Editor

ಪೋನ್ ಕದ್ದಾಲಿಕೆ ಪ್ರಕರಣ/ ತೆಲಂಗಾಣ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಪ್ರಮುಖ ಆರೋಪಿ

ಸಮಗ್ರ ನ್ಯೂಸ್: ತೆಲಂಗಾಣದಲ್ಲಿ ಲೋಕಸಭೆ ಚುನಾವಣೆ ಅಬ್ಬರದ ನಡುವೆ ನಡೆದಿತ್ತು ಎನ್ನಲಾದ ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ತೆಲಂಗಾಣ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಅವರನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದೆ. ಸದ್ಯ ಪ್ರಭಾಕರ್ ರಾವ್ ಅಮೆರಿಕದಲ್ಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರ ವಿರುದ್ಧ ಹೈದರಾಬಾದ್ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಕೆ ಚಂದ್ರಶೇಖರ ರಾವ್ ನೇತೃತ್ವದ ಹಿಂದಿನ ಬಿಆರ್‍ಎಸ್ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರ ಪೋನ್‍ಗಳನ್ನು ಅಕ್ರಮವಾಗಿ ಕದ್ದಾಲಿಕೆ ಮಾಡುವ ಮೂಲಕ ದತ್ತಾಂಶಗಳನ್ನು

ಪೋನ್ ಕದ್ದಾಲಿಕೆ ಪ್ರಕರಣ/ ತೆಲಂಗಾಣ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ ಪ್ರಮುಖ ಆರೋಪಿ Read More »

ರಾಮಜನ್ಮಭೂಮಿಯಲ್ಲಿ ರಂಗೋತ್ಸವ/ ಸಂಭ್ರಮದಿಂದ ಹೋಳಿ ಆಚರಿಸಿದ ರಾಮಭಕ್ತರು

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಂಗೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬಾಲರಾಮನ ದರುಶನ ಪಡೆದರು. ರಾಮಜನ್ಮಭೂಮಿಯಲ್ಲಿ ಭಕ್ತಿ ಗೀತೆಗಳನ್ನು ಹಾಡಿ ಸಂಭ್ರಮದಿಂದ ಹೋಳಿಯನ್ನು ಆಚರಿಸಿದರು. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾನ ಬಳಿಕ ಮೊದಲ ‘ರಂಗಭಾರಿ ಏಕಾದಶಿ’ಯಂದು ಹನುಮಂತನಗರಿ ದೇವಸ್ಥಾನದಲ್ಲಿ ದೇವರಿಗೆ ಬಣ್ಣ ಹಚ್ಚುವ ಮೂಲಕ ಬಣ್ಣಗಳ ಹಬ್ಬ ‘ರಂಗೋತ್ಸವ’ವನ್ನು ಆಚರಿಸಲಾಯಿತು. ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅದ್ಧೂರಿಯಾಗಿ ಹೋಳಿ ಆಚರಣೆ ಮಾಡಲಾಗಿದೆ.

ರಾಮಜನ್ಮಭೂಮಿಯಲ್ಲಿ ರಂಗೋತ್ಸವ/ ಸಂಭ್ರಮದಿಂದ ಹೋಳಿ ಆಚರಿಸಿದ ರಾಮಭಕ್ತರು Read More »

ಮೋದಿ ಘೋಷಣೆ ಕೂಗುವ ಯುವಕರ ಕಪಾಳಕ್ಕೆ ಹೊಡೆಯಿರಿ/ ಅವಹೇಳನಕಾರಿ ಹೇಳಿಕೆ ನೀಡಿದ ಶಿವರಾಜ ತಂಡರಗಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಸಮಗ್ರ ನ್ಯೂಸ್: ಮೋದಿ ಮೋದಿ ಘೋಷಣೆ ಕೂಗುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂಬುದಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ ತಂಡರಗಿ ವಿರುದ್ಧ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಜ್ಯ ವಕ್ತಾರ ವೆಂಕಟೇಶ್ ದೊಡೇರಿ, ರಾಜ್ಯ ಸಂಚಾಲಕ ವಸಂತ್ ಕುಮಾರ್ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳು, ಯುವಕರು ಮೋದಿ ಎಂದರೆ ಕಪಾಳಕ್ಕೆ ಹೊಡೆಯಿರಿ ಎಂದು ನಮ್ಮ ಪಕ್ಷದ ಮತದಾರರ ವಿರುದ್ಧ ಪ್ರಚೋದನಾತ್ಮಕ ಮಾತುಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಯುವ

