Editor

14 ದೇವಾಲಯಗಳಿಂದ ಸಾಯಿಬಾಬಾ ಪ್ರತಿಮೆ ತೆರವು ಪ್ರಕರಣ

ಸಮಗ್ರ ನ್ಯೂಸ್:ವಾರಣಾಸಿಯ ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವು ಅಭಿಯಾನ ನಡೆಸುತ್ತಿದ್ದ ಸ್ಥಳೀಯ ಹಿಂದೂ ಸಂಘಟನೆಯಾದ ಸನಾತನ ರಕ್ಷಕ ದಳದ ಮುಖ್ಯಸ್ತನಾದ ಅಜಯ್ ಶರ್ಮಾರವರನ್ನು ಶಾಂತಿ ಭಂಗದ ಆರೋಪದ ಮೇಲೆ ಅ.2ರಂದು ಬಂಧಿಸಲಾಗಿದೆ. ಲೊಹಾಟಿಯಾದ ಬಡಾ ಗಣೇಶ ದೇವಸ್ಥಾನದಲ್ಲಿರುವ ಸಾಯಿಬಾಬಾ ವಿಗ್ರಹ ಸೇರಿದಂತೆ ಇದುವರೆಗೆ 14 ದೇವಸ್ಥಾನಗಳಿಂದ ಸಾಯಿಬಾಬಾ ವಿಗ್ರಹವನ್ನು ತೆಗೆದುಹಾಕಲಾಗಿದೆ ಎಂದು ಶರ್ಮಾ ಅವರು ಬುಧವಾರ ಹೇಳಿದ್ದಾರೆ ಮತ್ತು ಇನ್ನೂ 50 ದೇವಾಲಯಗಳಿಂದ ಸಾಯಿಬಾಬಾ ವಿಗ್ರಹವನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.ಈ ಕ್ರಮಕ್ಕೆ ಹಲವು ಸಾಯಿಬಾಬಾ ಭಕ್ತರು ವಿರೋಧ […]

14 ದೇವಾಲಯಗಳಿಂದ ಸಾಯಿಬಾಬಾ ಪ್ರತಿಮೆ ತೆರವು ಪ್ರಕರಣ Read More »

ಪುತ್ತೂರುದ ಪಿಲಿಗೊಬ್ಬು, ಫುಡ್ ಪೆಸ್ಟ್ – ಸೀಸನ್ -2 | ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 9 ಹುಲಿವೇಷ ತಂಡಗಳು ಭಾಗಿ

ಸಮಗ್ರ ನ್ಯೂಸ್:ಪಿಲಿಗೊಬ್ಬು ಹಾಗೂ ಪುತ್ತೂರು ಫುಡ್ ಫೆಸ್ಟ್ ಅ.5 ಹಾಗೂ ಅ.6 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಪುತ್ತೂರು ವಿಜಯ ಸಾಮ್ರಾಟ್ ನ, ಪಿಲಿಗೊಬ್ಬು ಸಾರಥಿ ಸಹಜ್‌ ರೈ ಬಳಜ್ಜ ಹೇಳಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ್‌ ಕುಮಾ‌ರ್ ರೈ ಮಾಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಹಿರಿಯ ವೃದ್ಯ ಡಾ.ಪ್ರಸಾದ್ ಭಂಡಾರಿ, ಡಿವೈಎಸ್ ಪಿ ಅರುಣ್

ಪುತ್ತೂರುದ ಪಿಲಿಗೊಬ್ಬು, ಫುಡ್ ಪೆಸ್ಟ್ – ಸೀಸನ್ -2 | ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 9 ಹುಲಿವೇಷ ತಂಡಗಳು ಭಾಗಿ Read More »

ಸಾವರ್ಕರ್ ಬ್ರಾಹ್ಮಣರಾಗಿದ್ದರೂ ಮಾಂಸಾಹಾರಿಯಾಗಿದ್ದರು

ಸಮಗ್ರ ನ್ಯೂಸ್:ಬೆಂಗಳೂರಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾವರ್ಕರ್ ಗೋಹತ್ಯೆಯ ವಿರೋಧಿಯಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರಾದರೂ ಮತ್ತು ಮಾಂಸಹಾರಿ ಎಂದು ಸಚಿವ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಾಗೆ ನೋಡಿದರೆ ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಸ್ಟ್ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರುಇದು ಭಾರತ ದೇಶದ ಸಂಸ್ಕೃತಿಯಲ್ಲ.ಗಾಂಧೀಜಿಯವರು ಸಸ್ಯಹಾರಿ, ನಮ್ಮ ಸಂಸ್ಕೃತಿ ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತು.

