Editor

ಸುಳ್ಯ: ಕಾರು – ಟಾಟಾ ಏಸ್ ನಡುವೆ ಡಿಕ್ಕಿ

ಸಮಗ್ರ ನ್ಯೂಸ್: ನಿಲ್ಲಿಸಿದ್ದ ಕಾರು ಚಾಲಕನ ಅಜಾಗರೂಕತೆಯಿಂದ ರಸ್ತೆಗೆ ಚಲಿಸಿದ ಕಾರಣದಿಂದ ಹಿಂಬದಿಯಿಂದ ಬಂದ ಟಾ ಟಾ ಏಸ್ ಗಾಡಿ ಡಿಕ್ಕಿ ಹೊಡೆದು ವಾಹನಗಳೆರಡೂ ಜಖಂಗೊಂಡ ಘಟನೆ ಸುಳ್ಯ ನಗರದ ಜ್ಯೋತಿ ವೃತ್ತದ ಬಳಿ ಸಂಭವಿಸಿದೆ. ರಸ್ತೆ ಬದಿ ನಿಲ್ಲಿಸಿದ್ದ ಕಾರು ಮುಂದಕ್ಕೆ ಚಲಿಸಲು ರಸ್ತೆಗೆ ನುಗ್ಗಿದ್ದು, ಇದರಿಂದ ರಸ್ತೆಯಲ್ಲಿ ಚಲಿಸುತ್ತಿದ್ದ ಟಾಟಾ ಏಸ್ ಗಾಡಿ ಕಾರಿಗೆ ಗುದ್ದಿರುವುದಾಗಿ ಹೇಳಲಾಗಿದೆ. ಎರಡೂ ವಾಹನಗಳು ಜಖಂಗೊಂಡಿರುವುದಾಗಿ ತಿಳಿದುಬಂದಿದೆ.

ಸುಳ್ಯ: ಕಾರು – ಟಾಟಾ ಏಸ್ ನಡುವೆ ಡಿಕ್ಕಿ Read More »

ಕಡಬ: ಅಕ್ರಮ ಆಸ್ತಿ ಗಳಿಕೆ ಪ್ರಕರಣ| ತಾ.ಪಂ ಇಒ ಬಿ.ವಿ ಜಯಣ್ಣ ಮನೆ ಮೇಲೆ ಲೋಕಾಯುಕ್ತ ದಾಳಿ

ಸಮಗ್ರ ನ್ಯೂಸ್: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಜಯಣ್ಣ ಅವರ ಕಡಬದ ಪಂಜ ರಸ್ತೆಯ ವಿದ್ಯಾನಗರದ ಬಾಡಿಗೆ ಮನೆ ಹಾಗೂ ಕಛೇರಿಗೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕುಶಾಲನಗರ ನಿವಾಸಿಯಾಗಿರುವ ಬಿ.ವಿ.ಜಯಣ್ಣ, ಸೋಮವಾರಪೇಟೆ ಪಟ್ಟಣ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಚುನಾವಣಾ ಹಿನ್ನೆಲೆಯಲ್ಲಿ ಅವರು ಕಡಬ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವಾರದ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಅಕ್ರಮ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ

ಕಡಬ: ಅಕ್ರಮ ಆಸ್ತಿ ಗಳಿಕೆ ಪ್ರಕರಣ| ತಾ.ಪಂ ಇಒ ಬಿ.ವಿ ಜಯಣ್ಣ ಮನೆ ಮೇಲೆ ಲೋಕಾಯುಕ್ತ ದಾಳಿ Read More »

ಹರಾಜಿನಲ್ಲಿ ಮಾರಾಟವಾದ ಈ ಹಸುವಿನ ಬೆಲೆ ಕೇಳಿದ್ರೆ ತಲೆತಿರುಗೋದು ಪಕ್ಕಾ!! ‘ನೆಲೋರ್’ ತಳಿಯ ಈ ಗೋವಿನ ಬೆಲೆ ಏನ್ ಗೊತ್ತಾ?