ಮೋದಿ ಘೋಷಣೆ ಕೂಗುವ ಯುವಕರ ಕಪಾಳಕ್ಕೆ ಹೊಡೆಯಿರಿ/ ಅವಹೇಳನಕಾರಿ ಹೇಳಿಕೆ ನೀಡಿದ ಶಿವರಾಜ ತಂಡರಗಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು Read More »

ಭಾರತದೊಂದಿಗೆ ಮಾತುಕತೆಗೆ ಪ್ರಯತ್ನಿಸಿ/ ಮಾಲ್ಡೀವ್ಸ್ ಅಧ್ಯಕ್ಷರಿಗೆ ಹಿಂದಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಸಲಹೆ

ಸಮಗ್ರ ನ್ಯೂಸ್: ಭಾರತದೊಂದಿಗೆ ಮೊಂಡುತನ ಮಾಡುವುದನ್ನು ನಿಲ್ಲಿಸಿ, ಮಾತುಕತೆಗೆ ಪ್ರಯತ್ನಿಸಿ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಗೆ ಹಿಂದಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಹೇಳಿದ್ದಾರೆ. ಭಾರತ ವಿರೋಧಿ ನಿಲುವು ಹೊಂದಿದ್ದ ಮೊಹಮ್ಮದ್ ಮುಝು ತಮ್ಮ ಧ್ವನಿಯನ್ನು ಬದಲಿಸಿಕೊಂಡಿದ್ದು ತಮ್ಮ ದೇಶಕ್ಕೆ ಭಾರತ ಸಾಲ ಪರಿಹಾರ (ಸಾಲ ಮನ್ನ) ನೀಡಬೇಕು ಎಂದು ಮನವಿ ಮಾಡಿದ ನಂತರ ಸೊಲಿಹ್ ಈ ಹೇಳಿಕೆ ನೀಡಿದ್ದಾರೆ. ಸಾಲ ಪರಿಹಾರ ನೀಡಬೇಕು ಎಂದು ಮುಯಿಝು ಭಾರತದೊಂದಿಗೆ ಮಾತನಾಡಲು ಬಯಸುತ್ತಿದ್ದಾರೆ ಎಂಬ ಮಾಧ್ಯಮ

ಭಾರತದೊಂದಿಗೆ ಮಾತುಕತೆಗೆ ಪ್ರಯತ್ನಿಸಿ/ ಮಾಲ್ಡೀವ್ಸ್ ಅಧ್ಯಕ್ಷರಿಗೆ ಹಿಂದಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಸಲಹೆ Read More »

ಯಾದಗಿರಿ: SSLC ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರ ಅಮಾನತು

ಸಮಗ್ರ ನ್ಯೂಸ್: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಕ್ಕಳಿಗೆ ನಕಲು ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರ ಅಮಾನತು ಮಾಡಿರುವ ಘಟನೆ ನಡೆದಿದೆ. ಹುಣಸಗಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸುರಪುರ ತಾಲೂಕಿನ ಏವೂರು ಸರ್ಕಾರಿ ಶಾಲೆಯ ಶಿಕ್ಷಕ ಸಾಹೇಬ್ಗೌಡ ಮತ್ತು ಸುರಪುರ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಝಂಡದಕೇರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಹನುಮಂತರಾಯ ಇವರಿಬ್ಬರನ್ನು ಅಮಾನತು ಮಾಡಿ ಯಾದಗಿರಿ ಜಿ.ಪಂ. ಸಿಇಒ ಗರೀಮಾ ಪನ್ವಾರ್ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರೂ ಮೇಲ್ವಿಚಾರಕರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಮುಖ್ಯ ಅಧೀಕ್ಷಕರ ಗಮನಕ್ಕೂ

ಯಾದಗಿರಿ: SSLC ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಇಬ್ಬರು ಶಿಕ್ಷಕರ ಅಮಾನತು Read More »

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪೂರ್ಣ ವೇಳಾಪಟ್ಟಿ ಪ್ರಕಟ/ ಭಾರತದಲ್ಲೇ ನಡೆಯಲಿದೆ ಸಂಪೂರ್ಣ ಐಪಿಎಲ್

