Editor

ಬೆಂಗಳೂರಿನ ಟೈರ್​ ಗೋದಾಮಿನಲ್ಲಿ ಅಗ್ನಿ ಅವಘಡ

ಸಮಗ್ರ ನ್ಯೂಸ್:ಬೆಂಗಳೂರಿನ ಚಾಮರಾಜಪೇಟೆಯ ಗವಿಪುರಂ ಬಳಿಯ ಟೈರ್​ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಇನ್ನು ಟೈರ್, ಪೈಪ್ ,ಹಾಗೂ ಪ್ಲೆವುಡ್​ಗಳನ್ನು ಇರಿಸಿರುವ ಸುಮಾರು 3 ಗೋದಾಮಿಗೂ ಬೆಂಕಿ ಆವರಿಸಿದೆ. ಸದ್ಯ ಸಿವಿಲ್ ಡಿಫೆನ್ಸ್ ಹಾಗೂ ಸ್ಥಳೀಯರ ಜೊತೆಗೆ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಬೆಂಗಳೂರಿನ ಟೈರ್​ ಗೋದಾಮಿನಲ್ಲಿ ಅಗ್ನಿ ಅವಘಡ Read More »

ಕಡಬ: ಬಿಳಿನೆಲೆ ವಲಯ ಕಾಂಗ್ರೆಸ್ ಸಭೆ| ಬಿಜೆಪಿ – ಜೆಡಿ(ಎಸ್)ನಿಂದ ಹಲವರು ಕಾಂಗ್ರೆಸ್ ಸೇರ್ಪಡೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಬಿಳಿನೆಲೆ ವಲಯ ಕಾಂಗ್ರೆಸ್ ಸಭೆ ಶನಿವಾರ(ಎ.6) ದಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರ ನೇತ್ರತ್ವದಲ್ಲಿ ನಡೆಯಿತು. ಲೋಕಸಭಾ ಚುನಾವಣೆಯ ಅವಶ್ಯಕ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ನಿತಿನ್ ಗೌಡ ಮೂಜೂರು, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕಳಿಗೆ ಸೇರಿದಂತೆ ಹಲವಾರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಸಭೆಯಲ್ಲಿ ಡಿಸಿಸಿ ವೀಕ್ಷಕರಾದ ಕಿರಣ್ ಬುಡ್ಲೆಗುತ್ತು, ಜಿಲ್ಲಾ ಪ್ರಚಾರ ಸಮಿತಿ

ಕಡಬ: ಬಿಳಿನೆಲೆ ವಲಯ ಕಾಂಗ್ರೆಸ್ ಸಭೆ| ಬಿಜೆಪಿ – ಜೆಡಿ(ಎಸ್)ನಿಂದ ಹಲವರು ಕಾಂಗ್ರೆಸ್ ಸೇರ್ಪಡೆ Read More »

ಖಾಸಗಿ ಬಸ್​​​ ಪಲ್ಟಿ|ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಸಮಗ್ರ ನ್ಯೂಸ್: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಬಳಿಯ ಕಣಿವೆ ಪ್ರದೇಶದಲ್ಲಿ ಖಾಸಗಿ ಬಸ್​​​ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ. ಬಸ್‌ನಲ್ಲಿದ್ದಂತಹ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಖಾಸಗಿ ಬಸ್ ಬೆಂಗಳೂರಿನಿಂದ ಶಿವಮೊಗ್ಗದತ್ತ ತೆರಳುತ್ತಿತ್ತು. 50 ಜನ ಪ್ರಯಾಣಿಸುತ್ತಿದ್ದ ಮಾಹಿತಿ ದೊರೆತಿದೆ. ಸ್ಥಳಕ್ಕೆ ಹೊಳಲ್ಕೆರೆ ಪಿಎಸ್ ಐ ಸುರೇಶ್ ಭೇಟಿ ನೀಡಿ ಪರಿಶೀಲನೆ

ಖಾಸಗಿ ಬಸ್​​​ ಪಲ್ಟಿ|ಇಬ್ಬರು ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಕೇರಳ:ವಲಸೆ ಕಾರ್ಮಿಕನ ಹತ್ಯೆ|10 ಮಂದಿ ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್‌ : ವಲಸೆ ಕಾರ್ಮಿಕರೊಬ್ಬರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಶಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಕೇರಳದ ಮೂವಾಟ್ಟುಪುಳದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಅರುಣಾಚಲ ಪ್ರದೇಶದ ಅಶೋಕ್‌ ದಾಸ್‌ (24) ಉದ್ಯೋಗ ಅರಸಿ ಕೇರಳಕಕ್ಕೆ ಬಂದಿದ್ದ ಅಶೋಕ್‌, ಮೂವಾಟ್ಟುಪುಳ ಸಮೀಪದ ವಾಳಕಂ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಎಫ್‌ಐಆರ್‌ ಪ್ರಕಾರ ಗುರುವಾರ ರಾತ್ರಿ ಅಶೋಕ್‌ ಅವರು, ಅದೇ ಪ್ರದೇಶದಲ್ಲಿದ್ದ ತಮ್ಮ ಸ್ನೇಹಿತೆಯರನ್ನು ಭೇಟಿಯಾಗಲು ತೆರಳಿದ್ದರು. ಆಗ ಸ್ಥಳೀಯರ ಗುಂಪೊಂದು ಅವರನ್ನು ಕಂಬಕ್ಕೆ

