Editor

ಬೆಂಗಳೂರಿನಲ್ಲಿ ಪಿಜಿ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಪಿಜಿ ಮೇಲಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಗರದ ವೈಟ್ ಫೀಲ್ಡ್ ನ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದೆ. ಕಲಬುರಗಿ ಮೂಲದ 28 ವರ್ಷದ ಯುವಕ ಕೆಲಸ ಸೀಮಿತ ಬೆಂಗಳೂರಿಗೆ ಬಂದಿದ್ದ, ಎಲ್ಲೂ ಕೂಡ ಕೆಲಸ ಸಿಕ್ಕದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಪಿಜಿ ಮೇಲಿಂದ ಬಿದ್ದು ಯುವಕ ಆತ್ಮಹತ್ಯೆ Read More »

ರಿಸಲ್ಟ್ ಬರುವ ಮೊದಲೇ ಸಂಸದರಾದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ

ಸಮಗ್ರ ನ್ಯೂಸ್: ಮೊನ್ನೆಯಷ್ಟೆ ಎರಡು ಹಂತದ ಲೋಕ ಸಭಾ ಚುನಾವಣೆ ಮುಕ್ತಾಯಗೊಂಡಿದೆ. ಆದರೆ ಆ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರನ್ನು ಸಂಸದರನ್ನಾಗಿ ಮಾಡಲಾಗಿದೆ. ಹೌದು ಲಕ್ಷ್ಮಣ ಅವರನ್ನು ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರ ಮಗಳ ಮದುವೆ ಬೀಗರ ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಲಕ್ಣ್ಮಣ್ ಅವರನ್ನು ಮೈಸೂರು ಕೊಡಗು ಸಂಸದ ಎಂದು ನಮೂದಿಸಲಾಗಿದೆ. ದಿನಾಂಕ 12/05/2024ರಂದು ಬೀಗರ ಔತಣ ಕೂಟ ಇದ್ದು, ಸಿಎಂ ಸಿದ್ದರಾಮಯ್ಯ ಡಿಸಿಎಂ

ರಿಸಲ್ಟ್ ಬರುವ ಮೊದಲೇ ಸಂಸದರಾದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ Read More »

ಎಸ್ಎಸ್ ಎಲ್ ಸಿ ಫಲಿತಾಂಶ| ರೈತನ ಮಗ ರಾಜ್ಯಕ್ಕೆ ದ್ವಿತೀಯ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶೇಡಬಾಳ ಗ್ರಾಮದ ಸಿದ್ದಾಂತ ನಾಯಿಕಬಾ ಗಡಗೆ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಶೇಡಬಾಳದ ಆಚಾರ್ಯ ಸುಬಲಸಾಗರ ಫ್ರೌಢ ವಿದ್ಯಾಮಂದಿರದ ಈ ವಿದ್ಯಾರ್ಥಿ ರೈತನ ಮಗ. ಇಂಗ್ಲಿಷ್ ನಲ್ಲಿ 99 ಪಡೆದಿದ್ದು ಉಳಿದೆಲ್ಲ ವಿಷಯಗಳಿಗೂ ಸಂಪೂರ್ಣ ಅಂಕಗಳನ್ನು ಬಾಚಿಕೊಂಡಿದ್ದಾರೆ

ಎಸ್ಎಸ್ ಎಲ್ ಸಿ ಫಲಿತಾಂಶ| ರೈತನ ಮಗ ರಾಜ್ಯಕ್ಕೆ ದ್ವಿತೀಯ Read More »

ಮಹಿಳೆ ಕಿಡ್ನ್ಯಾಪ್ ಪ್ರಕರಣ| ಹೆಚ್.ಡಿ ರೇವಣ್ಣಗೆ ಜೈಲೇ ಗತಿ

ಸಮಗ್ರ ನ್ಯೂಸ್: ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ನಡೆಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಸೋಮವಾರ(ಮೇ.13) ಬೆಳಿಗ್ಗೆ 11.30ಕ್ಕೆ ಮುಂದೂಡಿಕೆ ಮಾಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ. ಮಹಿಳೆ ಕಿಡ್ನ್ಯಾಪ್ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, ಹೆಚ್.ಡಿ ರೇವಣ್ಣಗೆ ಸದ್ಯಕ್ಕೆ ಜಾಮೀನು ನೀಡದಂತೆ ಎಸ್‌ಐಟಿ ಪರ ಎಸ್ ಪಿಪಿ ಅವರು