ಸಮಗ್ರ ನ್ಯೂಸ್: ಬ್ರೆಜಿಲ್ನಲ್ಲಿ ನಡೆದ ಹರಾಜಿನಲ್ಲಿ ವಿಯಾಟಿನಾ -19 ಎಫ್‌ಐವಿ ಮಾರಾ ಇಮೊವಿಸ್ ಎಂಬ ನೆಲೋರ್ ಹಸು 4.8 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿಗಳಲ್ಲಿ 40 ಕೋಟಿಗೆ ಸಮ) ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಪ್ರಕಾಶಮಾನವಾದ ಬಿಳಿ ತುಪ್ಪಳ ಮತ್ತು ಭುಜಗಳ ಮೇಲಿನ ವಿಶಿಷ್ಟ ಹಂಪ್ಗೆ ಹೆಸರುವಾಸಿಯಾದ ನೆಲೋರ್ ತಳಿಯು ಭಾರತದಲ್ಲಿ ಹುಟ್ಟಿಕೊಂಡಿತು ಆದರೆ ಬ್ರೆಜಿಲ್ನ ಪ್ರಮುಖ ತಳಿಗಳಲ್ಲಿ ಒಂದಾಗಿದೆ. ಬ್ರೆಜಿಲ್ ನಲ್ಲಿ ನಡೆದ ಹರಾಜಿನಲ್ಲಿ ನೆಲೋರ್ ಹಸು ವಿಯಾಟಿನಾ 40 ಕೋಟಿ ರೂ.ಗೆ ಮಾರಾಟವಾಗಿದೆ.

ಹರಾಜಿನಲ್ಲಿ ಮಾರಾಟವಾದ ಈ ಹಸುವಿನ ಬೆಲೆ ಕೇಳಿದ್ರೆ ತಲೆತಿರುಗೋದು ಪಕ್ಕಾ!! ‘ನೆಲೋರ್’ ತಳಿಯ ಈ ಗೋವಿನ ಬೆಲೆ ಏನ್ ಗೊತ್ತಾ? Read More »

ಕೋಮು ದಳ್ಳುರಿಗೆ ಬೆಂದ ಕರಾವಳಿಯಲ್ಲಿ ತೆರೆದ ಸಾಮರಸ್ಯದ ಅಂಗಡಿ| ದೈವಸ್ಥಾನದ ಆಡಳಿತ ಮಂಡಳಿಯಿಂದ ಇಪ್ತಾರ್ ಆಯೋಜನೆ

ಸಮಗ್ರ ನ್ಯೂಸ್: ಹಿಂದೂ – ಮುಸ್ಲಿಂ ಭಾವೈಕ್ಯತೆಗೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಾಕ್ಷಿಯಾಗಿದೆ. ಬಂಟ್ವಾಳ ತಾಲೂಕಿನ ಕೆದಿಲ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವದಲ್ಲಿ ಮುಸ್ಲಿಮರು ಭಾಗವಹಿಸಿದ್ದರು. ಮುಸ್ಲಿಂ ಸಮುದಾಯದವರ ಸಹಕಾರಕ್ಕೆ ಪ್ರತಿಯಾಗಿ, ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಕರಾವಳಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೊರೆಕಾಣಿಕೆ ಸಲ್ಲಿಸುವ ಪದ್ದತಿಯಿದೆ. ಅದೇ ರೀತಿ ಕೆದಿಲ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿತ್ತು. ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಬರುವ ಸಂದರ್ಭ ಪರಿಸರದ ಮಸೀದಿ ವ್ಯಾಪ್ತಿಯ

ಕೋಮು ದಳ್ಳುರಿಗೆ ಬೆಂದ ಕರಾವಳಿಯಲ್ಲಿ ತೆರೆದ ಸಾಮರಸ್ಯದ ಅಂಗಡಿ| ದೈವಸ್ಥಾನದ ಆಡಳಿತ ಮಂಡಳಿಯಿಂದ ಇಪ್ತಾರ್ ಆಯೋಜನೆ Read More »

