Editor

ಬಾಕ್ಸರ್ ವಿಜೇಂದರ್ ಸಿಂಗ್ ಬಿಜೆಪಿ ಸೇರ್ಪಡೆ

ಸಮಗ್ರ ನ್ಯೂಸ್: ಕಾಂಗ್ರೆಸ್‍ನಲ್ಲಿದ್ದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಲೋಕಸಭಾ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್‍ಗೆ ಮತ್ತೊಂದು ಹೊಡೆತ ಬಿದ್ದಿದೆ. ಕಾಂಗ್ರೆಸ್‍ನಲ್ಲಿದ್ದ ವಿಜೇಂದರ್ ಸಿಂಗ್ 2019 ರ ಲೋಕಸಭೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು. ಇದೀಗ ವಿಜೇಂದರ್ ಸಿಂಗ್ ಅವರು ಬಿಜೆಪಿ ಸೇರಿದ್ದು, ಬಿಜೆಪಿ ಬಲ ಮತ್ತಷ್ಟು ಹೆಚ್ಚಿದೆ.

ಬಾಕ್ಸರ್ ವಿಜೇಂದರ್ ಸಿಂಗ್ ಬಿಜೆಪಿ ಸೇರ್ಪಡೆ Read More »

ನವದೆಹಲಿ:ಕಾಂಗ್ರೆಸ್‌ ಲೋಕಸಭೆ ಚುನಾವಣೆಗೆ 25 ಗ್ಯಾರಂಟಿ ಘೋಷಣೆ

ಸಮಗ್ರ ನ್ಯೂಸ್‌ : ಕಾಂಗ್ರೆಸ್‌ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ದೃಷ್ಟಿಯಿಂದ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್‌ ದೇಶದ ಜನರಿಗೆ 25 ಗ್ಯಾರಂಟಿಗಳನ್ನು ಘೋಷಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಘರ್‌ ಘರ್‌ ಗ್ಯಾರಂಟಿ ಎಂಬ ಅಭಿಯಾನವನ್ನು ಈಶಾನ್ಯ ದೆಹಲಿ ಲೋಕಸಭೆ ಕ್ಷೇತ್ರದಿಂದ ಆರಂಭಿಸಿದ್ದಾರೆ. ಕಾಂಗ್ರೆಸ್‌ ಸುಮಾರು 8 ಭಾಷೆಗಳಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ಮುದ್ರಿಸಿದ್ದು, ಪಕ್ಷದ ಕಾರ್ಯಕರ್ತರು ದೇಶಾದ್ಯಂತ 8 ಕೋಟಿಗೂ ಅಧಿಕ ಕುಟುಂಬಗಳಿಗೆ ಕಾರ್ಡ್‌ಗಳನ್ನು ವಿತರಣೆ

ನವದೆಹಲಿ:ಕಾಂಗ್ರೆಸ್‌ ಲೋಕಸಭೆ ಚುನಾವಣೆಗೆ 25 ಗ್ಯಾರಂಟಿ ಘೋಷಣೆ Read More »

ಹೈದರಾಬಾದ್ : ಕೆಮಿಕಲ್‌ ಫ್ಯಾಕ್ಟರಿ ಭೀಕರ ಸ್ಫೋಟಕ್ಕೆ ಐವರು ಬಲಿ

ಸಮಗ್ರ ನ್ಯೂಸ್‌ :‌ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಭೀಕರ ಸ್ಫೋಟ ಸಂಭವಿಸಿದ್ದು, ಐವರು ಕಾರ್ಮಿಕರು ಮೃತಪಟ್ಟಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ಚಂದಾಪುರ ಗ್ರಾಮದ ಎಸ್‌ಬಿಆರ್‌ ಆರ್ಗಾನಿಕ್ಸ್‌ ಕಾರ್ಖಾನೆಯಲ್ಲಿ ನಡೆದಿದೆ. ರಾಸಾಯನಿಕ ಸೋರಿಕೆಯ ಬಳಿಕ ಭೀಕರವಾಗಿ ಸ್ಫೋಟ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಐವರು ಸುಟ್ಟು ಭಸ್ಮವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿದೆ. ಭೀಕರ ಸ್ಫೋಟದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೀಕರ ಹೊಗೆ ಆವರಿಸಿಕೊಂಡಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿಯು

