Editor

ಬಿಜೆಪಿ ಟಿಕೆಟ್ ಪಡೆದ ನಟ ಅರುಣ್ ಗೋವಿಲ್

ಸಮಗ್ರ ನ್ಯೂಸ್ : ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ್ದ ನಟ ಅರುಣ್ ಗೋವಿಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಈ ಬಾರಿ ಲೋಕಸಭೆ ಅಖಾಡದಲ್ಲಿ ಅರುಣ್ ಗೋವಿಲ್ ಕಾಣಿಸಿಕೊಳ್ಳಲಿದ್ದಾರೆ. ಟಿಕೆಟ್ ನೀಡಿದ್ದಕ್ಕಾಗಿ ಆಯ್ಕೆ ಸಮಿತಿ ಮತ್ತು ನರೇಂದ್ರ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮೀರತ್ ಕ್ಷೇತ್ರದಿಂದ ನನ್ನನ್ನು ಸಂಸದ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ದೊಡ್ಡ ಜವಾಬ್ದಾರಿ ನೀಡಿದ್ದೀರಿ. ಭಾರತೀಯ ಜನತಾ ಪಕ್ಷ ಮತ್ತು ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು

ಬಿಜೆಪಿ ಟಿಕೆಟ್ ಪಡೆದ ನಟ ಅರುಣ್ ಗೋವಿಲ್ Read More »

ಚಿಕ್ಕಮಗಳೂರು:೪ ಕೋಟಿ ಮೌಲ್ಯದ ಚಿನ್ನಾಭರಣ ವಶ

ಸಮಗ್ರ ನ್ಯೂಸ್: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಾಲ್ಕು ಕೋಟಿ ಮೌಲ್ಯದ ಚಿನ್ನ, ವಜ್ರ ಬೆಳ್ಳಿ ವಶಕ್ಕೆ ಪಡೆದ ಘಟನೆ ಜಿಲ್ಲೆಯ ತರಿಕೆರೆ ತಾಲೂಕಿನ ಎಂ.ಸಿ. ಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ. ೬ ಕೆಜಿ ೫೮೬ ಗ್ರಾಂ ಚಿನ್ನ, ೧ ಕೆಜಿ ೭೧.೪೯೨ ಗ್ರಾಂ ವಜ್ರಾಭರಣ, ೧ ಕೆಜಿ ಬೆಳ್ಳಿ ವಸ್ತುಗಳನ್ನು ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಎಂ.ಸಿ. ಹಳ್ಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಂದ ಒಂದು

ಚಿಕ್ಕಮಗಳೂರು:೪ ಕೋಟಿ ಮೌಲ್ಯದ ಚಿನ್ನಾಭರಣ ವಶ Read More »

ಚುನಾವಣೆಗೆ ಕಾಲಿಡುತ್ತಿದೆ ಕೃತಕ ಬುದ್ಧಿಮತ್ತೆಯ ಆ್ಯಂಕರ್

ಸಮಗ್ರ ನ್ಯೂಸ್: ಲೋಕಸಭೆ ಚುನಾವಣಾ ಪ್ರಚಾರಕ್ಕಾಗಿ ಕೃತಕ ಬುದ್ಧಿಮತ್ತೆಯ ಆ್ಯಂಕರ್ ಅನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷವು ಸೋಮವಾರ ಅನಾವರಣಗೊಳಿಸಿದೆ. ಕಮ್ಯುನಿಸ್ಟ್ ಪಕ್ಷವು ಟ್ವೀಟ್‍ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಬಂಗಾಳದ ಏಕತೆಯ ಹೊಸ ಪ್ರಯೋಗವನ್ನು ಪ್ರಾರಂಭಿಸಿದೆ. ಈ ಕೃತಕ ಬುದ್ಧಿಮತ್ತೆಯ ಆ್ಯಂಕರ್ ಅನ್ನು ಸಮತಾ ಎಂದು ಕರೆಯಲಾಗುತ್ತದೆ. ಹೋಳಿ ಹಬ್ಬದಂದು ಸಮತಾ ಬಂಗಾಳಿ ಭಾಷೆಯಲ್ಲಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಎಐ ಅನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಇದೀಗ ಪಕ್ಷ ಮುಂದಾಗಿದೆ. ಈ ಕುರಿತು ಅಭ್ಯರ್ಥಿ ಸೃಜನ್ ಭಟ್ಟಾಚಾರ್ಯ ಮಾತನಾಡಿ,