ಸಮಗ್ರ ನ್ಯೂಸ್: ಇಂಡಿಯನ್ ಪ್ರೀಮಿಯರ್ ಲೀಗ್‍ನ 2024ನೇ ಸಾಲಿನ ಟೂರ್ನಿಯ ಪೂರ್ಣ ವೇಳಾಪಟ್ಟಿ ಪ್ರಕಟಗೊಂಡಿದೆ. ಸಂಪೂರ್ಣ ಟೂರ್ನಿಯು ಭಾರತದಲ್ಲೇ ನಡೆಯಲಿದ್ದು, ಫೈನಲ್ ಪಂದ್ಯವು ಮೇ 26ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ. ಬಿಸಿಸಿಐ ಈ ಮೊದಲು 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಏಪ್ರಿಲ್ 07ರವರೆಗಿನ ಮೊದಲ 21 ಪಂದ್ಯಗಳ ವೇಳಾಪಟ್ಟಿ ಪ್ರಕಟ ಮಾಡಿತ್ತು. ಇದೀಗ ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಸಿಸಿಐ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದೆ. ಎರಡನೇ ಹಂತದ ವೇಳಾಪಟ್ಟಿಯಲ್ಲಿ ಒಟ್ಟು 11 ಡಬಲ್

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪೂರ್ಣ ವೇಳಾಪಟ್ಟಿ ಪ್ರಕಟ/ ಭಾರತದಲ್ಲೇ ನಡೆಯಲಿದೆ ಸಂಪೂರ್ಣ ಐಪಿಎಲ್ Read More »

ಉಡುಪಿ:ದಲಿತ ಮಹಿಳೆಗೆ ಹಲ್ಲೆ ಮಾಡಿದ ಆರೋಪಿಯನ್ನು ಡಿಸ್ಜಾರ್ಜ್ ಮಾಡದಿದ್ರೆ ಜಿಲ್ಲಾಸ್ಪತ್ರೆಗೆ ಮುತ್ತಿಗೆ| ವಿಶ್ವನಾಥ್ ಪೇತ್ರಿ ಎಚ್ಚರಿಕೆ

ಸಮಗ್ರ ನ್ಯೂಸ್‌ :ಬೀದಿನಾಯಿಗೆ ಊಟ ಹಾಕಿದ ಕಾರಣಕ್ಕಾಗಿ ದಲಿತ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಇಂದ್ರಾಳಿ ಹಯಗ್ರೀವ ನಗರದ ಚಂದ್ರಕಾಂತ ಭಟ್ ಎಂಬಾತನ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು‌ ಎಂದು ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 20ರಂದು ರಾತ್ರಿ ಹಲ್ಲೆಗೊಳಗಾದ ಬೇಬಿ ಅವರು, ತನ್ನ ಮನೆಯ ಸಮೀಪದ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದ ವೇಳೆ ಆರೋಪಿ ಚಂದ್ರಕಾಂತ್

ಉಡುಪಿ:ದಲಿತ ಮಹಿಳೆಗೆ ಹಲ್ಲೆ ಮಾಡಿದ ಆರೋಪಿಯನ್ನು ಡಿಸ್ಜಾರ್ಜ್ ಮಾಡದಿದ್ರೆ ಜಿಲ್ಲಾಸ್ಪತ್ರೆಗೆ ಮುತ್ತಿಗೆ| ವಿಶ್ವನಾಥ್ ಪೇತ್ರಿ ಎಚ್ಚರಿಕೆ Read More »

ಸುಬ್ರಹ್ಮಣ್ಯ:ಕೆಎಸ್ಎಸ್ ಕಾಲೇಜಿನ ನೂತನ ಪ್ರಾಕ್ತನ ವಿದ್ಯಾರ್ಥಿ ಸಂಘ ಉದ್ಘಾಟನೆ

ಸಮಗ್ರ ನ್ಯೂಸ್: ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘ ನೂತನವಾಗಿ ಉದ್ಘಾಟನೆಗೊಂಡಿತು. ಗಣೇಶ್ ನಾಯರ್ ನೇತ್ರತ್ವದಲ್ಲಿ ಹೊಸ ತಂಡ ಮಾ. 25ರಂದು ಅಧಿಕಾರ ವಹಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ.ನಿಂಗಯ್ಯ ಅವರು ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾ ನ್ಯಾಯಧೀಶ ವಿಜಯ ಕುಮಾರ್ ರೈ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಲೆಪ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡ ಸುಬ್ರಹ್ಮಣ್ಯ ದ ಅಜಿತೇಶ್ ಪಿ.ಎಸ್. ಅವರಿಗೆ

