Editor

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಆಸ್ತಿ ಎಷ್ಟಿದೆ ಗೊತ್ತಾ?

ಸಮಗ್ರ ನ್ಯೂಸ್‌ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಲೋಕಸಭೆ ಚುನಾವಣೆಯ ಪ್ರಚಾರ ಆರಂಭಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೆ ಜೊತೆಗೆ ಅವರು ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ. ಶೋಭಾ ಕರಂದ್ಲಾಜೆಯವರು 16.02 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಚರಾಸ್ತಿ – 9 ಕೋಟಿ 23 ಲಕ್ಷ 66 ಸಾವಿರ 909 ರೂಪಾಯಿ ಮೌಲ್ಯ, ಸ್ಥಿರಾಸ್ತಿ – 6 ಕೋಟಿ 78 ಲಕ್ಷ 97 ಸಾವಿರ ರೂಪಾಯಿ ಮೌಲ್ಯ, ಬ್ಯಾಂಕ್

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಆಸ್ತಿ ಎಷ್ಟಿದೆ ಗೊತ್ತಾ? Read More »

ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ| 500 ಅಡಿ ಕೊಳವೆ ಬಾವಿಯೊಳಗೆ ಬಿದ್ದ ಎರಡು ವರ್ಷದ ಕಂದಮ್ಮ

ಸಮಗ್ರ ವಾರ್ತೆ: ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದ್ದು ಇದೀಗ 500 ಅಡಿಯ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಬಳಿ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶಂಕರಪ್ಪ ಮುಜುಗೊಂಡ ಎಂಬುವವರ ಜಮೀನಿನಲ್ಲಿ ಸುಮಾರು 500 ಅಡಿ ಆಳದಷ್ಟು ಕೊಳವೆ ಬಾವಿಯನ್ನು ಕೊಡೆಯಲಾಗಿತ್ತು. ಈ ವೇಳೆ ಕೊಳವೆ ಬಾವಿಯಿಂದ ನೀರು ಬರದೇ ಹಿನ್ನೆಲೆಯಲ್ಲಿ ಅದನ್ನು ಹಾಗೆ ಬಿಟ್ಟಿದ್ದರು.

ರಾಜ್ಯದಲ್ಲಿ ಮತ್ತೊಂದು ಕೊಳವೆ ಬಾವಿ ದುರಂತ| 500 ಅಡಿ ಕೊಳವೆ ಬಾವಿಯೊಳಗೆ ಬಿದ್ದ ಎರಡು ವರ್ಷದ ಕಂದಮ್ಮ Read More »

ಉಬರ್ ಆಟೋ ಏರಿದವನಿಗೆ ಶಾಕ್…!15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್‌ 1 ಕೋಟಿ ರೂ

ಸಮಗ್ರ ನ್ಯೂಸ್: ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬ ಉಬರ್ ನಲ್ಲಿ ಆಟೋ ಬುಕ್ ಮಾಡಿದ್ರು, ಆದ್ರೆ ಆಟೋ ಬುಕ್ ಮಾಡಿ ಇಳಿದ ಮೇಲೆ ಆ ಪ್ರಯಾಣಿಕನಿಗೆ ಶಾಕ್ ಎದುರಾಗಿದೆ. ಹೌದು ಆ ವ್ಯಕ್ತಿ ತುರ್ತು ಕೆಲಸಕ್ಕೆಂದು ಉಬರ್‌ ಆಟೋ ಬುಕ್‌ ಮಾಡಿದ್ದರು. ಟಿನ್‌ ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲಕ್ಕೆ ಬಂದು ಇಳಿದ ಪ್ರಯಾಣಿಕನಿಗೆ ಜಸ್ಟ್‌ 15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್‌ 500-1000 ರೂ. ಅಲ್ಲ ಬದಲಿಗೆ 1 ಕೋಟಿ ರೂ. ತೋರಿಸಿದೆ. ಉಬರ್‌

ಉಬರ್ ಆಟೋ ಏರಿದವನಿಗೆ ಶಾಕ್…!15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್‌ 1 ಕೋಟಿ ರೂ Read More »

ಹುಬ್ಬಳ್ಳಿ: ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ಎಂದು IMF ಹೇಳಿದೆ;ಪ್ರಲ್ಹಾದ್‌ ಜೋಶಿ