ಚುನಾವಣೆಗೆ ಕಾಲಿಡುತ್ತಿದೆ ಕೃತಕ ಬುದ್ಧಿಮತ್ತೆಯ ಆ್ಯಂಕರ್ Read More »

ಹೆಚ್ಚುತ್ತಿರುವ ಪ್ರಯಾಣಿಕರು/ ತಾತ್ಕಾಲಿಕ ಹೆಚ್ಚುವರಿ ಬೋಗಿ ಸೇರ್ಪಡೆಗೊಳಿಸಿದ ರೈಲ್ವೆ ಇಲಾಖೆ

ಸಮಗ್ರ ನ್ಯೂಸ್: ರೈಲ್ವೆ ಇಲಾಖೆ ಕೆಲವು ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಕುರಿತು ಗಮನಹರಿಸಿದ್ದು, ಹೀಗಾಗಿ ತಾತ್ಕಾಲಿಕ ಹೆಚ್ಚುವರಿ ಬೋಗಿ ಸೇರ್ಪಡೆಗೊಳಿಸಿದೆ. ಮಂಗಳೂರು ಸೆಂಟ್ರಲ್ – ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‍ಪ್ರೆಸ್‍ಗೆ (ರೈಲು ಸಂಖ್ಯೆ 16603, 16604) ಮಾ. 27 ರಿಂದ 31 ರವರೆಗೆ ಮಂಗಳೂರಿನಿಂದ ತಿರುವನಂತಪುರಂಗೆ ಹಾಗೂ ಮಾ. 28ರಿಂದ ಏ. 1ರವರೆಗೆ ತಿರುವನಂತಪುರಂನಿಂದ ಮಂಗಳೂರಿಗೆ ಒಂದು ಎಸಿ 3-ಟೈರ್ ಬೋಗಿ ಹೆಚ್ಚಿಸಲಾಗಿದೆ. ಮಾ. 27, 29 ಮತ್ತು 31ರಂದು ರೈಲು ಸಂಖ್ಯೆ 16348 ಮಂಗಳೂರು

ಹೆಚ್ಚುತ್ತಿರುವ ಪ್ರಯಾಣಿಕರು/ ತಾತ್ಕಾಲಿಕ ಹೆಚ್ಚುವರಿ ಬೋಗಿ ಸೇರ್ಪಡೆಗೊಳಿಸಿದ ರೈಲ್ವೆ ಇಲಾಖೆ Read More »

ಡಿಕೆಶಿ ಸಿಎಂ ಆಗಲಿ ಎಂದು ಅರ್ಚಕರಿಂದ ಸಂಕಲ್ಪ; ಅರ್ಚಕರು ಹೇಳಿದರಲ್ಲಿ ತಪ್ಪೇನು ಎಂದ ಶಿವಕುಮಾರ್

ಸಮಗ್ರ ನ್ಯೂಸ್: ಡಿಸಿಎಂ ಡಿ.ಕೆ. ಶಿವಕುಮಾರ್‌ ನಿನ್ನೆ ಟೆಂಪಲ್‌ ರನ್‌ ಮಾಡಿದ್ದು, ಧರ್ಮಸ್ಥಳ, ಶೃಂಗೇರಿ ಸೇರಿದಂತೆ ಹಲವು ಕಡೆ ಭೇಟಿ ನೀಡಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಭೇಟಿ ನೀಡಿ ಮಹಾಬಲೇಶ್ವರ ಸನ್ನಿದಿಯಲ್ಲಿ ಆತ್ಮಲಿಂಗ ಪೂಜೆ ಸಲ್ಲಿಸಿದ್ದಾರೆ. ಇದೇ ಸಂಧರ್ಭದಲ್ಲಿ ಡಿ.ಕೆ‌‌. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಅರ್ಚಕರು ಸಂಕಲ್ಪ ಮಾಡಿದ್ದಾರೆ. ಗೋಕರ್ಣದಲ್ಲಿ ಆತ್ಮಲಿಂಗ ಪೂಜೆ ಸಲ್ಲಿಸುವ ವೇಳೆ ಮಹಾಬಲೇಶ್ವರ ದೇವಸ್ಥಾನದ ಅರ್ಚಕರು ಈ ಸಂಕಲ್ಪವನ್ನು ಮಾಡಿದ್ದು, ಡಿಕೆಶಿಯಿಂದ ವಿಧಿ ವಿಧಾನದಂತೆ ಶಿವನ ಪೂಜೆ ಮಾಡಿಸಿದ್ದಾರೆ. ಲೋಕಸಭಾ

