Editor

ಮೂರು ತಿಂಗಳ ಹಸುಳೆ ಮೇಲೆ ಎರಗಿದ ಅಪ್ರಾಪ್ತ ವಿಕೃತಕಾಮಿ

ಮೂರು ತಿಂಗಳ ಹಸುಳೆ ಮೇಲೆ 17 ವರ್ಷದ ಅಪ್ರಾಪ್ತನೊಬ್ಬ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಬಗ್ವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಸುಳೆಯ ತಾಯಿ ಎಮ್ಮೆಗಳನ್ನು ಕಟ್ಟಲು ಹೋಗಿದ್ದ ವೇಳೆ ಈತ ಹೀಗೆ ಮಾಡಿದ್ದಾನೆ. ಎಮ್ಮೆಗಳನ್ನು ಕಟ್ಟಿ ಮರಳಿದ ತಾಯಿ ಅಳುತ್ತಿದ್ದ ತನ್ನ ಮಗುವನ್ನು ಅಪ್ರಾಪ್ತ ಸಮಾಧಾನ ಮಾಡುತ್ತಿರುವುದನ್ನು ಕಂಡಿದ್ದಾರೆ. ಈ ವೇಳೆ ಮಗುವಿನ ಖಾಸಗಿ ಅಂಗದಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಕಂಡ ಮಗುವಿನ ತಾಯಿಗೆ ಅಲ್ಲಿ ಏನಾಗಿದೆ ಎಂಬುದು ಅರಿವಿಗೆ ಬಂದಿದೆ. […]

ಮೂರು ತಿಂಗಳ ಹಸುಳೆ ಮೇಲೆ ಎರಗಿದ ಅಪ್ರಾಪ್ತ ವಿಕೃತಕಾಮಿ Read More »

ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ (63) ಹೃದಯಘಾತದಿಂದಾಗಿ ನಿಧನರಾಗಿದ್ದಾರೆ. ವಿಜಯ್ ಕುಮಾರ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿನ್ನೆ ರಾತ್ರಿ 9: 30 ರ ಸುಮಾರಿಗೆ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ವಿಜಯ್​​ಕುಮಾರ್ ಅವರು ಸಿಂಹಾದ್ರಿಯ ಸಿಂಹ, ಲಯನ್ ಜಗಪತಿ ರಾವ್, ಮೌನಗೀತೆ, ಜಗದೇಕ ವೀರ, ಸ್ವಚ್ಛ ಭಾರತ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ,

ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ Read More »

ಸುಳ್ಯ: ವೈರಲ್ ಆಯ್ತು ಮಹಿಳೆಯ ಧ್ವಜವಂದನೆ| ಇದು ನಿಜವಾದ ದೇಶಭಕ್ತಿ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ-ಏರಣಗುಡ್ಡೆಯಲ್ಲಿ ಗಾಂಧಿ ವಿಚಾರ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಈ ಕಾರ್ಯಕ್ರಮದ ಬಳಿಕ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಧ್ವಜವಂದನೆ ಮಾಡಿದ್ದು , ಈ ಫೋಟೋ ವೈರಲ್‌ ಆಗಿದೆ. ಗಾಂಧಿ ವಿಚಾರ ವೇದಿಕೆ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಮುಖರು ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು. ಬೆಳಗ್ಗೆ 9 ಗಂಟೆಗೆ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಮುಗಿದ ಬಳಿಕ ಅತಿಥಿಗಳು ತೆರಳಿದ್ದರು. ಕಾರ್ಯಕ್ರಮ ಸಂಘಟಿಸಿದ ಕೆಲ ಮಂದಿ ಸ್ಥಳದಲ್ಲಿ ಮಾತುಕತೆ ನಡೆಸುತ್ತಿದ್ದರು.