ಸುಬ್ರಹ್ಮಣ್ಯ:ಕೆಎಸ್ಎಸ್ ಕಾಲೇಜಿನ ನೂತನ ಪ್ರಾಕ್ತನ ವಿದ್ಯಾರ್ಥಿ ಸಂಘ ಉದ್ಘಾಟನೆ Read More »

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಓರ್ವ ಸಾವನ್ನಪ್ಪಿದ ಬೆನ್ನೆಲೆ ಇದೀಗ ಮತ್ತೋರ್ವ ಸಾವನ್ನಪ್ಪಿದ್ದು, 3 ದಿನದ ಅಂತರದಲ್ಲೇ ಇಬ್ಬರು ದುರ್ಮರಣ ಹೊಂದಿದ್ದಾರೆ. ತರೀಕೆರೆ ತಾಲೂಕಿನ ವರ್ತೆಗುಂಡಿ ಗ್ರಾಮ ವರ್ತೆಗುಂಡಿ ಬಳಿ ಟಿಂಬರ್ ಕಾರ್ಮಿಕ ಅಕ್ಬರ್(35) ಮೃತ ವ್ಯಕ್ತಿ. ತೋಟದಲ್ಲಿ ಆನೆ ಓಡಿಸುವಾಗ ಏಕಾಏಕಿ ನುಗ್ಗಿ ಬಂದಿದೆ. ನೆಲಕ್ಕೆ ಬಿದ್ದ ಅಕ್ಬರ್ ಮೇಲೆ ಕಾಲಿಟ್ಟು ಕಾಡಾನೆ ಕೊಂದಿದೆ. ಎಂಟು ತಿಂಗಳಲ್ಲಿ ಜಿಲ್ಲೆಯಲ್ಲಿ ನಾಲ್ವರನ್ನ ಬಲಿ ಪಡೆದಿರುವ ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕೆ

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ Read More »

ಬಿಸಿಲಿನ ತಾಪಕ್ಕೆ ದೇಹ ತಂಪಾಗಿಸಲು ರಾಗಿ ಅಂಬಲಿ ಸೇವನೆ ಉತ್ತಮ

ಸಮಗ್ರ ನ್ಯೂಸ್‌ : ಬೇಸಿಗೆ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಮ್ಮ ದೇಹವನ್ನು ತಂಪಾಗಿಸಲು ರಾಗಿ ಅಂಬಲಿಯನ್ನು ಕುಡಿಯುವುದು ಉತ್ತಮ. ಬೇಸಿಗೆ ತಾಪಕ್ಕೆ ದೇಹಕ್ಕೆ ಆಲಸ್ಯ ಮತ್ತು ದಣಿವು ಕಡಿಮೆ ಮಾಡಲು ಇದನ್ನು ಸೇವಿಸಿ. ರಾಗಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ಆರೋಗ್ಯಕರವಾದ ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್‌ಗಳು, ಬಿ ಕಾಂಪ್ಲೆಕ್ಸ್, ಸತು, ಫೈಬರ್, ಪ್ರೋಟೀನ್‌ಗಳನ್ನು ಒಳಗೊಂಡಿದೆ. ರಾಗಿ ಅಂಬಲಿ ಬೆಳಗಿನಜಾವ ಉಪಾಹಾರಕ್ಕೆ ಮಾತ್ರವಲ್ಲ ರಾತ್ರಿಯ ಊಟಕ್ಕೂ ಒಳ್ಳೆಯದು. ಹಾಗಾಗಿ ಗೋಧಿ ಹಿಟ್ಟು ಇಷ್ಟಪಡದವರು ರಾಗಿ ಹಿಟ್ಟನ್ನೂ ಬಳಸಬಹುದು. ಬೇಸಿಗೆಯಲ್ಲಿ

ಬಿಸಿಲಿನ ತಾಪಕ್ಕೆ ದೇಹ ತಂಪಾಗಿಸಲು ರಾಗಿ ಅಂಬಲಿ ಸೇವನೆ ಉತ್ತಮ Read More »