ಡಿಕೆಶಿ ಸಿಎಂ ಆಗಲಿ ಎಂದು ಅರ್ಚಕರಿಂದ ಸಂಕಲ್ಪ; ಅರ್ಚಕರು ಹೇಳಿದರಲ್ಲಿ ತಪ್ಪೇನು ಎಂದ ಶಿವಕುಮಾರ್ Read More »

ನಾಳೆ ಹಗರಣದ ಹಣ ಎಲ್ಲಿದೆ ಎಂಬ ಮಾಹಿತಿಯನ್ನು ಕೇಜ್ರಿವಾಲ್ ನೀಡಲಿದ್ದಾರೆ;ಸುನೀತಾ ಕೇಜ್ರಿವಾಲ್

ಸಮಗ್ರ ನ್ಯೂಸ್: ಹೊಸ ಅಬಕಾರಿ ನೀತಿ ಹಗರಣದ ಹಣ ಎಲ್ಲಿದೆ ಎಂಬ ಮಾಹಿತಿಯನ್ನು ಮಾರ್ಚ್ 28ರಂದು ಕೋರ್ಟ್‌‌ಗೆ ಹಾಜರಾಗಲಿರುವ ಅರವಿಂದ್ ಕೇಜ್ರಿವಾಲ್ ರವರು ಮಾಹಿತಿಯನ್ನು ನೀಡಲಿದ್ದಾರೆ. ಮದ್ಯ ಹಗರಣದ ಹಣ ಎಲ್ಲಿದೆ ಎಂಬುದನ್ನು ಸಾಕ್ಷ್ಯ ಸಮೇತ ದೇಶದ ಜನರ ಮುಂದೆ ತಿಳಿಸುತ್ತೇನೆ ಎಂಬ ಮಾಹಿತಿಯನ್ನು ನನಗೆ ಹೇಳಿದ್ದಾರೆ ಎಂದು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮಾಹಿತಿಯನ್ನು ನೀಡಿದ್ದಾರೆ. ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅವರನ್ನು ಭೇಟಿಯಾದ ವೇಳೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ನಾಳೆ ಹಗರಣದ ಹಣ ಎಲ್ಲಿದೆ ಎಂಬ ಮಾಹಿತಿಯನ್ನು ಕೇಜ್ರಿವಾಲ್ ನೀಡಲಿದ್ದಾರೆ;ಸುನೀತಾ ಕೇಜ್ರಿವಾಲ್ Read More »

IPL ಪಂದ್ಯಾವಳಿಯಲ್ಲಿ ಕ್ಯಾಪ್ಟನ್ ಗಿಲ್ಗೆ 12 ಲಕ್ಷ ರೂ. ದಂಡ..!

ಸಮಗ್ರ ನ್ಯೂಸ್‌ : ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಈ ಶಿಕ್ಷೆಗೆ ಅವರು ಗುರಿಯಾಗಿದ್ದಾರೆ. ಐಪಿಎಲ್ ಪಂದ್ಯಾವಳಿ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು

IPL ಪಂದ್ಯಾವಳಿಯಲ್ಲಿ ಕ್ಯಾಪ್ಟನ್ ಗಿಲ್ಗೆ 12 ಲಕ್ಷ ರೂ. ದಂಡ..! Read More »

ಕೋಲಾರ ‘ಲೋಕ’ ಟಿಕೆಟ್ ವಾರ್: ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದ್ದರೆ 5 ಶಾಸಕರಿಂದ ರಾಜೀನಾಮೆ

ಸಮಗ್ರ ನ್ಯೂಸ್: ಕೋಲಾರ ಕಾಂಗ್ರೆಸ್​ ಟಿಕೆಟ್ ಇನ್ನಷ್ಟು ಕಗ್ಗಂಟಾಗಿಯೆ ಉಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದರೂ, ನಾಯಕರ ನಡುವಿನ ಭಿನ್ನಮತ ಶಮನವಾಗಿಲ್ಲ. ಸಚಿವ ಕೆ.ಹೆಚ್​​.ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದರೇ ಜಿಲ್ಲೆಯ ಐವರು ಶಾಸಕರು ರಾಜಿನಾಮೆ ನೀಡುತ್ತೇವೆ ಎಂದು ಕೋಲಾರ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೊತ್ತೂರು ಮಂಜುನಾಥ್ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಅವರ ಬಳಿ ಸಮಯ ಕೇಳಿದ್ದೇವೆ, ಸ್ಪೀಕರ್ ಬಳಿ ಸುಧಾಕರ್ ಸಮಯ ಕೇಳಿದ್ದಾರೆ ಎಂದು ಎಂಎಲ್