ಸುಳ್ಯ: ವೈರಲ್ ಆಯ್ತು ಮಹಿಳೆಯ ಧ್ವಜವಂದನೆ| ಇದು ನಿಜವಾದ ದೇಶಭಕ್ತಿ Read More »

ಪ್ರಬಲ ಭೂಕಂಪಕ್ಕೆ ಹೈಟಿ ತತ್ತರ| ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ|

ಹೈಟಿ : ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ ಶನಿವಾರ ಸುನಾಮಿ ಭೀತಿಯ ನಡುವೆಯೇ 7.2 ರಷ್ಟು ತೀವ್ರತೆಯಷ್ಟು ಭೂಕಂಪ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 724 ಕ್ಕೇರಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುಮಾರು 724 ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 724 ಕ್ಕೇರಿದ್ದು, ಅವಶೇಷಗಳಡಿ ಸಿಲುಕಿರುವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಹೈಟಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಲ್ಲಿನ ಪ್ರಧಾನಿ ಹೆನ್ರಿ ಹೈಟಿಯಲ್ಲಿ ಒಂದು

ಪ್ರಬಲ ಭೂಕಂಪಕ್ಕೆ ಹೈಟಿ ತತ್ತರ| ತುರ್ತು ಪರಿಸ್ಥಿತಿ ಘೋಷಿಸಿದ ಸರ್ಕಾರ| Read More »

ಮೂರು ವರ್ಷದಿಂದ ಒಂದೇ ಪ್ರಾಮಿಸ್| ಸಂಖ್ಯೆಯನ್ನಾದರೂ ಬದಲಿಸಿ ಪ್ರಧಾನಿಗಳೇ… ಮೋದಿ ಭಾಷಣಕ್ಕೆ ಕಾಂಗ್ರೆಸ್ ವ್ಯಂಗ್ಯ

ನವದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಪ್ರಧಾನಿಯವರ ಭಾಷಣ ಈಗ ಟ್ರೋಲ್‌ಗೆ ಒಳಗಾಗಿದ್ದು, ಮೂರು ವರ್ಷವೂ ಒಂದೇ ಪ್ರಾಮಿಸ್ ಮಾಡಿದ್ದಾರೆ ಎಂದು ನೆಟ್ಟಿಗರು ಮೋದಿಯವರ ಕಾಲೆಳೆಯುತ್ತಿದ್ದಾರೆ. ಆಗಸ್ಟ್ 15, 2019, 2020, 2021 ಈ ಮೂರು ವರ್ಷವೂ 100 ಲಕ್ಷ ಕೋಟಿ ರೂಪಾಯಿಗಳನ್ನು ಆಧುನಿಕ ಮೂಲಸೌಕರ್ಯ ಯೋಜನೆಗಳಿಗಾಗಿ ವಿನಿಯೋಗಿಸಲಾಗುತ್ತದೆ ಎಂದು ಹೇಳಿದ್ದಾರೆ ಎಂಬ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಷ್ಟ್ರದ ಜನರನ್ನು ಒಂದೇ ಭರವಸೆ, ಯೋಜನೆಯ

ಮೂರು ವರ್ಷದಿಂದ ಒಂದೇ ಪ್ರಾಮಿಸ್| ಸಂಖ್ಯೆಯನ್ನಾದರೂ ಬದಲಿಸಿ ಪ್ರಧಾನಿಗಳೇ… ಮೋದಿ ಭಾಷಣಕ್ಕೆ ಕಾಂಗ್ರೆಸ್ ವ್ಯಂಗ್ಯ Read More »

ತಾಲಿಬಾನ್‍ಗೆ ಸಂಪೂರ್ಣ ಶರಣಾದ ಅಫ್ಘನ್ ಸರ್ಕಾರ| ಕಾಬೂಲ್ ವಶಗೈದ ತಾಲಿಬಾನಿಗಳು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರೆದಿದ್ದು, ರಾಜಧಾನಿ ಕಾಬೂಲ್‍ಗೆ ತಾಲಿಬಾನಿಗಳು ಪ್ರವೇಶ ಪಡೆದು ಸಂಪೂರ್ಣ ನಗರವನ್ನು ಇಂದು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಫ್ಘನ್ ಸರ್ಕಾರ ತಾಲಿಬಾನ್ ಶರಣಾಗಿದೆ. ಹಲವು ದಿನಗಳಿಂದ ತಾಲಿಬಾನ್ ಹಾಗೂ ಅಫ್ಘನ್ ಸರ್ಕಾರಗಳ ನಡುವೆ ಕಾದಾಟ ನಡೆಯುತ್ತಿತ್ತು. ಇದಲ್ಲದೆ ಅಘ್ಫಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್‍ನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರು. ಇದೀಗ ತಾಲಿಬಾನಿಗಳು ರಾಜಧಾನಿ ಕಾಬೂಲ್‍ಗೆ ಪ್ರವೇಶಪಡೆದು ಆಫ್ಘನ್ ಸರ್ಕಾರದಿಂದ ಅಧಿಕಾರ ಹಸ್ತಾಂತರ ಮಾಡಿಕೊಂಡಿದೆ. ಶಾಂತಿಯುತವಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್

