ಇಸ್ರೇಲ್ ಮೇಲೆ ಇರಾನ್ ದಾಳಿ: ಭಾರತೀಯರಿಗಾಗಿ ಸಹಾಯವಾಣಿ ತೆರೆದ ರಾಯಭಾರ ಕಚೇರಿ
ಸಮಗ್ರ ನ್ಯೂಸ್: ಹಮಾಸ್ ಉಗ್ರರ ದಾಳಿಗೆ ಸಿಲುಕಿದ್ದ ಇಸ್ರೇಲ್ ಈಗ ಮತ್ತೊಂದು ದಾಳಿ ಎದುರಿಸುತ್ತಿದೆ. ಇಸ್ರೇಲ್ ಮೇಲೆ ಇರಾನ್ 200ಕ್ಕೂ ಅಧಿಕ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದು,ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದು, ಟೆಲ್‌ಅವಿವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸಹಾಯವಾಣಿ ತೆರೆದಿದೆ. “ಯಾರೂ ಆತಂಕಕ್ಕೀಡಾಗಬಾರದು. ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ” ಎಂಬ ಸಂದೇಶವನ್ನೂ ರವಾನಿಸಿದೆ ಇಸ್ರೇಲ್‌ನಲ್ಲಿ ಈಗೀನ ಬೆಳವಣಿಗೆಯಿಂದಾಗಿ ಇಲ್ಲಿ ನೆಲೆಸಿರುವ ಭಾರತೀಯರು ಆತಂಕಪಡಬೇಕಿಲ್ಲ. ಭಾರತೀಯರು ಸ್ಥಳೀಯ ಅಧಿಕಾರಿಗಳು ಸೂಚಿಸಿರುವ ಶಿಷ್ಟಾಚಾರಗಳನ್ನು ಪಾಲಿಸಿ.
ಇಸ್ರೇಲ್ ಮೇಲೆ ಇರಾನ್ ದಾಳಿ: ಭಾರತೀಯರಿಗಾಗಿ ಸಹಾಯವಾಣಿ ತೆರೆದ ರಾಯಭಾರ ಕಚೇರಿ Read More »










