Editor

ಕಾರ್ಕಳ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಬಂಧನ

ಸಮಗ್ರ ನ್ಯೂಸ್‌ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಮುಖ್ಯ ಶಿಕ್ಷಕನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೋಳ ವಂಜಾರಕಟ್ಟೆ ನಿವಾಸಿ ಬರಬೈಲು ಶಾಲೆಯ ಮುಖ್ಯ ಶಿಕ್ಷಕ ಹಾಗೂ ವಂಜಾರಕಟ್ಟೆ ಇಲ್ನೋಡಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ರಾಜೇಂದ್ರ ಆಚಾರ್ (58) ಬಂಧಿತ ಆರೋಪಿ. ಈತ ಪ್ರಾಥಮಿಕ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಅನೇಕ ದೂರಿಗಳಿದ್ದು, ಊರವರು ಕೂಡಾ ಆತನಿಗೆ ಬುದ್ದಿವಾದ ಹೇಳಿದ್ದರು. ಆದರೂ ಈ ಮುಖ್ಯ

ಕಾರ್ಕಳ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಬಂಧನ Read More »

ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆಯಲ್ಲಿ ಚೆಂಡು ವಿಶೇಷ

ಸಮಗ್ರ ನ್ಯೂಸ್‌ : ಇತಿಹಾಸ ಪ್ರಸಿದ್ಧ ಸಾವಿರ ಸೀಮೆ ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆ ಈಗಾಗಲೇ ಆರಂಭಗೊಂಡಿದ್ದು, ನಿನ್ನೆಯಿಂದ ಐದು ದಿನಗಳ ಚೆಂಡು ನಡೆಯಲಿದೆ. ಈ ಪೊಳಲಿ ಚೆಂಡನ್ನು ಮೂಡಬಿದ್ರೆಯಲ್ಲಿ ತಯಾರಿಸಿ ಪುತ್ತಿಗೆಯಿಂದ ಮಳಲಿ(ಮಣೇಲ್) ಮೂಲಕ ಪೊಳಲಿ ದೇಗುಲಕ್ಕೆ ಶನಿವಾರ ತರಲಾಯಿತು. ಪುತ್ತಿಗೆಯಿಂದ ಪೊಳಲಿಗೆ ಚೆಂಡನ್ನು ತರುವ ಜವಾಬ್ದಾರಿ ಮಳಲಿ ಕಡಪುಕರಿಯ ಗಾಣಿಕ ಸಮಾಜದವರದ್ದು. ಈ ಚೆಂಡನ್ನು ತರುವ ಪ್ರಕ್ರಿಯೆ ಅನೇಕ ರೀತಿ- ರಿವಾಜುಗಳನ್ನು ಒಳಗೊಂಡಿದೆ. ಪೊಳಲಿ ದೇವಸ್ಥಾನವವು ಮೂಡಬಿದ್ರೆ ಪುತ್ತಿಗೆ ಚೌಟ ಅರಸರ ಆಡಳಿತಕ್ಕೆ

ಪೊಳಲಿ ರಾಜರಾಜೇಶ್ವರಿ ದೇವಿಯ ವಾರ್ಷಿಕ ಜಾತ್ರೆಯಲ್ಲಿ ಚೆಂಡು ವಿಶೇಷ Read More »

ಮೋದಿ ವಿರುದ್ಧ ಆಧಾರ ರಹಿತ ಆರೋಪ/ ಸಿದ್ಧರಾಮಯ್ಯ ವಿರುದ್ಧ ದೂರು

ಸಮಗ್ರ ನ್ಯೂಸ್: ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಚಿವರ ವಿರುದ್ಧ ಬಿಜೆಪಿ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದೆ. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಅಶೋಕ್ ಗೌಡ, ರಾಜ್ಯ ಕಾನೂನು ಆಯೋಗದ ಪ್ರತಿನಿಧಿ ವಸಂತ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ. ಚುನಾವಣಾ ಸಚಿವರ ಸಮಿತಿಗೆ ಒಟ್ಟು ನಾಲ್ಕು

ಮೋದಿ ವಿರುದ್ಧ ಆಧಾರ ರಹಿತ ಆರೋಪ/ ಸಿದ್ಧರಾಮಯ್ಯ ವಿರುದ್ಧ ದೂರು Read More »