ಹೈದರಾಬಾದ್ : ಕೆಮಿಕಲ್‌ ಫ್ಯಾಕ್ಟರಿ ಭೀಕರ ಸ್ಫೋಟಕ್ಕೆ ಐವರು ಬಲಿ Read More »

ಲೋಕಸಭಾ ಚುನಾವಣಾ ಹಿನ್ನಲೆ/ ಬದಲಾದ ಪರೀಕ್ಷಾ ವೇಳಾಪಟ್ಟಿಗಳು

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ 2024 ರ ಮತದಾನ ಏಪ್ರಿಲ್ 19 ರಂದು ಆರಂಭವಾಗಲಿದ್ದು, ದೇಶಾದ್ಯಂತ ತೀವ್ರ ರಾಜಕೀಯ ಚಟುವಟಿಕೆನಡೆದಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಪ್ರವೇಶ ಪರೀಕ್ಷೆಗಳು ಮತ್ತು ವೃತ್ತಿಪರ ಸಾಮಥ್ರ್ಯ ಪರೀಕ್ಷೆಗಳ ದಿನಾಂಕಗಳನ್ನು ಬದಲಾಯಿಸಲಾಗಿದೆ. ಮೇ 26ಕ್ಕೆ ನಿಗದಿಯಾಗಿದ್ದ ಯುಪಿಎಸ್‍ಸಿ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆ 2024ರ ವೇಳಾಪಟ್ಟಿಯನ್ನು ಆರಂಭದಲ್ಲಿ ಪರೀಕ್ಷೆ ಜೂನ್ 16ಕ್ಕೆ ಮುಂದೂಡಲಾಗಿದೆ. ಜುಲೈ 7ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ ಜೂನ್ 23ಕ್ಕೆ ನಡೆಯಲಿದೆ. ಫಲಿತಾಂಶಗಳು ಈ ಹಿಂದೆ ಘೋಷಿಸಿದಂತೆ ಜುಲೈ

ಲೋಕಸಭಾ ಚುನಾವಣಾ ಹಿನ್ನಲೆ/ ಬದಲಾದ ಪರೀಕ್ಷಾ ವೇಳಾಪಟ್ಟಿಗಳು Read More »

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ/ ಶ್ರೀಲಂಕಾಗೆ ವಾಪಸಾದ ಅಪರಾಧಿಗಳು

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳು ಭಾರತ ತೊರೆದಿದ್ದು, ಶ್ರೀಲಂಕಾಗೆ ವಾಪಸಾಗಿದ್ದಾರೆ. 30 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದ ಮುರುಗನ್ ಯಾನೆ ಶ್ರೀಹರನ್, ಜಯಕುಮಾರ್ ಹಾಗೂ ರಾಬರ್ಟ್ ಪಯಸ್ ಸಹಿತ ಈ ಪ್ರಕರಣದ ಒಟ್ಟು ಏಳು ಮಂದಿಯನ್ನು ಸದ್ಯ ತಿರುಚಿರಾಪಳ್ಳಿಯ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಗಡೀಪಾರು ಆದೇಶ ಹೊರಡಿಸಿದ ಬಳಿಕ ಅವರು ಸ್ವದೇಶಕ್ಕೆ ಮರಳಬಹುದು ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‍ಗೆ ಈ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ/ ಶ್ರೀಲಂಕಾಗೆ ವಾಪಸಾದ ಅಪರಾಧಿಗಳು Read More »

ತೆರೆದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು|ಮಗುವನ್ನು ರಕ್ಷಿಸಲು ಹರಸಾಹಸ