ಮಹಿಳೆ ಕಿಡ್ನ್ಯಾಪ್ ಪ್ರಕರಣ| ಹೆಚ್.ಡಿ ರೇವಣ್ಣಗೆ ಜೈಲೇ ಗತಿ Read More »

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ

ಸಮಗ್ರ ನ್ಯೂಸ್: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡ (SIT) ಪರ ವಾದಿಸುತ್ತಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎನ್ ಜಗದೀಶ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ಎಸ್‌ಐಟಿ ರಚನೆಯಾಗಿರುವ ಅಪರಾಧ ತನಿಖಾ ವಿಭಾಗದ (CID) ಮುಖ್ಯಸ್ಥರಿಗೆ ಅವರ ರಾಜೀನಾಮೆಯನ್ನು ದೃಢಪಡಿಸಿದ ಮೂಲಗಳು, ವಿಚಾರಣಾ ನ್ಯಾಯಾಲಯ ಮತ್ತು ಸೆಷನ್‌ಗಳ ಮುಂದೆ ಪ್ರಾಸಿಕ್ಯೂಷನ್ ನ್ನು ಸಮರ್ಥಿಸಲು ರಾಜ್ಯ ಸರ್ಕಾರವು ಇಬ್ಬರು

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ| ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ Read More »

ಕಾಂಗ್ರೆಸ್‍ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್ ಪಿತ್ರೋಡಾ

ಸಮಗ್ರ ನ್ಯೂಸ್: ಕಾಂಗ್ರೆಸ್‍ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ವಿವಾದಿತ ಹೇಳಿಕೆಗಳ ಸರಮಾಲೆ ಬೆನ್ನಲ್ಲೇ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪಕ್ಷದ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಈ ಬಗ್ಗೆ ಟ್ವೀಟರ್‍ನಲ್ಲಿ ಘೋಷಣೆ ಮಾಡಿದ್ದಾರೆ. ತಮ್ಮ ಸ್ವಂತ ಇಚ್ಛೆಯಿಂದ ಸ್ಯಾಮ್ ಪಿತ್ರೋಡಾ ಅವರು ಇಂಡಿಯನ್ ಓವರ್‍ಸೀಸ್ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಅವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಜೈರಾಂ ಹೇಳಿದ್ದಾರೆ. ತಂದೆ ಮೃತನಾದ ಬಳಿಕ ಆತನ

ಕಾಂಗ್ರೆಸ್‍ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್ ಪಿತ್ರೋಡಾ Read More »

ಭಾರತಕ್ಕೂ ಬಂತು ಗೂಗಲ್ ವ್ಯಾಲೆಟ್

ಸಮಗ್ರ ನ್ಯೂಸ್: ಪ್ರತಿಷ್ಠಿತ ಕಂಪೆನಿ ಗೂಗಲ್ ಆಂಡ್ರಾಯ್ಡ್ ಮೊಬೈಲ್ ಹೊಂದಿರುವ ತನ್ನ ಗ್ರಾಹಕರಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಗೂಗಲ್ ವ್ಯಾಲೆಟ್ ಎನ್ನುವ ವಿಶೇಷ ಅಪ್ಲಿಕೇಶನ್ ಪರಿಚಯಿಸಿದೆ. ಈ ವ್ಯಾಲೆಟ್‍ನಿಂದ ಬೋಡಿರ್ಂಗ್ ಪಾಸ್, ಲಾಯಲ್ಟಿ ಕಾರ್ಡ್, ಕಾರ್ಯಕ್ರಮಗಳ ಟಿಕೆಟ್ , ಸಾರ್ವಜನಿಕ ಸಾರಿಗೆ ಪಾಸ್‍ಗಳು ಸೇರಿದಂತೆ ದೈನಂದಿನ ಅಗತ್ಯಕ್ಕೆ ಬೇಕಾಗುವ ಎಲ್ಲ ದಾಖಲೆಗಳನ್ನು ಒಂದೆಡೆ ಇಡುವುದಕ್ಕೆ ಈ ಅಪ್ಲಿಕೇಶನ್ ಸೂಕ್ತವಾಗಿರಲಿದೆ. ಜೊತೆಗೆ ಗ್ರಾಹಕರ ದಾಖಲೆಗಳು ಕೂಡ ಭದ್ರವಾಗಿರಲಿದೆ. ಈ ಡಿಜಿಟಲ್ ಅಪ್ಲಿಕೇಶನ್ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡಿದ್ದು, ಈ

