್ಗಿದ ಕಳ್ಳನೋರ್ವ ಹಣಕ್ಕಾಗಿ ತಡಕಾಡಿದ ಘಟನೆ ಮಾ. 20ರಂದು ಬೆಳಕಿಗೆ ಬಂದಿದೆ. ಮಾ. 19ರ ಸಂಜೆ ಸಂಘದ ಕಚೇರಿಯನ್ನು ಬಂದ್‌ ಮಾಡಿ ಸಿಬಂದಿ ತೆರಳಿದ್ದು, ಬೆಳಗ್ಗೆ ಬರುವಾಗ ಕಚೇರಿಯ ಷಟರ್‌ನ ಬೀಗ ಮುರಿದು ಕಳ್ಳನೋರ್ವ ಒಳಗೆ ನುಗ್ಗಿದ್ದಾನೆ. . ಈತ ಹಣಕ್ಕಾಗಿ ಮೇಜಿನ ಡ್ರಾವರ್‌ಗಳನ್ನು ಮುರಿದು ಸುಮಾರು ಒಂದೂವರೆ ಸಾವಿರ ರೂ. ಎಗರಿಸಿ, ಪರಾರಿಯಾಗಿದ್ದಾನೆ. ಸ್ಥಳೀಯ ಮನೆಯೊಂದರಿಂದ ಪಿಕ್ಕಾಸನ್ನು ತಂದು ಷಟರ್‌ನ ಬೀಗ ಮುರಿಯಲು ಬಳಸಿದ್ದ

ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸೊಸೈಟಿಯಲ್ಲಿ ಕಳ್ಳತನ Read More »

ಮುಂಬಯಿಯಲ್ಲಿ ನಡೆದ ಅಪಘಾತ-ಕೋಟದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್:‌ ಮುಂಬಯಿಯಲ್ಲಿ ನಡೆದ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೋಟ ಸಮೀಪ ಅಚ್ಲಾಡಿ ಮಕ್ಕಿಮನೆ ನಿವಾಸಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಅನ್ವಿಶ್‌ (19) ಚಿಕಿತ್ಸೆ ಫಲಿಸದೆ ಮುಂಬಯಿಯ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮೃತಪಟ್ಟ ಘಟನೆ ನಡೆದಿದೆ. ಈತ ಕಾವಡಿ ವರದರಾಜ್‌ ಶೆಟ್ಟಿ ಮತ್ತು ಅಚ್ಲಾಡಿಯ ಲತಾ ಶೆಟ್ಟಿ ಅವರ ಪುತ್ರನಾಗಿದ್ದು ತಂದೆ ರೈಲ್ವೆ ಉದ್ಯೋಗಿಯಾಗಿದ್ದರು.ಅನ್ವಿಶ್‌ ಮುಂಬಯಿಯಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು 15 ದಿನದ ಹಿಂದೆ ಸಂಬಂಧಿಕರ ಮನೆಯಿಂದ ರಾತ್ರಿ ಬೈಕ್‌ನಲ್ಲಿ ಮರಳುತ್ತಿದ್ದಾಗ ಸ್ಕಿಡ್‌ ಆಗಿ ಅಪಘಾತ ಸಂಭವಿಸಿದೆ ಎಂದು

ಮುಂಬಯಿಯಲ್ಲಿ ನಡೆದ ಅಪಘಾತ-ಕೋಟದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು Read More »

ಮಂಗಳೂರು: 3 ಲಕ್ಷ ಮೌಲ್ಯದ 1.65 ಕೆಜಿ ಡ್ರಗ್ ವಶ

ಸಮಗ್ರ ನ್ಯೂಸ್:‌ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20 ರವರೆಗೆ 12,300 ರೂಪಾಯಿ ಮೌಲ್ಯದ 21.34 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. 3,13,500 ರೂ.ಗಳ ಮೌಲ್ಯದ 1.65 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ. 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಜಿಲ್ಲೆಯಲ್ಲಿ ಒಟ್ಟು 8 ಖರ್ಚು ವೆಚ್ಚ ಪರೀವೀಕ್ಷಕರರನ್ನು, 72 ಪ್ಲೈಯಿಂಗ್ ಸ್ವ್ಯಾಡ್ (ಎಫ್.ಎಸ್.ಟಿ), 69 ಎಸ್.ಎಸ್.ಟಿ ತಂಡಗಳು ಮತ್ತು 8 ಅಬಕಾರಿ ತಂಡಗಳನ್ನು

