Editor

ಕಾರ್ಕಳ: ಟೂರಿಸ್ಟ್ ಮಿನಿ ಬಸ್‌ ಪಲ್ಟಿ

ಸಮಗ್ರ ನ್ಯೂಸ್‌ : ಕುಕ್ಕುಂದೂರು ಗಣಿತ ನಗರ ಸಮೀಪದ ಮಸೀದಿಯ ಹತ್ತಿರ ಕಾರ್ಕಳ ಕಡೆಯಿಂದ ಉಡುಪಿಗೆ ಹೋಗುತ್ತಿದ್ದ ಟೂರಿಸ್ಟ್ ಮಿನಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ಸಂಭವಿಸಿದೆ. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿರುವುದೇ ಕಾರಣವೆನ್ನಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಟೂರಿಸ್ಟ್ ಮಿನಿ ಬಸ್‌ ಪಲ್ಟಿ Read More »

ರನ್ ವೇಯಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ ಆ್ಯಕ್ಸಿಡೆಂಟ್/ ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಕೋಲ್ಕತ್ತಾದ ರನ್ ವೇಯಲ್ಲಿ ಟ್ಯಾಕ್ಸಿಯಿಂಗ್ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ತೀರಾ ಸಮೀಪಕ್ಕೆ ಬಂದು ರೆಕ್ಕಿಗೆ ಟಚ್‌ ಆಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯಿಂದಾಗಿ ಚೆನ್ನೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ರೆಕ್ಕೆಯ ತುದಿ ಮುರಿದು ರನ್‌ವೇ ಮೇಲೆ ಬಿದ್ದಿದ್ದು, ದರ್ಭಾಂಗಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ರೆಕ್ಕೆಗೆ ಹಾನಿಯಾಗಿದೆ. ಕೊಲ್ಕತ್ತಾದಲ್ಲಿ ನಡೆದ ಘಟನೆ ಬಗ್ಗೆ ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್

ರನ್ ವೇಯಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ ಆ್ಯಕ್ಸಿಡೆಂಟ್/ ತಪ್ಪಿದ ಅನಾಹುತ Read More »

ಕೇಜ್ರಿವಾಲ್ ಗೆ ಶಾಕ್ ಕೊಟ್ಟ ಹೈಕೋರ್ಟ್/ ಮಧ್ಯಂತರ ರಿಲೀಫ್ ಗೆ ನಕಾರ

ಸಮಗ್ರ ನ್ಯೂಸ್: ಅಕ್ರಮ ಮದ್ಯ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 3 ರಂದು ನಡೆಯಲಿದೆ. ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರ ಪೀಠವು ಅರವಿಂದ್ ಕೇಜ್ರವಾಲ್ ಅವರ ಮನವಿಯ ಮೇಲೆ ಇಡಿಗೆ ನೊಟೀಸ್ ಜಾರಿ ಮಾಡಿದ್ದು, ಬಂಧನ ಮತ್ತು ರಿಮಾಂಡ್ ಅನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂಬ ಮನವಿಗೆ ಏಪ್ರಿಲ್ 2

ಕೇಜ್ರಿವಾಲ್ ಗೆ ಶಾಕ್ ಕೊಟ್ಟ ಹೈಕೋರ್ಟ್/ ಮಧ್ಯಂತರ ರಿಲೀಫ್ ಗೆ ನಕಾರ Read More »

ಮತ್ತೊಂದು ಪಟ್ಟಿ ರಿಲೀಸ್ ಮಾಡಿದ ಬಿಜೆಪಿ/ ಕರ್ನಾಟಕದ ಎಲ್ಲಾ ಕ್ಷೇತ್ರಗಳು ಭರ್ತಿ

ಸಮಗ್ರ ನ್ಯೂಸ್: ಬಿಜೆಪಿ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಾಕಿ ಇರಿಸಿಕೊಂಡಿದ್ದ ಚಿತ್ರದುರ್ಗ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬಿಜೆಪಿಯ ಹಿರಿಯ ನಾಯಕ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಬಾರಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ತೋರದ ಕಾರಣ, ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ. ಕಾರಜೋಳ ಅವರಿಗೆ ಚಿತ್ರದುರ್ಗ ಟಿಕೆಟ್ ಘೋಷಣೆ ಮಾಡುವುದರೊಂದಿಗೆ ಬಿಜೆಪಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ.