ಸಾವರ್ಕರ್ ಬ್ರಾಹ್ಮಣರಾಗಿದ್ದರೂ ಮಾಂಸಾಹಾರಿಯಾಗಿದ್ದರು Read More »

ಪ್ಯಾರಿಸ್‌ ಒಲಿಂಪಿಕ್ಸ್ ನಿಂದ ಅನರ್ಹಗೊಂಡ ಬಳಿಕ ಪ್ರಧಾನಿ ಕರೆ ಸ್ವೀಕರಿಸದ ವಿನೇಶ್‌ ಫೋಗಟ್

ಸಮಗ್ರ ನ್ಯೂಸ್: ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ನನಗೆ ಫೋನ್ ಕರೆ ಮಾಡಿದ್ದರು. ಆದರೆ ನಾನು ಅವರ ಕರೆ ಸ್ವೀಕರಿಸಲಿಲ್ಲ.ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್‌ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿಯಿಂದ ಅನರ್ಹಗೊಂಡಿದ್ದರು. ಈಗ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಫೋಗಟ್, ಪ್ರಧಾನಿಯಿಂದ ಕರೆ ಬಂದಿತ್ತು ಆದರೆ ನಾನು ಮಾತನಾಡಲು ನಿರಾಕರಿಸಿದೆ ಎಂದು ಲಾಲನ್‌ಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಕರೆ ನೇರವಾಗಿ

ಪ್ಯಾರಿಸ್‌ ಒಲಿಂಪಿಕ್ಸ್ ನಿಂದ ಅನರ್ಹಗೊಂಡ ಬಳಿಕ ಪ್ರಧಾನಿ ಕರೆ ಸ್ವೀಕರಿಸದ ವಿನೇಶ್‌ ಫೋಗಟ್ Read More »

ಮೈಸೂರು: ಪುಷ್ಪಾರ್ಚನೆ ಮೂಲಕ ನಾಡಹಬ್ಬ ದಸರಾಗೆ ಚಾಲನೆ ನೀಡಿದ ಹಂಪನಾ| ಇಂದಿನಿಂದ ಸಾಂಸ್ಕೃತಿಕ ನಗರಿಯಲ್ಲಿ ದಸರಾ ದರ್ಬಾರ್

ಸಮಗ್ರ ನ್ಯೂಸ್: ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಟಾರ್ಚನೆ ಮಾಡುವ ಮೂಲಕ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ಕೊಟ್ಟಿದ್ದಾರೆ. ಸಾಹಿತಿ ಹಂಪ ನಾಗಾರಾಜಯ್ಯ ಅವರು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾ ಉದ್ಘಾಟಿಸಿದ್ದಾರೆ. ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರು ಈ ಬಾರಿ

ಮೈಸೂರು: ಪುಷ್ಪಾರ್ಚನೆ ಮೂಲಕ ನಾಡಹಬ್ಬ ದಸರಾಗೆ ಚಾಲನೆ ನೀಡಿದ ಹಂಪನಾ| ಇಂದಿನಿಂದ ಸಾಂಸ್ಕೃತಿಕ ನಗರಿಯಲ್ಲಿ ದಸರಾ ದರ್ಬಾರ್ Read More »

ಉಡುಪಿಗೂ ಬಂತು ಚೀನದ ಬೆಳ್ಳುಳ್ಳಿ

ಸಮಗ್ರ ನ್ಯೂಸ್: ವಿಪರೀತ ಬೆಲೆ ಏರಿಕೆ ಪರಿಣಾಮ ಕಳ್ಳದಾರಿಯ ಮೂಲಕ ಬರುತ್ತಿದೆ ಚೀನದ ಬೆಳ್ಳುಳ್ಳಿ ನಿಷೇಧಿಸಲಾಗಿತ್ತು. ಇದೀಗ ಚೀನದ ಬೆಳ್ಳುಳ್ಳಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಗುಣಮಟ್ಟದ ಶಂಕೆ ಹಿನ್ನೆಲೆಯಲ್ಲಿ 12 ಟನ್‌ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ. ಚೀನದಿಂದ ಬೆಳ್ಳುಳ್ಳಿಯನ್ನು ಕಳ್ಳದಾರಿಯ ಮೂಲಕ ತರಿಸಿ ದೇಶಿ ಬೆಳ್ಳುಳ್ಳಿ ಜೊತೆ ಬೆರಕೆ ಮಾಡಿ ಮಾಡುತ್ತಿರುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.ಉಡುಪಿ ಎಪಿಎಂಸಿ ಮಾರುಕಟ್ಟೆಗೂ ಚೀನ ಬೆಳ್ಳುಳ್ಳಿ ಪ್ರವೇಶಿಸಿದ ಕುರಿತು

ಉಡುಪಿಗೂ ಬಂತು ಚೀನದ ಬೆಳ್ಳುಳ್ಳಿ Read More »

