Editor

ಮಂಗಳೂರಿನಲ್ಲಿ ಕಾರು – ಬೈಕ್ ನಡುವೆ ಅಪಘಾತ| ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಿಇಒ ಭಾಸ್ಕರ್ ಸಾವು

ಸಮಗ್ರ ನ್ಯೂಸ್: ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್(49) ಅರವರು ಮಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ನೇರಳಕಟ್ಟೆ ಪೆರುವಾಜೆ ಬೀರಕೋಡಿ ನಿವಾಸಿಯಾಗಿರುವ ಭಾಸ್ಕರ್ ಅವರು ಅ.17 ರಂದು ಮಂಗಳೂರಿನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರೊಂದು ಭಾಸ್ಕರ್ ಅವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡ ಭಾಸ್ಕರ್ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಇಂದು(ಅ.18) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ಕಾರು – ಬೈಕ್ ನಡುವೆ ಅಪಘಾತ| ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಿಇಒ ಭಾಸ್ಕರ್ ಸಾವು Read More »

ಮುಡಾ ಕಚೇರಿ ಮೇಲೆ ಇಡಿ ದಾಳಿ.. ಸಿದ್ದರಾಮಯ್ಯಗೂ ಸಂಕಷ್ಟ

ಸಮಗ್ರ ನ್ಯೂಸ್: ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಮುಡಾದಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಸ್ನೇಹಮಯಿ ಕೃಷ್ಣ ನೀಡಿದ ದೂರಿನ ಆಧಾರದ ಮೇಲೆ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಇಡಿಯ 20ಕ್ಕೂ ಹೆಚ್ಚು ಅಧಿಕಾರಿಗಳು ಕಚೇರಿಯಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಈ ಹಗರಣ ಸಂಬಂಧ ಸ್ನೇಹಮಯಿ ಕೃಷ್ಣ ಅವರಿಗೆ ಇಡಿ ಸಮ್ಸನ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು.

ಮುಡಾ ಕಚೇರಿ ಮೇಲೆ ಇಡಿ ದಾಳಿ.. ಸಿದ್ದರಾಮಯ್ಯಗೂ ಸಂಕಷ್ಟ Read More »

ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಒತ್ತು: ಸ್ಪೀಕರ್

ಸಮಗ್ರ ನ್ಯೂಸ್: ಈ ವರ್ಷವೂ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಿದ್ದು ಸಚಿವ ಸಂಪುಟದಲ್ಲಿ ಚರ್ಚಿಸಿ ಅಧಿವೇಶನದ ದಿನಾಂಕವನ್ನು ನಿಗದಿ ಮಾಡುತ್ತೇವೆ ಎಂದು ಸುವರ್ಣಸೌಧದಲ್ಲಿ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಈ ವರ್ಷ ಇನ್ನಷ್ಟು ಚೆನ್ನಾಗಿ ಅಧಿವೇಶನ ಮಾಡಲು ಸಿದ್ಧತೆ ನಡೆದಿದೆ. ಉತ್ತರಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹೆಚ್ಚಿನ ಒತ್ತು ನೀಡುತ್ತೇವೆ ಎಂದು ತಿಳಿಸಿದ್ದಾರೆ. ಜನಪ್ರತಿನಿಧಿಗಳು ವಿಧಾನಸೌಧ ಮಾತ್ರ ಅಲ್ಲ ಸುವರ್ಣ ವಿಧಾನಸೌಧಕ್ಕೆ ಎಲ್ಲರೂ ಬರಬೇಕು. ಸುಲಭದಲ್ಲಿ ಪಾಸ್ ಸಿಗುವ ವ್ಯವಸ್ಥೆ ಮಾಡುತ್ತೇವೆ. ಶಾಲಾ, ಕಾಲೇಜು

ಚಳಿಗಾಲದ ಅಧಿವೇಶನ: ಉತ್ತರ ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಒತ್ತು: ಸ್ಪೀಕರ್ Read More »

