ಹೃದಯಘಾತಕ್ಕೆ ಬಲಿಯಾದ 5 ವರ್ಷದ ಬಾಲಕಿ

ಸಮಗ್ರ ನ್ಯೂಸ್: 5 ವರ್ಷದ ಬಾಲಕಿಗೆ ಹೃದಯಾಘಾತ ಆಗಿ ಸಾವು ಕಂಡ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ಜಮ್ಮಿಕುಂಟಾದಲ್ಲಿ ನಡೆದಿದೆ.

. Ad Widget . Ad Widget

ಉಕ್ಕುಲು (5) ಹಾರ್ಟ್ ಅಟ್ಯಾಕ್ ನಿಂದ ಸಾವು ಕಂಡ ಬಾಲಕಿ.ಜಮುನಾ ಹಾಗೂ ರಾಜು ದಂಪತಿಯ ಪುತ್ರಿ ಬೆಳಿಗ್ಗೆ ತೀವ್ರ ಅಸ್ವಸ್ಥಳಾಗಿದ್ದಳು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

. Ad Widget . . Ad Widget . Ad Widget

ಕೂಡಲೇ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದ್ರೆ ಅಷ್ಟೊತ್ತಿಗೆ ಬಾಲಕಿ ಇಹಲೋಕ ತ್ಯಜಿಸಿದ್ದಾಳೆ. ಆಕೆಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂಬ ಕುರಿತಂತೆ ಶಂಕೆ ವ್ಯಕ್ತವಾಗಿತ್ತು. ಒಬ್ಬಳೇ ಪುತ್ರಿ ಸಾವು ಕಾಣುತ್ತಿದ್ದಂತೆ ತಂದೆ ತಾಯಿನ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಬಂಧಿಕರು, ಗೋಳಾಟ ಕರುಳು ಚುರುಕ್ ಎನಿಸುವಂತಿತ್ತು.

Leave a Comment

Your email address will not be published. Required fields are marked *