ಸಮಗ್ರ ನ್ಯೂಸ್‌ : ಈ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಮುಂದುವರಿಯುತ್ತದೆ. ಕನಿಷ್ಠ ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ನಡೆಸುತ್ತಾರೆ ಎಂದು ಇಂಟರ್‌ನ್ಯಾಶನಲ್‌ ಮಾನಿಟರಿ ಫಂಡ್ ಹೇಳಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ನುಡಿದರು. ಪ್ರಲ್ಹಾದ್‌ ಜೋಶಿಯವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ದುಂಡಶಿ ಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲೇ ಮೋದಿ ಆಡಳಿತದ ಮೆಚ್ಚುಗೆ ವ್ಯಕ್ತವಾಗಿದ್ದು, ಇಂಟರ್‌ನ್ಯಾಶನಲ್‌ ಮಾನಿಟರಿ ಫಂಡ್ ಅಂತಾರಾಷ್ಟ್ರೀಯ ಮಟ್ಟದ

ಹುಬ್ಬಳ್ಳಿ: ಇನ್ನೂ 10 ವರ್ಷ ಕಾಲ ಮೋದಿ ಆಡಳಿತ ಎಂದು IMF ಹೇಳಿದೆ;ಪ್ರಲ್ಹಾದ್‌ ಜೋಶಿ Read More »

ಮಧ್ಯಪ್ರದೇಶ: ಕಾಂಗ್ರೆಸ್‌ ಪಕ್ಷದವರೇ ರಾಹುಲ್‌ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ; ಯಾದವ್

ಸಮಗ್ರ ನ್ಯೂಸ್‌ : ಕಾಂಗ್ರೆಸ್‌ ಪಕ್ಷವೇ ರಾಹುಲ್‌ ಗಾಂಧಿಯವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಮೂಲಕ ಜಯ ಸಾಧಿಸಿದರೆ, ದೇಶದಲ್ಲಿ ಶಾಂತಿ ನೆಲೆಸುವುದಿಲ್ಲ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಹೇಳಿಕೆಗೆ ಮೋಹನ್‌ ಯಾದವ್‌ ಪ್ರತಿಕ್ರಿಯಿಸಿ, ರಾಹುಲ್ ಮಾತಿನಲ್ಲಿ ಯಾವುದೇ ಸತ್ಯವಿಲ್ಲ ಎಂದು ತಿರುಗೇಟು ನೀಡಿದರು. ಏಕೆಂದರೆ ಅವರದೇ ಪಕ್ಷದವರು ರಾಹುಲ್‌ ಗಾಂಧಿಯವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಬೇರೆಯವರು ಹೇಗೆ ಅವರನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಹೇಳಿದರು. ಚುನಾವಣಾ

ಮಧ್ಯಪ್ರದೇಶ: ಕಾಂಗ್ರೆಸ್‌ ಪಕ್ಷದವರೇ ರಾಹುಲ್‌ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ; ಯಾದವ್ Read More »

ಉಡುಪಿ: ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರ ಪತನ; ಯತ್ನಾಳ್ ಭವಿಷ್ಯ

ಸಮಗ್ರ ನ್ಯೂಸ್‌ : ಚಾಮರಾಜನಗರ ಹಾಗೂ ಮೈಸೂರು ಎರಡು ಲೋಕಸಭಾ ಕ್ಷೇತ್ರ ಸೋತರೆ, ಸಿದ್ದರಾಮಯ್ಯನವರನ್ನು ಇಳಿಸುತ್ತಾರೆ ಎಂಬ ಭಯವಿದೆ. ಹೀಗಾಗಿ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಅನುಕಂಪದ ಆಧಾರದಲ್ಲಿ ಮತ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರದ ಪತನ ಖಚಿತ ಎಂದು ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜದ ಜಾತಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ.

ಉಡುಪಿ: ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಸರಕಾರ ಪತನ; ಯತ್ನಾಳ್ ಭವಿಷ್ಯ Read More »