ಬಿಗ್ ಬಾಸ್ ನಿಲ್ಲಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೀಕ್ಷಕ… ತುರ್ತು ನೋಟಿಸ್ ನೀಡಿದ ನ್ಯಾಯಾಲಯ

ಸಮಗ್ರ ನ್ಯೂಸ್: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ದೊಡ್ಡ ರಿಯಾಲಿಟಿ ಶೋ ಗಳಲ್ಲಿ ಒಂದಾದ ಬಿಗ್ ಬಾಸ್ 11 ನೇ ಸೀಸನ್ ಗೆ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಎದುರಾಗುತ್ತಲೇ ಇದೆ. ಬಿಗ್ ಬಾಸ್ 11 ನೇ ಸೀಸನ್ ಪ್ರಾರಂಭವಾಗಿ ಇಂದಿಗೆ 19 ದಿನ ಕಳೆದಿದೆ. ‘ಬಿಗ್ ಬಾಸ್’ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಇನ್ನೂ ಇದೇ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ

ಬಿಗ್ ಬಾಸ್ ನಿಲ್ಲಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೀಕ್ಷಕ… ತುರ್ತು ನೋಟಿಸ್ ನೀಡಿದ ನ್ಯಾಯಾಲಯ Read More »

ಮುತ್ತಪ್ಪ‌ ರೈ ಎರಡನೇ ಹೆಂಡ್ತಿಗೆ ಸಿಕ್ತು ಕೋಟಿ ಕೋಟಿ ಆಸ್ತಿ| ಸಾಯೋಕು ಮುನ್ನ ಪಾಲು ಲೆಕ್ಕಾಚಾರ ಬರೆದಿಟ್ಟಿದ್ರೂ ಬಿಡಿಗಾಸು ಕೊಡದೆ ಸತಾಯಿಸಿದ್ದ ಮಕ್ಕಳು

ಸಮಗ್ರ ನ್ಯೂಸ್: ಕರ್ನಾಟಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ನಿಧನದ ನಂತರ ಅವರ ಒಡೆತನದ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಭಾಗ ಮಾಡಿ ತನ್ನಿಬ್ಬರು ಮಕ್ಕಳು, 2ನೇ ಹೆಂಡತಿ, ಸಹೋದರನ ಪುತ್ರ ಹಾಗೂ ಮನೆ ಕೆಲಸದವರು ಸೇರಿದಂತೆ ಯಾರಾರಿಗೆ ಎಷ್ಟು ಆಸ್ತಿ ನೀಡಬೇಕು ಎಂದು ಬರೆದಿಟ್ಟಿದ್ದರು. ಆದರೆ, ಮುತ್ತಪ್ಪ ರೈ ಮಕ್ಕಳು ಅವರ ತಂದೆಯ 2ನೇ ಹೆಂಡತಿಗೆ ತುಂಡು ಆಸ್ತಿ, ಬಿಡಿಗಾಸನ್ನೂ ನೀಡದೇ ಮನೆಯಿಂದ ಹೊರಗೆ ಹಾಕಿದ್ದರು. ಆದರೆ, ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ

ಮುತ್ತಪ್ಪ‌ ರೈ ಎರಡನೇ ಹೆಂಡ್ತಿಗೆ ಸಿಕ್ತು ಕೋಟಿ ಕೋಟಿ ಆಸ್ತಿ| ಸಾಯೋಕು ಮುನ್ನ ಪಾಲು ಲೆಕ್ಕಾಚಾರ ಬರೆದಿಟ್ಟಿದ್ರೂ ಬಿಡಿಗಾಸು ಕೊಡದೆ ಸತಾಯಿಸಿದ್ದ ಮಕ್ಕಳು Read More »