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ ಮೋಹಕ ತಾರೆ ರಮ್ಯಾ

ಸಮಗ್ರ ನ್ಯೂಸ್: ಮೋಹಕ ತಾರೆ ರಮ್ಯಾ 8 ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತಿತ್ತು. ʼಉತ್ತರಕಾಂಡʼ ಸಿನಿಮಾದಲ್ಲಿ ಡಾಲಿ ಧನಂಜಯ್​ಗೆ ಜೋಡಿಯಾಗಿ ಮೋಹಕ ತಾರೆ ಕಾಣಿಸಿಕೊಂಡು ಸ್ಯಾಂಡಲ್​ವುಡ್​ನಲ್ಲಿ ಹಂಗಮಾ ಸೃಷ್ಟಿ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ನನ್ನ ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ. ಆದರೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಉತ್ತರಕಾಂಡ ಚಿತ್ರದಲ್ಲಿ ಡಾಲಿ

ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ ಮೋಹಕ ತಾರೆ ರಮ್ಯಾ Read More »

ಬೆಂಗಳೂರು: ಬಡವರನ್ನು ಹಿಂಡುತ್ತಿರುವ ಬಿಬಿಎಂಪಿ ಮಾರ್ಷಲ್ ಗಳು| ಬಡಪಾಯಿಗಳ ಮೇಲೆ ಅಧಿಕಾರಿಗಳ ಅಟ್ಟಹಾಸ

ಸಮಗ್ರ ನ್ಯೂಸ್: ಅದೆಷ್ಟೋ ಬಡಪಾಯಿ ವ್ಯಾಪಾರಿಗಳು ಫುಟ್‌ಪಾತ್‌ನಲ್ಲೇ ಜೀವನ ಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿರುವ ಆರೋಪವು ಮತ್ತೆ ಕೇಳಿ ಬಂದಿದೆ. ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಸುಮಾರು 70 ವರ್ಷದ ವೃದ್ಧರೊಬ್ಬರು ರಸ್ತೆ ಬದಿಯಲ್ಲಿ ಬ್ಯಾಗ್‌ಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರು. ಅಲ್ಲಿಗೆ ಬಂದ ಮಾರ್ಷಲ್‌ಗಳು ವ್ಯಾಪಾರ ಮಾಡದಂತೆ ತಡೆದಿದ್ದಾರೆ. ಮಾತ್ರವಲ್ಲದೆ ವೃದ್ಧನಿಂದ ಬ್ಯಾಗ್ ಕಸಿಯಲು ಮುಂದಾಗಿದ್ದಾರೆ. ಈ ವೇಳೆ ವೃದ್ಧನ ಅಸಹಾಯಕತೆಯನ್ನು

ಬೆಂಗಳೂರು: ಬಡವರನ್ನು ಹಿಂಡುತ್ತಿರುವ ಬಿಬಿಎಂಪಿ ಮಾರ್ಷಲ್ ಗಳು| ಬಡಪಾಯಿಗಳ ಮೇಲೆ ಅಧಿಕಾರಿಗಳ ಅಟ್ಟಹಾಸ Read More »

ನಿಮ್ಹಾನ್ಸ್​ನಲ್ಲಿ ಕೆಲಸ ಮಾಡಲು ಆಸೆನ? ಇಲ್ಲಿದೆ ನೋಡಿ ಅವಕಾಶ!

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ರಿಸರ್ಚ್ ಅಸಿಸ್ಟೆಂಟ್​ ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ:ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಲೈಫ್​ ಸೈನ್ಸಸ್​​ನಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿರಬೇಕು. ವಯೋಮಿತಿ:ರಾಷ್ಟ್ರೀಯ

ನಿಮ್ಹಾನ್ಸ್​ನಲ್ಲಿ ಕೆಲಸ ಮಾಡಲು ಆಸೆನ? ಇಲ್ಲಿದೆ ನೋಡಿ ಅವಕಾಶ! Read More »