ಮತ್ತೊಂದು ಪಟ್ಟಿ ರಿಲೀಸ್ ಮಾಡಿದ ಬಿಜೆಪಿ/ ಕರ್ನಾಟಕದ ಎಲ್ಲಾ ಕ್ಷೇತ್ರಗಳು ಭರ್ತಿ Read More »

ಚಿಕ್ಕಮಗಳೂರು:ಕಾರು-ಸ್ಕೂಟಿ ನಡುವೆ ಅಪಘಾತ|ದಂಪತಿ ಮೃತ್ಯು

ಸಮಗ್ರ ನ್ಯೂಸ್: ಸ್ಕೂಟಿ-ಕಾರು ನಡುವೆ ಭೀಕರ ಅಪಘಾತ ನಡೆದು, ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನ ವಂಗಲ ಗ್ರಾಮದಲ್ಲಿ ನಡೆದಿದೆ. ಅರ್ಜುನ್ ಹಾಗೂ ಶ್ವೇತ ಮೃತ ದುರ್ದೈವಿಗಳು. ಕಾರು ಡಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣ ಜಖಂಗೊಂಡಿದ್ದು, ಕಾರು ಚಾಲಕನ ಅಜಾಗರೂಕತೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಅಜ್ಜಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರು:ಕಾರು-ಸ್ಕೂಟಿ ನಡುವೆ ಅಪಘಾತ|ದಂಪತಿ ಮೃತ್ಯು Read More »

ಬಳ್ಳಾರಿ :ಶ್ರೀಗಂಧದ ಮರವನ್ನು ಸಾಗಿಸುತ್ತಿದ್ದ ಕಳ್ಳರು ಪೊಲೀಸರ ವಶ

ಸಮಗ್ರ ನ್ಯೂಸ್ : ಶ್ರೀಗಂಧದ ಮರವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಚ್ಎಲ್ಸಿ ಕ್ಯಾನಲ್ ಬಳಿ ನಡೆದಿದೆ. ಆರೋಪಿ ಒನ್ ಗಂಗಾನಾಯ್ಕ (ಸಂಡೂರ), ಮಾಂತೇಶ (ಕೊಟ್ಟೂರು), ಚೆನ್ನಪ್ಪ (ಬಾಗಲಕೋಟಿ), ರಾಮಣ್ಣ (ಬಾಗಲಕೋಟಿ) ಈ ನಾಲ್ವರನ್ಬಂನು ಬಂಧಿಸುವಲ್ಲಿ ಹೊಸಪೇಟೆ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ. ಗೂಡ್ಸ್ವಾಹನ ಮತ್ತು ಫಿಕಪ್ ವಾಹನದಲ್ಲಿ ಸುಮಾರು 203 ಕೆಜಿ ತೂಕದ ಶ್ರೀಗಂಧದ ಮರದ ತುಂಡುಗಳನ್ನು ಯಾವುದೇ ದಾಖಲೆಗಳಿಲ್ಲದೆ

ಬಳ್ಳಾರಿ :ಶ್ರೀಗಂಧದ ಮರವನ್ನು ಸಾಗಿಸುತ್ತಿದ್ದ ಕಳ್ಳರು ಪೊಲೀಸರ ವಶ Read More »

ಉಡುಪಿ ಚಿತ್ತರಂಜನ್ ವೃತ್ತದ ಮಂಟಪಕ್ಕೆ ಹಾನಿ| ದುರಸ್ತಿಗೆ ಆಗ್ರಹ

ಸಮಗ್ರ ನ್ಯೂಸ್: ಅಪರಿಚಿತ ವಾಹನವೊಂದು ನಗರದ ಚಿತ್ತರಂಜನ್ ಸರ್ಕಲ್ ನಲ್ಲಿರುವ ಮಂಟಪಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ಮಂಟಪಕ್ಕೆ ಹಾನಿ ಉಂಟಾಗಿದೆ. ವಾಹನ ಗುದ್ದಿದ ತೀವ್ರತೆಗೆ ಮಂಟಪದ ನಾಲ್ಕು ಕಂಬಗಳಲ್ಲಿಯೂ ಬಿರುಕು ಬಿಟ್ಟಿದ್ದು, ಮಂಟಪು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಂಟಪದ ನೆರಳಿನಲ್ಲಿ ವಲಸೆ ಕಾರ್ಮಿಕರು, ಹಮಾಲಿಗಳು ವಿಶ್ರಾಂತಿ ಪಡೆಯುತ್ತಿರುತ್ತಾರೆ. ಇದೀಗ ನಾಲ್ಕು ಕಂಬಗಳು ಶಿಥಿಲಗೊಂಡಿರುವುದರಿಂದ ಗೋಪುರದ ಭಾರದ ನಿಯಂತ್ರಣ ಸಿಗದೆ ಮಂಟಪವು ಯಾವುದೇ ಕ್ಷಣದಲ್ಲಿಯೂ ಉರುಳಿಬಿದ್ದು, ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣವೇ ನಗರಸಭೆ ಅಧಿಕಾರಿಗಳು

ಉಡುಪಿ ಚಿತ್ತರಂಜನ್ ವೃತ್ತದ ಮಂಟಪಕ್ಕೆ ಹಾನಿ| ದುರಸ್ತಿಗೆ ಆಗ್ರಹ Read More »