ಕೋಲಾರ ‘ಲೋಕ’ ಟಿಕೆಟ್ ವಾರ್: ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡಿದ್ದರೆ 5 ಶಾಸಕರಿಂದ ರಾಜೀನಾಮೆ Read More »

ನಿಮ್ಮ ಫೋನ್ ಕೆಲಸ ಹಾಳಾಗಿದ್ಯಾ? ಹಾಗಾದ್ರೆ ನೀವೇ ರಿಪೇರಿ ಮಾಡಬಹುದು

ಸಮಗ್ರ ನ್ಯೂಸ್: ಮಾನವನ ಜೀವನದಲ್ಲಿ ಆಹಾರದಷ್ಟೇ ಅಗತ್ಯಗಳೂ ಮುಖ್ಯ. ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಸ್ಮಾರ್ಟ್ ಫೋನ್ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೇ ಕೆಲಸ ಮಾಡಿದರೂ ಸ್ಮಾರ್ಟ್ ಫೋನ್ ಇದ್ದರೆ ಸಾಕು ಎನ್ನುವ ರೀತಿಯಲ್ಲಿ ಇದನ್ನು ತಯಾರಿಸಲಾಗಿದೆ. ಅಕಸ್ಮಾತ್ ಫೋನ್ ರಿಪೇರಿಗೆ ಬಂದರೆ ಕೆಲವರು ಫೋನ್ ರಿಪೇರಿ ಆಗುವವರೆಗೂ ಊಟವನ್ನೂ ಮಾಡುವುದಿಲ್ಲ. ಮೊಬೈಲ್ ಸೇವೆಗಳು ಸ್ವಲ್ಪ ತಡವಾದರೆ ಅಥವಾ ರಿಪೇರಿ ಮಾಡುವವರು ಸ್ವಲ್ಪ ಸುಸ್ತಾಗಿದ್ದರೆ, ಸ್ಮಾರ್ಟ್ ಫೋನ್ ಬಳಕೆದಾರರ

ನಿಮ್ಮ ಫೋನ್ ಕೆಲಸ ಹಾಳಾಗಿದ್ಯಾ? ಹಾಗಾದ್ರೆ ನೀವೇ ರಿಪೇರಿ ಮಾಡಬಹುದು Read More »

ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್| ಆಪರೇಷನ್ ಹಸ್ತಕ್ಕೆ ಬಿ.ವೈ ವಿಜಯೇಂದ್ರ ಚೆಕ್ ಮೇಟ್

ಸಮಗ್ರ ನ್ಯೂಸ್: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಆಪ್ತ ಹೆಚ್​​ವಿ ರಾಜೀವ್ ನಂತರ ಮತ್ತೊಬ್ಬ ಆಪ್ತನಿಗೆ ಮೈಸೂರಿನ ರೆಸಾರ್ಟ್​ನಲ್ಲೇ ಕುಳಿತುಕೊಂಡು ಸಿಎಂ ಸಿದ್ದರಾಮಯ್ಯ ಗಾಳ ಹಾಕಿದ್ದರು, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಿಎಂಗೆ ಟಕ್ಕರ್ ನೀಡಿದ್ದಾರೆ. ಸಿಎಂ ತವರು ಜಿಲ್ಲೆ ಮೈಸೂರಿಗೆ ತಲುಪಿರುವ ವಿಜಯೇಂದ್ರ ಕಾರ್ಯಾಚರಣೆ ಶುರು ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ತಂತ್ರಕ್ಕೆ ಪ್ರತಿ ತಂತ್ರ ಹೂಡಿದ್ದಾರೆ. ಸಿದ್ದರಾಮಯ್ಯ ಮನವೊಲಿಸಿದ್ದರಿಂದ ಪಕ್ಷ ಬಿಟ್ಟು ಕಾಂಗ್ರೆಸ್​​ ಸೇರಲು ಮುಂದಾಗಿದ್ದ ಮುಖಂಡನನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್| ಆಪರೇಷನ್ ಹಸ್ತಕ್ಕೆ ಬಿ.ವೈ ವಿಜಯೇಂದ್ರ ಚೆಕ್ ಮೇಟ್ Read More »