ಕೇರಳ:ವಲಸೆ ಕಾರ್ಮಿಕನ ಹತ್ಯೆ|10 ಮಂದಿ ಪೊಲೀಸರ ವಶಕ್ಕೆ Read More »

ಕೋಲಾರ:ಮೋದಿ ಅವರನ್ನು ಕೆಳಗಿಳಿಸಿ ರಾಹುಲ್‌ ಗಾಂಧಿಯನ್ನು ದೇಶದ ಪ್ರಧಾನಿ ಮಾಡೋಣ- ಸಿದ್ದರಾಮಯ್ಯ

ಸಮಗ್ರ ನ್ಯೂಸ್‌ : ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಳಗಿಳಿಸಿ ರಾಹುಲ್‌ ಗಾಂಧಿ ಅವರನ್ನು ದೇಶದ ಪ್ರಧಾನಿ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಕುರುಡುಮಲೆ ವಿನಾಯಕನ ದೇವಸ್ಥಾನದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಿ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ ರೋಡ್ ಶೋನಲ್ಲಿ ಮಾತನಾಡಿದರು. ಬಿಜೆಪಿಯವರು ಮೊದಲಿಗೆ ಗ್ಯಾರಂಟಿ ಜಾರಿ ಸಾಧ್ಯವೇ ಇಲ್ಲ, ರಾಜ್ಯ ದಿವಾಳಿ ಆಗಲಿದೆ ಎನ್ನುವ ಸುಳ್ಳು ಸೃಷ್ಟಿಸಿದರು. ಜಾರಿ ಮಾಡಿದ ಬಳಿಕ ಹೊಸ ಸುಳ್ಳು

ಕೋಲಾರ:ಮೋದಿ ಅವರನ್ನು ಕೆಳಗಿಳಿಸಿ ರಾಹುಲ್‌ ಗಾಂಧಿಯನ್ನು ದೇಶದ ಪ್ರಧಾನಿ ಮಾಡೋಣ- ಸಿದ್ದರಾಮಯ್ಯ Read More »

ಉಡುಪಿ:ನೇಜಾರು ತಾಯಿ ಮತ್ತು ಮಕ್ಕಳ ಕಗ್ಗೊಲೆ ಪ್ರಕರಣ|ಆರೋಪಿ ಪ್ರವೀಣ್ ಚೌಗುಲೆ ನ್ಯಾಯಾಲಯಕ್ಕೆ ಹಾಜರು

ಸಮಗ್ರ ನ್ಯೂಸ್‌ : ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪ್ರವೀಣ್‌ ಚೌಗುಲೆಯನ್ನು ವೀಡಿಯೋ ಕಾನ್ಸರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಈ ಪ್ರಕರಣದ ತನಿಖಾಧಿಕಾರಿ ಮಂಜುನಾಥ ಗೌಡ, ಆರೋಪಿ ಪರ ವಕೀಲರು ಈ ವೇಳೆ ಉಪಸ್ಥಿತರಿದ್ದರು.ವಿಶೇಷ ಸರಕಾರಿ ಅಭಿಯೋಜಕರು ಮುಂದಿನ ವಿಚಾರಣೆ ಸಂದರ್ಭದಲ್ಲಿ ಪ್ರಕರಣಕ್ಕೆ ಪೂರಕವಾದ ಸಾಕ್ಷಿದಾರರ ಹೆಸರು ಸಹಿತವಾದ ಮೆಮೊ ಸಲ್ಲಿಸಬೇಕು. ಆ ಮೂಲಕ ಸಾಕ್ಷಿದಾರರಿಗೆ ಕೋರ್ಟ್ ಸಮನ್ಸ್ ನೀಡಲು ಸಾಧ್ಯವಾಗುತ್ತದೆ ಎಂದು ನ್ಯಾಯಾಧೀಶರು ವಿಚಾರಣೆ ವೇಳೆ

ಉಡುಪಿ:ನೇಜಾರು ತಾಯಿ ಮತ್ತು ಮಕ್ಕಳ ಕಗ್ಗೊಲೆ ಪ್ರಕರಣ|ಆರೋಪಿ ಪ್ರವೀಣ್ ಚೌಗುಲೆ ನ್ಯಾಯಾಲಯಕ್ಕೆ ಹಾಜರು Read More »