ನವದೆಹಲಿ: ಕೇಂದ್ರ ಸರ್ಕಾರದಿಂದ ಐಫೋನ್‌ ಬಳಕೆದಾರರಿಗೆ ಎಚ್ಚರಿಕೆ

ಸಮಗ್ರ ನ್ಯೂಸ್‌ : ಭಾರತದಲ್ಲಿ ಅತಿ ಹೆಚ್ಚು ಜನ ಆ್ಯಪಲ್‌ ಕಂಪನಿಯ ಐಫೋನ್‌ ಸೇರಿ ಹತ್ತಾರು ಉತ್ಪನ್ನಗಳನ್ನು ಬಳಸುತ್ತಿದ್ದು, ದೇಶದಲ್ಲಿ ಆ್ಯಪಲ್‌ ಕಂಪನಿಯ ಉತ್ಪನ್ನಗಳನ್ನು ಬಳಸುವುದೇ ಹೆಗ್ಗಳಿಕೆಯ ಸಂಕೇತ. ಇಂತಹ ಪರಿಸ್ಥಿತಿಯ ಮಧ್ಯೆಯೇ, ಆ್ಯಪಲ್‌ ಕಂಪನಿಯ ಐಫೋನ್‌, ಮ್ಯಾಕ್‌ಬುಕ್ಸ್‌, ಐಪ್ಯಾಡ್ಸ್‌ ಹಾಗೂ ವಿಷನ್‌ ಪ್ರೊ ಹೆಡ್‌ಸೆಟ್‌ಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನೀಡಿದೆ. ರಿಮೋಟ್‌ ಕೋಡ್‌ ಎಕ್ಸಿಕ್ಯೂಷನ್‌ಗೆ ಕನೆಕ್ಷನ್‌ ಮಾಡುವಾಗ ಏರುಪೇರಾಗಿದೆ. ಇದರಿಂದಾಗಿ ಐಫೋನ್‌, ಮ್ಯಾಕ್‌ಬುಕ್ಸ್‌, ಐಪ್ಯಾಡ್ಸ್‌ ಹಾಗೂ ವಿಷನ್‌ ಪ್ರೊ ಹೆಡ್‌ಸೆಟ್‌ ಬಳಸುವುದು ಅಪಾಯಕಾರಿಯಾಗಿದೆ ಎಂದು

ನವದೆಹಲಿ: ಕೇಂದ್ರ ಸರ್ಕಾರದಿಂದ ಐಫೋನ್‌ ಬಳಕೆದಾರರಿಗೆ ಎಚ್ಚರಿಕೆ Read More »

ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ನಾಮಪತ್ರ ಸಲ್ಲಿಸಿದರು. ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ಇಂದು ನಾಮಪತ್ರ ಸಲ್ಲಿಸಿದರು. ಇಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ವಯನಾಡಿಗೆ ಆಗಮಿಸಿದ ರಾಹುಲ್ ಗಾಂಧಿ, ನಾಮಪತ್ರ ಸಲ್ಲಿಸುವ ಮುನ್ನ ಇಲ್ಲಿನ ಕಲ್ಪೆಟ್ಟಾದಿಂದ ಸಿವಿಲ್ ಸ್ಟೇಷನ್

ವಯನಾಡ್ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ Read More »

ಚಾಮರಾಜನಗರದ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್‌ : ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುನೀಲ್‌ ಬೋಸ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಬಾಲರಾಜ್ ಅವರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಾಯಕರಿಂದ ಭರ್ಜರಿ ರೋಡ್ ಷೋವನ್ನು ನಡೆಸಲಾಯಿತು. ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ನಗರದಲ್ಲಿ ಭರ್ಜರಿ ರೋಡ್ ಷೋ ನಡೆಸಿದರು. ನಗರದ ಭುವನೇಶ್ವರಿ ವೃತ್ತದಿಂದ ತೆರೆದ ವಾಹನ ಏರಿದ ಕಾಂಗ್ರೆಸ್ ನಾಯಕರು ಪಚ್ಚಪ್ಪ ವೃತ್ತದಿಂದ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದ

ಚಾಮರಾಜನಗರದ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ Read More »

ಹೈಕೋರ್ಟ್​ನ ಹಾಲ್ ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಸಮಗ್ರ ನ್ಯೂಸ್: ಹೈಕೋರ್ಟ್​ನ ಹಾಲ್ 1ರಲ್ಲಿ ಮುಖ್ಯ ನ್ಯಾಯಮೂರ್ತಿ ಮುಂದೆ ವ್ಯಕ್ತಿಯೋರ್ವ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮೈಸೂರಿನ ಶ್ರೀರಾಂಪುರ ಮೂಲದ ಶ್ರೀನಿವಾಸ್ ಚಿನ್ನಮ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಶ್ರೀನಿವಾಸ್ ಅವರಿ​ಗೆ ಸಂಬಂಧಿಸಿದ ಪ್ರಕರಣದೊಂದು ಹೈಕೋರ್ಟ್​ ಮೆಟ್ಟಿಲೇರಿದೆ. ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಪ್ರಕರಣದ ವಿಚಾರಣೆ ಅಂತ್ಯಕ್ಕೆ ತಲುಪಿದ್ದಂತೆ ನ್ಯಾಯಮೂರ್ತಿಗಳ ಎದುರು ಬಂದ ಶ್ರೀನಿವಾಸ್​ ಅರ್ಜಿಯೊಂದನ್ನು ನ್ಯಾಯಾಲಯದ ಸಿಬ್ಬಂದಿಗೆ ನೀಡಿ, ಅನ್ಯಾಯವಾಗಿದೆ ನನಗೆ ಎಂದು ಹೇಳಿ ಬ್ಲೆಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ

ಹೈಕೋರ್ಟ್​ನ ಹಾಲ್ ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ Read More »