ದೀಪಾವಳಿಗೆ ಬೆಂಗಳೂರು – ಮಂಗಳೂರು‌ ನಡುವೆ ವಿಶೇಷ ರೈಲು

ಸಮಗ್ರ ನ್ಯೂಸ್: ದೀಪಾವಳಿ ಹಬ್ಬದ ಸಂದರ್ಭ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯಶವಂತಪುರ – ಮಂಗಳೂರು ಜಂಕ್ಷನ್‌- ಯಶವಂತಪುರ ನಡುವೆ ವಿಶೇಷ ರೈಲು ಓಡಿಸಲು ನೈಋತ್ಯ ರೈಲ್ವೇ ನಿರ್ಧರಿಸಿದ್ದು, ಅ.30 ಮತ್ತು 31ರಂದು ಈ ರೈಲುಗಳು ಸಂಚರಿಸಲಿವೆ. ನಂ.06565 ಯಶವಂತಪುರ-ಮಂಗಳೂರು ಜಂಕ್ಷನ್‌ ವಿಶೇಷ ರೈಲು ಅ.30ರಂದು ರಾತ್ರಿ 11.50ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅ.31ರಂದು ಮಧ್ಯಾಹ್ನ 11.45ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ನಂ.06566 ಮಂಗಳೂರು ಜಂಕ್ಷನ್‌ – ಯಶವಂತಪುರ ವಿಶೇಷ ರೈಲು ಅ.31ರಂದು ಮಧ್ಯಾಹ್ನ 1

ದೀಪಾವಳಿಗೆ ಬೆಂಗಳೂರು – ಮಂಗಳೂರು‌ ನಡುವೆ ವಿಶೇಷ ರೈಲು Read More »

ವಿದೇಶದಲ್ಲಿ ಉದ್ಯೋಗ ಬೇಕೇ? ಇಲ್ಲಿದೆ ನಿರುದ್ಯೋಗಿ ಯುವಕರಿಗೆ ಸುವರ್ಣಾವಕಾಶ!!

ಸಮಗ್ರ ನ್ಯೂಸ್: ಸೌದಿ ಅರೇಬಿಯಾದಲ್ಲಿ ಅತೀ ಹೆಚ್ಚು ಹೆಸರುವಾಸಿಯಾಗಿರುವ ಕಾಫಿ ಪ್ರಿಯರ ಅಚ್ಚುಮೆಚ್ಚಿನ ಕಂಪನಿ ಆಗಿರುವ ಬೋನ್ ಕೆಫೆ ಕಂಪನಿಯು ಇದೇ ಬರುವ ಅ.19 ಮತ್ತು 20ರಂದು ಉದ್ಯೋಗಾವಕಾಶದ ನೇರ ಸಂದರ್ಶನ ನೂರ್ ಇಂಟರ್ನ್ಯಾಷನಲ್ ನ ಸಹಯೋಗದೊಂದಿಗೆ ನಡೆಸಲಿದೆ. SSLC ಪಾಸ್ ಆಗಿರುವ ಇಂಗ್ಲಿಷ್ ಮಾತನಾಡಬಲ್ಲ ಹಾಗು ಆಕರ್ಷಣೆ ಉಳ್ಳ ಯುವಕರು ಇದರ ಉತ್ತಮ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ 919591279487 ಸಂಪರ್ಕಿಸಬಹುದು. (ವಿ.ಸೂ: ಇದು ಪ್ರಾಯೋಜಿತ ಸುದ್ದಿ ಮಾಹಿತಿ. ಇಲ್ಲಿ ಪ್ರಕಟವಾಗಿರುವ ಮಾಹಿತಿ ನಂಬಿಕೆಗೆ

ವಿದೇಶದಲ್ಲಿ ಉದ್ಯೋಗ ಬೇಕೇ? ಇಲ್ಲಿದೆ ನಿರುದ್ಯೋಗಿ ಯುವಕರಿಗೆ ಸುವರ್ಣಾವಕಾಶ!! Read More »