ಕೇಜ್ರೀವಾಲ್ ಬಂಧನ/ ಆಮ್ ಆದ್ಮಿ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ

ಸಮಗ್ರ ನ್ಯೂಸ್: ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಮತ್ತು ಕಾರ್ಯಕರ್ತರು ಇಂದು ಜಂತರ್ ಮಂತರ್‍ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ದೆಹಲಿ ಸರ್ಕಾರದ ಸಚಿವ ಗೋಪಾಲ್ ರೈ, ಆಮ್ ಆದ್ಮ ಪಕ್ಷದ ಶಾಸಕರು, ಸಚಿವರು, ಸಂಸದರು ಮತ್ತು ಕೌನ್ಸಿಲರ್‍ಗಳು ದೆಹಲಿಯ ಜಂತರ್ ಮಂತರ್ ಮತ್ತು ಪಂಜಾಬ್‍ನ ಶಾಹೀದ್ ಭಗತ್ ಸಿಂಗ್ ಅವರ ಹಳ್ಳಿಯಾದ ಖತ್ಸರ್ಕಲನ್ನಲ್ಲಿ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಸಾಮೂಹಿಕ ಉಪವಾಸವನ್ನು ನಡೆಸಲಿದ್ದಾರೆ

ಕೇಜ್ರೀವಾಲ್ ಬಂಧನ/ ಆಮ್ ಆದ್ಮಿ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ Read More »

ದಾಖಲೆಯ ಏರಿಕೆ ಕಂಡ ಬಂಗಾರದ ಬೆಲೆ/ 71 ಸಾವಿರ ದಾಟಿದ 10 ಗ್ರಾಂ ಚಿನ್ನದ ಬೆಲೆ

ಸಮಗ್ರ ನ್ಯೂಸ್: ಬಂಗಾರದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿ ಮೊದಲ ಬಾರಿ 10 ಗ್ರಾಂ ಚಿನ್ನದ (24 ಕ್ಯಾರೆಟ್ ಗೋಲ್ಡ್) ದರ 71 ಸಾವಿರ ದಾಟಿದ್ದು, ಯುಗಾದಿಗೆ ಹಬ್ಬಕ್ಕೆ ಒಂದೆರಡು ದಿನ ಬಾಕಿ ಇರುವಾಗ ಬಂಗಾರ ದರ ಜನತೆಯ ತಲೆ ತಿರುಗಿಸುತ್ತಿದೆ. ಮದುವೆಗಾಗಿ ಜ್ಯುವೆಲ್ಲರಿ ಖರೀದಿಗೆ ಹೋದವರು ಹೌಹಾರುತ್ತಿದ್ದಾರೆ. ಹೀಗಾಗಿ ಖರೀದಿ ಪ್ರಮಾಣವನ್ನು ಕಡಿಮೆಗೊಳಿಸುವ ಅನಿವಾರ್ಯತೆ ಗ್ರಾಹಕರಿಗೆ ಎದುರಾಗಿದೆ. ಕಳೆದ ಹತ್ತು ದಿನಗಳಲ್ಲಿ ಬಂಗಾರದ ಬೆಲೆ 3500 – 4000 ರೂ. ನಷ್ಟು ಹೆಚ್ಚಳವಾಗಿದ್ದು, ಈ ನಡುವೆ

ದಾಖಲೆಯ ಏರಿಕೆ ಕಂಡ ಬಂಗಾರದ ಬೆಲೆ/ 71 ಸಾವಿರ ದಾಟಿದ 10 ಗ್ರಾಂ ಚಿನ್ನದ ಬೆಲೆ Read More »