2026ರ ವೇಳೆ ಕಾಂಗ್ರೆಸ್‍ನಲ್ಲಿ ಹಿಂದುಗಳು ಯಾರೂ ಇರುವುದಿಲ್ಲ/ ಅಸ್ಸಾಂ ಸಿಎಂ ಹಿಮಂತ ಬಿಸ್ನಾ ಶರ್ಮಾ ಹೇಳಿಕೆ

ಸಮಗ್ರ ನ್ಯೂಸ್: 2026ರ ವೇಳೆ ಕಾಂಗ್ರೆಸ್‍ನಲ್ಲಿ ಹಿಂದು ಸಮುದಾಯದಿಂದ ಯಾರೋಬ್ಬರು ಇರುವುದಿಲ್ಲ 2032ರ ವೇಳೆಗೆ ಮುಸ್ಲಿಮರು ಯಾರೂ ಇರುವುದಿಲ್ಲ. 2032 ರೊಳಗೆ ಕಾಂಗ್ರೆಸ್ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ನಾ ಶರ್ಮಾ ಹೇಳಿದ್ದಾರೆ. ಕೇಂದ್ರ ಸಚಿವ ಹಾಗೂ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಲೋಕಸಭೆ ಚುನಾವಣೆಗೆ ದಿಬ್ರುಗಢ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸ್ಸಾಂ ಸಿಎಂ, ದಿಬ್ರುಗಢದಲ್ಲಿ ಸೋನೋವಾಲ್ ಅವರು ಅಸ್ಸಾಂ ರಾಷ್ಟ್ರೀಯ ಪರಿಷತ್ (ಎಜೆಪಿ) ಲುರಿಂಜ್ಯೋತಿ ಗೊಗೊಯ್

2026ರ ವೇಳೆ ಕಾಂಗ್ರೆಸ್‍ನಲ್ಲಿ ಹಿಂದುಗಳು ಯಾರೂ ಇರುವುದಿಲ್ಲ/ ಅಸ್ಸಾಂ ಸಿಎಂ ಹಿಮಂತ ಬಿಸ್ನಾ ಶರ್ಮಾ ಹೇಳಿಕೆ Read More »

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ/ ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿಕೆ

ಸಮಗ್ರ ನ್ಯೂಸ್: ಬೇಸಿಗೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ, ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ. 2024ನೇ ಸಾಲಿನ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೇಡಿಕೆಗೆ ಅನುಗುಣವಾಗಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ಉತ್ಪಾದನೆಗೆ ಒತ್ತು ನೀಡಲಾಗಿದೆ. ಉಷ್ಣ ವಿದ್ಯುತ್ ಸ್ಥಾವರಗಳು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮುಖ್ಯ ಆಧಾರವಾಗಿದ್ದು, ರಾಜ್ಯದ 3 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಳೆದ ವರ್ಷ ಗರಿಷ್ಠ 22,000ಮಿ.ಯೂ. ವಿದ್ಯುತ್

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ/ ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿಕೆ Read More »

ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ಸಂಸ್ಥೆಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್ ದವುಲೂರಿ ನೇಮಕ

ಸಮಗ್ರ ನ್ಯೂಸ್: ಜಗತ್ತಿನ ದೈತ್ಯ ಟೆಕ್ ಕಂಪನಿಗಳಲ್ಲಿ ಒಂದಾಗಿರುವ ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ಸಂಸ್ಥೆಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್ ದವುಲೂರಿ ನೇಮಕಗೊಂಡಿದ್ದಾರೆ. ಪವನ್ ಮದ್ರಾಸ್ ಐಐಟಿಯಲ್ಲಿ ವ್ಯಾಸಂಗ ಮಾಡಿದ್ದು, ಇದಕ್ಕೂ ಮೊದಲು ಮೈಕ್ರೋಸಾಫ್ಟ್ ಸರ್ಫೇಸ್ ಸಿಲಿಕಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ವಿಂಡೋಸ್ ಮುಖ್ಯಸ್ಥ ಪನೋಸ್ ಪಣಯ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಅಮೆಜಾನ್ ಸಂಸ್ಥೆಗೆ ತೆರಳಿದ ಹಿನ್ನೆಲೆಯಲ್ಲಿ ಭಾರತೀಯನನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ. ಇದರೊಂದಿಗೆ ಮೈಕ್ರೋಸಾಫ್ಟ್‍ನಲ್ಲಿ ಸಿಇಒ ಆಗಿರುವ ಭಾರತೀಯ ಸತ್ಯ ನಾದೆಲ್ಲಾ

ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ ಸಂಸ್ಥೆಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್ ದವುಲೂರಿ ನೇಮಕ Read More »