ಲೋಕಸಭಾ ಚುನಾವಣೆ/ ಮಾಧವಿ ಲತಾ ಮತ್ತು ಸೀತಾ ಸೊರೇನ್ ಗೆ ವೈ ಪ್ಲಸ್ ಭದ್ರತೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಹೈದರಾಬಾದ್‌ನ ಕೊಂಪೆಲ್ಲಾ ಮಾಧವಿ ಲತಾ ಹಾಗೂ ಜೆಎಂಎಂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಸೀತಾ ಸೊರೆನ್ ಅವರಿಗೆ ಕೇಂದ್ರ ಸರ್ಕಾರವು ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ. ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಅಸಾದುದ್ದೀನ್ ಓವೈಸಿ ಎದುರು ಕಣಕ್ಕಿಳಿಸಲಾಗಿದ್ದು, ಅವರಿಗೆ ಬೆದರಿಕೆ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ಭದ್ರತೆಯನ್ನು ಒದಗಿಸಲಾಗುತ್ತಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯು ವೈ ಪ್ಲಸ್ ಭದ್ರತೆಯನ್ನು ಒದಗಿಸಿದ್ದು, ವಿಐಪಿ ಭದ್ರತೆಯ

ಲೋಕಸಭಾ ಚುನಾವಣೆ/ ಮಾಧವಿ ಲತಾ ಮತ್ತು ಸೀತಾ ಸೊರೇನ್ ಗೆ ವೈ ಪ್ಲಸ್ ಭದ್ರತೆ Read More »

ಕಾಶೀ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಹ್ಯಾಕ್/ ಅಶ್ಲೀಲ ಚಿತ್ರ ಪೋಸ್ಟ್

ಸಮಗ್ರ ನ್ಯೂಸ್: ಕಿಡಿಕೇಡಿಗಳು, ಕಾಶೀ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಅನ್ನು ಹ್ಯಾಕ್ ಮಾಡಿದ್ದು, ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ದೇವಸ್ಥಾನದ ಆಡಳಿತ ಸಮಿತಿ ನಿರ್ವಹಣೆ ಮಾಡುತ್ತಿದ್ದ ವಿಶ್ವ ವಿಶ್ವನಾಥ ಟೆಂಪಲ್ ಟ್ರಸ್ಟ್ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಲಾಗಿದೆ. ಭಕ್ತರು ದೇವಸ್ಥಾನ ಸಮಿತಿಗೆ ಕರೆ ಮಾಡಿ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಪೇಜ್‌ನಲ್ಲಿ ಅಶ್ಲೀಲ ಫೋಟೋಗಳು ಪೋಸ್ಟ್ ಆಗಿದೆ. ಅಸಂಬದ್ಧ ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಕುರಿತು ಮಾಹಿತಿ ತಿಳಿದ ತಕ್ಷಣ ದೇವಸ್ಥಾನ ಆಡಳಿತ

ಕಾಶೀ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಹ್ಯಾಕ್/ ಅಶ್ಲೀಲ ಚಿತ್ರ ಪೋಸ್ಟ್ Read More »

ಬೀದರ್: ಗುರುನಾನಕ್‌ ಕಾಲೇಜಿಗೆ ರಜತ ಮಹೋತ್ಸವ ಸಂಭ್ರಮ

ಸಮಗ್ರ ನ್ಯೂಸ್‌ : ನಗರದ ಗುರುನಾನಕ್‌ ಪ್ರಥಮ ದರ್ಜೆ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮ ನಗರದಲ್ಲಿ ಶುಕ್ರವಾರ ನಡೆಯಿತು. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ್‌ ಉದ್ಘಾಟಿಸಿ, ಗುರು ನಾನಕ್ ಪ್ರಥಮ ದರ್ಜೆ ಕಾಲೇಜು 25 ವರ್ಷಗಳು ಪೂರ್ಣಗೊಳಿಸಿರುವುದು ಸಂತಸದ ವಿಷಯ.ಗಡಿ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಆಧಾರಿತ ಜ್ಞಾನ ನೀಡುತ್ತಿದೆ. ಜೊತೆಗೆ ಅನ್ನದಾಸೋಹ ಕೂಡ ಮಾಡುತ್ತಿರುವುದು ಶ್ಲಾಘನಾರ್ಹ ಎಂದರು. ‌ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ .ಎಸ್. ಬಿರಾದಾರ, ಕುಲಸಚಿವ ಪ್ರೊ. ಪರಮೇಶ್ವರ

ಬೀದರ್: ಗುರುನಾನಕ್‌ ಕಾಲೇಜಿಗೆ ರಜತ ಮಹೋತ್ಸವ ಸಂಭ್ರಮ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಏಪ್ರಿಲ್ 07ರಿಂದ 13ರವರೆಗಿನ ಈ ವಾರದಲ್ಲಿ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ. ಮೇಷ ರಾಶಿಅನವಶ್ಯಕವಾದ ಕೆಲಸ ಕಾರ್ಯಗಳನ್ನಷ್ಟೇ ಆಯ್ಕೆ ಮಾಡುವಿರಿ. ಹಣದ ವಿಚಾರದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ನೇರವಾದ ನಡೆ ನುಡಿಯಿಂದ ಯಾವುದೇ ತೊಂದರೆ ಎದುರಾಗದು. ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ಸೋದರಿಯಿಂದ

ದ್ವಾದಶ ರಾಶಿಗಳ ವಾರಭವಿಷ್ಯ Read More »