ಭಾಗಮಂಡಲ: ನಾಳೆ(ಅ.17) ಮುಂಜಾನೆ ಕಾವೇರಿ ಪವಿತ್ರ ತೀರ್ಥೋದ್ಭವ

ಸಮಗ್ರ ನ್ಯೂಸ್: ಕಾವೇರಿಯ ಉಗಮಸ್ಥಾನ ತಲಕಾವೇರಿ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅ. 17ರ ಬೆಳಗ್ಗೆ 7.40ಕ್ಕೆ ತುಲಾ ಸಂಕ್ರಮಣ ಮುಹೂರ್ತದಲ್ಲಿ ಪವಿತ್ರ ತೀರ್ಥೋದ್ಭವ ಜರಗಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌.ಭೋಸರಾಜು, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಶಾಸಕರಾದ ಎ.ಎಸ್‌. ಪೊನ್ನಣ್ಣ, ಡಾ| ಮಂಥರ್‌ ಗೌಡ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಪೊಲೀಸ್‌ ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಅಗತ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ

ಭಾಗಮಂಡಲ: ನಾಳೆ(ಅ.17) ಮುಂಜಾನೆ ಕಾವೇರಿ ಪವಿತ್ರ ತೀರ್ಥೋದ್ಭವ Read More »

ಸಿಎಂ ಆಪ್ತ, ಕೆ.ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ.!

ಸಮಗ್ರ ನ್ಯೂಸ್: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿಯ ವಿರುದ್ಧ 14 ಸೈಟುಗಳ ಹಂಚಿಕೆಯ ಹಗರಣ ಆರೋಪ ಸದ್ದು ಮಾಡುತ್ತಿದೆ.‌‌ ಈ ನಡುವೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರೀಗೌಡ ರಾಜೀನಾಮೆ ನೀಡಿದ್ದಾರೆ ಅಂತ ತಿಳಿದು ಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಹಿನ್ನಲೆಯಲ್ಲಿ ಅವರು ತಮ್ಮ ರಾಜೀನಾಮೆಯನ್ನು ನೀಡಿದ್ದಾರೆ ಅಂಥ ತಿಳಿದು ಬಂದಿದೆ. ಈ ಮೊದಲೇ ಮರಿಗೌಡ ಅವರನ್ನು ಮುಡಾ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್‌ನಲ್ಲಿ ಪರ ವಿರೋಧಗಳು

ಸಿಎಂ ಆಪ್ತ, ಕೆ.ಮರೀಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ.! Read More »

ಹೃದಯಘಾತಕ್ಕೆ ಬಲಿಯಾದ 5 ವರ್ಷದ ಬಾಲಕಿ

ಸಮಗ್ರ ನ್ಯೂಸ್: 5 ವರ್ಷದ ಬಾಲಕಿಗೆ ಹೃದಯಾಘಾತ ಆಗಿ ಸಾವು ಕಂಡ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ಜಮ್ಮಿಕುಂಟಾದಲ್ಲಿ ನಡೆದಿದೆ. ಉಕ್ಕುಲು (5) ಹಾರ್ಟ್ ಅಟ್ಯಾಕ್ ನಿಂದ ಸಾವು ಕಂಡ ಬಾಲಕಿ.ಜಮುನಾ ಹಾಗೂ ರಾಜು ದಂಪತಿಯ ಪುತ್ರಿ ಬೆಳಿಗ್ಗೆ ತೀವ್ರ ಅಸ್ವಸ್ಥಳಾಗಿದ್ದಳು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದ್ರೆ ಅಷ್ಟೊತ್ತಿಗೆ ಬಾಲಕಿ ಇಹಲೋಕ ತ್ಯಜಿಸಿದ್ದಾಳೆ. ಆಕೆಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂಬ ಕುರಿತಂತೆ ಶಂಕೆ ವ್ಯಕ್ತವಾಗಿತ್ತು.

ಹೃದಯಘಾತಕ್ಕೆ ಬಲಿಯಾದ 5 ವರ್ಷದ ಬಾಲಕಿ Read More »