ಮಂಗಳೂರು: ಮೋದಿ ರೋಡ್ ಶೋ ಪಕ್ಕದಲ್ಲಿ ಬೆಂಕಿ ಅವಘಡ

ಸಮಗ್ರ ನ್ಯೂಸ್: ಇಂದು ಮೈಸೂರಿನಲ್ಲಿ ಸಮಾವೇಶ ಮುಗಿಸಿ ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆದಿತ್ತು. ಆದರೆ ರೋಡ್ ಶೋ ಪಕ್ಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ನಗರದ ಭಾರತ್ ಮಾಲ್ ಪಕ್ಕದ ಔಷಧ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

. Ad Widget . Ad Widget

ನರೇಂದ್ರ ಮೋದಿ ರೋಡ್ ಶೋ ನಡೆಯುತ್ತಿದ್ದ ಮಾರ್ಗದಿಂದ ಈ ಕಟ್ಟಡ ಕೇವಲ 50 ಮೀಟರ್ ಅಂತರದಲ್ಲಿದೆ. ನಾಯಕ್ ಹೆಲ್ತ್ ಕೇರ್ ಗೋಡೌನ್‌ನಲ್ಲಿ ಔಷಧ, ವೈದ್ಯಕೀಯ ಉಪಕರಣ ಸಂಗ್ರಹಿಸಲಾಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಇಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

. Ad Widget . . Ad Widget . Ad Widget

Leave a Comment

Your email address will not be published. Required fields are marked *