2023-24ರಲ್ಲಿ 146.01 ಕೋಟಿ ಆದಾಯ/ ಮೊದಲನೇ ಸ್ಥಾನ ಉಳಿಸಿಕೊಂಡ ಕುಕ್ಕೆ ದೇವಾಲಯ

ಸಮಗ್ರ ನ್ಯೂಸ್: 2023-24ರ ಆರ್ಥಿಕ ವರ್ಷದಲ್ಲಿ ಅತಿಹೆಚ್ಚು ಗಳಿಕೆ ಕಂಡ ಮುಜರಾಯಿ ಇಲಾಖೆಯ ದೇವಾಲಯಗಳ ಮಾಹಿತಿಯನ್ನು ಇಲಾಖೆಯ ಆಯುಕ್ತರು ಬಿಡುಗಡೆಗೊಳಿಸಿದ್ದು, ಕುಕ್ಕೆ ಸುಬ್ರಮಣ್ಯ ದೇವಾಲಯವು ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. ಸತತವಾಗಿ ಹದಿಮೂರು ವರ್ಷವೂ ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕಿನ ಪ್ರಸಿದ್ದ ನಾಗರಾಧಾನೆಯ ಸನ್ನಿಧಿ ಕುಕ್ಕೆ ಸುಬ್ರಮಣ್ಯ ದೇವಾಲಯವು ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಾಲಯವಿದೆ. 2022-23ಕ್ಕೆ ಹೋಲಿಸಿದರೆ ಕುಕ್ಕೆ ದೇವಾಲಯದ ಆದಾಯವು 26 ಕೋಟಿ ಹೆಚ್ಚಾಗಿದೆ. ಕುಕ್ಕೆ ದೇವಾಲಯಕ್ಕೆ

2023-24ರಲ್ಲಿ 146.01 ಕೋಟಿ ಆದಾಯ/ ಮೊದಲನೇ ಸ್ಥಾನ ಉಳಿಸಿಕೊಂಡ ಕುಕ್ಕೆ ದೇವಾಲಯ Read More »

ಕಡಬ: ಬಿಳಿನೆಲೆ ವಲಯ ಕಾಂಗ್ರೆಸ್ ಸಭೆ| ಬಿಜೆಪಿ – ಜೆಡಿ(ಎಸ್)ನಿಂದ ಹಲವರು ಕಾಂಗ್ರೆಸ್ ಸೇರ್ಪಡೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಬಿಳಿನೆಲೆ ವಲಯ ಕಾಂಗ್ರೆಸ್ ಸಭೆ ಶನಿವಾರ(ಎ.6) ದಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರ ನೇತ್ರತ್ವದಲ್ಲಿ ನಡೆಯಿತು. ಲೋಕಸಭಾ ಚುನಾವಣೆಯ ಅವಶ್ಯಕ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ನಿತಿನ್ ಗೌಡ ಮೂಜೂರು, ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕಳಿಗೆ ಸೇರಿದಂತೆ ಹಲವಾರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಸಭೆಯಲ್ಲಿ ಡಿಸಿಸಿ ವೀಕ್ಷಕರಾದ ಕಿರಣ್ ಬುಡ್ಲೆಗುತ್ತು, ಜಿಲ್ಲಾ ಪ್ರಚಾರ ಸಮಿತಿ

ಕಡಬ: ಬಿಳಿನೆಲೆ ವಲಯ ಕಾಂಗ್ರೆಸ್ ಸಭೆ| ಬಿಜೆಪಿ – ಜೆಡಿ(ಎಸ್)ನಿಂದ ಹಲವರು ಕಾಂಗ್ರೆಸ್ ಸೇರ್ಪಡೆ Read More »

ವಿಪ್ರೋದ ನೂತನ ಸಿಇಒ ಆಗಿ ಶ್ರೀನಿವಾಸ್ ಪಲ್ಲಿಯಾ ನೇಮಕ

ಸಮಗ್ರ ನ್ಯೂಸ್: ಭಾರತೀಯ ಐಟಿ ದೈತ್ಯ ಕಂಪನಿ ವಿಪ್ರೋದ ಸಿಇಒ ಥಿಯೆರಿ ಡೆಲಾಪೊರ್ಟೆ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ನೂತನ ಸಿಇಒ ಆಗಿ ಶ್ರೀನಿವಾಸ್ ಪಲ್ಲಿಯಾ ಅವರನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ನೇಮಕ ಮಾಡಲಾಗಿದೆ. ಏಪ್ರಿಲ್ 6ರಿಂದ ಜಾರಿಗೆ ಬರುವಂತೆ ಡೆಲಾಪೊರ್ಟೆ ಅವರ ರಾಜೀನಾಮೆಯನ್ನು ವಿಪ್ರೋದ ಆಡಳಿತ ಮಂಡಳಿಯು ಅಂಗೀಕರಿಸಿದೆ ಮತ್ತು ಮೇ 31ರಂದು ವ್ಯವಹಾರದ ಅವಧಿಯ ಮುಕ್ತಾಯದಿಂದ ಅವರು ಕಂಪನಿಯ ಉದ್ಯೋಗದಿಂದ ಬಿಡುಗಡೆ ಹೊಂದುತ್ತಾರೆ ಎಂದು ವಿಪ್ರೋದ ಅಧ್ಯಕ್ಷ ರಿಷದ್ ಪ್ರೇಮ್‍ಜಿ ಹೇಳಿದ್ದಾರೆ. ವಿಪ್ರೋದಲ್ಲಿ ಮೂರು ದಶಕಗಳಿಂದ ಸೇವೆ

