Ad Widget

ಭಾರತಕ್ಕೂ ಬಂತು ಗೂಗಲ್ ವ್ಯಾಲೆಟ್

ಸಮಗ್ರ ನ್ಯೂಸ್: ಪ್ರತಿಷ್ಠಿತ ಕಂಪೆನಿ ಗೂಗಲ್ ಆಂಡ್ರಾಯ್ಡ್ ಮೊಬೈಲ್ ಹೊಂದಿರುವ ತನ್ನ ಗ್ರಾಹಕರಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಗೂಗಲ್ ವ್ಯಾಲೆಟ್ ಎನ್ನುವ ವಿಶೇಷ ಅಪ್ಲಿಕೇಶನ್ ಪರಿಚಯಿಸಿದೆ. ಈ ವ್ಯಾಲೆಟ್‍ನಿಂದ ಬೋಡಿರ್ಂಗ್ ಪಾಸ್, ಲಾಯಲ್ಟಿ ಕಾರ್ಡ್, ಕಾರ್ಯಕ್ರಮಗಳ ಟಿಕೆಟ್ , ಸಾರ್ವಜನಿಕ ಸಾರಿಗೆ ಪಾಸ್‍ಗಳು ಸೇರಿದಂತೆ ದೈನಂದಿನ ಅಗತ್ಯಕ್ಕೆ ಬೇಕಾಗುವ ಎಲ್ಲ ದಾಖಲೆಗಳನ್ನು ಒಂದೆಡೆ ಇಡುವುದಕ್ಕೆ ಈ ಅಪ್ಲಿಕೇಶನ್ ಸೂಕ್ತವಾಗಿರಲಿದೆ. ಜೊತೆಗೆ ಗ್ರಾಹಕರ ದಾಖಲೆಗಳು ಕೂಡ ಭದ್ರವಾಗಿರಲಿದೆ.

Ad Widget . Ad Widget . Ad Widget . Ad Widget . Ad Widget . Ad Widget

ಈ ಡಿಜಿಟಲ್ ಅಪ್ಲಿಕೇಶನ್ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡಿದ್ದು, ಈ ತಂತ್ರಜ್ಞಾನವನ್ನು ಭದ್ರತೆ ಮತ್ತು ಗೌಪ್ಯತೆ ತಳಹದಿಯ ಮೇಲೆ ಪ್ರಾರಂಭಿಸಲಾಗಿದೆ. ಆದರೆ ಗೂಗಲ್ ಪೇಗೂ ಇದಕ್ಕೂ ನಂಟಿಲ್ಲ. ಇದು ಗ್ರಾಹಕರಿಗೆ ಸುರತಕ್ಷತೆ,ಮುಕ್ತತೆ ಮತ್ತು ಗೌಪ್ಯತೆನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

Ad Widget . Ad Widget .

ಭಾರತದಲ್ಲಿ ಈಗ ಇಂಡಿಗೋ, ಏರ್ ಇಂಡಿಯಾ, ಫ್ಲಿಪ್‍ಕಾರ್ಟ್, ಪಿವಿಆರ್, ಐನಾಕ್ಸ್, ಕೊಚ್ಚಿ ಮೆಟ್ರೋ ಸೇರಿ 20 ಬ್ರಾಂಡ್‍ಗಳ ಜತೆ ಇದು ಒಪ್ಪಂದ ಮಾಡಿಕೊಂಡಿದೆ. ಈಗಾಗಲೇ ಈ ಗೂಗಲ್ ವ್ಯಾಲೆಟ್ ಒಟ್ಟು 80 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

Leave a Comment

Your email address will not be published. Required fields are marked *