Helth tips:ಬೆಣ್ಣೆ ಹಣ್ಣಿನ ಆರೋಗ್ಯ ಉಪಯೋಗಗಳು

ಇಲ್ಲಿದೆ ಸಂಪೂರ್ಣ ಮಾಹಿತಿ ಸಮಗ್ರ ನ್ಯೂಸ್:ಈ ಹಣ್ಣಿನಲ್ಲಿ ಸಾಕಷ್ಟು ಫೈಬ‌ರ್ ಅನ್ನು ಹೊಂದಿರುವುದರಿಂದ, ಅವು ಹೊಟ್ಟೆಯನ್ನು ತುಂಬಿಸುತ್ತವೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತವೆ.ಇದು ನೂರು ಗ್ರಾಂ ಕೇವಲ 160 ಕ್ಯಾಲೋರಿಯನ್ನು ಮಾತ್ರ ಹೊಂದಿದೆ.ಇದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಬೆಣ್ಣೆ ಹಣ್ಣು ಹೃದಯಾಘಾತ ಮತ್ತು ಇತರ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಬೆಣ್ಣೆ ಹಣ್ಣಿನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಕಿಣ್ವಗಳಿವೆ, ಇದು ಯುವಿ ಕಿರಣಗಳು ಮತ್ತು ವಿಕಿರಣದಿಂದ ಉಂಟಾಗುವ

Helth tips:ಬೆಣ್ಣೆ ಹಣ್ಣಿನ ಆರೋಗ್ಯ ಉಪಯೋಗಗಳು Read More »

ಇಂದಿನಿಂದ ಕುಮಾರ ಪರ್ವತ ಚಾರಣ ಆರಂಭ| ಆನ್ ಲೈನ್ ಬುಕ್ಕಿಂಗ್ ಮಾಡಿದವರಿಗಷ್ಟೇ ಚಾರಣಕ್ಕೆ ಅವಕಾಶ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರ ಪರ್ವತ ಚಾರಣ ಪಥವು ಅ.3 (ಗುರುವಾರ)ರಂದು ಮರು ಪ್ರಾರಂಭವಾಗಲಿದೆ. ಜ. 26 ಹಾಗೂ 27ರಂದು ಮಿತಿಗೂ ಮೀರಿದ ಚಾರಣಿಗರು ಆಗಮಿಸಿದ್ದ ಕಾರಣ ಜನದಟ್ಟಣೆ ಉಂಟಾಗಿತ್ತು. ಆದ್ದರಿಂದ, ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು. ಕುಮಾರ ಪರ್ವತಕ್ಕೆ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸಲು ಸ್ಥಗಿತಗೊಳಿಸಲಾಗಿದ್ದ ಚಾರಣ ನಾಳೆಯಿಂದ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

ಇಂದಿನಿಂದ ಕುಮಾರ ಪರ್ವತ ಚಾರಣ ಆರಂಭ| ಆನ್ ಲೈನ್ ಬುಕ್ಕಿಂಗ್ ಮಾಡಿದವರಿಗಷ್ಟೇ ಚಾರಣಕ್ಕೆ ಅವಕಾಶ Read More »

ಬೆಂಗಳೂರಿನಲ್ಲಿ ಧಾರಾಕಾರ ಮಳೆ.. ರಸ್ತೆಗಳು ಜಲಾವೃತ

ಸಮಗ್ರ ನ್ಯೂಸ್: ಬೆಂಗಳೂರಿನಾದ್ಯಂತ ರಾತ್ರಿ ಸುರಿದ ಮಳೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಕಾರ್ಪೋರೇಶನ್, ವಿಧಾನಸೌಧ, ಶಾಂತಿನಗರ, ಕೆ.ಆರ್.ವೃತ್ತ, ವಿಜಯನಗರ, ಯಶವಂತಪುರ, ಕಾಮಾಕ್ಷಿಪಾಳ್ಯದಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಇನ್ನು ಮನೆ ಕಡೆ ಹೊರಟಿದ್ದ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸಿದ್ದಾರೆ, ಕೆಲ ಕಾಲ ಸವಾರರು ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಗುಡುಗು ಸಿಡಿಲು ನೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆ.. ರಸ್ತೆಗಳು ಜಲಾವೃತ Read More »

ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಅಕ್ರಮ ಆರೋಪ.. ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

ಸಮಗ್ರ ನ್ಯೂಸ್: ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣದ ದಾಖಲೆಯನ್ನು ಕಾಂಗ್ರೆಸ್ ಸಚಿವರು ಇದೀಗ ಬಿಡುಗಡೆ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ಸಚಿವ ಹೆಚ್.ಕೆ ಪಾಟೀಲ್ ರಿಂದ ದಾಖಲೆ ಬಿಡುಗಡೆ ಮಾಡಲಾಗಿದೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಾಲದಲ್ಲಿ ಏನಾಗಿತ್ತು ಎಂಬುದನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ಲೊಟ್ಟೆಗೊಲ್ಲಹಳ್ಳಿ ನೂರಾರು

ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಅಕ್ರಮ ಆರೋಪ.. ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್ Read More »