ಭಾರತಕ್ಕೂ ಬಂತು ಗೂಗಲ್ ವ್ಯಾಲೆಟ್ Read More »

ಸಿಕಂದರ್‍ನಲ್ಲಿ ರಶ್ಮಿಕಾ/ ಸಲ್ಮಾನ್‍ಗೆ ನಾಯಕಿಯಾದ ನ್ಯಾಷನಲ್ ಕ್ರಶ್

ಸಮಗ್ರ ನ್ಯೂಸ್: ಪುಷ್ಪಾ ನಂತರ ರಶ್ಮಿಕಾ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಫ್ಯಾನ್ಸ್ ಕಾತರಕ್ಕೆ ಉತ್ತರ ಸಿಕ್ಕಿದ್ದು, ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‍ನಲ್ಲಿ ಶಾಶ್ವತವಾಗಿ ಕಾಲೂರಿದ್ದಾರೆ. ಈ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ. ತನ್ನ ಮುಂದಿನ ಸಿನಿಮಾ ಸಲ್ಮಾನ್ ಖಾನ್ ಜೊತೆ, ಸಿಕಂದರ್ ಸಿನಿಮಾದಲ್ಲಿ ನಟಿಸೋಕೆ ಖುಷಿಯಾಗ್ತಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ. ಸಾಜಿದ್ ನಾಡಿಯಾವಾಲ ನಿರ್ದೇಶದನ ಸಿಕಂದರ್ ಸಿನಿಮಾ 2025ರ ಈದ್‍ರಂದು ರಿಲೀಸ್ ಆಗಲಿದೆ ಎಂದು ರಶ್ಮಿಕಾ ಬಿಗ್ ಅಪ್‍ಡೇಟ್ ನೀಡಿದ್ದಾರೆ.

ಸಿಕಂದರ್‍ನಲ್ಲಿ ರಶ್ಮಿಕಾ/ ಸಲ್ಮಾನ್‍ಗೆ ನಾಯಕಿಯಾದ ನ್ಯಾಷನಲ್ ಕ್ರಶ್ Read More »

ಸೌರ ವಿದ್ಯುತ್ ಉತ್ಪಾದನೆ/ ಜಪಾನ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದ ಭಾರತ

ಸಮಗ್ರ ನ್ಯೂಸ್: ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‍ನ ವರದಿಯ ಪ್ರಕಾರ, ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತ 2023ರಲ್ಲಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಂ.3 ಸ್ಥಾನಕ್ಕೆ ಏರಿದೆ. 2015 ರಲ್ಲಿ ಭಾರತವು 9ನೇ ಶ್ರೇಯಾಂಕ ಪಡೆದಿತ್ತು. ಆದರೆ ಈಗ ಸರ್ಕಾರದ ಸತತ ಪ್ರಯತ್ನಗಳಿಂದ 3ನೇ ಸ್ಥಾನಕ್ಕೆ ಏರಿದೆ. ಎಂಬರ್ ಸಂಸ್ಥೆ ಬುಧವಾರ ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ 2024 ಅನ್ನು ಪ್ರಕಟಿಸಿದ್ದು, 2023ರಲ್ಲಿ ಭಾರತವು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ

ಸೌರ ವಿದ್ಯುತ್ ಉತ್ಪಾದನೆ/ ಜಪಾನ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದ ಭಾರತ Read More »

ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ಕಂಡು ಬಂದಿರುವ ಘಟನೆ ಮೇ.8 ರಂದು ನಡೆದಿದೆ. ಒಂಟಿ ಸಲಗವನ್ನು ಕಂಡು ಪ್ರವಾಸ ಸವಾರರು ಭಯಬೀತರಾಗಿದ್ದರು, ಅಲ್ಲದೆ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನ ರಸ್ತೆಯಲ್ಲಿ ತಿರುಗುತ್ತಿದ್ದರಿಂದಾ ವಾಹನ ಸಂಚಾರರಿಗೆ ಗಾಬರಿಯ ಗಲಿಬಿಲಿ ಉಂಟಾಗಿ ವಾಹನಗಳು ಸರತಿ ಸಾಲುಗಟ್ಟಿ ಕೆಲ ಕಾಲ ನಿಂತಿದ್ದವು.

ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ಪ್ರತ್ಯಕ್ಷ Read More »