Ad Widget

ಧಾರವಾಡ: ಚುನಾವಣೆ ಖರ್ಚು ವೆಚ್ಚಗಳ ಮೇಲೆ ನಿಗಾವಹಿಸಿ- ಭೂಷಣ ಪಾಟೀಲ

ಸಮಗ್ರ ನ್ಯೂಸ್‌ : ಧಾರವಾಡ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಚುನಾವಣಾ ಅಭ್ಯರ್ಥಿಗಳ ಖರ್ಚುವೆಚ್ಚದ ಮೇಲೆ ಪ್ರತಿ ದಿನವೂ ತೀವ್ರ ನಿಗಾವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರಾದ ಭೂಷಣ ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget

ಅವರು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಚುನಾವಣಾ ಖರ್ಚು ವೆಚ್ಚ ನಿಗಾ ತಂಡದ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಮಗೆ ಕುಂದಗೋಳ, ಹುಬ್ಬಳ್ಳಿ ಪಶ್ಚಿಮ, ಕಲಘಟಗಿ, ಹಾಗೂ ಶಿಗ್ಗಾಂವ ಕ್ಷೇತ್ರಗಳ ವ್ಯಾಪ್ತಿಗಳು ಒಳಪಟ್ಟಿದ್ದು ಸಂಬಂಧಿಸಿದ ಅಧಿಕಾರಿಗಳು ಪ್ರತಿದಿನವು ವರದಿ ಸಲ್ಲಿಸುವಂತೆ ತಿಳಿಸಿದರು.

Ad Widget . Ad Widget .

ಚುನಾವಣಾ ಅಭ್ಯರ್ಥಿಗಳ ಪ್ರತಿದಿನದ ವಿವಿಧ ಕಾರ್ಯಕ್ರಮಗಳ, ಸಮಾರಂಭಗಳ ಚಟುವಟಿಕೆಗಳನ್ನು ಸರಿಯಾಗಿ ದಾಖಲಿಸಿಕೊಳ್ಳುವಂತೆ ಹಾಗೂ ವಿಡಿಯೋ ರೆಕಾರ್ಡಿಂಗ್ ಸಹ ಮಾಡುವಂತೆ ವಿಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ ತಂಡಗಳಿಗೆ ಹಾಗೂ ಸಹಾಯಕ ವೆಚ್ಚ ಅಧಿಕಾರಿಗಳಿಗೆ ತಿಳಿಸಿದರು. ಖರ್ಚು ವೆಚ್ಚ ನಿಗಾ ತಂಡವು ಶಾಡೋ ರಜಿಸ್ಟರ್‍ನಲ್ಲಿ ಎಲ್ಲ ಖರ್ಚು ವೆಚ್ಚವನ್ನು ದಾಖಲಿಸುವಂತೆ ಸೂಚಿಸಿದರು.

ಧಾರವಾಡ ಜಿಲ್ಲೆಯು ಖರ್ಚು ವೆಚ್ಚ ಸೂಕ್ಷ್ಮ ಕೇಂದ್ರವೆಂದು ಪರಿಗಣಿಸಲಾಗಿದ್ದು, ಕಾನೂನು ಬಾಹಿರ ಖರ್ಚಿನ ಮೇಲೆ ತೀವ್ರ ನಿಗಾ ವಹಿಸಬೇಕು. ಚುನಾವಣೆಯನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಜರುಗಿಸುವ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಪ್ರತಿ ದಿನ ನಿತ್ಯದ ಖರ್ಚು ವೆಚ್ಚಗಳನ್ನು ಜಿಲ್ಲಾ ವೆಚ್ಚ ಸಮಿತಿಯು ನಿಗಾ ವಹಿಸಬೇಕು.

ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹಿರಾತುಗಳ ಖರ್ಚುವೆಚ್ಚಗಳನ್ನು ಎಮ್‍ಸಿಎಮ್‍ಸಿ ತಂಡವು ಪ್ರತಿದಿನ ವೆಚ್ಚ ನಿಗಾ ನೋಡಲ್ ಅಧಿಕಾರಿಗಳಿಗೆ ವರದಿ ಒಪ್ಪಿಸತಕ್ಕದ್ದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 24 ಚೆಕ್‌ ಪೋಸ್ಟ್‌ ಗಳು ಕಾರ್ಯನಿರ್ವಹಿಸುತ್ತಿದ್ದು, 57 ಎಫ್‍ಎಸ್‍ಟಿ, 72 ಎಸ್‍ಎಸ್‍ಟಿ ಕಾರ್ಯನಿರ್ವಹಿಸುತ್ತಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಮ್‍ಸಿಸಿ ನೋಡಲ್ ಅಧಿಕಾರಿ ಮೋನಾ ರಾವತ ಅವರು ತಿಳಿಸಿದರು.

ಜಿಲ್ಲೆಯ ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಹಾಗೂ ಬ್ಯಾಂಕ್‍ಗಳ ಪ್ರತಿನಿತ್ಯ ಹಣದ ವ್ಯವಹಾರಗಳ ಮೇಲೆ ನಿಗಾ ವಹಿಸಲಾಗುತ್ತಿದೆ. 10 ಲಕ್ಷ ಮೇಲ್ಪಟ್ಟ ವ್ಯವಹಾರಗಳನ್ನು ಆದಾಯ ತೆರಿಗೆ ಇಲಾಖೆ ನಿಗಾ ವಹಿಸುತ್ತಿದೆ ಎಂದು ಆದಾಯ ತೆರಿಗೆ ನೂಡಲ್ ಅಧಿಕಾರಿಗಳಾದ ಫಕ್ಕೀರೇಶ ಬಾದಾಮಿ ಅವರು ತಿಳಿಸಿದರು.

ಸಭೆಯ ನಂತರ ಜಿಲ್ಲಾ ನಿಯಂತ್ರಣ ಕೋಠಡಿಗೆ ಭೇಟಿ ನೀಡಿದ ಅವರು ಎಮ್‍ಸಿಎಮ್‍ಸಿ, ಸಾಮಾಜಿಕ ಜಾಲ ತಾಣ, ಸಿ-ವಿಜಿಲ್, ಸುವಿಧಾ, ದೂರ ನಿಯಂತ್ರಣ, ಟಿವಿ ಮಾಧ್ಯಮ ವೀಕ್ಷಣಾ ತಂಡಗಳ ಕಾರ್ಯಗಳನ್ನು ಪರಿಶೀಲಿಸಿದರು.

Leave a Comment

Your email address will not be published. Required fields are marked *