ತಾಲಿಬಾನ್‍ಗೆ ಸಂಪೂರ್ಣ ಶರಣಾದ ಅಫ್ಘನ್ ಸರ್ಕಾರ| ಕಾಬೂಲ್ ವಶಗೈದ ತಾಲಿಬಾನಿಗಳು Read More »

ದೇಶಾದ್ಯಂತ 75 ನೇ ಸ್ವಾತಂತ್ರ ಸಂಭ್ರಮ| ಆದರೆ ಸ್ವಾತಂತ್ರ್ಯ ತಂದ ಗಾಂಧಿ‌ತಾತ ಇಲ್ಲಿ ಅನಾಥ…! ಗಬ್ಬು ವಾಸನೆ ನಡುವೆ ಅನಾಥವಾಗಿದೆ ಮಹಾತ್ಮನ ಪ್ರತಿಮೆ| ಏನಿದು ಸ್ಟೋರಿ ಗೊತ್ತಾ?

ಮಂಗಳೂರು: ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಕಳೆಕಟ್ಟಿದ್ದರೂ, ನಗರದ ಹೃದಯ ಭಾಗ ಹಂಪನಕಟ್ಟೆಯ ಗಾಂಧಿ ಪಾರ್ಕಿನಲ್ಲಿರುವ ಗಾಂಧಿ ತಾತ ಮಾತ್ರ ಅನಾಥರಾಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕ್ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಪಾರ್ಕ್ ಸ್ಥಿತಿ ಗಬ್ಬೆದ್ದು ಹೋಗಿದೆ. ಸ್ವಾತಂತ್ರ್ಯ ಕಾಲದಲ್ಲಿ ಗಾಂಧೀಜಿ ಮಂಗಳೂರಿಗೆ ಬಂದಿದ್ದ ನೆನಪಿನಲ್ಲಿ ಪಾರ್ಕ್ ಮಧ್ಯೆ ಗಾಂಧಿಯ ಪ್ರತಿಮೆ ಸ್ಥಾಪಿಸಲಾಗಿತ್ತು. ಸುಂದರ ಪಾರ್ಕ್ ಆಗಿದ್ದಲ್ಲದೆ, ಸತ್ಯಾಗ್ರಹ ಹೆಸರಿನ ಪ್ರತಿಭಟನೆ, ಉಪವಾಸಗಳು ಇದೇ ಜಾಗದಲ್ಲಿ ನಡೆಯುತ್ತಿದ್ದವು. ಇಂಥ ಹೆಗ್ಗಳಿಕೆ ಹೊಂದಿರುವ ಗಾಂಧಿ ಪಾರ್ಕ್ ನಲ್ಲಿ ವಿಶೇಷ

ದೇಶಾದ್ಯಂತ 75 ನೇ ಸ್ವಾತಂತ್ರ ಸಂಭ್ರಮ| ಆದರೆ ಸ್ವಾತಂತ್ರ್ಯ ತಂದ ಗಾಂಧಿ‌ತಾತ ಇಲ್ಲಿ ಅನಾಥ…! ಗಬ್ಬು ವಾಸನೆ ನಡುವೆ ಅನಾಥವಾಗಿದೆ ಮಹಾತ್ಮನ ಪ್ರತಿಮೆ| ಏನಿದು ಸ್ಟೋರಿ ಗೊತ್ತಾ? Read More »

ತಾಲಿಬಾನಿ‌ ಸಂಸ್ಕ್ರತಿ ನಡೆಯಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲೇಬೇಕು- ಕೋಟ ಗುಡುಗು