ಮಂಗಳೂರು: 3 ಲಕ್ಷ ಮೌಲ್ಯದ 1.65 ಕೆಜಿ ಡ್ರಗ್ ವಶ Read More »

ಮಾಜಿ ಸಿಎಂ ಡಿವಿಎಸ್ ಪತ್ರಿಕಾಗೋಷ್ಟಿ| ಕಾಂಗ್ರೆಸ್ ಸೇರಲ್ಲ, ಬಿಜೆಪಿ ಸರಿ ಇಲ್ಲ ಎಂದು ಹರಿಹಾಯ್ದ‌ ಸದಾನಂದ ‌ಗೌಡ

ಸಮಗ್ರ ನ್ಯೂಸ್: ನನಗೆ ಕಾಂಗ್ರೆಸ್‌ ನಿಂದ ಆಹ್ವಾನ ಬಂದಿರುವುದು ಸತ್ಯ. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಗೆ ಸೇರುವುದಿಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ. ಗುರುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯೂ ತಮ್ಮ ಕುಟುಂಬ ಮತ್ತು ಚೇಲಾಗಳಿಗೆ ಸೀಮಿತವಾಗಿದ್ದು, ಇದು ಬದಲಾಗಬೇಕಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ನಡೆ ಏನು ಎಂದು ಹಲವರು ನನಗೆ ಕೇಳಿದ್ದಾರೆ. ನನಗೆ ಬಿಜೆಪಿ ಟಿಕೆಟ್

ಮಾಜಿ ಸಿಎಂ ಡಿವಿಎಸ್ ಪತ್ರಿಕಾಗೋಷ್ಟಿ| ಕಾಂಗ್ರೆಸ್ ಸೇರಲ್ಲ, ಬಿಜೆಪಿ ಸರಿ ಇಲ್ಲ ಎಂದು ಹರಿಹಾಯ್ದ‌ ಸದಾನಂದ ‌ಗೌಡ Read More »

ಉಡುಪಿ: ಬಾಡಿಗೆ ಹಣ ಪಾವತಿಸುವಂತೆ ಜೀವ ಬೆದರಿಕೆ|ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್‌ : ಜೀವ ಬೆದರಿಕೆಯಿಂದ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಳಂಬೆಯ ಸುರೇಶ್‌ ಅವರು ಪ್ರಶಾಂತ್‌ ಅವರಿಗೆ ಅಂಗಡಿಯನ್ನು ಬಾಡಿಗೆಗೆ ನೀಡಿದ್ದರು. ಆದರೆ ಅವರು ಅಂಗಡಿಯ ಬಾಡಿಗೆ ಹಣವನ್ನು ಪಾವತಿಸಿರಲಿಲ್ಲ. ಡಿ. 4ರಂದು ರಾತ್ರಿ ಪ್ರಶಾಂತ್‌ ಅವರು ಸುರೇಶ್‌ ಅವರಿಗೆ ಕರೆಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದೇ ಕಾರಣದಿಂದ ಆಘಾತಕ್ಕೊಳಗಾಗಿ ಸುರೇಶ್‌ ಅವರು ಡಿ. 8ರಂದು ಸಾವನ್ನಪ್ಪಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಬಾಡಿಗೆ ಹಣ ಪಾವತಿಸುವಂತೆ ಜೀವ ಬೆದರಿಕೆ|ಯುವಕ ಆತ್ಮಹತ್ಯೆ Read More »

ಬೆಳ್ತಂಗಡಿ : ಅಕ್ರಮ ಮದ್ಯ ಮಾರಾಟ| ವೇಣೂರು ಪೊಲೀಸರ ದಾಳಿ

ಸಮಗ್ರ ನ್ಯೂಸ್ : ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ವೇಣೂರು ಪೊಲೀಸರು ದಾಳಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕು, ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ ನಡೆದಿದೆ. ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ, ಸ್ಥಳೀಯ ನಿವಾಸಿ ಸತೀಶ್ (40) ಎಂಬಾತ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸ್ ಠಾಣಾ ಪಿಎಸ್ಟ್ ಶ್ರೀಶೈಲ ಡಿ ಮುರಗೋಡ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಯ ವಶದಲ್ಲಿದ್ದ 90

ಬೆಳ್ತಂಗಡಿ : ಅಕ್ರಮ ಮದ್ಯ ಮಾರಾಟ| ವೇಣೂರು ಪೊಲೀಸರ ದಾಳಿ Read More »