ವಿಪ್ರೋದ ನೂತನ ಸಿಇಒ ಆಗಿ ಶ್ರೀನಿವಾಸ್ ಪಲ್ಲಿಯಾ ನೇಮಕ Read More »

ಈ ರೀತಿಯ ಕನಸು ಬಿದ್ದರೆ ನಿಜಕ್ಕೂ ಡೇಂಜರ್, ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್

ಸಮಗ್ರ ನ್ಯೂಸ್: ನಿದ್ರೆಯ ಸಮಯದಲ್ಲಿ ಕನಸುಗಳು ಬರುವುದು ಸಹಜ. ಕೆಲವೊಮ್ಮೆ ಅವರು ನಮ್ಮನ್ನು ಆಶ್ಚರ್ಯಗೊಳಿಸುತ್ತಾರೆ, ಕೆಲವೊಮ್ಮೆ ಅವರು ನಮ್ಮನ್ನು ಹೆದರಿಸುತ್ತಾರೆ. ಇತರ ಸಮಯಗಳು ವಿನೋದಮಯವಾಗಿರುತ್ತವೆ. ನಿದ್ರೆಯ ಸಮಯದಲ್ಲಿ ಕನಸುಗಳು ನಮ್ಮ ಆಂತರಿಕ ಭಾವನೆಗಳನ್ನು ತೋರಿಸುತ್ತವೆ ಎಂದು ಹಲವರು ನಂಬುತ್ತಾರೆ. ಆದಾಗ್ಯೂ, ಕನಸುಗಳಿಗೆ ಗುಪ್ತ ಅರ್ಥಗಳಿವೆ ಎಂದು ಕೆಲವರು ನಂಬುತ್ತಾರೆ. ಕನಸಿನಲ್ಲಿ ಹೂವು ಮತ್ತು ಹಣ್ಣುಗಳನ್ನು ನೋಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಕೆಲವು ದುರದೃಷ್ಟದ ಚಿಹ್ನೆಗಳು ಎಂದು ನಂಬಲಾಗಿದೆ. ಅದರಲ್ಲೂ ಕನಸಿನಲ್ಲಿ ಐದು ವಸ್ತುಗಳು ಕಂಡರೆ ದುರಾದೃಷ್ಟ ಖಂಡಿತ

ಈ ರೀತಿಯ ಕನಸು ಬಿದ್ದರೆ ನಿಜಕ್ಕೂ ಡೇಂಜರ್, ಇಲ್ಲಿದೆ ನೋಡಿ ಆಸ್ಟ್ರೋ ಟಿಪ್ಸ್ Read More »

ಈ ಜಿಲ್ಲೆಯಲ್ಲಿ ಹೆಚ್ಚಾಯ್ತು ಬಿಸಿಲು, ಜನರ ಗೋಳಾಟ ಕೇಳೋರಿಲ್ಲ!

ಸಮಗ್ರ ನ್ಯೂಸ್: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿದೆ. ತಾಪಮಾನವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರುತ್ತಿದೆ. ಮುಂದಿನ ದಿನಗಳಲ್ಲಿ ಹಗಲಿನಲ್ಲಿ ಬೆಂಗಳೂರು ತಾಪಮಾನವು ದೆಹಲಿ ಮತ್ತು ಮುಂಬೈ ಅನ್ನು ಮೀರಿಸುತ್ತೆ ಎಂದು ವರದಿಯಾಗಿದೆ. ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರರ್ಗಾ, ನಿಂಬರ್ಗಾ ತಾಂಡಾ ಮತ್ತು ರಾಯಚೂರು ಜಿಲ್ಲೆಯ ಹೂಡಾ ಹೋಬಳಿಯಲ್ಲಿ ಶುಕ್ರವಾರ (ಏ.05) ರಂದು 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅತಿ ಹೆಚ್ಚು ತಾಪಮಾನ ದಾಖಲುಏಪ್ರಿಲ್ 5 ರಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ 42 ರಿಂದ

ಈ ಜಿಲ್ಲೆಯಲ್ಲಿ ಹೆಚ್ಚಾಯ್ತು ಬಿಸಿಲು, ಜನರ ಗೋಳಾಟ ಕೇಳೋರಿಲ್ಲ! Read More »