ಮಂಗಳೂರು: ಸ್ವಾತಂತ್ರ್ಯ ರಥಯಾತ್ರೆಗೆ ಅಡ್ಡಿ ಪಡಿಸಿರುವುದು ತಾಲಿಬಾನಿ‌ ಸಂಸ್ಕ್ರತಿಯನ್ನು ತೋರ್ಪಡಿಸುತ್ತದೆ. ಸೌಹಾರ್ದಯುತವಾಗಿದ್ದ ಕರಾವಳಿಯಲ್ಲಿ ಇಂತಹ ವಿಚಾರಗಳು ಶೋಭೆ ತರದು. ಇಂತವುಗಳು ರಾಜ್ಯದಲ್ಲಿ ‌ನಡೆಯಲ್ಲ’ ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುಡುಗಿದ್ದಾರೆ. ಪುತ್ತೂರಿನ ಕಬಕದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ರಥಯಾತ್ರೆಗೆ ಇಂದು ಮುಂಜಾನೆ ಎಸ್ ಡಿಪಿಐ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ರಥಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಹಾಕಿದ್ದಕ್ಕೆ ಅಡ್ಡಿ ಪಡಿಸಿದ್ದ ಕಾರ್ಯಕರ್ತರು ಟಿಪ್ಪುವಿನ ಫೋಟೋ ಕೂಡಾ ಹಾಕುವಂತೆ ದಾಂಧಲೆ ಎಬ್ಬಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೋಟ ‘ ಇಂತಹ

ತಾಲಿಬಾನಿ‌ ಸಂಸ್ಕ್ರತಿ ನಡೆಯಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲೇಬೇಕು- ಕೋಟ ಗುಡುಗು Read More »

ಬಂಟ್ವಾಳ: ಮನೆಯೊಳಗೆ ಕೂಡಿ ಹಾಕಿ ಮಹಿಳೆಯ ಅತ್ಯಾಚಾರ

ಬಂಟ್ವಾಳ: ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮನೆಗೆ ನುಗ್ಗಿ ಬಲಾತ್ಕಾರವಾಗಿ ಅತ್ಯಾಚಾರ ವೆಸಗಿದಲ್ಲದೆ, ಹಲ್ಲೆ ಮಾಡಿ ಇದೀಗಾ ಆರೋಪಿ ತಲೆಮರೆಸಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಎಂಬಲ್ಲಿ ನಡೆದಿದ್ದು, ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ದೂರು ದಾಖಲಾಗಿದೆ. ಸಿದ್ದಕಟ್ಟೆ ಅನಿಲ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು. ಆಗಸ್ಟ್ 11 ರಂದು 52 ಹರೆಯದ ಮಹಿಳೆ ಕೂಲಿ ಕೆಲಸ ಮಾಡಿ ಮನೆಗೆ ಬಂದು ಬಚ್ಚಲಿನಲ್ಲಿ ಬಿಸಿ ನೀರು ಕಾಯಿಸಲು ಎಂದು ಹೋಗಿದ್ದರು. ಇದೇ ಸಮಯ ನೋಡಿಕೊಂಡು

ಬಂಟ್ವಾಳ: ಮನೆಯೊಳಗೆ ಕೂಡಿ ಹಾಕಿ ಮಹಿಳೆಯ ಅತ್ಯಾಚಾರ Read More »

ಡಿಕೆಶಿ ಎಡವಟ್ಟಿನಿಂದ ಹುತಾತ್ಮರಾದ ಸೋನಿಯಾ ಗಾಂಧಿ…!

ಬೆಂಗಳೂರು: ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭಾಷಣದ ವೇಳೆ ಎಡವಟ್ಟು ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನಡೆಸಿ, ಕಾರ್ಯಕ್ರಮವನ್ನುದ್ದೇಶಿಸಿ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ಈ ವೇಳೆ ಡಿ.ಕೆ ಶಿವಕುಮಾರ್ ಭಾಷಣ ಮಾಡುವಾಗ, ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಬಾಯಿತಪ್ಪಿ ಹೇಳಿ ನಂತರ ಸಾರಿ, ಸಾರಿ ಹುತಾತ್ಮರಾದ ಇಂದಿರಾ ಗಾಂಧಿ ಎಂದು ತಪ್ಪನ್ನು ತಿದ್ದಿಕೊಂಡು ಭಾಷಣವನ್ನು ಮುಂದುವರೆಸಿದ್ದಾರೆ. ಬಳಿಕ ದೇಶ

ಡಿಕೆಶಿ ಎಡವಟ್ಟಿನಿಂದ ಹುತಾತ್ಮರಾದ ಸೋನಿಯಾ ಗಾಂಧಿ…! Read More »