Ad Widget

ಸೌರ ವಿದ್ಯುತ್ ಉತ್ಪಾದನೆ/ ಜಪಾನ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದ ಭಾರತ

ಸಮಗ್ರ ನ್ಯೂಸ್: ಜಾಗತಿಕ ಇಂಧನ ಚಿಂತಕರ ಚಾವಡಿ ಎಂಬರ್‍ನ ವರದಿಯ ಪ್ರಕಾರ, ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತ 2023ರಲ್ಲಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಂ.3 ಸ್ಥಾನಕ್ಕೆ ಏರಿದೆ. 2015 ರಲ್ಲಿ ಭಾರತವು 9ನೇ ಶ್ರೇಯಾಂಕ ಪಡೆದಿತ್ತು. ಆದರೆ ಈಗ ಸರ್ಕಾರದ ಸತತ ಪ್ರಯತ್ನಗಳಿಂದ 3ನೇ ಸ್ಥಾನಕ್ಕೆ ಏರಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಎಂಬರ್ ಸಂಸ್ಥೆ ಬುಧವಾರ ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ 2024 ಅನ್ನು ಪ್ರಕಟಿಸಿದ್ದು, 2023ರಲ್ಲಿ ಭಾರತವು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕವಾಗಿದೆ. 2023 ರಲ್ಲಿ ಸೌರಶಕ್ತಿಯು ಜಾಗತಿಕ ಉತ್ಪಾದನೆಗೆ 5.5 ಪ್ರತಿಶತ ಕೊಡುಗೆ ನೀಡುತ್ತದೆ. ಇನ್ನುಭಾರತದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಸೌರಶಕ್ತಿ ಕೊಡುಗೆ ಶೇ.5.8ಕ್ಕೆ ಹೆಚ್ಚಿದೆ’ ಎಂದು ಮೆಚ್ಚು ವ್ಯಕ್ತಪಡಿಸಿದೆ.

Ad Widget . Ad Widget .

2023ರಲ್ಲಿ ಸೌರಶಕ್ತಿ ಉತ್ಪಾದನೆಯ ಏರಿಕೆಯಲ್ಲಿ ಭಾರತವು ಚೀನಾ, ಅಮೆರಿಕ ಹಾಗೂ ಬ್ರೆಜಿಲ್ ನಂತರ 4ನೇ ಸ್ಥಾನ ಗಳಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೌರವಿದ್ಯುತ್ ಉತ್ಪಾದನೆಗಾಗಿ ಸಾಕಷ್ಟು ಪ್ರೋತ್ಸಾಹಕ ಯೋಜನೆಗಳನ್ನು ಪ್ರಕಟಿಸಿದ್ದಾರೆ.

Leave a Comment

Your email address will not be published. Required fields are marked *