ಸಮಗ್ರ ನ್ಯೂಸ್: ಆಟವಾಡುವಾಗ ಎರಡು ವರ್ಷದ ಮಗು ಕೊಳವೆ ಬಾವಿಗೆ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ. ಸಾತ್ವಿಕ್ ಮುಜಗೊಂಡ ಕೊಳವೆ ಬಾವಿಗೆ ಬಿದ್ದ ಮಗುವಾಗಿದ್ದು. ಆಟವಾಡಲು ಹೋಗಿದ್ದ ವೇಳೆ ಮಗು ಕೊಳವೆ ಬಾವಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ. ಸತೀಶ್ ಮತ್ತು ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್ ಇಂದು ಸಂಜೆ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸ್ಥಳಕ್ಕೆ ಇಂಡಿ ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಸತೀಶ್ ಅವರು ಬೆಳೆಗೆ ನೀರಿಲ್ಲದೆ

ತೆರೆದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು|ಮಗುವನ್ನು ರಕ್ಷಿಸಲು ಹರಸಾಹಸ Read More »

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​​ ಹತ್ತಲು ಯತ್ನಿಸಿದ ಚಿರತೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಪ್ರಯಾಣಿಕರಿದ್ದ ಬಿಎಂಟಿಸಿ ಬಸ್​​ ಹತ್ತಲು ಚಿರತೆ ಮರಿಯೊಂದು ಯತ್ನಿಸಿರುವಂತಹ ಘಟನೆ ನಡೆದಿದೆ. ತುರಹಳ್ಳಿ ಫಾರೆಸ್ಟ್​ನಿಂದ ಚಿರತೆ ಮತ್ತು ಮರಿ ರಸ್ತೆಗೆ ನುಗ್ಗಿದೆ. ಚಿರತೆ ತಪ್ಪಿಸಿಕೊಂಡಿದ್ದು, ಮರಿ‌ ಮಾತ್ರ ಬಸ್ ಕೆಳಗೆ ಅವಿತುಕೊಂಡಿತ್ತು. ಚಿರತೆ ಮರಿಗೆ ಬಿಎಂಟಿಸಿ ಚಾಲಕ ನೀರು ಕುಡಿಸಲು ಮುಂದಾಗಿದ್ದು, ಈ ವೇಳೆ ಚಾಲಕನ ಮೇಲೆ ದಾಳಿ ಮಾಡಲು ಮರಿ ಚಿರತೆ ಮುಂದಾಗಿದೆ. ಕೆಂಗೇರಿ ಟೂ ಚಿಕ್ಕೇಗೌಡನ ಪಾಳ್ಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದ ಬಸ್​​ ಕೆಳಗೆ ಮರಿ ಚಿರತೆ ಅವಿತುಕೊಂಡಿತ್ತು. ಹೀಗಾಗಿ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​​ ಹತ್ತಲು ಯತ್ನಿಸಿದ ಚಿರತೆ Read More »

ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳಿಗೆ ಅನುಮತಿ ಅವಶ್ಯಕತೆ ಇಲ್ಲ

ಸಮಗ್ರ ನ್ಯೂಸ್: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ. ಚುನಾವಣೆ/ ರಾಜಕೀಯ ಕಾರ್ಯಕ್ರಮಗಲನ್ನು ನಡೆಸಲು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು, 21-ಮೈಸೂರು ಲೋಕಸಭಾ ಕ್ಷೇತ್ರರವರೆಗೆ ಸಂಬಂಧಪಟ್ಟ ರಾಜಕೀಯ ಪಕ್ಷ/ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಕಡ್ಡಾಯವಾಗಿ ಅನುಮತಿಯನ್ನು ಪಡೆದ ನಂತರ ಕಾರ್ಯಕ್ರಮವನ್ನು ನಡೆಸಬೇಕು.ಅದಲ್ಲದೇ ಈ ಕಚೇರಿಗೆ ಧಾರ್ಮಿಕ ಕಾರ್ಯಕ್ರಮಗಳು/ ಕೌಟುಂಬಿಕ ಕಾರ್ಯಕ್ರಮ (ಮದುವೆ, ಗೃಹ ಪ್ರವೇಶ, ದೇವರ ಪೂಜೆ ಇತ್ಯಾದಿ) (ರಾಜಕೀಯ ಕಾರ್ಯಕ್ರಮಗಳನ್ನು ಹೊರತುಪಡಿಸಿ) ಗಳಿಗೆ ಈ ಕಚೇರಿಗೆ ಅರ್ಜಿಗಳು ಸ್ವೀಕೃತವಾಗುತ್ತಿರುತ್ತದೆ. ನಿಯಮಗಳಂತೆ

ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳಿಗೆ ಅನುಮತಿ ಅವಶ್ಯಕತೆ ಇಲ್ಲ Read More »

ಕೊಡಗು: ರಸ್ತೆಗಳಲ್ಲಿ ಕಾಡಾನೆ ಪ್ರತ್ಯಕ್ಷ ಭಯಬೀತರಾದ ಗ್ರಾಮಸ್ಥರು

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಜೂರು ಜಂಕ್ಷನ್ ಬಳಿ ಇಂದು ಬೆಳ್ಳಂ ಬೆಳಗ್ಗೆ ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಕೆಲವು ಕಡೆ ರೈಲ್ವೆ ಬ್ಯಾರಿಕೆಟ್ ಕಾಮಗಾರಿ ಪೂರ್ಣಗೊಳ್ಳದ ಜಾಗದಲ್ಲಿ ಕಾಡಾನೆಗಳು ದಾಟಿ ಗ್ರಾಮಗಳಿಗೆ ಸೇರುತ್ತಿವೆ. ಮೀಸಲು ಅರಣ್ಯ ಸಂಪೂರ್ಣ ಒಣಗಿದ್ದು ಅರಣ್ಯದೊಳಗೆ ನೀರಿನ ಕಾಡಾನೆಗಳು ಕಾಡುಬಿಟ್ಟು ಗ್ರಾಮದೊಳಗೆ ನುಗ್ಗುತ್ತವೆ ಇದರಿಂದ ಗ್ರಾಮಸ್ಥರು ಭಯಬೀತವಾಗಿ ಕಾಡಾನೆಗಳ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ.

ಕೊಡಗು: ರಸ್ತೆಗಳಲ್ಲಿ ಕಾಡಾನೆ ಪ್ರತ್ಯಕ್ಷ ಭಯಬೀತರಾದ ಗ್ರಾಮಸ್ಥರು Read More »

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಕಾರ್ಮಿಕ ವರ್ಗದ ಮಹಿಳೆಯರಿಂದ ದೇಣಿಗೆ

ಸಮಗ್ರ ನ್ಯೂಸ್‌ : ನಾಳೆ ನಾಮಪತ್ರ ಸಲ್ಲಿಸಲಿರುವ ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಚುನಾವಣಾ ಠೇವಣಿಗಾಗಿ ಕಾರ್ಮಿಕ ಮಹಿಳೆಯರು ದೇಣಿಗೆ ನೀಡಿದ್ದಾರೆ. ತಾವು ದುಡಿದ ಸ್ವಂತ ಹಣವನ್ನು ದೇಣಿಗೆ ರೂಪಾದಲ್ಲಿ ಬ್ರಿಜೇಶ್ ಚೌಟಾ ಅವರಿಗೆ ಮಹಿಳೆಯರು ಸಹಾಯಹಸ್ತದ ರೂಪದಲ್ಲಿ ನೀಡಿದ್ದಾರೆ. ಮೀನಿನ ವ್ಯಾಪಾರ, ಹೂವಿನ ವ್ಯಾಪಾರ ಹಾಗು ಇತರೆ ಸಣ್ಣ ಪುಟ್ಟ ವ್ಯವಹಾರ ಮಾಡುವ ಮಹಿಳೆಯರು ಆರತಿ ಬೆಳಗಿ ಹಣೆಗೆ ತಿಲಕ ಹಚ್ಚಿ ದೃಷ್ಟಿ ತೆಗೆದು ಆಶೀರ್ವಾದಿಸಿ ಬಳಿಕ ಚುನಾವಣಾ ಠೇವಣಿಗೆ

ದ.ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ಕಾರ್ಮಿಕ ವರ್ಗದ ಮಹಿಳೆಯರಿಂದ ದೇಣಿಗೆ Read More »