WhatsApp ಚಾಟ್ ಅನ್ನು ಟೆಲಿಗ್ರಾಮ್‌ಗೆ ಸಹ ವರ್ಗಾಯಿಸಬಹುದು! ರಿಪ್ಲೇ ಎಲ್ಲಾ ಸೇಮ್ ಸೇಮ್

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಹಲವಾರು ಮೆಸೇಜಿಂಗ್ ಅಪ್ಲಿಕೇಶನ್‌ಗಳು ಲಭ್ಯವಿವೆ. ಆದ್ಯತೆಗಳನ್ನು ಅವಲಂಬಿಸಿ, ಬಳಕೆದಾರರು ವಿಭಿನ್ನ ಸಮಯಗಳಲ್ಲಿ ವಿಭಿನ್ನ ಸಂದೇಶ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಆದರೆ, ಒಂದರಲ್ಲಿ ಮಾಡಿದ ಚಾಟ್‌ಗಳು ಇನ್ನೊಂದರಲ್ಲಿ ಲಭ್ಯವಿಲ್ಲ, ಆದ್ದರಿಂದ ಕೆಲವರು ತೊಂದರೆ ಅನುಭವಿಸುತ್ತಾರೆ. ಅದಕ್ಕಾಗಿಯೇ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಹೊಸ ವೈಶಿಷ್ಟ್ಯವನ್ನು ತಂದಿದೆ. ಇದರ ಮೂಲಕ ವಾಟ್ಸಾಪ್ ಚಾಟ್ ಗಳನ್ನು ಅತ್ಯಂತ ಸರಳವಾಗಿ ಟೆಲಿಗ್ರಾಂಗೆ ವರ್ಗಾಯಿಸಬಹುದಾಗಿದೆ. ಆದರೆ ಈ ವೈಶಿಷ್ಟ್ಯವು ಟೆಲಿಗ್ರಾಮ್ ಆವೃತ್ತಿ 7.4 ಮತ್ತು ನಂತರದ ಆವೃತ್ತಿಗಳಿಗೆ ಮಾತ್ರ ಲಭ್ಯವಿದೆ.

WhatsApp ಚಾಟ್ ಅನ್ನು ಟೆಲಿಗ್ರಾಮ್‌ಗೆ ಸಹ ವರ್ಗಾಯಿಸಬಹುದು! ರಿಪ್ಲೇ ಎಲ್ಲಾ ಸೇಮ್ ಸೇಮ್ Read More »

CFTRI ಯಲ್ಲಿ ಉದ್ಯೋಗಕ್ಕೆ ಆಹ್ವಾನ, ಇಂದೇ ಲಾಸ್ಟ್ ಡೇಟ್!

ಸಮಗ್ರ ಉದ್ಯೋಗ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 1 ರಿಸರ್ಚ್​ ಅಸೋಸಿಯೇಟ್-II ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಶೈಕ್ಷಣಿಕ ಅರ್ಹತೆ:ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಯೋಕೆಮಿಸ್ಟ್ರಿ/ಬಯೋಟೆಕ್ನಾಲಜಿ/ಲೈಫ್​ ಸೈನ್ಸ್​ನಲ್ಲಿ ಪಿಎಚ್​.ಡಿ ಪೂರ್ಣಗೊಳಿಸಿರಬೇಕು. ವಯೋಮಿತಿ:ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ

CFTRI ಯಲ್ಲಿ ಉದ್ಯೋಗಕ್ಕೆ ಆಹ್ವಾನ, ಇಂದೇ ಲಾಸ್ಟ್ ಡೇಟ್! Read More »

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ|ಸವಾರ ಸಾವು

ಸಮಗ್ರ ನ್ಯೂಸ್:‌ ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ನಗರದ ವಾಣಿ ಕಾಲೇಜು ಸಮೀಪ ನಡೆದಿದೆ. ಮೃತ ಯುವಕನನ್ನು ಬೆಳ್ತಂಗಡಿ ಲಾಯಿಲ ಗ್ರಾಮದ ರಾಘವೇಂದ್ರ ನಗರ ನಿವಾಸಿ ದಿ. ಜಯರಾಮ ಎಂಬವರ ಪುತ್ರ ಪುರುಷೋತ್ತಮ (19) ಎಂದು ಗುರುತಿಸಲಾಗಿದೆ. ರಾಘವೇಂದ್ರ ನಗರ ನಿವಾಸಿ ತೌಸೀಫ್ ಎಂಬವರ ಪುತ್ರ ತೌಫೀಕ್ (18) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಗುರುವಾಯನಕೆರೆಯಿಂದ

ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿ|ಸವಾರ ಸಾವು Read More »